2024 ಮಿಥುನ ರಾಶಿ ವರ್ಷಭವಿಷ್ಯ!80% ಶುಭಲಾಭ

0

ನಾವು ಈ ಲೇಖನದಲ್ಲಿ 2024ರಲ್ಲಿ ಮಿಥುನ ರಾಶಿಯವರಿಗೆ ವರ್ಷ ಭವಿಷ್ಯ ಹೇಗಿರುತ್ತದೆ, ಮತ್ತು ಯಾವ ಯಾವ ಶುಭಫಲಗಳನ್ನು , ಶುಭ ಲಾಭಗಳನ್ನು , ನೀಡುತ್ತದೆ ಮತ್ತು ಯಾವೆಲ್ಲಾ ಅಶುಭ ಹಾಗೂ ಇಂತಹ ಅಶುಭ ಫಲಗಳಿಗೆ ಪರಿಹಾರಗಳು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮಿಥುನ ರಾಶಿಯವರಿಗೆ 2024ರಲ್ಲಿ ನೂರಕ್ಕೆ 80% ಅಷ್ಟು ಶುಭ ಲಾಭವಾಗುತ್ತದೆ. 20% ಮಾತ್ರ ಅಶುಭ ಫಲ ಮಿಥುನ ರಾಶಿಯವರಿಗೆ ಇರುತ್ತದೆ. ಮಿಥುನ ರಾಶಿಯವರಿಗೆ ಯಾವೆಲ್ಲಾ ಶುಭಫಲಗಳು ದೊರೆಯುತ್ತವೆ ಎಂಬುದನ್ನು ನೋಡೋಣ.

ಶುಭ ಫಲಗಳನ್ನು ನೋಡುವುದಾದರೆ ಬುಧ ಮತ್ತು ಶುಕ್ರ ಗ್ರಹದಿಂದ ಲಕ್ಷ್ಮೀನಾರಾಯಣ ಯೋಗವಿದೆ. ಲಕ್ಷ್ಮೀನಾರಾಯಣ ಯೋಗ ಇದ್ದರೆ ಹಣಕಾಸಿಗೆ ಯಾವುದೇ ರೀತಿಯ ಚಿಂತೆ ಮಾಡುವಂತಿಲ್ಲ. ಮಿಥುನ ರಾಶಿಯವರಿಗೆ ವರ್ಷಪೂರ್ತಿ ಯಾವುದೇ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹಣಕಾಸಿನ ಅರಿವು ಕೂಡ ತುಂಬಾ ಚೆನ್ನಾಗಿ ಇರುತ್ತದೆ.

ವ್ಯಾಪಾರ ವ್ಯವಹಾರದಲ್ಲಿ ಮಿಥುನ ರಾಶಿಯವರು ತುಂಬಾ ಹೆಸರನ್ನು ಮಾಡುತ್ತಾರೆ. 2024ರಲ್ಲಿ ಮಿಥುನ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ತುಂಬಾ ಒಳ್ಳೆಯದು ಆಗುವ ಯೋಗವಿದೆ. ಶೇರು ಮಾರುಕಟ್ಟೆಯ ವ್ಯವಹಾರದಲ್ಲೂ ಕೂಡ ತುಂಬಾ ಅದೃಷ್ಟ ಇರುತ್ತದೆ. ಮಿಥುನ ರಾಶಿ ಇರುವವರು ರಿಯಲ್ ಎಸ್ಟೇಟ್ ಮಾಡುವವರಿಗೂ ಕೂಡ ತುಂಬಾ ಒಳ್ಳೆಯ ಶುಭ ಫಲ ಇದೆ.

ಹಾಗೆಯೇ ಶನಿ ದೇವರಿಂದ ಭಾಗ್ಯ ಉದಯ ಕಾಲ ಎಂದು ಕೂಡ ಮಿಥುನ ರಾಶಿಯವರಿಗೆ ಹೇಳಬಹುದು. ಶನಿ ಗ್ರಹ ಕೂಡ ನಿಮ್ಮ ಗ್ರಹ ಗತಿಗಳಲ್ಲಿ ಅದ್ಭುತವಾಗಿ ಇರುವುದರಿಂದ ನಿಮಗೆ ಈ ಸಮಯದಲ್ಲಿ ಒಳ್ಳೆಯ ಫಲವನ್ನು ಕೂಡ ಕೊಡುತ್ತಾನೆ. ರಾಹು ಮತ್ತು ಕೇತು ಗ್ರಹದಿಂದ ಕೆಲಸದಲ್ಲಿನ ಬದಲಾವಣೆ ಕೂಡ ಆಗುತ್ತದೆ . ರಾಹು ಮತ್ತು ಕೇತು ನಿಮ್ಮ ಗ್ರಹ ಗತಿ ಗಳಲ್ಲಿ ಅದ್ಭುತವಾಗಿ ಇರುವುದರಿಂದ ನೀವು ವರ್ಗಾವಣೆಯನ್ನು ಕೆಲಸದಲ್ಲಿ ಬಯಸುತ್ತಾ ,

ಇದ್ದರೆ ಅದು ನಿಮಗೆ ತಕ್ಷಣ ಆಗುತ್ತದೆ. ಕೇತು ಗ್ರಹದಿಂದ ನಿಮಗೆ ಸುಖ ಸ್ಥಾನ ಸಿಗುತ್ತದೆ. ಕೇತು ನಿಮ್ಮ ಗ್ರಹದಲ್ಲಿ ಅದ್ಭುತವಾಗಿ ಇರುವುದರಿಂದ 2024ರಲ್ಲಿ ಮಿಥುನ ರಾಶಿಯವರು ಸುಖ ಸಂಸಾರದಿಂದ ಅದ್ಭುತವಾದ ಜೀವನವನ್ನು ನಡೆಸಬಹುದು. ಇನ್ನು ಮಿಥುನ ರಾಶಿಯವರಿಗೆ ಅಶುಭ ಫಲಗಳನ್ನು ನೋಡುವುದಾದರೆ, ಸರ್ಕಾರಿ ಕೆಲಸ ಮಾಡುವವರಿಗೆ ಸ್ವಲ್ಪ ಒತ್ತಡಗಳು ಉಂಟಾಗುತ್ತದೆ.

ಸರ್ಕಾರಿ ಕೆಲಸ ಮಾಡುವವರಿಗೆ ಮೇಲಿಂದ ಮೇಲೆ ಏರಿಕೆ ಗಳು ಬರುತ್ತಿರುತ್ತವೆ. ನಿಮ್ಮ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಎಚ್ಚರಿಕೆಯಿಂದ ಇರಬೇಕು. ಮಿಥುನ ರಾಶಿಯವರು ವಯಸ್ಸಾಗಿ ಇರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಿಥುನ ರಾಶಿಯವರಿಗೆ ಹಣಕಾಸಿನಲ್ಲಿ ತೊಂದರೆ ಇರುವುದಿಲ್ಲ ಆದರೆ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.

ಮಿಥುನ ರಾಶಿಯವರಿಗೆ ಅಶುಭ ಫಲ ಗಳಿಗೆ ಪರಿಹಾರ ಏನೆಂದು ನೋಡುವುದಾದರೆ, ಮಿಥುನ ರಾಶಿಗೆ ಅಧಿಪತಿ ಮಹಾವಿಷ್ಣು . ಮಹಾವಿಷ್ಣು ಅಂದರೆ ಲಕ್ಷ್ಮಿ ನಾರಾಯಣ ಸನ್ನಿಧಿಗೆ ಹೋಗಿ ಪೂಜೆಯನ್ನು ಸಲ್ಲಿಸಬೇಕು. ಮಹಾವಿಷ್ಣು ಅಲಂಕಾರ ಪ್ರಿಯ ಎಂದು ಹೇಳಬಹುದು. ಹಾಗಾಗಿ ಮಹಾವಿಷ್ಣುವಿನ ಅಲಂಕಾರಕ್ಕೆ ನಿಮ್ಮ ಕೈಲಾದ ಸೇವೆಯನ್ನು ಅಥವಾ ಸಹಾಯ ಮಾಡಬೇಕು.

ಇನ್ನು ಗರುಡ ಪಕ್ಷಿಗಳಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿದರೆ, ಒಳ್ಳೆಯದಾಗುತ್ತದೆ.ಮತ್ತು ಮಂಗಳ ಮುಖಿಯರಿಗೆ ಹಣಕಾಸಿನ ಸಹಾಯ ಮಾಡುವುದು ತುಂಬಾ ಒಳ್ಳೆಯದು.ಮೊದಲೇ ಹೇಳಿದ ರೀತಿ ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಮತ್ತು ಆರೋಗ್ಯದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು . 2024ರಲ್ಲಿ ಮಿಥುನ ರಾಶಿಯವರಿಗೆ ಹೆಚ್ಚಿನ ಶುಭ ಫಲಗಳು ಇರುತ್ತದೆ. ಕಡಿಮೆ ಅಶುಭ ಫಲಗಳು ಇರುತ್ತವೆ ಎಂದು ಹೇಳಲಾಗಿದೆ.

Leave A Reply

Your email address will not be published.