ಸ್ನೇಹಿತರೇ ನಾವು ಅನಾದಿ ಕಾಲದಿಂದ ಅನುಸರಿಸುತ್ತಿರುವ ಕೆಲವೊಂದು ಸಾಂಸ್ಕøತಿಕವಾದ ಆಚರಣೆಗಳ ಹಿಂದಿನ ಅರ್ಥ ನಮಗ್ಯಾರಿಗೂ ಗೊತ್ತಿಲ್ಲ ಆದರೂ ಸಹ ಕೆಲವೊಂದನ್ನು ಹಿರಿಯರ ಸಲಹೆಯ ಮೇರೆಗೆ ಅನುಸರಿಸುತ್ತಾ ಬಂದಿದ್ದೇವೆ. ಇಂತಹ ಎಷ್ಟೋ ಆಚರಣೆಗಳ ಹಿಂದೆ ಅದರದೇ ಆದಂತಹ ವೈಜ್ಞಾನಿಕ ಹಿನ್ನೆಲೆ ಇದ್ದೇ ಇರುತ್ತದೆ. ಏನು ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬಂದಿದ್ದಾರೆ ಹಾಗಾಗಿ ಅದನ್ನು ನಾವು ಪಾಲಿಸುತ್ತೇವೆ ಎಂದು ಹೇಳುವವರೇ ಹೆಚ್ಚು. ಈ ಲೇಖನದಲ್ಲಿ ಅಂತಹ ಆಚರಣೆಗಳ ಬಗ್ಗೆ ಹಾಗೂ ಅವುಗಳ ಹಿಂದಿನ ನಿಜವಾದ ಕಾರಣಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೊದಲನೆಯದಾಗಿ ಮಕ್ಕಳು ಹುಟ್ಟಿದ ಹತ್ತು ತಿಂಗಳು ಅಥವಾ ಒಂದು ವರ್ಷದ ಒಳಗಾಗಿ ಆ ಮಗುವಿನ ತಲೆ ಕೂದಲನ್ನು ತೆಗೆಸುವ ಪದ್ಧತಿ ಬಹುತೇಕರು ತಮ್ಮ ನೆಚ್ಚಿನ ದೇವರು ಅಥವಾ ಕುಲದೇವರಿಗೆ ಹರಕೆಯನ್ನು ಹೊತ್ತು ಕೂದಲನ್ನು ತೆಗೆಯಿಸುತ್ತಾರೆ. ಆದರೆ ಇದರ ಕಾರಣ ಬಹುತೇಕ ಕಾರಣ ಇದೆ. ಎಲ್ಲ ಮಕ್ಕಳು ಕೂಡ ಎಂಟು ಒಂಭತ್ತು ತಿಂಗಳು ತಾಯಿಯ ಗರ್ಭದಲ್ಲೇ ಇದ್ದು ತದನಂತರ ಭೂಮಿಗೆ ಬರುತ್ತಾರೆ. ಹೊಟ್ಟೆಯಲ್ಲಿರುವಾಗಲೇ ತಲೆ ಕೂದಲು ಬೆಳೆದಿರುತ್ತದೆ. ಮಗುವಿಗೆ ಹತ್ತು ತಿಂಗಳು ಆಗುವವರೆಗೆ ಅದರ ಕೂದಲನ್ನು ತೆಗೆಸುವುದಿಲ್ಲ. ಕಾರಣ ಆ ಮಗುವಿನ ತಲೆ ಸೂಕ್ಷ್ಮ ಮತ್ತು ಮೆತ್ತಗಿರುತ್ತದೆ.
ಮೈ ಚರ್ಮ ಕೂಡ ಮೃದುವಿರುತ್ತದೆ. ಅದು ಚರ್ಮದ ಪೊರೆಯನ್ನು ಬಿಟ್ಟು ಚರ್ಮ ಗಟ್ಟಿಯಾಗಲು ಹತ್ತು ತಿಂಗಳಿನವರೆಗೆ ಬಿಡುತ್ತಾರೆ. ಹಾಗೂ ಆ ಮಗುವಿನ ತಲೆ ಕೂದಲಿನ ಹಲವಾರು ಸೂಕ್ಷ್ಮಾಣುಗಳು ಇರುತ್ತವೆ. ಅವುಗಳು ಮಗು ಹುಟ್ಟುವಾಗಲೇ ಬಂದಿರುತ್ತವೆ. ಮಗು ಹುಟ್ಟಿದ ತಕ್ಷಣ ಬಿಸಿ ನೀರಿನಲ್ಲಿ ತೊಳೆಯುತ್ತಾರೆ. ಎಷ್ಟೇ ವಾಶ್ ಮಾಡಿದರೂ ಆ ಸೂಕ್ಷ್ಮಾಣುಗಳು ದೂರಾಗೋದೇ ಇಲ್ಲ. ಹತ್ತು ತಿಂಗಳಿನ ಬಳಿಕ ಆ ಮಗುವಿನ ತಲೆ ಕೂದಲನ್ನು ತೆಗೆದ ನಂತರ ಆ ಸೂಕ್ಷ್ಮಾಣುಗಳು ಮರೆಯಾಗುತ್ತವೆ. ಇನ್ನೊಂದು ಉಪಯೋಗವೆಂದರೆ ಮಗುವಿನ ತಲೆಕೂದಲಿನ ನುಣ್ಣನೆಯ ಜಾಗಕ್ಕೆ ಸೂರ್ಯನ ಕಿರಣಗಳು ಬಿದ್ದು ಮಗುವಿನ ಚರ್ಮ ಮತ್ತು ಕೂದಲಿನ ಬೆಳವಣಿಗೆಗೆ ವಿಟಮಿನ್ ಡಿ ಸಿಕ್ಕಿ ಮಗುವಿಗೆ ಪುಷ್ಠಿ ಹಾಗೂ ಸೂಕ್ಷ್ಮಾಣುಜೀವಿಗಳು ಇಲ್ಲದೆ
ಆರೋಗ್ಯಕರವಾದ ಕೂದಲು ಮತ್ತೆ ಚಿಗುರಿ ವೃದ್ಧಿಯಾಗುವುದಕ್ಕೆ ದಾರಿಯಾಗುತ್ತದೆ. ಹಾಗಾಗಿ ಯಾವುದೇ ಮಗುವಿಗೆ ಜನಿಸಿದ ಮೊದಲನೇ ವರ್ಷದ ಒಳಗಾಗಿ ಕೂದಲನ್ನು ತೆಗೆಯುವುದು ಒಳ್ಳೆಯದು. ಹೀಗಾಗಿ ನಮ್ಮ ಹಿರಿಯರು ಆಚರಣೆಗೆ ತಂದಿದ್ದಾರೆ. ಎರಡನೇಯದು ಮಕ್ಕಳಿಗೆ ಕಿವಿಯನ್ನು ಚುಚ್ಚಿಸುವುದು ನಮ್ಮಲ್ಲಿ ಹುಟ್ಟಿದ ಹತ್ತನೇ ತಿಂಗಳಿಗೆ ಸಾಮಾನ್ಯವಾಗಿ ಹೆಣ್ಣು ಮಗುವಿಗೆ ಕಿವಿ ಚುಚ್ಚಲಾಗುತ್ತದೆ. ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೇ ಗಂಡು ಮಕ್ಕಳಿಗೂ ಚುಚ್ಚಿಸುತ್ತಾರೆ. ಹೆಣ್ಣು ಮಕ್ಕಳಿಗೆ ಮಾತ್ರ ನಾವೆಲ್ಲರೂ ಕಡ್ಡಾಯವಾಗಿ ಅನುಸರಿಸುವ ಪದ್ಧತಿ.
ಆದರೇ ಇದು ನಮ್ಮ ಆಚರಣೆ ಎಂದು ಮಾಡುವುದಿಲ್ಲ ಕಿವಿಯಲ್ಲಿ ಸಣ್ಣ ಮೆರಿಡಿಯಮ್ ಎಂಬ ಕಿವಿರು ನರಮಂಡಲವನ್ನು ಪ್ರಚೋದನೆ ಮಾಡುವಂತಹ ನರವಿರುತ್ತದೆ ಇದನ್ನು ಮಗುವಿನ ಕಿವಿಯನ್ನು ಚುಚ್ಚಿದಾಗ ಕಿವಿಯ ನರಗಳೆಲ್ಲಾ ಮತ್ತೊಮ್ಮೆ ಜಾಗೃತವಾಗಿ ಕಿವಿ ಚೆನ್ನಾಗಿ ಕೇಳಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಇದು ಸ್ತ್ರೀಯರ ಅಂದಕ್ಕೂ ಮತ್ತು ಅವರ ಮೆರುಗಿಗೂ ಕಾರಣವಾಗುತ್ತದೆ. ಮಗುವು ಕೂಡ ಚುರುಕಾಗುತ್ತದೆ. ಪೂರ್ವಜರು ಈ ಪದ್ಧತಿಯನ್ನು ಪರಿಚಯ ಮಾಡಿದರು. ಇನ್ನೂ ಮೂರನೇಯದು ಸ್ತ್ರೀಯರು ಮತ್ತು ಯುವತಿಯರು ಕಾಲಿಗೆ ಬೆಳ್ಳಿಯ ಕಾಲುಂಗರವನ್ನು ಧರಿಸುವುದು.
ಸಾಮಾನ್ಯವಾಗಿ ಮದುವೆಗೆ ಸಿದ್ಧವಾದ ಪ್ರತಿಕನ್ಯೆಯು ಕಾಲುಂಗರು ತೊಡುವ ಪದ್ಧತಿ ರೂಢಿಯಲ್ಲಿದೆ. ಆದರೇ ವಿಶೇಷವಾಗಿ ಕಡ್ಡಾಯವಾಗಿ ಬಲ ಮತ್ತು ಎಡಗಾಲಿನ ಎರಡನೇ ಬೆರಳಿಗೆ ತೊಡಿಸುವ ಸಾಂಪ್ರದಾಯ ಇದೆ. ಇದಕ್ಕೆ ಕಾರಣ ನಮ್ಮ ಬೆರಳಿನ ಒಂದು ನರ ಹೃದಯಕ್ಕೂ ಮತ್ತು ಮೆದುಳಿಗೆ ಸಂಪರ್ಕ ಇದೆ. ಇದು ದೇಹದ ನರಮಂಡಲವನ್ನು ಫ್ರೆಶಪ್ ಮಾಡಿ ದೇಹದ ನರವನ್ನು ಜಾಗೃತಗೊಳಿಸುತ್ತದೆ. ಹಾಗೂ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಈ ನರ ಅವರ ಗರ್ಭಾಶಯಕ್ಕೂ ಕೂಡ ಸಂಬಂಧ ಇದ್ದು ಅದನ್ನು ಸಕ್ರಿಯಗೊಳಿಸಿ ಅವರ ಋತುಚಕ್ರವು ಸರಿಯಾಗಿ ಆಗುವಂತೆ ಮಾಡುತ್ತದೆ.
ಈ ಕಾರಣದಿಂದ ಕಾಲುಂಗುರ ಸರ್ವವಿಧದಲ್ಲೂ ಸಹಕಾರಿಯಾಗಿದೆ ಎಂದು ಹೇಳಬಹುದು. ಎಲ್ಲಾ ಲೋಹಗಳಲ್ಲಿ ಬೆಳ್ಳಿ ಲೋಹವು ನಮ್ಮ ದೇಹಕ್ಕೆ ಪಾಸಿಟಿವ್ ಎನರ್ಜಿಯನ್ನು ಪ್ರಚೋದನೆಯನ್ನು ಮಾಡುವುದರಿಂದ ಹಿರಿಯರು ಈ ಒಂದು ಸತ್ಯವನ್ನು ಕಂಡುಕೊಂಡು ಬೆಳ್ಳಿಯ ಲೋಹವನ್ನೇ ಆರಿಸಿದ್ದಾರೆ. ನಾಲ್ಕನೇಯದಾಗಿ ಹಣೆಗೆ ಬಟ್ಟನ್ನು ಇಡುವುದು. ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರು ಹಣೆಗೆ ಬಟ್ಟನ್ನು ಇಡುವುದು ಅನಿವಾರ್ಯ ಹಾಗೂ ಅವರ ಆಚರಣೆಯ ಒಂದು ಭಾಗವಾಗಿದೆ. ಸ್ತ್ರೀಯರು, ಅವಿವಾಹಿತರು, ಗೃಹಿಣಿಯರು ಹಾಗೂ ಮುತ್ತೈದೆಯರು ಬಟ್ಟನ್ನು ಇಡದೇ ಇದ್ದರೆ
ಅನಿಷ್ಠ ಹಾಗೂ ಅಶುಭದ ಸಂಕೇತವೆಂದು ನಮ್ಮ ಹಿರಿಯರು ಹೇಳುತ್ತಾರೆ. ಇಂದಿನ ಕಾಲದಲ್ಲಿ ಕೃತಕ ಬಟ್ಟಿನ ಸ್ಟಿಕ್ಕರ್ ಬಂದಿವೆ ಆದರೂ ನಾವು ಹೇಳುವ ಬಟ್ಟುಗಳು ಕೃತಕ ಸ್ಟಿಕ್ಕರ್ಗಳಲ್ಲ. ಅವುಗಳು ಕುಂಕುಮದ ಬಟ್ಟುಗಳು. ಕುಂಕುಮಕ್ಕೆ ಸಾಕಷ್ಟು ಶಕ್ತಿ ಇದ್ದು, ಸಾಕಷ್ಟು ಮಹತ್ತ್ವವಿದ್ದು ಸೂರ್ಯನ ಕಿರಣಗಳಲ್ಲಿನ ಶಕ್ತಿ ಹಾಗೂ ಧಾತುಗಳನ್ನು ಹೀರಿಕೊಂಡು ದೇಹದ ಹಣೆಯ ಮೂಲಕ ಇಡೀ ಶರೀರಕ್ಕೆ ಸೂರ್ಯ ಶಕ್ತಿಯನ್ನು ಪಸರಿಸುತ್ತದೆ. ಇದರಿಂದ ದಿವ್ಯಶಕ್ತಿ ಜಾಗೃತವಾಗಿ ಸದಾ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಇದೇ ಕಾರಣಕ್ಕೆ ಸ್ತ್ರೀಯರು ಇರಲಿ ಯಾರೇ ಇರಲಿ ಕುಂಕುಮದ ಬಟ್ಟನ್ನು ಇಡುವುದು ಒಳ್ಳೆಯದು. ದೇವಸ್ಥಾನಗಳಲ್ಲಿ ಸ್ತ್ರೀ ಅಥವಾ ಪುರುಷರು ಎನ್ನದೇ ಎಲ್ಲರಿಗೂ ಕುಂಕುಮವನ್ನು ಇಡಲಾಗುತ್ತದೆ.
ಐದನೇಯದು ಕೈಗಳಿಗೆ ಸ್ತ್ರೀಯರು ಗಾಜಿನ ಬಳೆಗಳನ್ನು ಧರಿಸುವುದು ನಮ್ಮಲ್ಲಿ ಸ್ತ್ರೀಯರು ಕೈಗೆ ಬಳೆಗಳನ್ನು ಧರಿಸಿದರೇ ಒಂದು ಲಕ್ಷಣ. ಇಲ್ಲವಾದರೆ ಅಸಂಪ್ರದಾಯಿಕವೆಂದು ಹೇಳಲಾಗುತ್ತದೆ. ಹೀಗೆಲ್ಲಾ ಕೃತಕವಾದ ಪ್ಲಾಸ್ಟಿಕ್ ಬಳೆಗಳು ಬಂದಿವೆ. ಆದರೆ ಹಿಂದೆ ಗಾಜಿನ ಅಥವಾ ಕಂಚು ತಾಮ್ರದ ಲೋಹದ ಬಳೆಗಳು ಇದ್ದವು. ಇವುಗಳು ಕೈಗಳ ನರಗಳಿಗೆ ತಾಕುತ್ತಿದ್ದರೆ ಬಿಪಿಯ ಒತ್ತಡವನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಂಡು ಸ್ತ್ರೀಯರ ಆರೋಗ್ಯವನ್ನು ಬ್ಯಾಲೆನ್ಸ್ ಮಾಡುತ್ತದೆಂಬ ಅರಿವಿದ್ದೇ ಪೂರ್ವಿಕರು ಇದನ್ನು ರೂಢಿಗೆ ತಂದರು. ಹಾಗೂ ಇದು ಸ್ತ್ರೀಯರ ದೈಹಿಕ ಸೌಂದರ್ಯಕ್ಕೂ ವಿಶೇಷವಾದ ಮೆರುಗನ್ನು ನೀಡುತ್ತದೆ.
ಆರನೇಯದು ನೆಲದ ಮೇಲೆ ಕೂತು ಅಚ್ಚುಕಟ್ಟಾಗಿ ಸಾಮೂಹಿಕವಾಗಿ ಊಟವನ್ನು ಸೇವಿಸುವುದು. ಈ ಒಂದು ಪದ್ಧತಿಯು ಆಧುನಿಕ ಸಮುದಾಯದಲ್ಲಿ ಸಂಪೂರ್ಣ ಮರೆಯಾಗಿ ಹೋಗಿದೆ. ಹೀಗೆಲ್ಲಾ ಡೈನಿಂಗ್ ಟೇಬಲ್ಗಳು ಬಂದಿವೆ. ಇದರ ಜೊತೆ ಸೋಫಾ, ಮಂಚ, ಕುರ್ಚಿಯ ಮೇಲೆ ಕೂತು ಅವೈಜ್ಞಾನಿಕವಾಗಿ ಆಹಾರವನ್ನು ಸೇವಿಸುತ್ತಾರೆ. ಆದರೇ ನಮ್ಮ ಪೂರ್ವಿಕರು ನೆಲದ ಮೇಲೆ ಕೂತು ಆಹಾರವನ್ನು ಸೇವಿಸುತ್ತಿದ್ದರು. ಇದರಿಂದ ದೇಹ ಪದ್ಮಾಸನದ ಭಂಗಿಯಲ್ಲಿ ಕೂರುತ್ತದೆ. ಈ ಭಂಗಿಯಲ್ಲಿ ಆಹಾರವನ್ನು ಸೇವಿಸಿದರೆ ಅದು ಸರಾಗವಾಗಿ ಜಠರಕ್ಕೆ ಇಳಿದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
ಹಾಗೂ ಈ ಭಂಗಿಯಲ್ಲಿ ಎಷ್ಟು ಹಸಿವು ಇರುತ್ತದೆಯೋ ಅಷ್ಟೇ ಆಹಾರವನ್ನು ಸೇವಿಸುತ್ತೀವಿ. ಹೊಟ್ಟೆ ಬಿರಿಯುವಷ್ಟು ಆಹಾರವನ್ನು ತಿನ್ನುವುದು ಇಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಅದೇ ಭಂಗಿಯಲ್ಲಿ ಮೇಲೆದ್ದರೆ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ತಪ್ಪುತ್ತವೆ. ಹೀಗಾಗೀ ಈ ತರಹದ ಆಹಾರದ ಸೇವನೆಗೆ ಹೆಚ್ಚು ಒತ್ತನ್ನು ಕೊಟ್ಟಿದ್ದರು. ಕಾಲಸರಿದಂತೆ ಈ ರೀತಿಯ ಪದ್ಧತಿಗಳು ಮರೆಯಾಗಿ ಪಾಶ್ಚಾತ್ಯ ಪದ್ಧತಿಗಳು ನಮ್ಮಲ್ಲಿ ಹೆಚ್ಚಾಗಿ ಆಚರಣೆಯಲ್ಲಿರುವುದು ವಿಶಾದನೀಯವಾದ ಸಂಗತಿ. ಏಳನೆಯದು ಹಬ್ಬ ಮತ್ತು ಉತ್ಸವದ ದಿನದಂದು ತಳಿರು ತೋರಣಗಳನ್ನು ಮುಂಬಾಗಿಲಿಗೆ ಕಟ್ಟುವಂತಹ ಪರಂಪರೆ ಇಂತಹ ಆಚರಣೆಗಳು ಸಾಕಷ್ಟು ರೂಢಿಯಲ್ಲಿರುವುದು ನಮ್ಮ ಪುಣ್ಯ. ಆಗೆಲ್ಲಾ ಮನೆಗಳ ಬಳಿಯೇ ಮಾವಿನ ಮರಗಳು ಇರುತ್ತಿದ್ದವು.
ಅವುಗಳಿಂದಲೇ ಹಬ್ಬಕ್ಕೇ ಬೇಕಾದ ತಾಜಾ ಎಲೆಗಳನ್ನು ಕಿತ್ತು ಇತರರಿಗೂ ಬೇಕಾದಷ್ಟನ್ನು ಕೊಟ್ಟು ಹಬ್ಬಗಳನ್ನು ಪರಸ್ಪರ ಸಹಕಾರದಿಂದ ನಡೆಸುತ್ತಿದ್ದರು. ಈಗಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಇವುಗಳನ್ನು ದುಡ್ಡಿಗೆ ತಂದು ಕಟ್ಟುವಂತಹ ಪರಿಸ್ಥಿತಿಯು ಬಂದಿದೆ. ಇತ್ತೀಚೆಗೆ ಇಂತಹ ಆಚರಣೆಗಳ ಮೂಲವನ್ನು ಹೊಸಕಿ ಹಾಕುವಂತಹ ಪ್ಲಾಸ್ಟಿಕ್ ಹಾಗೂ ರೆಡಿಮೇಡ್ ತೋರಣಗಳು ಬಂದಿವೆ. ಜನ ಏಕೆ ರಿಸ್ಕ್ಅನ್ನು ತೆಗೆದುಕೊಳ್ಳಬೇಕೆಂದು ರೆಡಿಮೇಡ್ ತೋರಣಗಳನ್ನು ಖರೀದಿಮಾಡುತ್ತಾರೆ. ಹಸಿರು ತೋರಣಗಳು ಶುಭದ ಸಂಕೇತ ಹಾಗೂ ಅವುಗಳಿದ್ದರೆ ಅದೃಷ್ಟ ಲಕ್ಷ್ಮಿ ಪ್ರಸನ್ನಳಾಗಿ ಮನೆಗೆ ಬರುತ್ತಾಳೆಂಬ ನಂಬಿಕೆ ಹಿರಿಯರದ್ದು, ಆದರೆ ವಾಸ್ತವವಾಗಿ ತಾಜಾ ಹಸುರಿನ ಎಲೆಗಳನ್ನು ಮನೆಗಳಿಗೆ
ಏಕೆ ಕಟ್ಟುತ್ತಿದ್ದರು ಎಂದರೆ ಸಾಮಾನ್ಯವಾಗಿ ಹಬ್ಬ ಹರಿದಿನವೆಂದರೆ ಮನೆಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದರು. ಹೆಚ್ಚು ಜನ ಇರಬೇಕಾದರೆ ಅವರಿಗೆ ಆಕ್ಸಿಜನ್ ಕೊರತೆ ಉಂಟಾಗಿ ಮನೆಯ ಸುತ್ತ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಹರಡುತ್ತಿತ್ತು. ಇದನ್ನು ತಗ್ಗಿಸುವ ಸಲುವಾಗಿ ಮಾವಿನ ಎಲೆಗಳನ್ನು ತಂದು ಕಟ್ಟುತ್ತಿದ್ದರು. ಈ ಎಲೆಗಳು ಮರದಿಂದ ಬೇರ್ಪಟ್ಟರು ಕನಿಷ್ಠ ಎರಡು ಮೂರು ದಿನಗಳವರೆವಿಗೂ ಆಕ್ಸಿಜನ್ ಬಿಡುಗಡೆ ಮಾಡುವ ಶಕ್ತಿಯನ್ನು ಹೊಂದಿವೆ. ಮನೆಯಲ್ಲಿ ತಾಜಾ ಆಕ್ಸಿಜನ್ ತುಂಬಿರಲಿ ಎಂದು ಈ ರೀತಿಯಾಗಿ ಮಾಡಲಾಗುತ್ತಿತ್ತು.
ಎಂಟನೇಯದಾಗಿ ನಾವು ಮಲಗುವ ತಲೆಯನ್ನು ಉತ್ತರ ದಿಕ್ಕಿಗೆ ಹಾಕಿ ಮಲಗಬಾರದೆಂಬ ನಂಬಿಕೆ ಇದೆ. ವಿಶೇಷವಾಗಿ ಹಿಂದೂಗಳಾದ ನಮ್ಮಲ್ಲಿ ಉತ್ತರ ದಿಕ್ಕಿಗೆ ಯಾರೂ ತಲೆಯಾಗಿ ಮಲಗಬಾರದೆಂಬ ನಿಯಮವಿದೆ. ಕಾರಣ ಭೂಮಿಗೆ ಇರುವ ಹಾಗೆ ಅಯಸ್ಕಾಂತೀಯ ಶಕ್ತಿಯು ನಮ್ಮ ದೇಹಕ್ಕೂ ಕೂಡ ಇದೆ. ಅದರಂತೆ ವರ್ತಿಸುತ್ತದೆ ಕೂಡ ಉತ್ತರ ದಿಕ್ಕಿಗೆ ಗುರುತ್ವದ ಬಲ ಎಳೆಯುವುದರಿಂದ ನಾವು ಉತ್ತರಕ್ಕೆ ತಲೆ ಹಾಕಿದಾಗ ರಕ್ತ ತಲೆಯ ಮೆದುಳಿಗೆ ನುಗ್ಗಿ ರಕ್ತದ ಒತ್ತಡ ಮೆದುಳಿನ ಕ್ಷಯ ಹಾಗೂ ಹೃದಯ ಸಂಬಂಧಿಕಾಯಿಲೆಗಳಿಗೆ ದಾರಿಯನ್ನು ಮಾಡಿಕೊಡುತ್ತದೆ.
ಇದೇ ಕಾರಣದಿಂದ ಈವೊಂದು ಸತ್ಯದ ಅರಿವಿದ್ದ ನಮ್ಮ ಹಿರಿಯರು ಇದನ್ನು ಜನರಿಗೆ ಸುಲಭವಾಗಿ ಅರ್ಥ ಮಾಡಿಸಲು ಕೆಲವು ಕಥೆಗಳನ್ನು ಎಣೆದು ಈ ಸಂಗತಿಯ ಹಿಂದೆ ತಳುಕನ್ನು ಹಾಕಿದ್ದರು. ಒಂಭತ್ತನೇಯದು ವಾರದಲ್ಲಿ ಒಮ್ಮೆ ಉಪಾವಾಸವನ್ನು ಇರುವುದು. ಸಾಕಷ್ಟು ಜನರಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ವಾರದಲ್ಲಿ ಒಮ್ಮೆ ಕೆಲವರು ಒಪ್ಪತ್ತು ಇರುತ್ತಾರೆ. ಹಲವಾರು ವಾರಕ್ಕೊಮ್ಮೆ ಉಪಾವಾಸವನ್ನು ಇರುತ್ತಾರೆ. ಹೀಗೆ ಮಾಡುವುದರಿಂದ ದೇವರಿಗೆ ಅದು ಸಂಪ್ರೀತಿ ತಂದು ಅದು ನಮ್ಮನ್ನು ಸದಾ ಅನುಗ್ರಹಿಸುತ್ತದೆ ಎಂಬ ನಂಬಿಕೆಗಳು. ಆಯುರ್ವೇದದ ಪ್ರಕಾರ ಹೀಗೆ ಉಪಾವಾಸವಿರುವುದು ದೇಹಾರೋಗ್ಯಕ್ಕೆ ಉತ್ತಮ ಕಾರಣ.
ವಾರಪೂರ್ತಿ ಬ್ಯುಜಿ ಇರುವಂತಹ ನಮ್ಮ ಜೀರ್ಣಾಂಗವ್ಯೂಹ ನಾವು ಉಪಾವಾಸವಿದ್ದಾಗ ಸಂಪೂರ್ಣ ರೆಸ್ಟ್ನಲ್ಲಿರುತ್ತದೆ. ಆಗ ಅದರಲ್ಲಿರುವ ಕಲ್ಮಶವೆಲ್ಲೂ ಸಂಪೂರ್ಣವಾಗಿ ಜೀರ್ಣಗೊಂಡು ದೇಹದಿಂದ ಹೊರಹೋಗುವುದಕ್ಕೆ ದಾರಿಯಾಗುತ್ತದೆ. ಇದರಿಂದ ಬಿ.ಪಿ., ಬೇಧಿ, ಹೊಟ್ಟೆನೋವು, ಆಯಾಸ ಇವೆಲ್ಲವೂ ನಿಯಂತ್ರಣಕ್ಕೆ ಬರುತ್ತದೆ. ಈ ರೀತಿ ವಾರದಲ್ಲಿ ಒಂದು ದಿನ ಅಥವಾ ತಿಂಗಳಿಗೆ ಒಂದು ಬಾರಿ ಉಪಾವಾಸವಿರುವುದು ಒಳ್ಳೆಯದೆಂದು ನಮ್ಮ ಹಿರಿಯರು ಈ ರೀತಿ ಮಾಡಿದ್ದಾರೆ. ಹತ್ತನೇಯದಾಗಿ ಎರಡು ಕೈಗಳನ್ನು ಜೋಡಿಸಿ ಭಕ್ತಿ ಭಾವದಿಂದ ನಮಸ್ಕರಿಸುವುದು ನಮ್ಮಲ್ಲಿ ಗುರು ಹಿರಿಯರು ಹಾಗೂ ದೈವಗಳನ್ನು ಕಂಡಾಗ ಎರಡು ಕೈಗಳನ್ನು ಜೋಡಿಸಿ ವಿನಮ್ರಭಾವದಿಂದ ನಮಸ್ಕಾರ ಮಾಡುವ ಪದ್ಧತಿ ನಮ್ಮಲ್ಲಿದೆ.
ಇದು ನಮ್ಮಲ್ಲಿ ರೂಢಿಗೆ ಬಂದಿರುವ ಪದ್ಧತಿ. ಕೈಗಳನ್ನು ಜೋಡಿಸುವುದರಿಂದ ನಮ್ಮ ಎರಡು ಕೈಗಳು ಬೆಸೆಯುತ್ತವೆ. ಆಗ ಅವು ನರಮಂಡಲದ ಜ್ಞಾಪಕಶಕ್ತಿಗೆ ಸಂಬಂಧಪಟ್ಟಂತಹ ನರಗಳನ್ನು ಉತ್ತೇಜನ ಮಾಡಿ ನಾವು ಯಾರನ್ನು ನೋಡಿ ನಮಸ್ಕರಿಸುತ್ತೀವೋ ಆ ವ್ಯಕ್ತಿಯನ್ನು ಹೆಚ್ಚು ಕಾಲ ನೆನಪಿನಲ್ಲಿ ಇಡುವ ಹಾಗೇ ಮಾಡುತ್ತವೆ. ಇದರಿಂದ ಪರಸ್ಪರ ಪ್ರೀತಿ ಗೌರವ ಕಾಳಜಿಗಳು ಏರ್ಪಡುತ್ತವೆ. ಇನ್ನು ದೇವಸ್ಥಾನಗಳಲ್ಲಿ ಘಂಟೆ ಬಾರಿಸುವುದು. ದೇವಸ್ಥಾನಕ್ಕೆ ಹೋಗುವ ಪ್ರತಿಯೊಬ್ಬರು ಘಂಟೆಯನ್ನು ಬಾರಿಸಿ ದೇವಸ್ಥಾನವನ್ನು ಪ್ರದಕ್ಷಣೆ ಮಾಡುತ್ತಾರೆ.
ಘಂಟನಾದವನ್ನು ಮಾಡಿದರೆ ಭಗವಂತನಿಗೆ ಕೇಳಿಸುತ್ತದೆಂಬ ನಂಬಿಕೆ. ಆದರೆ ನಿಜವಾದ ಅರ್ಥ ಘಂಟೆಯನ್ನು ನಿರ್ಧಿಷ್ಟ ಬಲದಿಂದ ಬಾರಿಸಿದರೆ ನಮ್ಮ ದೇಹದ ಏಳು ನರಮಂಡಲದ ಕೇಂದ್ರಗಳನ್ನ ಜಾಗೃತಗೊಳಿಸಿ ನಮ್ಮ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಒಂದು ಸದ್ದು ವಾತಾವರಣದ ಕ್ರಿಮಿ ಬ್ಯಾಕ್ಟೇರಿಯಾಗಳು ದೂರ ಹೋಗುವಂತೆ ಮಾಡುತ್ತದೆ. ಇದಲ್ಲದೇ ಇದರ ಸದ್ದು ದೇಹಕ್ಕೆ ಪ್ರಶಾಂತ ಮತ್ತು ನಿರಾಶ ಭಾವವನ್ನು ಉಂಟುಮಾಡುತ್ತದೆ. ಸ್ನೇಹಿತರೇ ಈ ಎಲ್ಲಾ ಉತ್ತಮ ಕಾರಣಗಳ ಸಲುವಾಗಿ ಈ ಎಲ್ಲಾ ಪದ್ಧತಿಗಳನ್ನು ನಮ್ಮ ಹಿರಿಯರು ರೂಢಿಗೆ ತಂದಿದ್ದಾರೆ. ಆದರೇ ಇವೆಲ್ಲದರ ನಿಜವಾದ ಕಾರಣ ನಮಗೆ ಗೊತ್ತಿಲ್ಲ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755