ನಿಮಗೆ ಒಳ್ಳೆ ಸಮಯ ಬರುವ ಮುನ್ನ ತುಳಸಿ ಗಿಡ

ನಿಮಗೆ ಒಳ್ಳೆ ಸಮಯ ಬರುವ ಮುನ್ನ ತುಳಸಿ ಗಿಡ ಈ 8 ದೊಡ್ಡ ಸೂಚನೆಗಳನ್ನು ಕೊಡುತ್ತದೆ.
ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ. ತುಳಸಿ ಗಿಡವನ್ನು ಲಕ್ಷ್ಮಿದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ತ್ವವನ್ನು ತುಳಸಿ ಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು.

ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಭಗವಾನ್ ಶ್ರೀಕೃಷ್ಣನಿಗೆ ತುಳಸಿ ಗಿಡ ಬಹಳ ಇಷ್ಟವಾದದ್ದು. ತುಳಸಿ ಇಲ್ಲದೆ ಕೃಷ್ಣ ಯಾವ ಪ್ರಸಾದವನ್ನು ಸ್ವೀಕರಿಸುವುದಿಲ್ಲ. ಶ್ರೀಕೃಷ್ಣನೇ ಹೇಳಿರುವ ಹಾಗೆ, ಪ್ರತಿದಿನ ತುಳಸಿಗೆ ಯಾರು ಪೂಜೆ ಮಾಡುತ್ತಾರೋ ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ. ತುಳಸಿ ದಳವನ್ನು ಸೇವನೆ ಮಾಡುವವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.

ತುಳಸಿಗೆ ಎಲ್ಲಾ ಥರದ ರೋಗಗಳನ್ನು ಗುಣ ಮಾಡುವ ಸಾಮರ್ಥ್ಯ ಇದೆ. ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ನಿಮ್ಮ ಮನೆಗೆ ಯಾವುದೇ ನೆಗೆಟಿವ್ ಎನರ್ಜಿ ಬರುವುದಿಲ್ಲ. ಮನೆಯ ಒಳಗೆ ಯಾವಾಗಲೂ ಪಾಸಿಟಿವಿಟಿ ಇರುವ ಹಾಗೆ ಮಾಡುತ್ತದೆ. ಲಕ್ಷ್ಮಿದೇವಿ ನಿಮ್ಮ ಮನೆಗೆ ಆಗಮಿಸುತ್ತಿರುವ ವೇಳೆ ಕೂಡ ತುಳಸಿ ಗಿಡದ ಮೂಲಕ ನಿಮಗೆ ಸೂಚನೆ ಸಿಗುತ್ತದೆ. ಹಾಗಿದ್ದಲ್ಲಿ, ಒಳ್ಳೆ ದಿನಗಳ ಆರಂಭದ ಸೂಚನೆಯನ್ನು ತುಳಸಿ ಗಿಡ ಹೇಗೆ ಕೊಡುತ್ತದೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ

ಅಂಶಗಳು ಯಾವುದು ಯಾವುದು ಎಂದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ತುಳಸಿ ಗಿಡ ಒಣಗುವುದಕ್ಕೆ ಶುರು ಮಾಡಿದರೆ ಅದು ಅಶುಭ ಅಂತ ಪರಿಗಣಿಸಬೇಕು. ನೀವು ಎಷ್ಟೇ ಕಾಳಜಿ ವಹಿಸಿದರೂ ಕೂಡ ಗಿಡ ಒಣಗಿ ಹೋಗುತ್ತಿದೆ ಅಂದರೆ ಅದರಿಂದ ಸಿಗುವ ಸೂಚನೆ ನಿಮಗೆ ಬಹಳ ಬೇಗ ಹೆಚ್ಚಿನ ಖರ್ಚು ಬೀಳುತ್ತದೆ ಮತ್ತು ಯಾವುದೋ ಒಂದು ರೀತಿಯಲ್ಲಿ ಕಷ್ಟಗಳು ಬರುತ್ತದೆ ಎನ್ನುವುದಾಗಿದೆ. ಹಾಗೆಯೇ ನಿಮಗೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ಸೂಚಿಸುತ್ತದೆ.

ಹೀಗಾಗಿ ಗಿಡ ಒಣಗಳು ಶುರುವಾಗುತ್ತಿದ್ದಂತೆ ಬೇರೆ ಗಿಡವನ್ನು ತಂದು ನೆಡಬೇಕು. ಇನ್ನು ತುಳಸಿ ಗಿಡದ ಎಲೆಗಳು ಒಣಗಿ, ಹಳದಿ ಬಣ್ಣಕ್ಕೆ ತಿರುಗಿ ಬೀಳುವುದಕ್ಕೆ ಶುರುವಾದರೆ, ಅದರಿಂದ ನಿಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆ ಉಂಟಾಗುವುದಿಲ್ಲ. ಗಾಳಿಗೆ ಎಲೆ ಬಿದ್ದಿರುತ್ತದೆ. ನೀವು ಗಾಬರಿ ಪಡಬೇಡಿ. ಆದರೆ ಹಸಿರು ಎಲೆಗಳೇ ಉದುರುತ್ತಿದೆ ಅಂದರೆ ಅದು ಅಶುಭ. ಸೂಕ್ಷ್ಮವಾಗಿ ಗಮನಿಸಿ ಇವುಗಳನ್ನ ಪಾಲಿಸಿ ಅದೃಷ್ಟ ಖುಲಾಯಿಸುತ್ತದೆ. ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿರಿ.

ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುವುದಿಲ್ಲ. ಇನ್ನು ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಪಕ್ಕದಲ್ಲೇ ಬೇರೆ ಗಿಡಗಳು ಹುಟ್ಟುತ್ತಿದ್ದರೆ, ಅದು ಮನೆಗೆ ಶಾಂತಿ, ಸಂಮೃದ್ಧಿಯ ಪ್ರವೇಶ ಆಗುತ್ತದೆ ಎನ್ನುವುದರ ಸಂಕೇತ ಆಗಿದೆ. ತುಳಸಿ ಕೊಡುವ ಈ ಸೂಚನೆಯಿಂದ ನೀವು ಬಿಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ನಿಮಗೆ ಮುಂದೆ ಒಳ್ಳೆಯದಾಗುತ್ತೋ, ಕೆಟ್ಟದ್ದಾಗುತ್ತೋ ಎನ್ನುವುದು ತುಳಸಿ ಗಿಡದಿಂದ ಮೊದಲೇ ಗೊತ್ತಾಗುತ್ತದೆ.

ಅದರಲ್ಲೂ ತುಳಸಿ ಗಿಡದ ಪಕ್ಕ ಮತ್ತೊಂದು ತುಳಸಿ ಹುಟ್ಟಿದರೇ ಸಾಕ್ಷಾತ್ ಲಕ್ಷ್ಮಿಯೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಅನ್ನುವ ಸೂಚನೆಯಾಗಿರುತ್ತದೆ. ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಹತ್ತಿರ ನೀವು ಕ್ಲೀನ್ ಮಾಡಿದ್ದರು ಕೂಡ ಜೇಡರ ಹುಳಗಳು ಬಂದಿವೆ ಎಂದರೆ ಅದರಿಂದ ಗಿಡ ಹಾಳಾಗುತ್ತಿದೆ ಎಂದು ಅರ್ಥ. ಇದರ ಅರ್ಥ ಹೊರಗಿನ ವ್ಯಕ್ತಿಯೊಬ್ಬರು ನಿಮ್ಮ ಬದುಕಿಗೆ ತೊಂದರೆ ಉಂಟು ಮಾಡುತ್ತಾರೆ ಎಂದು. ಒಂದು ವೇಳೆ ನಿಮ್ಮ ತುಳಸಿ ಗಿಡದ ಮೇಲೆ ಚಿಟ್ಟೆ ಅಥವಾ ಪಕ್ಷಿಗಳು ಕುಳಿತಿದ್ದು, ಆ ನೋಟ ನಿಮಗೆ ಖುಷಿ ತಂದರೆ, ನಿಮಗೆ ಹೆಚ್ಚು ಧನಲಾಭ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ ಅಥವಾ ನಿಮ್ಮ ಆಸೆಗಳು ನೆರವೇರುತ್ತದೆ ಎನ್ನುವುದು ಅರ್ಥ. ಜೊತೆಗೆ ಇರುವೆಗಳು ಕಾಣಿಸಿದರು ಇದು ಏಳಿಗೆಯ ಸಂಕೇತ.

ಹಾಗಾಗಿ ಮನೆಯ ಮುಂದೆ ಬೆಳೆಸಿರುವ ತುಳಸಿ ಗಿಡವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ತುಳಸಿ ಗಿಡ ಇರುವ ಮನೆಯಲ್ಲಿ ಮಾಂಸಾಹಾರ ಮದ್ಯಪಾನವನ್ನು ಮಾಡಲೇಬಾರದು. ಇದು ತುಳಸಿಯ ಕೋಪಕ್ಕೆ ಕಾರಣವಾಗುತ್ತದೆ. ತುಳಸಿ ಗಿಡ ಯಾವತ್ತಿಗೂ ಶುದ್ಧವಾದ ಸ್ಥಳದಲ್ಲಿ ಇರಬೇಕು. ಅಶುದ್ಧವಾದ ಸ್ಥಳಗಳಲ್ಲಿ ತುಳಸಿಯನ್ನು ನೆಡಬಾರದು. ತುಳಸಿಯನ್ನು ನೆಟ್ಟಿರುವ ಪ್ರದೇಶವನ್ನು ಬಹಳ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಒಟ್ಟಿನಲ್ಲಿ ಮನೆಯ ಮುಂದೆ ಇರತಕ್ಕಂತಹ ತುಳಸಿ ಮನೆಗೆ ಬರುವಂತಹ ನಕಾರಾತ್ಮಕ ಶಕ್ತಿಗಳನ್ನು ತಡೆದು ನಿಲ್ಲಿಸುತ್ತಾಳೆ ಎನ್ನುವ ನಂಬಿಕೆ ಆಗಿನ ಕಾಲದಿಂದಲೂ ಇದೆ.

ಹೀಗಾಗಿ ಮನೆಯ ಮುಂದೆ ಸಾಕ್ಷಾತ್ ಲಕ್ಷ್ಮಿ ದೇವಿಯೇ ಇದ್ದಾಳೆ ಎನ್ನುವ ಮನೋಭಾವದಲ್ಲಿ ತುಳಸಿಯನ್ನು ಬಹಳ ನಾಜೂಕಿನಿಂದ ನೋಡಿಕೊಂಡು ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಸಲ್ಲಿಸಿದರೇ ನಿಮಗೆ ಮಾತೆ ಮಹಾಲಕ್ಷ್ಮಿಯ ಅನುಗ್ರಹ ಆಗುತ್ತದೆ. ಪಿತೃ ದೋಷದ ಸೂಚನೆ: ಹೊಸ ತುಳಸಿ ಗಿಡ ನೆಟ್ಟಿದರೆ ಮತ್ತು ಒಂದರಿಂದ ಎರಡು ದಿನಗಳಲ್ಲಿ ಅದು ಒಣಗಿ ಅಂಟಿಕೊಂಡರೆ, ಮನೆಯಲ್ಲಿ ಪಿತೃದೋಷವಿದೆ ಎಂದು ಅರ್ಥಮಾಡಿಕೊಳ್ಳಿ. ಪಿತೃ ದೋಷದಿಂದಾಗಿ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತವೆ ಎನ್ನಲಾಗಿದೆ.

ಅಂತಹ ಪರಿಸ್ಥಿತಿಯಲ್ಲಿ ಜ್ಯೋತಿಷಿಯ ಸಲಹೆಯ ಪ್ರಕಾರ, ಪಿತೃ ದೋಷವನ್ನು ತಡೆಗಟ್ಟಲು ನೀವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ತುಳಸಿ ಸಸ್ಯವು ಹಠಾತ್ ಹಸಿರು ಬಣ್ಣಕ್ಕೆ ತಿರುಗಿದರೆ ಅಥವಾ ಹೆಚ್ಚು ದಟ್ಟವಾಗಿ ಕಂಡುಬಂದರೆ ಅದನ್ನು ಮಂಗಳಕರವೆಂದು ಪರಿಗಣಿಸಬೇಕು. ತುಳಸಿ ಗಿಡದ ಎಲೆಗಳು ಹಸಿರಾಗಿ ಕಾಣಲು ಪ್ರಾರಂಭಿಸಿದರೆ ಅಥವಾ ಅದರ ಮೇಲೆ ಹೂವುಗಳು ಬರಲು ಪ್ರಾರಂಭಿಸಿದರೆ, ಮನೆಯಲ್ಲಿ ಸಂತೋಷ ಮತ್ತು ಸಂಮೃದ್ಧಿ ಬರಲಿದೆ ಎಂದು ಅರ್ಥಮಾಡಿಕೊಳ್ಳಿ. ತುಳಸಿಯ ಈ ಚಿಹ್ನೆಗಳು ಮನೆಯ ಯೋಗಕ್ಷೇಮ ಮತ್ತು ಸಂತೋಷವನ್ನು ಸೂಚಿಸುತ್ತವೆ. ಅಂತಹ ಚಿಹ್ನೆಗಳು ಬಂದರೆ, ನಿಮ್ಮ ಮನೆಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದ ಇರುವುದು.

ತುಳಸಿ ಗಿಡವು ಮನೆಯ ಸುತ್ತ ಧನಾತ್ಮಕ ಶಕ್ತಿ ಮತ್ತು ಶುದ್ಧತೆಯನ್ನು ಹರಡುತ್ತದೆ ಎಂದು ನಂಬಲಾಗಿದೆ ಮತ್ತು ಈ ಸಸ್ಯವು ಒಣಗಲು ಪ್ರಾರಂಭಿಸಿದರೆ ಮತ್ತು ಬೆಳೆಯುವುದನ್ನು ನಿಲ್ಲಿಸಿದರೆ, ಇದು ಮನೆಯಲ್ಲಿ ಸಕಾರಾತ್ಮಕತೆಯ ಕೊರತೆಯ ಸಂಕೇತವೆಂದು ನಂಬಲಾಗಿದೆ. ಜನರು ಪರಸ್ಪರ ಕೆಟ್ಟ ಸಂಬಂಧವನ್ನು ಹೊಂದಿರುವಾಗ ಅಥವಾ ಕುಟುಂಬದ ಸದಸ್ಯರಲ್ಲಿ ಅತಿಯಾದ ಒತ್ತಡ, ನಕಾರಾತ್ಮಕತೆ ಮತ್ತು ಅಸಂಗತತೆ ಇದ್ಧಾಗ ಈ ಸಕಾರಾತ್ಮಕತೆಯ ಕೊರತೆಯು ಮನೆಯ ಮೇಲೆ ಆವರಿಸುತ್ತದೆ.

ತುಳಸಿ ಗಿಡವನ್ನು ಟೆರೇಸ್ ಮೇಲೆ ಇಡಬಾರದು. ತುಳಸಿ ಗಿಡವನ್ನು ಛಾವಣಿಯ ಮೇಲೆ ಇಡುವುದರಿಂದ ಬುಧ ಗ್ರಹದ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಬುಧನನ್ನು ವ್ಯಾಪಾರ ಮತ್ತು ಸಂಪತ್ತಿನ ಗ್ರಹವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ತುಳಸಿಯನ್ನು ಒಣಗಿಸುವುದು ವ್ಯವಹಾರದಲ್ಲಿ ನಷ್ಟ ಮತ್ತು ವ್ಯಕ್ತಿಗೆ ಹಣದ ನಷ್ಟವನ್ನು ಸೂಚಿಸುತ್ತದೆ.

Leave a Comment