ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯ ದುರಾದೃಷ್ಟಕ್ಕೆ ನೀವು ಮಾಡುವ ತಪ್ಪುಗಳೆ ಕಾರಣ ಎನ್ನುವ ಶೀರ್ಷಿಕೆಯೊಂದಿಗೆ ಇವತ್ತಿನ ಈ ಸಂಚಿಕೆಯನ್ನು ಮಾಡುತ್ತಿದ್ದೇವೆ ಆ ತಪ್ಪುಗಳು ಯಾವುದು ಎನ್ನುವುದನ್ನು ನೋಡೋಣ ಬನ್ನಿ ಕೆಲವೊಮ್ಮೆ ನಾವು ಎಷ್ಟೇ ಹಣವನ್ನು ಸಂಪಾದಿಸಿದರು ಕೂಡ ಆ ಹಣ ನಮ್ಮ ಬಳಿ ಉಳಿಯುವುದಿಲ್ಲ ಬೇರೆಯವರಿಂದ ಎರವಲು ಪಡೆದ ಹಣವನ್ನು ಕೂಡ ಹಿಂದುರುಗಿಸಲು ನಮ್ಮ ಬಳಿ ಕೆಲವೊಮ್ಮೆ ಹಣ ಇರುವುದಿಲ್ಲ ದುಡಿದಿದ್ದೆಲ್ಲಾ ನೀರಿನಲ್ಲಿ ಹೋಮ ಅಂದಹಾಗೆ ನಾವು ದುಡಿದ ಹಣ ನಮಗೆ ಸಾಲುವುದಿಲ್ಲ ಒಂದಾದ ರಂದು ಸಮಸ್ಯೆಗಳಿಂದಾಗಿ ನಮ್ಮ ಬಳಿ ಇದ್ದ ಹಣ ಖಾಲಿಯಾಗುತ್ತದೆ ಇದಕ್ಕೆಲ್ಲ ಕಾರಣವೇನು ನಮ್ಮ ಬಳಿ ಹಣ ನಿಲ್ಲದಿರಲು ಮುಖ್ಯ ಕಾರಣ ತಾಯಿ ಲಕ್ಷ್ಮಿ ದೇವಿಯ ಕೋಪ ಲಕ್ಷ್ಮಿ ದೇವಿ ಯಾಕೆ ಕೋಪ ಮಾಡಿಕೊಳ್ಳುತ್ತಾಳೆ ಕೋಪಕ್ಕೆ ಕಾರಣವಾಗುವಂತಹ ತಪ್ಪುಗಳಾವುವು.
1) ರಾತ್ರಿ ವೇಳೆ ಮೊಸರನ್ನು ಸೇವಿಸದಿರಿ : ಊಟದ ಸಮಯದಲ್ಲಿ ಮೊಸರನ್ನು ಎಂದಿಗೂ ಸೇವಿಸಬಾರದೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಊಟದ ಸಮಯದಲ್ಲಿ ಮೊಸರನ್ನು ತಿಂದರೆ ಲಕ್ಷ್ಮಿ ನಿಮ್ಮ ಬಳಿ ಉಳಿಯುವುದಿಲ್ಲ ವಿನಹ ಕಾರಣ ನೀವು ಎಲ್ಲಾ ವಿಷಯಗಳಿಗೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಕ್ಕಿಯನ್ನು ತಿನ್ನುವುದು ಲಕ್ಷ್ಮಿ ದೇವಿಗೆ ಅಗೌರವ ಸೂಚಿಸಿದಂತೆ. ಮನೆಯಲ್ಲಿ ಯಾರಾದರೂ ಅಕ್ಕಿ ತಿಂದರೆ ಅದರ ಪರಿಣಾಮವಾಗಿ ಮನೆಯಲ್ಲಿ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ಮಾತನ್ನು ನೀವು ಈಗಾಗಲೇ ನಿಮ್ಮ ಹಿರಿಯರ ಬಾಯಿಂದ ಕೇಳಿರಬಹುದೇನೋ.
2) ಕಾಲಿಗೆ ಚಪ್ಪಲಿ ಅಥವಾ ಶ್ಯುಗಳನ್ನ ಧರಿಸಿ ಆಹಾರ ಸೇವಿಸದಿರಿ :
ಆಹಾರವನ್ನು ಸೇವಿಸುವಾಗ ಯಾವಾಗಲೂ ನಾವು ಯಾವ ದಿಕ್ಕಿನತ್ತ ಕುರಿತು ಆಹಾರ ಸೇವಿಸಬೇಕೆನ್ನುವುದರತ್ತ ಗಮನವನ್ನು ಹರಿಸಬೇಕು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಆಹಾರವನ್ನು ಸೇವಿಸುವಾಗ ಯಾವಾಗಲೂ ನಮ್ಮ ಮುಖ ಪೂರ್ವದತ್ತ ಅಥವಾ ಉತ್ತರದತ್ತ ಇರಬೇಕೆಂದು ಹೇಳಲಾಗುತ್ತದೆ. ಇಲ್ಲದಿದ್ದರೆ ನೀವು ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಎಷ್ಟೇ ದುಡಿದರೂ ಅದು ಒಮ್ಮೆ ವ್ಯರ್ಥವಾಗುತ್ತದೆ ಯಾವಾಗಲೂ ಆಹಾರವನ್ನು ಸೇವಿಸುವಾಗ ಶೂಗಳನ್ನು ಅಥವಾ ಚಪ್ಪಲಿಯನ್ನು ಧರಿಸಿ ಆಹಾರವನ್ನು ಸೇವಿಸಬಾರದು. ಆಹಾರವನ್ನು ಸೇವಿಸುವಾಗ ಕಾಲಿನಲ್ಲಿ ಶೂ ಅಥವಾ ಚಪ್ಪಲಿ ಧರಿಸಿದರೆ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಗೊಳ್ಳುವಳು.
3) ಲಕ್ಷ್ಮಿ ದೇವಿಯನ್ನು ಸಂತೋಷಗೊಳಿಸಲು ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿ :
ಧಾರ್ಮಿಕ ನಂಬಿಕೆಗಳ ಪ್ರಕಾರ ಯಾರಿಗಾದರೂ ಉಗುರು ಕಚ್ಚುವ ಅಥವಾ ಹಲ್ಲು ಕಚ್ಚುವ ದುರಭ್ಯಾಸವಿದ್ದರೆ ಅಭ್ಯಾಸಗಳನ್ನು ಇಂದೇ ಬಿಡಬೇಕು ಇದರಿಂದ ನೀವು ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಂದಿಗೂ ಕೂಡ ಉಗುರುಗಳನ್ನು ಅಥವಾ ಹಲ್ಲುಗಳನ್ನು ಕಚ್ಚದಿರಿ. ಹಾಗೂ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ತೊಳೆದು ನಂತರ ಮಲಗುವ ಅಭ್ಯಾಸವನ್ನು ರೂಡಿಸಿ ಕೊಳ್ಳಿ. ಆದರೆ ಇದರಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಕಾಲುಗಳನ್ನು ತೊಳೆದ ನಂತರ ಒದ್ದೆಯಾದ ಪಾದಗಳಿಂದ ಎಂದಿಗೂ ಮಲಗಬೇಡಿ ಇದು ಲಕ್ಷ್ಮಿ ದೇವಿ ಕೋಪಗೊಳ್ಳಲು ಕಾರಣವಾಗುತ್ತದೆ .
4) ಪೂಜಾ ಸ್ಥಳದಲ್ಲಿ ಇದನ್ನು ಇಡಬಾರದು : ಪೂಜಾ ಕೋಣೆಯಲ್ಲಿ ಹಿಂದಿನ ದಿನ ದೇವರಿಗೆ ಅರ್ಪಿಸಿದ ಹೂವುಗಳನ್ನು ಇಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.ಸಾಮಾನ್ಯವಾಗಿ ಹೆಚ್ಚಿನವರು ಹಿಂದಿನ ದಿನ ದೇವರಿಗೆ ಅರ್ಪಿಸಿದ ಹೂಗಳನ್ನು ಕಸಕ್ಕೆ ಹಾಕಬಹುದು ಎಂದು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುತ್ತಾರೆ ಇದರಿಂದ ಲಕ್ಷ್ಮೀದೇವಿಯ ಕೋಪಕ್ಕೆ ನೀವು ಗುರಿಯಾಗುತ್ತೀರಿ ದೇವರಿಗೆ ಅರ್ಪಿಸಿದ ಹೂಗಳನ್ನು ತೆಗೆದ ನಂತರ ಅದನ್ನು ಗಿಡಗಳಿರುವ ಸ್ಥಳದಲ್ಲಿ ಹೂ ತೋಟದಲ್ಲಿ ಹಾಕಬೇಕು.
5) ಪವಿತ್ರ ನದಿಗಳ ನೀರನ್ನು ಹೇಗೆ ಇಡಬೇಕು? ಮನೆಯಲ್ಲಿ ಪವಿತ್ರ ನದಿಯ ನೀರನ್ನು ಸಂಗ್ರಹಿಸಿದರೆ ಇದರಿಂದ ಲಕ್ಷ್ಮೀದೇವಿಯು ಸಂತೋಷಗೊಳ್ಳುತ್ತಾಳೆ ಮತ್ತು ನಿಮ್ಮನ್ನು ಆಶೀರ್ವದಿಸುತ್ತಾಳೆ. ಆದರೆ ನೀವು ಈ ಪವಿತ್ರ ನದಿಯ ನೀರನ್ನು ಇಡುವ ದಿಕ್ಕಿನತ್ತ ಹೆಚ್ಚು ಗಮನಹರಿಸಬೇಕು. ಪವಿತ್ರ ನದಿಯ ನೀರನ್ನು ನೀವು ಯಾವಾಗಲೂ ಈಶಾನ್ಯ ದಿಕ್ಕಿನತ್ತ ಇಡಬೇಕು ಇಲ್ಲವಾದರೆ ನೀವು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗುವಿರಿ ನಿಮ್ಮ ಮನೆಯವರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿತು. ಈ ಮೇಲೆ ಹೇಳಿದ ಕೆಲಸಗಳನ್ನು ನೀವು ಮನೆಯಲ್ಲಿ ನೀವಾಗಲಿ ಅಥವಾ ಬೇರೆಯವರಾಗಲಿ ಮಾಡುತ್ತಿದ್ದರೆ ಇಂದೇ ಅದನ್ನು ಮಾಡುವುದನ್ನು ನಿಲ್ಲಿಸಿ. ಇದರಿಂದ ನೀವು, ನಿಮ್ಮ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾದೀತು.ಇದೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಮತ್ತು ಇದೇ ರೀತಿಯಾದ ಉಪಯುಕ್ತ ಮಾಹಿತಿಗಳೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು.