ಶ್ರೀಕೃಷ್ಣರು ಹೇಳ್ತಾರೆ ವ್ಯಕ್ತಿಯಲ್ಲಿ ಈ 5 ಗುಣಗಳು ಇದ್ದರೆ ಅವರು ನನಗೆ ತುಂಬಾ ಪ್ರಿಯರಾಗಿರುತ್ತಾರೆ

ನಮಸ್ಕಾರ ಸ್ನೇಹಿತರೇ.ಸರ್ವಾಂತರ್ಯಾಮಿ,ಪಾಂಡುರಂಗ, ವಿಠಲ,ಎಂದೆಲ್ಲ ಆರಾಧಿಸುವ ನಾವು ಭಗವಾನ್ ಶ್ರೀಕೃಷ್ಣ ಇಷ್ಟ ಪಡುವ ಈ ಐದು ಗುಣಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಹೆಚ್ಚು ಜನರಿಗೆ ಷೇರ್ ಮಾಡಿ.ಭಗವಾನ್ ಶ್ರೀಕೃಷ್ಣನು ಗೀತಾ ಉಪದೇಶದಲ್ಲಿ ಇಂತಹ ಕೆಲವು ಬಗೆಯ ಮನುಷ್ಯರ ಬಗ್ಗೆ ತಿಳಿಸಿದ್ದಾರೆ.ಅವರು ಇವರಿಗಾಗಿ ಅತ್ಯಂತ ಪ್ರಿಯರಾಗಿದ್ದಾರೆ.ಭಗವಾನ್ ಶ್ರೀಕೃಷ್ಣ ಇಡೀ ಬ್ರಹ್ಮಾಂಡದಲ್ಲಿ ಪಾಲನಾ ಕರ್ತರಾಗಿದ್ದಾರೆ.ಬ್ರಹ್ಮಾಂಡದ ಪ್ರತೀ ಕಣ ಕಣದಲ್ಲೂ ಇದ್ದಾರೆ.ಭಗವಂತನಾದ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಇಡೀ ಬ್ರಹ್ಮಾಂಡಕ್ಕೆ ಭಗವದ್ಗೀತೆಯ ಜ್ಞಾನವನ್ನು ನೀಡಿದರು.ಇವು ಮನುಷ್ಯನ ಕಲ್ಯಾಣಕ್ಕೆ ಸರ್ವ ಸಂಪದವೂ ಆಗಿವೆ.ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಕರ್ಮ ಸಿದ್ದಾಂತವನ್ನು ತಿಳಿಸಿ ಹೇಳಿದ್ದಾರೆ.

ಅದು ಯಾವರೀತಿ ಕರ್ಮವನ್ನು ಮಾಡಿ ಪರ ಬ್ರಹ್ಮನನ್ನು ಸೇರುವುದು ಎನ್ನುವುದು.ಭಗವದ್ಗೀತೆ ಇಡೀ ಜಗತ್ತಿನ ಸರ್ವ ಶ್ರೇಷ್ಠ ಗ್ರಂಥವೂ ಆಗಿದೆ.ಇಲ್ಲಿ ಎಲ್ಲಾ ಪ್ರಶ್ನೆಗಳ ಉತ್ತರವೂ ಇದೆ.ಇಂದು ನಾವು ನಿಮಗೆ ತಿಳಿಯಪಡಿಸುವ ವಿಷಯ ಏನೆಂದರೆ ಕೆಲವು ಮನುಷ್ಯರ ಲಕ್ಷಣಗಳ ಬಗ್ಗೆ ತಿಳಿಸುತ್ತೇವೆ.ಒಂದು ವೇಳೆ ಯಾವುದಾದರೂ ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಅಂತಹವರು ಪರಮಾತ್ಮನಿಗೆ ಬಹಳ ಪ್ರಿಯರಾಗುತ್ತಾರೆ.ಒಂದುವೇಳೆ ನೀವು ಇಂತಹ ಲಕ್ಷಣಗಳನ್ನು ಅಳವಡಿಸಿಕೊಳ್ಳುವುದಾದರೆ ಭಗವಾನ್ ಶ್ರೀಕೃಷ್ಣ ಎಂದು ಕಾಮೆಂಟ್ ಮಾಡಿ.ಬನ್ನಿ ಅಂತಹ ಲಕ್ಷಣ ಯಾವುವು ಎಂದು ತಿಳಿಯೋಣ.ಒಂದನೆಯ ಲಕ್ಷಣ,ಯಾವುದೇ ವ್ಯಕ್ತಿಯ ಕಷ್ಟವನ್ನು ನೋಡಿ ನಗುವುದು.

ಯಾವುದೇ ವ್ಯಕ್ತಿ ಇನ್ನೊಬ್ಬರ ಕಷ್ಟವನ್ನು ನೋಡಿ ನಗುತ್ತಿದ್ದರೆ ಅಂತಹ ವ್ಯಕ್ತಿ ಶ್ರೀಕೃಷ್ಣ ದೇವರಿಗೆ ಇಷ್ಟ ಆಗುವುದಿಲ್ಲ.ಯಾರು ಇನ್ನೊಬ್ಬರ ಕಷ್ಟಕ್ಕೆ ಮಿಡಿಯುತ್ತಾ,ಸ್ಪಂದಿಸುತ್ತಾರೆ ಅಂತಹವರು ಶ್ರೀಕೃಷ್ಣನಿಗೆ ಪ್ರಿಯವಾಗಿರುವವರಾಗಿರುತ್ತಾರೆ.ಇನ್ನೂ ಎರಡನೆಯದು ದ್ವೇಷ ಮಾಡದೆ ಇರುವುದು.ದ್ವೇಷ ನಮ್ಮನ್ನ ಮೊದಲು ಸುಡುತ್ತದೆ.ಆದ್ದರಿಂದ ಯಾವುದೇ ವ್ಯಕ್ತಿಯನ್ನು ತಿರಸ್ಕಾರ ಭಾವನೆ ಮಾಡದೆ ದ್ವೇಷ,ಅಸೂಯೆಯ ಒಳಗಾಗದೆ ಸ್ನೇಹ ಭಾವನೆಯಿಂದ ಇರುತ್ತಾರೋ ಅಂತಹವರು ಸಹ ಶ್ರಿದೇವರಿಗೆ ಪ್ರಿಯ ಆಗುತ್ತಾರೆ.ಇನ್ನೊಬ್ಬರ ಮನಸ್ಸಿಗೆ ನೋವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ.ಇದರಿಂದ ನಿಮ್ಮ ಉನ್ನತಿ ಕುಂಠಿತವಾಗುತ್ತದೆ.ಮೂರನೆಯ ಲಕ್ಷಣ ಶೋಕರಹಿತ.

ಶ್ರೀಕೃಷ್ಣ ರು ಈ ರೀತಿ ಹೇಳುತ್ತಾರೆ.ಯಾರು ಅತಿ ಆಸೆ ಮಾಡುವುದಿಲ್ಲವೋ, ಸಂಸಾರದ ಮೋಹಕ್ಕೆ ಒಳಗಾಗಿ ಶೋಕ ಮಾಡುವುದಿಲ್ಲವೋ,ಅತಿಯಾದ ಆಸೆ ಇರುವುದಿಲ್ಲವೋ ಅಂತವರು ಶ್ರೀಕೃಷ್ಣ,ಕೇಶವನಿಗೆ ತುಂಬಾ ಪ್ರಿಯವಾಗಿರುತ್ತಾರೆ.ಇನ್ನೂ ನಾಲ್ಕನೆಯದು ಬೇರೆಯವರ ವಸ್ತುಗಳನ್ನು ಪಡೆಯಲು ಯಾರು ಕೆಟ್ಟ ಕೆಲಸಗಳನ್ನು ಮಾಡುವುದಿಲ್ಲವೋ,ಯಾರು ಸಾಂಸಾರಿಕ ಮೋಹಗಳಿಂದ ಬಿನ್ನ ಆಗಿರುತ್ತಾರೆ ಅಂತವರು ಸರ್ವೋತ್ತಮ ಆಗಿರುತ್ತಾರೆ ಮತ್ತು ಕೃಷ್ಣರಿಗೆ ಪ್ರಿಯಾರಾಗಿರುತ್ತಾರೆ.

ಇನ್ನೂ ಇದನೆಯದು ತ್ಯಾಗವನ್ನು ಮಾಡುವಂತವರು.ಯಾವ ಮನುಷ್ಯನೂ ತನ್ನ ಸುಖವನ್ನು ಮರೆತು ತ್ಯಾಗ ಮಾಡಿ ಇನ್ನೊಬ್ಬರ ಏಳಿಗೆಗೆ ಪೂರಕವಾಗಿ ಇರುತ್ತಾರೋ,ಪರೋಪಕಾರಿ ಆಗಿರುವ ವ್ಯಕ್ತಿಗಳು, ಅಂತಹವರು ಭಗವಂತನಾದ ಶ್ರೀಕೃಷ್ಣನ ಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.ಮನುಷ್ಯನೂ ತನ್ನ ಸ್ಥಿತಿಗೆ ಅನುಸಾರವಾಗಿ ಇನ್ನೊಬ್ಬರಿಗೆ ದಾನ ಮಾಡುತ್ತಿರಬೇಕು.ದಾನ ಮಾಡುತ್ತಿರಬೇಕು.ಇದಿಷ್ಟು ಭಗವಾನ್ ಶ್ರೀಕೃಷ್ಣ ಇಡೀ ಜಗತ್ತಿನ ಸರ್ವ ಶ್ರೇಷ್ಠ ಜನರಲ್ಲಿ ಇಷ್ಟ ಪಡುವ ಗುಣಗಳು.ಈ ಗುಣಗಳು ನಿಮ್ಮಲ್ಲಿ ಇದ್ದರೆ,ಇಲ್ಲದ್ದಿದ್ದರೆ ಮುಂದೆ ಪಾಲಿಸುತ್ತೀರ ಎಂದಾದರೆ ಕಾಮೆಂಟ್ ಮಾಡಿ.ಹಾಗೆ ಲೈಕ್ ಮಾಡಿ ಷೇರ್ ಮಾಡಿ.ಧನ್ಯವಾದಗಳು.

Leave a Comment