ಪ್ರತಿದಿನ ಮುಂಜಾನೆ ಎದ್ದು ಮನೆ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ರಂಗೋಲಿಯಲ್ಲಿ ಅಷ್ಟಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ. ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕುವುದರಿಂದ ಋಣಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ. ಇದರೊಂದಿಗೆ ಮನೆಯ ಸಂಪತ್ತು ಇನ್ನೂ ವೃದ್ಧಿ ಆಗುತ್ತದೆ.
ಪ್ರತಿದಿನ ಸಂಜೆ 4 ಕರ್ಪೂರವನ್ನು ತೆಗೆದುಕೊಂಡು ವೀಳ್ಯದೆಲೆಯ ಮೇಲೆ ಇರಿಸಿ ಮನೆಯ ಕೋಣೆಯ ನಾಲ್ಕು ದಿಕ್ಕಿನಲ್ಲೂ ಕರ್ಪೂರದ ಹೊಗೆಯನ್ನು ಹಾಕಬೇಕು ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಮನೆ ಏಳಿಗೆ ಆಗುವಂತೆ ಮಾಡುತ್ತದೆ.
ಮನೆ ಅಥವಾ ಕಛೇರಿಗೆ ಹೋಗುವಾಗ ಯಾವಾಗಲೂ ಬಲಗಾಲನ್ನು ಮುಂದೆ ಇಟ್ಟು ಪ್ರವೇಶಿಸಬೇಕು. ಇದು ವಾಸ್ತು ಪ್ರಕಾರ ಹಾಗೂ ಶಾಸ್ತ್ರದ ಪ್ರಕಾರ ಶುಭವಾಗಿದೆ. ಇದರಿಂದ ನೀವು ಯಶಸ್ಸಿನ ಹಾದಿಯನ್ನು ಪ್ರವೇಶಿಸಬಹುದು ಹಾಗೂ ಇದರಿಂದ ಮನೆಗೂ ಹಾಗೂ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.
ಮನೆ ನೆಲ ಒರೆಸುವಾಗ ಆ ನೀರಿಗೆ ಸ್ವಲ್ಪ ಅರಿಶಿನ ಪುಡಿ ಹಾಗೂ ಕಲ್ಲುಪ್ಪನ್ನು ಹಾಕಿಕೊಂಡು ನೆಲವರಿಸುವುದರಿಂದ ಮನೆಗೆ ತುಂಬಾ ಒಳ್ಳೆಯದು ಹಾಗೂ ಆ ನೀರನ್ನು ಶೌಚಾಲಯಕ್ಕೆ ಚೆಲ್ಲಬೇಡಿ ಯಾವುದಾದರೂ ಸಸ್ಯಕ್ಕೆ ಹಾಕಿ ಮನೆಯನ್ನು ಈ ವಿಧಾನದಲ್ಲಿಲ ಸ್ಚಚ್ಛ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿನ ಆರ್ಥಿಕ ಅಭಿವೃದ್ಧಿ ಉತ್ತಮವಾಗುತ್ತದೆ.
ಮನೆಯ ಆರ್ಥಿಕ ಅಭಿವೃದ್ಧಿಗಾಗಿ ಒಂದು ಗಾಜಿನ ಬಟ್ಟಲಲ್ಲಿ ಉಪ್ಪನ್ನು ತೆಗೆದುಕೊಂಡು ಉಪ್ಪಿನೊಂದಿಗೆ ನಾಲ್ಕೈದು ಲವಂಗವನ್ನು ಇಟ್ಟು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಕೂಡ ಇರಿಸಬಹುದು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತದೆ ಹಾಗೂ ಶಾಂತಿ ನೆಮ್ಮದಿ ನೆಲೆಸುತ್ತದೆ.
ವಾಸ್ತುಪ್ರಕಾರ ಮನೆಯಲ್ಲಿ ಯಾವುದೇ ಆಹಾರ ವಸ್ತುಗಳ ಡಬ್ಬಿ ಉಪ್ಪು ಸಕ್ಕರೆ ಬೆಲ್ಲ ಅಕ್ಕಿ ಇತ್ಯಾದಿ ಖಾಲಿಯಾಗಬಾರದು. ಅದರಲ್ಲೂ ಮುಖ್ಯವಾಗಿ ಅಕ್ಕಿ ಡಬ್ಬ ಹಾಗೂ ಮುಂತಾದ ದವಸ ಧಾನ್ಯಗಳು ಖಾಲಿ ಆಗಬಾರದು ಇದರಿಂದ ನಿಮ್ಮ ಅಭಿವೃದ್ಧಿಗೆ ತಡೆಯಾಗುತ್ತದೆ. ಹಾಗಾಗಿ ಮನೆಯಲ್ಲಿ ಆಹಾರ ದವಸ ಧಾನ್ಯಗಳ ಡಬ್ಬಿಗಳು ತುಂಬಿಕೊಂಡಿದ್ದರೆ ಆರ್ಥಿಕ ಅಭಿವೃದ್ಧಿ ಉತ್ತಮವಾಗಿರುತ್ತದೆ ಎನ್ನುವ ನಂಬಿಕೆ ಇದೆ.