ದರಿದ್ರ ಪುರುಷರ ಲಕ್ಷಣಗಳು

0

ದರಿದ್ರ ಪುರುಷರ ಲಕ್ಷಣಗಳು ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ.
ಒಬ್ಬ ಒಳ್ಳೆಯ ಲಕ್ಷಣವಿರುವ ಪುರುಷ ತನ್ನ ಕುಟುಂಬಕ್ಕಾಗಿ ತನ್ನೆಲ್ಲ ಕನಸುಗಳನ್ನು ಬಲಿಕೊಟ್ಟು ಬದುಕುತ್ತಾನೆ. ತನ್ನ ಆಸೆ ಕನಸುಗಳ ಸಮಾಧಿ ಕಟ್ಟುತ್ತಾನೆ. ಕಲ್ಲು ಹೃದಯದವನು ಎಂದವರಿಗೆ ಭಾರ ಹೃದಯದ ಪ್ರೀತಿ ಕಾಣುವುದೇ ಇಲ್ಲ. ಜೀವನದ ನಾಟಕ ರಂಗಭೂಮಿಯಲ್ಲಿ ತಂದೆ ತಾಯಿಗೆ ಮಗನಾಗಿ ಅಕ್ಕತಂಗಿಗೆ ಅಣ್ಣ ತಮ್ಮನಾಗಿ ಹೆಂಡತಿಗೆ ಗಂಡನಾಗಿ, ಮಗಳಿಗೆ ತಂದೆಯಾಗಿ,

ಸ್ನೇಹಿತರಿಗೆ ಗೆಳೆಯನಾಗಿ ಅದೆಷ್ಟೋ ಪಾತ್ರಗಳನ್ನು ಮಾಡುತ್ತಾನೆ. ಹೀಗೆ ಅದೆಷ್ಟೋ ಜವಾಬ್ದಾರಿಯ ಪಾತ್ರ ನೆರವೇರಿಸಿದರು ಗಂಡಿನ ಪಾತ್ರ ಯಾರಿಗೂ ಕಾಣುವುದೇ ಇಲ್ಲ. ಈ ಲೋಕವೇ ಹಾಗೇ ಒಳ್ಳೆಯತನ ಯಾರಿಗೂ ಕಾಣುವುದೇ ಇಲ್ಲ. ಎಲ್ಲಾ ಪುರುಷರು ಕೆಟ್ಟವರಲ್ಲ ಆದರೇ ಕೆಲವು ಪುರುಷರಲ್ಲಿ ಈ ಲೇಖನದಲ್ಲಿ ತಿಳಿಸಿರುವ ಲಕ್ಷಣಗಳು ಕಂಡುಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೇ ಆ ಲಕ್ಷಣಗಳು ಯಾವುವು ಎಂಬುದನ್ನು ನೋಡೋಣ.

ಪುರುಷರಿಗೆ ಸ್ವಾಭಿಮಾನ ಮತ್ತು ಸ್ವಂತ ಉದ್ಯೋಗ ಇರಲೇಬೇಕು ಯಾವ ಪುರುಷರು ತಮ್ಮ ಜವಾಬ್ದಾರಿಗಳಿಂದ ಹಿಂಜರಿಯುತ್ತಾರೋ ಅಂಥವರಿಗೆ ಬದುಕಿನ ಅರಿವು ಇರುವುದಿಲ್ಲ. ಬೇಜಾವಾಬ್ದಾರಿಯ ವರ್ತನೆ ಖಂಡಿತವಾಗಿಯೂ ಒಳ್ಳೆಯ ಲಕ್ಷಣವಲ್ಲ.

ಕೆಟ್ಟ ಲಕ್ಷಣಗಳಿರುವ ಪುರುಷರ ಪ್ರತಿ ಮಾತಿನಲ್ಲೂ ಕೆಟ್ಟ ಬೈಗುಳವಿರುತ್ತದೆ. ತಂದೆ ತಾಯಿ ಅಥವಾ ಹೆಂಡತಿಯನ್ನು ಗೌರವಿಸುವುದಿಲ್ಲ ಸಾರಾಯಿ ಕುಡಿದು ಹೆಂಡತಿ ಮಕ್ಕಳಿಗೆ ಕಾಟ ಕೊಡುವುದು ಕೂಡು ಒಂದು ಕೆಟ್ಟ ಲಕ್ಷಣವಾಗಿದೆ.

ಕಟ್ಟಿಕೊಂಡ ಹೆಂಡತಿಗೆ ಗೌರವವನ್ನು ಕೊಡದೆ ಅವಳಿಗೆ ಬೇಕಾದ ಹಾಗೆ ಬದುಕಲು ಬಿಡದೆ ಪ್ರತಿಯೊಂದರಲ್ಲು ನಾನು ಹೇಳಿದಂತೆಯೇ ನಡೆಯಬೇಕು ಎಂಬ ಅಹಂಕಾರ ಹೊಂದಿರುವುದು ಕೂಡಾ ಒಂದು ರೀತಿಯಲ್ಲಿ ಕೆಟ್ಟ ಪುರುಷರ ಲಕ್ಷಣವಾಗಿದೆ.

ಕೆಲವು ಪುರುಷರು ಮೋಜು ಮಸ್ತಿ ಮಾಡಿಕೊಂಡು ಊರೆಲ್ಲಾ ಸುತ್ತಾಡುತ್ತಿರುತ್ತಾರೆ. ಜೀವನವೆಂದರೆ ಇಷ್ಟೇ ಎಂಬುದು ಅವರ ಕಲ್ಪನೆ ಇಂಥಹವರಿಗೆ ತಮ್ಮ ಜವಾಬ್ದಾರಿಯ ಅರಿವು ಇರುವುದಿಲ್ಲ. ತಂದೆಯ ಸಂಪಾದನೆಯಲ್ಲಿಯೇ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಯಾರಾದರೂ ಕೆಲಸ ಏಕೆ ಮಾಡುತ್ತಿಲ್ಲ ಎಂದು ಕೇಳಿದರೆ ಕೆಲಸಕ್ಕೆ ಹೋಗಲು ನನಗೇನು ಕಮ್ಮಿ ಆಗಿದೆ ಎಂಬುವುದು ಅವರ ಉತ್ತರವಾಗಿರುತ್ತದೆ. ಇಂಥವರು ಆರ್ಥಿಕವಾಗಿ ಸ್ವತಂತ್ರರಾಗಿರುವುದಿಲ್ಲ. ದೈನಂದಿನ ಖರ್ಚಿಗಾಗಿ ಬೇರೆಯವರ ಮೇಲೆ ಅವಲಂಬಿತರಾಗಿರುತ್ತಾರೆ.

ಬೆಳಗ್ಗೆ ತಡವಾಗಿ ಎದ್ದೇಳುವುದು ತಡವಾಗಿ ಮಲಗುವುದು ತಡವಾಗಿ ಊಟ ಮಾಡುವುದು ಸಿಗರೇಟ್ ಸೇದುವುದು ಸಾರಾಯಿ ಕುಡಿಯುವುದು ಹೀಗೆ ಇನ್ನೂ ಅನೇಕ ಕೆಟ್ಟ ಕೆಟ್ಟ ಚಟಗಳನ್ನು ಹೊಂದಿರುತ್ತಾರೆ.

ದಿನವಿಡೀ ಏನೋ ಮಾಡದೆ ಮನೆಯಲ್ಲೇ ಮೊಬೈಲ್ ನಲ್ಲಿ ಕಾಲ ಕಳೆಯುವುದು ಗೇಮ್ಸ್ ಆಡುವುದು, ಫೇಸ್ ಬುಕ್ ಮತ್ತು ರೀಲ್ಸ್ ನೋಡುತ್ತಾ ಇರುವುದು ಹೀಗೆ ಮಾಡಿ ಅವರಿಗೆ ಅರಿವೇ ಇರುವುದಿಲ್ಲ ಅವರ ಅಮೂಲ್ಯವಾದ ಸಮಯ ಹಾಳಾಗುತ್ತಿದೆ ಅಂತ ತಿಳಿದಿರುವುದಿಲ್ಲ.
ಈ ಲೇಖನ ಕೇವಲ ಕೆಲವು ಕೆಟ್ಟ ಲಕ್ಷಣಗಳನ್ನು ಹೊಂದಿರುವ ಪುರುಷರಿಗಾಗಿ ಮಾತ್ರ ಎಲ್ಲಾ ಪುರುಷರಿಗಾಗಿ ಇದು ಅನ್ವಯಿಸುವುದಿಲ್ಲ. ಶೇ 100ರಲ್ಲಿ 10 ಮಂದಿ ಇಂತಹ ಸ್ವಭಾವವನ್ನು ಹೊಂದಿರುವ ಪುರುಷರು ಇರುತ್ತಾರೆನ್ನುವ ಅಭಿಪ್ರಾಯವಷ್ಟೆ.

Leave A Reply

Your email address will not be published.