ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ, ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ ಜೀವನ ಸದಾ ಸುಂದರವಾಗಿರುತ್ತದೆ 1) ಸೂರ್ಯ ಹುಟ್ಟುವ ಮೊದಲೇ ಎದ್ದು ಆಕ್ಟಿವ್ ಆಗಿ. 2) ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ 3) ನೀವು ಹೇಳುತ್ತಲೇ ಗುಣಗಾಟ ಜಗಳ ಮಾಡದೆ ಯಾವಾಗಲೂ ನಗು ಮುಖದಿಂದ ದಿನವನ್ನು ಆರಂಭಿಸಿ.

4) ಎದ್ದ ನಂತರ ವಾಕ್ ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿರಿ. 5) ಪ್ರತಿದಿನ ಐದು ನಿಮಿಷವಾದರೂ ಬಿಸಿಲಿಗೆ ಮೈ ಒಡ್ಡುವುದನ್ನು ಮರೆಯಬೇಡಿ. 6) ಆರೋಗ್ಯವಾಗಿರಲು ಆದಷ್ಟು ನೀರು ಕುಡಿಯಿರಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ನೋಟ ನೀರು ಕುಡಿಯಿರಿ. 7) ಬೆಳಗ್ಗೆ ಯಾವಾಗಲೂ ಆರೋಗ್ಯಕರ ಆಹಾರ ಸೇವಿಸಿ ಆದರೆ ಡಯಟ್ ಅಂತ ಹೇಳಿ ಬೆಳಗಿನ ತಿಂಡಿಯನ್ನು ಯಾವತ್ತು ಮಾಡದೇ ಇರಬೇಡಿ. 8) ಆದಷ್ಟು ಜಂಕ್ ಫುಡ್ ಫಾಸ್ಟ್ ಫುಡ್ ಮತ್ತು ಹೊರಗಿನ ತಿಂಡಿಗಳಿಂದ ದೂರವಿರಿ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ಸೇವಿಸಿ.
9) ನೀವು ಹೊರಗೆ ಹೋಗಿ ಕೆಲಸ ಮಾಡುವವರಾದರೆ ಎಷ್ಟೇ ಬ್ಯುಸಿ ಇದ್ದರೂ ನಿಮ್ಮ ಮನೆಯವರಿಗೆ ಕರೆ ಮಾಡುವುದನ್ನು ಮರೆಯಬೇಡಿ.

10) ಮನಸ್ಸಿಗೆ ಖುಷಿ ಕೊಡುವ ಒಂದು ಕೆಲಸವನ್ನು ಆದರೂ ಪ್ರತಿದಿನ ಮಾಡಿ. 11) ನೆಗೆಟಿವ್ ಅಂದರೆ ವಿಷಕರ ಮನೋಭಾವ ಇರುವವರ ಸಂಪರ್ಕ ಕಡಿಮೆ ಮಾಡಿ. 12) ಇನ್ನೊಬ್ಬರ ಬಗ್ಗೆ ಹಿಂದಿನಿಂದ ಮಾತನಾಡುವುದನ್ನು ನಿಲ್ಲಿಸಿ
13) ರಾತ್ರಿಯ ವೇಳೆ ಬಾರಿ ಭೋಜನ ಮಾಡದೆ ಹಗುರವಾಗಿ ಊಟ ಮಾಡಿ. 14) ಊಟ ಮಾಡಿದ ತಕ್ಷಣವೇ ನೀರು ಕುಡಿಯಬೇಡಿ ಊಟದ 45 ನಿಮಿಷ ಮೊದಲು ಅಥವಾ ಊಟದ 45 ನಿಮಿಷ ನಂತರ ನೀರು ಕುಡಿಯಿರಿ.
15) ರಾತ್ರಿ ಮಲಗುವ ಮೊದಲು ಮನಸ್ಸಿಗೆ ಹಿತ ಕೊಡುವಂತಹ ಹಾಡುಗಳನ್ನು ಕೇಳಿ ಅಥವಾ ಪುಸ್ತಕವನ್ನು ಓದಿರಿ.
16) ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ.

17) ಒಬ್ಬ ಸಾಮಾನ್ಯ ಮನುಷ್ಯನಿಗೆ ಕನಿಷ್ಠ 6 ಗಂಟೆಗಳ ನಿದ್ರೆ ಬೇಕೇ ಬೇಕು ಮತ್ತು 8 ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡಬಾರದು. 18) ಯಾವುದೇ ರೀತಿಯ ಮನಸ್ಸಾಪ ಇಲ್ಲದೆ ತೃಪ್ತಿಕರವಾಗಿ ನಿದ್ದೆಯನ್ನು ಮಾಡಿ ನಿದ್ದೆ ಚೆನ್ನಾಗಿ ಆದರೆ ದಿನವೆಲ್ಲ ತುಂಬಾ ಉಲ್ಲಾಸದಿಂದ ಇರಬಹುದು ಮತ್ತು ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
19) ಬೇರೆಯವರ ಬಗ್ಗೆ ಚಿಂತೆ ಮಾಡಿ ಜಾಸ್ತಿ ತಲೆ ಕೆಡಿಸಿಕೊಳ್ಳದೆ ನಿಮ್ಮ ಬಗ್ಗೆ ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ 10 ನಿಮಿಷವಾದರೂ ನಿಮಗೆ ಅಂತ ಮೀಸಲಿಡಿ.

20) ಅದೆಂತಹದ್ದೇ ಕಷ್ಟದ ಸಮಯದಲ್ಲೂ ಧನಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಯಾಕೆಂದರೆ ಕಾಣದ ಸತ್ಯ ನಮ್ಮನ್ನು ಸದಾ ಕಾಯುತಿದೆ ಎಂಬುದು ನೆನಪಿನಲ್ಲಿರಲಿ. ಒಟ್ಟಿನಲ್ಲಿ ದಿನವನ್ನು ಸಿಡಿಮಿಡಿ ಸಿಟಿನಿಂದ ಸದಾ ಚಿಂತೆ ಮಾಡುತ್ತ ಕಳೆಯದೆ ಆದಷ್ಟು ಖುಷಿಯಿಂದ ಕಳೆಯಿರಿ ನೋಡಿ ಸ್ನೇಹಿತರೆ ನೀವು ಖುಷಿಯಾಗಿದ್ದರೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಆದರೆ ಮುಖದಲ್ಲಿ ಒಂದು ಸಣ್ಣ ಮುಗುಳುನಗೆ ಇರಲಿ ಮನಸ್ಸಿನಲ್ಲಿ ಸಾಧಿಸುವ ಛಲ ಇರಲಿ ಮತ್ತು ಪ್ರತಿದಿನ ನಿಮ್ಮನ್ನು ಸುಧಾರಿಸಿಕೊಳ್ಳಲು ನಮ್ಮ ಒಂದು ಪೇಜ್ ಗೆ ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರಿ.
ಧನ್ಯವಾದಗಳು

Leave a Comment