ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು

ಪೂಜೆಯಲ್ಲಿ ನಿಷಿದ್ಧ ಕಾರ್ಯಗಳು ಗಣೇಶನಿಗೆ ತುಳಸಿ ಅರ್ಪಿಸಬಾರದು. ಅಮ್ಮನವರಿಗೆ ದರ್ಬೆ ಅರ್ಪಿಸಬಾರದು. ಶಿವಲಿಂಗಕ್ಕೆ ಕೇತಕೀಪುಷ್ಪ ಅರ್ಪಿಸಬಾರದು. ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು. ಒಂದೇ ಪೂಜಾಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳಿರಬಾರದು.

ಒಂದು ದೇವಸ್ಥಾನದಲ್ಲಿ ಮೂರು ಗಣೇಶ ವಿಗ್ರಹಗಳನ್ನು ಇಡಬಾರದು. ತುಳಸೀ ದಳಗಳನ್ನು ಜಗಿದು ತಿನ್ನಬಾರದು. ದೇವಾಲಯದ ಮುಖ್ಯದ್ವಾರದ ಎದುರು ಕೆಳಗೆ ಚಪ್ಪಲಿ ಶೂಗಳನ್ನು ಬಿಡಬಾರದು. ದೇವರ ದರ್ಶನ ಮಾಡಿ ಹಿಂತಿರುಗುವಾಗ ಗಂಟೆ ಬಾರಿಸಬಾರದು.

ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು. ಮನೆಯಲ್ಲಿ ಪೂಜಿಸುವ ಶಿವಲಿಂಗ ಹೆಬ್ಬೆರಳಿಗಿಂತ ದೊಡ್ಡದಿರಬಾರದು. ಶಿವಲಿಂಗವನ್ನು ತುಳಸೀಗಿಡದಲ್ಲಿ ಇಡಬಾರದು. ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು.

ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನ ಕಾಯಿ ಒಡೆಯಬಾರದು. ಕುಟುಂಬದಲ್ಲಿ ಸೂತಕ ಇದ್ದಾಗ ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು. ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು. ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ ಅದನ್ನು ದಾಟಬಾರದು.

ಒಂದು ಕೈಯಿಂದ ನಮಸ್ಕರಿಸಬಾರದು.

ನೀವು ಹಚ್ಚುವ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು. ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗೆ ಒಂದು ಕರವಸ್ತ್ರವನ್ನೋ ನ್ಯಾಪ್ ಕಿನ್ ಆಗಲೀ ಇಟ್ಟುಕೊಳ್ಳಬೇಕು. ತೀರ್ಥದ ಒಂದು ಹನಿಯೂ ಕೆಳಕ್ಕೆ ಬೀಳಬಾರದು.

ತೀರ್ಥ ಕುಡಿದು ಕೈಯನ್ನು ತಲೆಗೆ ಅಥವಾ ಶಿರಕ್ಕೆ ಒರೆಸಿಕೊಳ್ಳಬಾರದು. ಗಾಯತ್ರಿಯು ಶಿರದಲ್ಲಿ ನೆಲೆಸಿರುತ್ತಾಳೆ. ದೇವಿಗೆ ಅಪವಿತ್ರತೆ ಉಂಟಾಗುತ್ತದೆ. ದೇವರಿಗೆ ಹಣ ಇತ್ಯಾದಿ ದುರಾಸೆ ತೋರಿಸಬಾರದು. ಸ್ತ್ರೀಯರು ಹನುಮಂತ ದೇವರನ್ನು ಶನಿದೇವರನ್ನು ಮುಟ್ಟಿ ನಮಿಸಬಾರದು.

ಅವಿವಾಹಿತ ಸ್ತ್ರೀಯರು ಹನುಮಂತದೇವರ, ಶನಿದೇವರ ಕಾಲಿಗೆ ಬೀಳದೇ ನಿಂತೇ ನಮಿಸಬೇಕು.ದೇವಸ್ಥಾನದ, ಅಥವಾ ಪೂಜಾಕೋಣೆಯ ಆವರಣವನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. ದೇವಾಲಯದಲ್ಲಿ ಜನಜಂಗುಳಿಯಿದ್ದಾಗ ಭಗವಂತನ ನಾಮಸ್ಮರಣೆ ಮಾಡುತ್ತ ನಿಮ್ಮ ಸರದಿಯಲ್ಲಿ ಮುಂದೆ ಹೋಗುತ್ತಿರಬೇಕು.

ಭೈರವ ದೇವಾಲಯವನ್ನು ಬಿಟ್ಟು ಉಳಿದ ದೇವಾಲಯಗಳಲ್ಲಿ ಕುಡುಕರು ಪ್ರವೇಶಿಸಬಾರದು. ದೇವಾಲಯವನ್ನು ಪ್ರವೇಶಿಸುವ ಮೊದಲು ಬಲಗಾಲನಿಟ್ಟು ಮತ್ತು ದೇವಾಲಯದಿಂದ ಹಿಂತಿರುಗುವಾಗ ಮೊದಲು ಎಡಗಾಲನ್ನು ಹೊರಗಿಟ್ಟು ಹೋಗಬೇಕು.

ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಜೋರಾಗಿ ಕರ್ಕಶವಾಗಿ ಬಾರಿಸಬಾರದು. ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗಿಬರಲು ಬೇರೆ ಜೊತೆ ಬಟ್ಟೆಗಳನ್ನೇ ಇಟ್ಟುಕೊಂಡು, ಧರಿಸಿ ಹೋಗಬೇಕು. ದೇವಾಲಯ ಬಹಳ ದೂರ ಇಲ್ಲದಿದ್ದರೆ ಶೂ, ಚಪ್ಪಲಿ ಹಾಕದೇ ಹೋಗಬೇಕು.

ದೇವರ ದರ್ಶನವನ್ನು ನಿಂತು ತೆರೆದ ಕಣ್ಣುಗಳಿಂದ ಪಡೆದು ಹಾಗೆಯೇ ಹಿಂತಿರುಗಬಾರದು, ಎರಡು ನಿಮಿಷ ಕುಳಿತು ದೇವರ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು.

ಆರತಿ ತೆಗೆದುಕೊಂಡ ಅನಂತರ ಅಥವಾ ದೀಪ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು. ಇವುಗಳನ್ನ ಪ್ರಾಚೀನ ಋಷಿಗಳು ತಿಳಿಸಿಕೊಟ್ಟಿದ್ದಾರೆ.

Leave a Comment