ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು ಖರ್ಚು ಮಾಡಿದರೆ ಅಥವಾ ಮನೆಗೆ ತಂದು ಏನು ಮಾಡಬೇಕು,ಏನು ಮಾಡಬಾರದು

ನಮಸ್ಕಾರ ಸ್ನೇಹಿತರೆ ಇದು ಒಂದಲ್ಲ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಬಂದಿರುತ್ತದೆ ಎಷ್ಟೋ ಜನರಿಗೆ ರಸ್ತೆಬದಿಯಲ್ಲಿ ಅಥವಾ ಹೊರಗಿನ ಯಾವುದೇ ಸ್ಥಳಗಳಲ್ಲಿ ಹಣ ಸಿಕ್ಕೆ ಸಿಕ್ಕಿರುತ್ತದೆ ಅಂದರೆ ಕಾಯಿನ್ ಆಗಿರಬಹುದು ಅಥವಾ ನೋಟು ಗಳಾಗಿರಬಹುದು ಹಣವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಹಣವಿದ್ದರೆ ಎಲ್ಲರ ಮಧ್ಯೆ ಒಬ್ಬ ಮನುಷ್ಯನಾಗಿ ಬಾಳಲು ಸಾಧ್ಯ ಹಣವೇ ಇಲ್ಲದಿದ್ದರೆ

ಸಂಬಂಧಿಕರ ಮಧ್ಯೆನೆ ಬೆಲೆ ಇರುವುದಿಲ್ಲ ಹಾಗಾಗಿ ಹಣದ ಉಪಯೋಗ ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ ಕೆಲವರಿಗೆ ಹೊರಗಡೆ ಹೋದಂತಹ ಸಂದರ್ಭದಲ್ಲಿ ಹೊರಗಡೆ ಸಿಕ್ಕಿದಂತಹ ಹಣವನ್ನು ಕಾಯಿನ್ ಆಗಿರಲಿ ಅಥವಾ ನೋಟ್ ಆಗಿರಲಿ ಸಿಕ್ಕಿದಂತಹ ಹಣವನ್ನು ಕೆಲವರು ಏನು ಮಾಡುವುದು ಎಂದು ಯೋಚಿಸುತ್ತಾರೆ ಹಣವನ್ನು ಮನೆಗೆ ತಂದರೆ ಏನಾಗುವುದೋ ಎಂದು ಭಯಪಡುತ್ತಾರೆ ಸಿಕ್ಕಿದಂತಹ ಹಣವನ್ನು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ದೇವರಿಗೆ ಅರ್ಪಿಸುತ್ತಾರೆ

ಇನ್ನು ಕೆಲವರು ಸಿಕ್ಕಂತಹ ಹಣವನ್ನು ಉಪಯೋಗಿಸದೆ ಆ ಹಣವನ್ನು ತಮ್ಮ ಪರ್ಸಿನಲ್ಲಿ ಜೋಪಾನವಾಗಿ ಇಟ್ಟುಕೊಂಡಿರುತ್ತಾರೆ ಇನ್ನು ಕೆಲವರು ಆ ಹಣವನ್ನು ಬೇರೆಯವರಿಗೆ ದಾನ ನೀಡುತ್ತಾರೆ ಆದರೆ ರಸ್ತೆಗಳಲ್ಲಿ ಅಥವಾ ಹೊರಗಡೆ ಸಿಕ್ಕಂತಹ ಹಣವನ್ನು ಮನೆಗೆ ತಂದು ಹೀಗೆ ಮಾಡಿದರೆ ಆರ್ಥಿಕವಾಗಿ ಅಂದರೆ ಹಣಕಾಸಿನ ವಿಚಾರವಾಗಿ ಯಾವುದೇ ತೊಂದರೆ ಇರುವುದಿಲ್ಲ ಇದರಿಂದ ಉತ್ತಮವಾದ ಅಭಿವೃದ್ಧಿಯನ್ನು ಕಾಣಬಹುದು ಎಂದು ಪಂಡಿತರು ಹೇಳುತ್ತಾರೆ ಅಷ್ಟಕ್ಕೂ ಸಿಕ್ಕಂತಹ ಹಣವನ್ನು ಏನು ಮಾಡಬೇಕು ಎಂದು ತಿಳಿಯುವುದಾದರೆ

ಸಿಕ್ಕಂತಹ ಹಣವನ್ನು ಮನೆಗೆ ತಂದು ಹೀಗೆ ಮಾಡುವುದರಿಂದ ಅದೃಷ್ಟಲಕ್ಷ್ಮಿ ಒಲಿಯುವ ಸಾಧ್ಯತೆ ಇದೆ ಸಿಕ್ಕಿದಂತಹ ಹಣವನ್ನು ಅದನ್ನು ಶುಚಿಗೊಳಿಸಿ ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಅರಿಶಿನ-ಕುಂಕುಮವನ್ನು ಹೆಚ್ಚು ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಳ್ಳಿ ಆರ್ಥಿಕ ವೃದ್ಧಿಯನ್ನು ಹೆಚ್ಚಿಸು ತಾಯಿ ಮಹಾಲಕ್ಷ್ಮಿ ಎಂದು ಮನಸಾರೆ ಭಕ್ತಿಯಿಂದ ಪೂಜಿಸಿ ಆ ನಾಣ್ಯವನ್ನು ಬೀರುವಿನಲ್ಲಿ ಇಟ್ಟು ಪ್ರತಿ ಶುಕ್ರವಾರದಂದು ಪೂಜಿಸಿದರೆ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲ ಈಡೇರುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment