ನಿಮ್ಮ ಕಷ್ಟಗಳನ್ನು ದೂರ ಮಾಡುವ ಪ್ರಪಂಚದ ಶಕ್ತಿಶಾಲಿ ಮಂತ್ರ

0

ನಾವು ಈ ಲೇಖನದಲ್ಲಿ ನಿಮ್ಮ ಕಷ್ಟಗಳನ್ನು ದೂರ ಮಾಡುವ ಪ್ರಪಂಚದ ಶಕ್ತಿ ಶಾಲಿ ಮಂತ್ರ ಯಾವುದು ಎಂದು ತಿಳಿಯೋಣ . ಜೀವನದಲ್ಲಿ ಯಾವ ಕೋರಿಕೆ ಇದ್ದರೂ , ಅದು ಶೀಘ್ರವಾಗಿ ನೆರವೇರಬೇಕು ಅಂದುಕೊಂಡಿದ್ದರೆ , ಮತ್ತು ಶೀಘ್ರವಾಗಿ ಸಿಗಬೇಕು ಎಂದರೆ , ಲಲಿತಾ ದೇವಿಗೆ ಸಂಬಂಧಪಟ್ಟ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು . ಈ ಮಂತ್ರ ಅಥವಾ ನಾಮದಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ , ಈ ಮಂತ್ರದ ನಿಯಮಗಳು ಏನು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ .

ಈ ಒಂದು ಕಲಿಯುಗದಲ್ಲಿ ತುಂಬಾ ಶಕ್ತಿಯುತವಾದ ನಾಮವೆಂದರೆ , ಲಲಿತಾ ಸಹಸ್ರನಾಮ . ಲಲಿತಾ ಸಹಸ್ರನಾಮಗಳಲ್ಲಿ ಕೆಲವು ನಾಮಗಳನ್ನು ಹೇಳಿಕೊಂಡರೆ , ವಿಶೇಷವಾದ ದೈವಬಲ ಮತ್ತು ಪ್ರಯೋಜನಗಳು ಪ್ರಾಪ್ತಿಯಾಗುತ್ತದೆ . ಲಲಿತ ಸಹಸ್ರನಾಮದಲ್ಲಿ ಒಂದು ಶಕ್ತಿಯುತ ವಾದಂತಹ ಮಂತ್ರವಿದೆ . ಮೊದಲು ಈ ಮಂತ್ರವನ್ನು ಒಂದು ಪುಸ್ತಕದ ಮೇಲೆ ಬರೆದು ಇಟ್ಟುಕೊಳ್ಳಬೇಕು . ಮಂತ್ರ ಈ ವಿಧವಾಗಿ ಇರುತ್ತದೆ .
” ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೆ ನಮಃ”

ಈ ಮಂತ್ರವನ್ನು ದಿನಕ್ಕೆ 108 ರಂತೆ 40 ದಿನ ಹೇಳಿಕೊಂಡರೆ, 40 ದಿನ ಪೂರ್ತಿ ಆದ ನಂತರ ಜೀವನದಲ್ಲಿ ನಿಮಗೆ ಯಾವಾಗ ಏನು ಬೇಕು ಎಂದು ಕೇಳಿಕೊಂಡರು ಸಾಕ್ಷಾತ್ ಲಲಿತಾ ಅಮ್ಮನವರು ಆ ಕ್ಷಣವೇ ನಿಮಗೆ ಅನುಗ್ರಹಿಸುತ್ತಾರೆ . ಅಂತಹ ಅದ್ಭುತ ಶಕ್ತಿ ಈ ಲಲಿತ ಸಹಸ್ರನಾಮ ಮಂತ್ರಕ್ಕೆ ಇದೆ. ನೀವು 40 ದಿನಗಳ ಕಾಲ ನಿರಂತರವಾಗಿ ಈ ಮಂತ್ರವನ್ನು ಪಠಿಸಲು ಆಗುವುದಿಲ್ಲ ಅಂದರೆ, ಮುಟ್ಟಿನ ಸಮಯದಲ್ಲಿ ಹಾಗೂ ತುಂಬಾ ಕಠಿಣ ಆರೋಗ್ಯದ ಸಮಸ್ಯೆಗಳು ಬಂದಾಗ ಮಧ್ಯೆ ನಿಲ್ಲಿಸಿದರೂ ಕೂಡ 40 ದಿನ ಪೂರ್ತಿ ಮಾಡಬಹುದು .

ಮಂತ್ರ ಆರಂಭ ಮಾಡುವ ಹಿಂದಿನ ದಿನ ಹಾಗೂ ಮಂತ್ರ ಮುಗಿದ ಮರುದಿನ ಹಾಗೂ 40 ದಿನಗಳ ಕಾಲ ಯಾವುದೇ ಕಾರಣಕ್ಕೂ ಮಾಂಸಹಾರ ಸೇವನೆಯನ್ನು ಮಾಡಬಾರದು . ಮಾಡಬೇಕು ಎಂದರೆ ಕೆಲವೊಂದು ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು . ಈ ಮಂತ್ರ ಹೇಳುವ ಅಷ್ಟೂ ದಿನವೂ ಕೂಡ ದೇವಿಗೆ ಭಕ್ತಿಯಿಂದ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ನೈವೇದ್ಯವಾಗಿ ಇಡಬಹುದು . 40 ದಿನ ಪೂರ್ತಿಯಾದ ಮೇಲೆ ನಿಮ್ಮ ಜೀವನದಲ್ಲಿ ಇರುವ ಅಷ್ಟು ದುಃಖಗಳು ದೂರವಾಗುತ್ತಾ ಹೋಗುತ್ತವೆ .

ದೇಹದಲ್ಲಿ ಒಂದು ವಿಶೇಷವಾದ ಚೈತನ್ಯ ಮೂಡುತ್ತದೆ . ಉತ್ತಮವಾದ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿ , ಗೌರವ , ನರ ದೃಷ್ಟಿ , ದುಷ್ಟ ಶಕ್ತಿಗಳಿಂದ ಮುಕ್ತಿ ಹೀಗೆ ನಾನಾ ಪ್ರಯೋಜನಗಳು ಈ ಒಂದು ವಿಶೇಷ ಮಂತ್ರದಿಂದ ಲಭಿಸುತ್ತದೆ . ಎಷ್ಟೋ ಜನರ ಮನೆಯಲ್ಲಿ ಸಮಸ್ಯೆಗಳು ಇದ್ದೇ ಇರುತ್ತದೆ . ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ , ಯಾವಾಗಲೂ ಮಕ್ಕಳ ಜೊತೆ ವಾದ , ಕಲಹ , ಮಾನಸಿಕ ನೆಮ್ಮದಿ ಅನ್ನೋದೇ ಇರುವುದಿಲ್ಲ . ಮಕ್ಕಳು ನಮ್ಮ ಜೊತೆ ಚೆನ್ನಾಗಿರಬೇಕು ಎಂದರೆ ,

ತಪ್ಪದೇ 40 ದಿನಗಳ ಕಾಲ 108 ಬಾರಿ ತಂದೆ ತಾಯಿಗಳು ಅಥವಾ ಪೋಷಕರು ಮಕ್ಕಳ ಮನಸ್ಸು ತಿಳಿಯಾಗಲು , ಅವರೊಂದಿಗೆ ಪ್ರೀತಿ ಬಾಂಧವ್ಯ ಹೆಚ್ಚಾಗಲು , ಸಮಾಧಾನಕರ ಮಾತು ವೃದ್ಧಿಯಾಗಲು , ಈ ಒಂದು ಮಂತ್ರವನ್ನು ಪಠಿಸಬಹುದು . ಇನ್ನು ಕೆಲವರಿಗೆ ಕಾರಣವಿಲ್ಲದೆ ಎಲ್ಲಿ ಹೋದರು ಕೂಡ ಜಗಳಗಳು ನಡೆಯುತ್ತದೆ . ಮನಸ್ಸು ಹತೋಟಿಯಲ್ಲಿ ಇಲ್ಲದವರು ಕೂಡ ಗಂಡನಿಗಾಗಿ ಈ ಒಂದು ಮಂತ್ರವನ್ನು 40 ದಿನಗಳ ಕಾಲ ಪಠಿಸಬಹುದು . ಈ ಮಂತ್ರದಲ್ಲೇ ಇರುವ ಮತ್ತೊಂದು ವಿಶೇಷತೆ ಏನೆಂದರೆ , ಐಂ ಎಂದರೆ ಸರಸ್ವತಿ ದೇವಿಯ ಬೀಜಾಕ್ಷರ . ಅಂದರೆ ಅದ್ಭುತವಾದ ವಿದ್ಯೆ ಪ್ರಾಪ್ತಿಯಾಗುತ್ತದೆ .

ರೀಂ ಎಂದರೆ, ಸಾಕ್ಷಾತ್ ಭುವನೇಶ್ವರಿ ದೇವಿಯ ಬೀಜಾಕ್ಷರ ಮಂತ್ರ . ಇದು ರಾಜಯೋಗ ಅಥವಾ ರಾಜ ವೈಭವವನ್ನು ನೀಡುತ್ತದೆ . ಹಾಗೆಯೇ ಶ್ರೀಂ ಎಂದರೆ , ಲಕ್ಷ್ಮೀ ದೇವಿಗೆ ಸಂಬಂಧಿಸಿದ ಬೀಜಾಕ್ಷರ ಮಂತ್ರ . ಪ್ರಪಂಚದ ಅತ್ಯಂತ ಶಕ್ತಿಶಾಲಿ ಬೀಜಾಕ್ಷರವನ್ನು ಒಳಗೊಂಡಿರುವಂತ ಮಂತ್ರ ಇದಾಗಿದೆ .ಅದ್ಭುತವಾದ ಜ್ಞಾನ , ವಿಶೇಷ ರಾಜಯೋಗ , ವಿಪರೀತವಾದ ಸಂಪದ ಪ್ರಾಪ್ತಿಯಾಗಲು ಈ ಮಂತ್ರವನ್ನು ದಿನಕ್ಕೆ 108ರಂತೆ 40 ದಿನಗಳ ಕಾಲ ತಪ್ಪದೇ ನಿಯಮ ಬದ್ದವಾಗಿ ಪಠಿಸಬೇಕು . 40 ದಿನಗಳು ಮುಗಿಯುತ್ತಿದ್ದ ಹಾಗೆ ನಿಮ್ಮ ಸರ್ವ ದುಃಖಗಳು ದೂರವಾಗಿ ಸುಖ ಪ್ರಾಪ್ತಿ ಆಗುತ್ತದೆ .

ಕೊನೆಯದಾಗಿ ಗುರುಗಳ ಉಪದೇಶ ಇಲ್ಲದೆ ಹೇಗೆ ಪಠಿಸಬೇಕು , ತಿಳಿದ ಗುರುಗಳ ಬಳಿ ಈ ಮಂತ್ರವನ್ನು ಸಂಕಲ್ಪ ಮಾಡಿಕೊಂಡು ನಂತರ , ಮಂತ್ರವನ್ನು ನಿತ್ಯ ಹೇಳಿಕೊಳ್ಳಬೇಕು . ನಮಗೆ ಗುರುಗಳು ಗೊತ್ತಿಲ್ಲದ ಪಕ್ಷದಲ್ಲಿ ಒಂದು ಅರಳಿ ಎಲೆಯನ್ನು ಮನೆಗೆ ತಂದು ತೊಳೆದು , ಅದರ ಮೇಲೆ ಈ ಒಂದು ಮಂತ್ರವನ್ನು ಅರಿಶಿಣ ಅಥವಾ ಗಂಧದಿಂದ ಬರೆದು ನಿಮ್ಮ ಇಷ್ಟ ದೇವರ ಮುಂದಿಟ್ಟು ಆ ಇಷ್ಟ ದೇವರನ್ನು ಗುರುಗಳಾಗಿ ಭಾವಿಸಿ , ಆ ಇಷ್ಟ ದೇವರಿಂದಲೇ ಒಂದು ಮಂತ್ರವನ್ನು ಪಡೆದು , ಅಂದಿನಿಂದ ಮಂತ್ರವನ್ನು ಹೇಳಿಕೊಳ್ಳಲು ಆರಂಭ ಮಾಡಬೇಕು ಎಂದು ಹೇಳಲಾಗಿದೆ.

Leave A Reply

Your email address will not be published.