ದ್ವಾದಶ ರಾಶಿಗಳಲ್ಲಿ ಈ ನಾಲ್ಕು ರಾಶಿಗಳನ್ನು ಶಿವನ ಅಂಶದಿಂದ ಜನಿಸಿದವರು ಎಂದು ಹೇಳಬಹುದು. ಈ ನಾಲ್ಕು ರಾಶಿಗಳೆಂದರೆ ಶಿವನಿಗೆ ಬಹಳ ಪ್ರೀತಿ. ಶಿವನು ಪ್ರತಿಯೊಬ್ಬ ಭಕ್ತರ ಮೇಲೂ ಪ್ರೀತಿಯನ್ನು ಇಟ್ಟಿರುತ್ತಾನೆ. ತನ್ನ ಭಕ್ತರು ಪ್ರೀತಿಯಿಂದ ಏನನ್ನು ಅರ್ಪಿಸಿದರೂ ಅದನ್ನು ಸ್ವೀಕರಿಸುತ್ತಾನೆ. ಇಲ್ಲಿ ಹೇಳಿರುವ ನಾಲ್ಕು ರಾಶಿಯವರು ಪ್ರತ್ಯೇಕ ಲಕ್ಷಣಗಳನ್ನು ಹೊಂದಿರುತ್ತಾರೆ. ಇವರಲ್ಲಿರುವ ಒಳ್ಳೆಯತನವೇ ಶಿವನಿಗೆ ಮೆಚ್ಚುಗೆ ಆಗುತ್ತದೆ. ಹಾಗಾಗಿ ಶಿವನಿಗೆ ಈ ನಾಲ್ಕು ರಾಶಿಯವರೆಂದರೆ ಪ್ರೀತಿ ಎಂದು ಹೇಳಬಹುದು.
ಶಿವ ಈ ನಾಲ್ಕು ರಾಶಿಯವರಿಗೆ ತನ್ನ ಕೃಪೆಯನ್ನು ಇಟ್ಟಿರುತ್ತಾನೆ. ಶಿವನಿಗೆ ತನ್ನ ಆಶೀರ್ವಾದವನ್ನು ನೀಡುತ್ತಾ, ಶ್ರೀರಕ್ಷೆಯಾಗಿರುತ್ತಾನೆ. ತನ್ನನ್ನು ಭಕ್ತಿ, ಶ್ರದ್ಧೇಯಿಂದ ಪೂಜಿಸುವವರಿಗೆ ಅವರ ಕೋರಿಕೆಗಳನ್ನು ತೀರಿಸುತ್ತಾನೆ. ಶಿವನಿಗೆ ಆ ನಾಲ್ಕು ರಾಶಿಗಳೆಂದರೆ ಇಷ್ಟವಾಗುತ್ತದೆ. ಆ ನಾಲ್ಕು ರಾಶಿಗಳೆಂದರೆ
ಕನ್ಯಾರಾಶಿ: ಕನ್ಯಾರಾಶಿ ವ್ಯಕ್ತಿಗಳ ಮನಸ್ಸು ಬಹಳ ಸ್ವಚ್ಛವಾದದ್ದು, ನೀವು ನಿಮ್ಮ ಮನಸ್ಸಿನಲ್ಲಿ ಏನನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ.
ಯಾವ ವಿಷಯವಾದರೂ ಸರಿಯೇ ಪ್ರತಿಯೊಬ್ಬರಲ್ಲೂ ಹಂಚಿಕೊಳ್ಳುತ್ತೀರಿ. ಅಷ್ಟೇ ಅಲ್ಲದೇ ನಿಮಗೆ ಕ್ಷಮಾ ಗುಣ ಹೆಚ್ಚಾಗಿರುತ್ತದೆ. ನಿಮ್ಮ ಮನಸ್ಸು ವಿಶಾಲವಾದ್ದದ್ದು, ನಿಮ್ಮನ್ನು ಸಹಾಯ ಕೇಳಿದ ವ್ಯಕ್ತಿಗೆ ಆಗುವುದಿಲ್ಲವೆಂದು ಹೇಳುವುದಿಲ್ಲ. ನೀವು ಏನನ್ನು ಪಡೆಯಬೇಕಾದರೇ ಕಷ್ಟಪಡಬೇಕಾಗುತ್ತದೆ. ಇತರರನ್ನು ನಂಬಿ ಮೋಸ ಹೋಗುತ್ತೀರಿ. ಇವರನ್ನು ಇಷ್ಟಪಡುವ ವ್ಯಕ್ತಿಗೆ ತುಂಬಾ ಗೌರವವನ್ನು ಕೊಡುತ್ತಾರೆ. ಇವರು ಬೇರೆಯವರ ಸ್ವತ್ತನ್ನು ಇಷ್ಟಪಡುವುದಿಲ್ಲ. ಇವರು ತಮ್ಮ ಕುಟುಂಬದಲ್ಲಾಗಲೀ, ಉದ್ಯೋಗದಲ್ಲಾಗಲೀ,
ಒಬ್ಬೊಂಟಿಯಾಗಿ ಹೋರಾಡುತ್ತಾರೆ, ಬೇರೆಯವರ ಹತ್ತಿರ ಸಹಾಯವನ್ನು ಕೇಳುವುದಿಲ್ಲ. ಪ್ರತಿಯೊಂದು ವಿಷಯಗಳಲ್ಲೂ ವಿಜೇಯತೆಯಿಂದ ಇರುತ್ತಾರೆ. ಇವರು ತಮ್ಮ ಜೀವನ ಸಂಗಾತಿಗಳ ಹತ್ತಿರ ಯಾವ ವಿಷಯವನ್ನು ಮುಚ್ಚಿಡುವುದಿಲ್ಲ. ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಈ ರಾಶಿಯವರು ಭಕ್ತಿ, ಭಾವದಿಂದಿರುವಂತಹವರಾಗಿರುತ್ತಾರೆ. ದೈವದ ಪರ ಅತೀ ಶ್ರದ್ಧೆಯನ್ನು ಹೊಂದಿರುತ್ತಾರೆ. ಇವರು ದಾನಧರ್ಮಗಳನ್ನು ಹೆಚ್ಚು, ಹೆಚ್ಚು ಮಾಡುತ್ತಿರುತ್ತಾರೆ.
ಸಂಪ್ರದಾಯಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾರೆ. ಈ ಕಾರಣದಿಂದಲೇ ಶಿವನಿಗೆ ಕನ್ಯಾರಾಶಿಯವರೆಂದರೆ ತುಂಬಾ ಇಷ್ಟ. ಕೆಲವು ಸಂದರ್ಭಗಳಲ್ಲಿ ಶಿವನು ಪರೀಕ್ಷೆಗಳನ್ನು ಕೊಡುತ್ತಾನೆ. ಅದು ಅವರ ಏಳಿಗೆಗೋಸ್ಕರನೇ ಆಗಿರುತ್ತದೆ. ಸೋಮವಾರದ ದಿನ ಕನ್ಯಾರಾಶಿಯವರು ಶಿವನಿಗೆ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು. ಕರ್ಕಾಟಕ ರಾಶಿ: ಈ ರಾಶಿಯನ್ನು ಹೊಂದಿರುವವರು ಹಿಂದೂ, ಸಂಸ್ಕೃತಿ, ಸಂಪ್ರದಾಯಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ. ಇವರು ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚು ವಿಧಿ ವಿಧಾನಗಳನ್ನು ಹೊಂದಿರುತ್ತಾರೆ.
ನಮ್ಮ ಸಂಸ್ಕೃತಿ ಸಂಪ್ರದಾಯಗಳೇ ನಮ್ಮನ್ನು ಮುಂದಕ್ಕೆ ನಡೆಸುವುದಲ್ಲದೇ ನಮಗೆ ಒಳ್ಳೆಯ ಹೆಸರು ಪ್ರತಿಷ್ಠೆ, ಹೆಸರನ್ನು ತಂದುಕೊಡುತ್ತದೆಂಬ ಗಟ್ಟಿಯಾದ ನಂಬಿಕೆಯನ್ನು ಹೊಂದಿರುತ್ತಾರೆ. ಈ ಕಾರಣದಿಂದಲೇ ಕರ್ಕಾಟಕ ರಾಶಿಯವರಿಗೆ ದೇವರ ಪರ ಹೆಚ್ಚು ನಂಬಿಕೆ ಇರುತ್ತದೆ. ಹಾಗೆಯೇ ಇವರು ಒಳ್ಳೆಯ ಮಾರ್ಗದಲ್ಲಿಯೇ ಹೋಗಬೇಕೆಂದು ನಿರ್ಧರಿಸಿರುತ್ತಾರೆ. ಇವರು ಯಾವುದೇ ಕೆಲಸ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲವನ್ನು ಬಯಸುವುದಿಲ್ಲ. ಮುಖ್ಯವಾಗಿ ಪ್ರತಿಕೆಲಸವನ್ನು ಮನಃಪೂರ್ತಿಯಾಗಿ ಮಾಡುತ್ತಾರೆ. ಆದ್ದರಿಂದ ಎಲ್ಲಾ ಕೆಲಸದಲ್ಲೂ ವಿಜಯಗಳನ್ನು ಸಾಧಿಸುತ್ತಾರೆ.
ಇವರ ಆಲೋಚನೆ ಇವರ ಕುಟುಂಬ ಸದಸ್ಯರ ಸುತ್ತಲೂ ಇರುತ್ತದೆ ಮತ್ತು ಇವರು ಕುಟುಂಬ ಸದಸ್ಯರನ್ನಯ ತುಂಬಾ ಪ್ರೀತಿಸುತ್ತಾರೆ. ಇವರ ಸಹಾಯವನ್ನು ಕೇಳಿದರೇ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಯಾರನ್ನು ನೋಯಿಸದೇ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಸೋಮವಾರ ಕರ್ಕಾಟಕ ರಾಶಿಯವರು ಹಸುವಿಗೆ ಮೇವನ್ನು ಹಾಕಿದರೇ ಒಳ್ಳೆಯದು. ಮೇಷರಾಶಿ: ಮೇಷರಾಶಿಯವರಿಗೆ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಿರುತ್ತಾರೆ ಮತ್ತು ಭಗವಂತನ ಮೇಲೆ ಹೆಚ್ಚಿನ ಭಕ್ತಿ ಇರುತ್ತದೆ. ಪ್ರತಿದಿನ ದೇವರ ಪೂಜೆಯನ್ನು ತಪ್ಪದೇ ಮಾಡುತ್ತಿರುತ್ತಾರೆ.
ಇವರು ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ. ಪ್ರತಿಯೊಂದು ಹಬ್ಬವನ್ನು ತುಂಬಾ ಚೆನ್ನಾಗಿ, ನಿಯಮಬದ್ಧವಾಗಿ ಮಾಡಬೇಕು ಎಂದುಕೊಳ್ಳುತ್ತಾರೆ. ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಸಮಯವನ್ನು ಚೆನ್ನಾಗಿ ಅನುಸರಿಸುತ್ತಾರೆ. ಪ್ರತಿಯೊಂದು ಕೆಲಸವನ್ನು ಆಲೋಚನೆಯ ಪ್ರಕಾರವೇ ಮಾಡುತ್ತಾರೆ. ಇವರು ಕುಟುಂಬ ಮತ್ತು ಸಂಸ್ಕೃತಿ, ಸಂಪ್ರದಾಯಗಳಿಗೆ ಯಾವಾಗಲೂ ವಿಧೇಯರಾಗಿರುತ್ತಾರೆ. ಇವರು ತಮ್ಮ ಸ್ನೇಹಿತರೊಂದಿಗೆ ವೈರಿಗಳಾಗಿ ವರ್ತಿಸುವುದಿಲ್ಲ. ಕೆಟ್ಟ ವಿಷಯ ಮತ್ತು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ.
ಈ ರಾಶಿಯ ಜನ ಸೋಮವಾರ ಹಸುವಿನಿಂದ ಬಳಲುವವರಿಗೆ ಮತ್ತು ಬಡವರಿಗೆ ಅನ್ನದಾನವನ್ನು ಮಾಡುವುದು ಬಹಳ ಒಳ್ಳೆಯದು. ಸೋಮವಾರದ ದಿನ ಇಂತಹ ಕೆಲಸಗಳನ್ನು ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ.
ಕುಂಭರಾಶಿ: ಕುಂಭರಾಶಿಯ ಜನರಿಗೆ ದೇವರ ಬಗ್ಗೆ ಭಕ್ತಿ, ಶ್ರದ್ಧೆ, ಭಯವಿರುತ್ತದೆ. ಹೊರನೋಟಕ್ಕೆ ಇವರಿಗೆ ತುಂಬಾ ದೇವರ ಭಕ್ತಿ ಎಂದು ಗೊತ್ತಾಗುವುದೇ ಇಲ್ಲ. ಕುಂಭರಾಶಿಯವರು ಬೇರೆಯವರು ಕಷ್ಟದಲ್ಲಿದ್ದರೇ ಸಹಿಸುವುದಿಲ್ಲ. ಇವರು ತಮಗೆ ಇಷ್ಟವಾಗುವ ರೀತಿ ಇರುವುದಕ್ಕಿಂತ ತಮ್ಮ ಎದುರಿಗೆ ಇರುವ ವ್ಯಕ್ತಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಇರುತ್ತಾರೆ.
ಇವರು ಪ್ರತೀ ವಿಷಯದಲ್ಲೂ ಆಳವಾಗಿ ಆಲೋಚನೆ ಮಾಡುತ್ತಾರೆ. ಕೂತಿರುವ ಜಾಗದಲ್ಲಿಯೇ ಯಾವ ಕೆಲಸಗಳು ನಡೆಯುವುದಿಲ್ಲ ಎಂಬ ಮಾತನ್ನು ಇವರು ನಂಬುತ್ತಾರೆ. ಪ್ರತೀ ವಿಷಯಗಳನ್ನು ಕಲಿಯಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಯಾವುದೇ ಕೆಲಸವನ್ನು ಮಾಡಲು ಮುಂದಾದರೇ ಅದನ್ನು ಪೂರ್ಣಗೊಳಿಸುವವರೆಗೂ ಬಿಡುವುದಿಲ್ಲ. ಇವರಿಗೆ ಏನೇ ಸಮಸ್ಯೆಗಳು ಇದ್ದರೂ ಯಾರಿಗೂ ತೋರಿಸಿಕೊಳ್ಳುವುದಿಲ್ಲ. ಕುಂಭರಾಶಿಯ ವ್ಯಕ್ತಿಗಳು ತುಂಬಾ ಒಳ್ಳೆಯ ವ್ಯಕ್ತಿಗಳು. ಇವರು ಎಲ್ಲರಿಗೂ ಆದರ್ಶವಾಗಿ ಇರುತ್ತಾರೆ. ಇವರು ಕಪಟ ಪ್ರೀತಿಯನ್ನು ನಂಬುವಂತಹ ಅಮಾಯಕರು. ಆದ್ದರಿಂದಲೇ ಕುಂಭರಾಶಿಯವರೆಂದರೆ ಶಿವನಿಗೆ ಅತ್ಯಂತ ಪ್ರೀತಿ. ಸೋಮವಾರದ ದಿನ ಕುಂಭರಾಶಿಯವರು ಶಿವನನ್ನು ಆರಾಧಿಸಿದರೇ ತುಂಬಾ ಒಳ್ಳೆಯದು.