ಧನುಸ್ಸು ರಾಶಿಯವರ ಬಹು ನಿರೀಕ್ಷಿತ ಯುಗಾದಿಯ‌ ವರ್ಷ ಭವಿಷ್ಯ

ನಾವು ಈ ಲೇಖನದಲ್ಲಿ ಧನುಸ್ಸು ರಾಶಿಯವರ ಬಹು ನಿರೀಕ್ಷಿತ ಯುಗಾದಿಯ‌ ವರ್ಷ ಭವಿಷ್ಯವನ್ನು , ತಿಳಿದುಕೊಳ್ಳೋಣ. ಗುರುವಿನ ಪ್ರಭಾವ ನಿಮಗೆ ಆರನೇ ಮನೆಯಲ್ಲಿ ಗುರು ಇರುತ್ತಾನೆ .ಸ್ವಲ್ಪ ಮಿಶ್ರ ಫಲಗಳನ್ನು ನೀಡುತ್ತಾನೆ. ಕೆಲವಂದು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ .ಸಂಭ್ರಮ ಸಂತೋಷಗಳಿಗೆ ಕೊರತೆ ಇರುವುದಿಲ್ಲ . ನೀವು ಮಾಡುವ ಪ್ರಯತ್ನಕ್ಕೆ ನಿಮಗೆ ಫಲ ಸಿಗುತ್ತದೆ .ಆದರೆ ಕೌಟುಂಬಿಕ ಜೀವನದಲ್ಲಿ ಕೆಲವೊಂದು ಗೊಂದಲಗಳಿರುತ್ತದೆ .

ಮತ್ತು ಜವಾಬ್ದಾರಿಗಳಿರುತ್ತದೆ .ಮತ್ತು ನೀವೇ ಅದನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ . ಮತ್ತು ಎಲ್ಲರನ್ನೂ ನಿಭಾಯಿಸುವ ಕರ್ತವ್ಯ ಹೊರಬೇಕಾಗುತ್ತದೆ. ಕುಟುಂಬದ ವಿಚಾರದಲ್ಲಿ ಗಂಡ , ಮನೆ, ಮಕ್ಕಳ ಬೇಕು ಬೇಡಗಳನ್ನು ವಿಚಾರಿಸಬೇಕಾಗುತ್ತದೆ . ಮತ್ತು ಅದರಲ್ಲಿ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ . ವಿವಾಹ ಮತ್ತು ಮಂಗಳಕಾರ್ಯಗಳಲ್ಲಿ, ಕೆಲವೊಂದು ಅಡೆತಡೆಗಳು ಉಂಟಾಗುತ್ತದೆ. ಹಣಕಾಸಿನ ತೊಂದರೆಗಳು ಮತ್ತು ಜನಗಳಿಂದ ಅಡೆತಡೆಗಳು ಉಂಟಾಗಲಿದೆ.

ನೀವು ಹೆದರುವ ಅಥವಾ ಕುಗ್ಗುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಮುನ್ನುಗ್ಗಿದರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ . ನಿಮಗೆ ಕೆಲವು ದುಷ್ಟ ಜನಗಳಿಂದ , ಸಮಸ್ಯೆಗಳು ಎದುರಾಗುತ್ತದೆ .ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು .ಮತ್ತು ನೀವು ಹಣಕಾಸಿನ ವ್ಯವಹಾರಗಳನ್ನು ಅಥವಾ ವಹಿವಾಟನ್ನು ನಡೆಸುತ್ತಿದ್ದರೆ, ಅದರಿಂದ ಜಾಗೃತರಾಗಿರಬೇಕು. ಎದುರಾಳಿಗಳ ನಂಬಿಕೆಯನ್ನು ನೋಡಿ ನೀವು ಹೆಜ್ಜೆಯನ್ನು ಮುಂದಿಡಬೇಕಾಗುತ್ತದೆ .

ದುಷ್ಟ ಜನಗಳಿಂದ ದೂರವನ್ನು ಉಳಿಯುವ ಪ್ರಯತ್ನವನ್ನು ನೀವು ಮಾಡಬೇಕಾಗುತ್ತದೆ .ನಿಮ್ಮ ಬೆಲೆ ಬಾಳುವ ವಸ್ತುಗಳ ಮೇಲೆ ಎಚ್ಚರಿಕೆಯನ್ನು ವಹಿಸಿ .ನಿಮ್ಮ ಜೀವನದ ಬಗ್ಗೆ ಹೆಚ್ಚು ಜಾಗರೂಕರಾಗಿರಿ .ಬೇರೆಯವರ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳಬೇಡಿ. ದೂರ ದೃಷ್ಟಿಯನ್ನು ವಹಿಸಿ ನಿಮ್ಮ ಕೆಲಸಗಳನ್ನು ಮಾಡುವಂತ ಗಮನ ಹರಿಸಿ. ಮನಸ್ಸಿನಲ್ಲಿರುವ ಆತಂಕ ಮತ್ತು ಗೊಂದಲಗಳನ್ನು, ದೂರ ಮಾಡಿ . ನಿಮ್ಮ ಕೆಲಸಗಳತ್ತ ಹೆಚ್ಚಿನ ಗಮನ ಕೊಡಿ. ನಿಮ್ಮ ಮನಸ್ಸಿನಲ್ಲಿರುವ ಚಿಂತೆಗಳು ಕ್ಷಣಿಕ ಮಾತ್ರವಾಗಿರುತ್ತದೆ.

ಅದು ಹೋಗುತ್ತ ಕಡಿಮೆಯಾಗುತ್ತಾ, ಹೋಗುತ್ತದೆ . ಆರೋಗ್ಯದ ಬಗ್ಗೆ ಎಚ್ಚರ ಇರಲಿ .ಆದರೆ ನಿಮ್ಮ ಜವಾಬ್ದಾರಿಗಳತ್ತ ಗಮನವಹಿಸಿ . ನಿಮ್ಮ ಶ್ರಮವನ್ನು ಹೆಚ್ಚಿಗೆ ಹಾಕಿದ್ದಲ್ಲಿ ನೀವು ಅಂದುಕೊಂಡದ್ದಕ್ಕಿಂತ ,ಹೆಚ್ಚಿನ ಫಲವನ್ನು ಕಾಣುತ್ತೀರಾ. ಮನುಷ್ಯನಿಗೆ ಕಷ್ಟಗಳು ಸವಾಲುಗಳು ಸುಮ್ಮನೆ ಬರುವುದಿಲ್ಲ . ಅದು ಮನುಷ್ಯನ ತಾಳ್ಮೆ ,ಮತ್ತು ಬುದ್ಧಿವಂತಿಕೆ , ವ್ಯಕ್ತಿತ್ವವನ್ನು, ಪರೀಕ್ಷಿಸಲು ಬರುತ್ತದೆ. ಇವು ನಿಮಗೆ ಅನುಭವವನ್ನು ನೀಡುತ್ತಾ ಹೋಗುತ್ತದೆ .ಮತ್ತು ನಿಮ್ಮ ಮನಸ್ಸಿನಲ್ಲಿರುವ, ಚಂಚಲಯತೆಯನ್ನು ನೀವು ಬಿಡಬೇಕು.

ಯಾವುದೇ ಕೆಲಸ ಮಾಡಿದರು ನೀವು ದೀರ್ಘವಾದ ಕೆಲಸವನ್ನು ಮಾಡಬೇಕು. ಈ ರೀತಿ ಮಾಡಿದರೆ , ನಿಮಗೆ ಒಳ್ಳೆಯ ಫಲಗಳು ದೊರಕುತ್ತದೆ. ಮತ್ತು ಆರೋಗ್ಯದ ಮೇಲೆ ತುಂಬಾ ಎಚ್ಚರಿಕೆ ವಹಿಸಬೇಕು . ಸರಿಯಾದ ನಿದ್ದೆ , ವ್ಯಾಯಾಮ, ನಡಿಗೆ ಈ ರೀತಿಯ ದಿನಚರಿಯನ್ನು ನೀವು ರೂಡಿಸಿಕೊಂಡರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ .ಅನವಶ್ಯಕವಾಗಿ ಪ್ರಯಾಣವನ್ನು ಮಾಡಬೇಡಿ. ನಿಮಗೆ ಅವಶ್ಯಕತೆ ‌ ಇದ್ದರೆ ಮಾತ್ರ ಅಂದರೆ ಮದುವೆ ನಿಮಗೆ ಅವಶ್ಯಕತೆ ಇದ್ದರೆ ಹೋಗಿ.

ಇಲ್ಲವಾದರೆ ಹೋಗಿ ನಿಮ್ಮ ಹಣಕಾಸು ಮತ್ತು ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಜೊತೆಗೆ ನಿಮಗೆ ಶನಿದೇವನು ವರ್ಷ ಆರಂಭದಿಂದ ವರ್ಷಾದ್ಯಂತದವರೆಗೂ , ಮೂರನೇ ಮನೆಯಲ್ಲಿ ಶನಿ ಇರುತ್ತಾರೆ. ತುಂಬಾ ಶುಭಕರವಾದ ಫಲಗಳನ್ನು ನೀಡುತ್ತಾರೆ. ನಿಮ್ಮ ಕೆಲಸ ಕಾರ್ಯಗಳು ಅತಿ ವೇಗವಾಗಿ ಬರದಿಂದ ಸಾಗುತ್ತದೆ. ನಿಮಗೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನ ಲಾಭವಾಗುವುದು ಕಂಡುಬರುತ್ತದೆ. ಮತ್ತು ಸಕಾರಾತ್ಮಕ ಬೆಳವಣಿಗೆಯು ಸಹ ಇರುತ್ತದೆ .ನಿಮಗೆ ಆತ್ಮವಿಶ್ವಾಸವು ವೃದ್ಧಿಯಾಗುತ್ತದೆ .

ಮತ್ತೊಂದು ಕಡೆ ಸ್ವಲ್ಪ ಹಿಂದೆ ಮುಂದೆ ಆಗಲಿದೆ . ಆದರೆ ಹೆದರದೆ ನೀವು ಇದನ್ನು ನಿಭಾಯಿಸಿಕೊಂಡು ಹೋಗಿ .ಆರ್ಥಿಕ ಪರಿಸ್ಥಿತಿಯು ಸುಧಾರಿಸುವ ಯೋಗವಿದ್ದರೂ, ಕೂಡ ನಿಮ್ಮ ಖರ್ಚು ವೆಚ್ಚ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿ ಕಂಡುಬರುತ್ತದೆ . ಜೊತೆಗೆ ವ್ಯವಹಾರದಲ್ಲಿ ಕುಂಠಿತವಾಗಿದ್ದರೂ , ಧನ ಲಾಭಗಳು ನಿಮಗೆ ಕಂಡುಬರುತ್ತದೆ. ವ್ಯಾಪಾರ ವಹಿವಾಟುಗಳಲ್ಲಿ ಕಾಲಕಾಲಕ್ಕೆ ಏನು ಬದಲಾವಣೆಯ ಅವಶ್ಯಕತೆ ಇದೆಯೋ ಅದನ್ನು ಮಾಡಿಕೊಳ್ಳಿ. ಕೆಲಸದಲ್ಲಿ ಪರಿಶ್ರಮವನ್ನು ಹಾಕಿದರೆ ,

ಒಳ್ಳೆಯ ಲಾಭಗಳು ಈ ವರ್ಷದಲ್ಲಿ ನಿಮಗೆ ಕಂಡುಬರುತ್ತದೆ. ಉತ್ತಮವಾದಂತಹ ಧನ ಪ್ರಾಪ್ತಿಯಾಗುತ್ತದೆ . ನೀವು ಸ್ತ್ರೀಯರಾಗಿದ್ದರೆ , ಪುರುಷರ ಜೊತೆ ಪುರುಷರಾಗಿದ್ದರೆ, ಸ್ತ್ರೀಯರ ಜೊತೆ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಳ್ಳಿ . ಧೈರ್ಯದಿಂದ ಮುನ್ನುಗ್ಗಿದರೆ ನಿಮಗೆ ಒಳ್ಳೆಯ ಅವಕಾಶಗಳು ಲಭಿಸುತ್ತದೆ. ಸರ್ಕಾರಿ ನೌಕರರಾಗಿದ್ದರೆ , ಅಥವಾ ಅರೆ ಸರ್ಕಾರಿ ನೌಕರರಾಗಿದ್ದರೆ, ಮೇಲಾಧಿಕಾರಿಗಳಿಂದ ಕೆಲವೊಂದು ಸಾರಿ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ .

ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ತೋರಿಸಿ ಮತ್ತು ಕೆಲಸವನ್ನು ನಿಷ್ಠೆಯಿಂದ ಮುಗಿಸಿ .ಕಾಗದ ಪತ್ರಗಳ ಮೇಲೆ ಗಮನವನ್ನು ವಹಿಸಿ .ನಿಮ್ಮ ತಪ್ಪನ್ನು ಹುಡುಕುವ ಜನಗಳು ಹೆಚ್ಚಿರುವುದರಿಂದ , ನಿಮ್ಮ ಕರ್ತವ್ಯದ ಮೇಲೆ ಹೆಚ್ಚಿನ ಗಮನ ಮತ್ತು ನಿಗವನ್ನು ವಹಿಸಬೇಕು. ಮಿತ್ರರೊಂದಿಗೆ ಹೆಚ್ಚಿಗೆ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ . ನಿಮಗೆ ಬೇರೆಯವರ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ , ಕೂಡ ಅವರ ಜೊತೆ ಸ್ನೇಹದಿಂದ ವರ್ತಿಸಿ. ಕೆಲಸದಲ್ಲಿ ಅವಕಾಶ ಮತ್ತು ಭಡ್ತಿಗಳಿಗೆ ನಿಮ್ಮ ಶ್ರಮವನ್ನು ಹಾಕಿದರೆ ,ಅದು ನಿಮಗೆ ದೊರೆಯಬಹುದು. ವಿದ್ಯಾರ್ಥಿಗಳು ಹೆಚ್ಚಿಗೆ ಶ್ರಮವನ್ನು ಹಾಕಬೇಕಾಗುತ್ತದೆ.

ಧನುಸ್ಸು ರಾಶಿಯ ಮಕ್ಕಳ ತಂದೆ ತಾಯಿಗಳು , ಕಾಲ ಕಾಲಕ್ಕೆ ತಕ್ಕಂತೆ ಮಕ್ಕಳ ಓದಿನ ಮೇಲೆ ನಿಗಾ ವಹಿಸಬೇಕು. ಜೊತೆಗೆ ಈ ಶ್ರಾವಣ ಮಾಸ ಮೂರು , ಎಂಟು, ಹದಿನೇಂಟನೇ ತಿಥಿಗಳು ಶುಕ್ರವಾರ ಭರಣಿ ನಕ್ಷತ್ರ ಇವುಗಳು ನಿಮಗೆ ಘಾತವಾಗಿರುತ್ತದೆ . ಈ ಸಂದರ್ಭದಲ್ಲಿ ಯಾವುದೇ ಕೆಲಸವನ್ನು ಮಾಡಿದರು ನೀವು ಯೋಚನೆ ಮಾಡಿ ಕೆಲಸವನ್ನು ನಿರ್ವಹಿಸಿ . ಜೊತೆಗೆ ನೀವು ಪ್ರತಿ ಶುಕ್ರವಾರ ದುರ್ಗಾದೇವಿಗೆ ತುಪ್ಪದ ದೀಪವನ್ನು ಬೆಳಗಿಸಿ. ಮಹಾತ್ಮರಿಗೆ ಅಂದರೆ ಸಾಧು ಸಂತರಿಗೆ, ಹಳದಿ ವಸ್ತ್ರವನ್ನು ದಾನವನ್ನು ಮಾಡಿ . ಶಿವ ಸಹಸ್ರನಾಮವನ್ನು ಪಠಿಸಿ .ಜೊತೆಗೆ ಮನೆದೇವರ ಪ್ರಾರ್ಥನೆಯನ್ನು ಮಾಡಿ .ಇದರಿಂದ ನಿಮಗೆ ಅದ್ಭುತ ಫಲಗಳು ಲಭಿಸುತ್ತದೆ.

Leave a Comment