ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ

ನಾವು ಈ ಲೇಖನದಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿ ಒಬ್ಬರೂ ಹೇಗೆ ತಿಳಿದುಕೊಳ್ಳಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು . ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು .

2 .ತಮ್ಮ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು . ರಾತ್ರಿ ವೇಳೆಯಲ್ಲಿ ಕರಿದ ಖಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.

4.ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತೆ ಇರಬೇಕು . ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿ ದೊರಕುವುದಿಲ್ಲ. ಆದರೆ ಶರೀರದ ತೂಕ ಹೆಚ್ಚುತ್ತದೆ .

6.ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು . 7.ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಒಳ್ಳೆಯದು . ಇಲ್ಲದಿದ್ದರೆ ಇದು ನಿಮ್ಮ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ .

8 . ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸ ಕೂಡದು . 9 . ಆಹಾರದಲ್ಲಿ ಹಸಿರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದು ಒಳ್ಳಯದು . 10 . ಆತಂಕ ಕಡಿಮೆ ಮಾಡುವ ಮಾತ್ರೆಗಳು ಮತ್ತು ನಿದ್ರೆ ಮಾತ್ರೆಗಳ ಸೇವನೆ ಎಂದಿಗೂ ಮಾಡಬಾರದು .

ಕೋಪ ತಾಪಗಳನ್ನು ದೂರ ಮಾಡಿಕೊಳ್ಳಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು . 12.ಪ್ರತಿನಿತ್ಯ ಹಲ್ಲು ವಸಡು ನಾಲಿಗೆಗಳನ್ನು ಶುಭ್ರವಾಗಿಟ್ಟು ಕೊಳ್ಳಬೇಕು . 13 .ನೆಟ್ಟಗೆ ನಿಲ್ಲಬೇಕು , ನೆಟ್ಟಿಗೆ ಕುಳಿತುಕೊಳ್ಳಬೇಕು, ನೆಟ್ಟಗೆ ನಡೆಯಬೇಕು ಯಾವ ಕಾರಣಕ್ಕೂ ಬಗ್ಗಬಾರದು . ಕುಣಿದಾಡಿ ನಡೆಯಬಾರದು ಆತ್ಮ ವಿಶ್ವಾಸದಿಂದ ಇರಬೇಕು .

14 .ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು . ಪ್ರತಿದಿನವೂ ಕ್ರಮವಾಗಿ ಮಲ ವಿಸರ್ಜನೆ ಆಗುವಂತೆ ನೋಡಿ ಕೊಳ್ಳಬೇಕು . ಮಲ ವಿಸರ್ಜನೆ ಮಾಡುವಾಗ ಇಂಡಿಯನ್ ಟಾಯ್ಲೆಟ್ ಬಳಸಿ , ಇಂಡಿಯನ್ ಟಾಯ್ಲೆಟ್ ಬಳಸುವುದು ಒಳ್ಳೆಯದು .

17 . ದಿನಕ್ಕೆ ಒಂದು ಬಾರಿ ಸಾಯ೦ಕಾಲ ಹೊರಗಡೆ ಶುದ್ಧವಾದ ಗಾಳಿಯಲ್ಲಿ ತೇಲಾಡಬೇಕು , ನಡೆಯಬೇಕು . ಪ್ರತಿನಿತ್ಯ ಗಂಧಕ ಕರ್ಪೂರ ತುಳಸಿ ಗಿಡ ಧೂಪ ಶ್ರೀಗಂಧ ಬೇವಿನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿಯನ್ನು ಶುದ್ಧವಾಗುವಂತೆ ಮಾಡಬೇಕು . ಇದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ .

ಮನೆಯ ಸುತ್ತ ಗೋವಿನ ಸಗಣಿಯಿಂದ ಸಾರಿಸಿ ನೈರ್ಮಲ್ಯವಾಗಿ ಇಟ್ಟು ಕೊಳ್ಳಬೇಕು . 20 .ಮೆದುಳು ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು .

21 . ನಿದ್ದೆ ಮಾತ್ರೆಯನ್ನು ಉಪಯೋಗಿಸಿದರೆ ಲಕ್ವಾ ಹೊಡೆಯುವ ಸಾಧ್ಯತೆ ಇರುತ್ತದೆ . ಇದರಿಂದ ನೀವು ಬೇಗ ಮರಣಕ್ಕೆ ಗುರಿಯಾಗಬೇಕಾಗುತ್ತದೆ. ವೈದ್ಯರ ಸಲಹ ಇಲ್ಲದೆ ಯಾವುದೇ ಔಷಧಿಗಳನ್ನು ಉಪಯೋಗಿಸಬಾರದು .

ವಾರಕ್ಕೆ ಒಂದು ದಿನ ಉಪವಾಸ ಮಾಡುವುದನ್ನು ರೂಢಿಯಾಗಿ ಇಟ್ಟುಕೊಳ್ಳಬೇಕು . 24 .ತಮ್ಮ ಶರೀರಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಾರದು . ಹಸ್ತ ಮೈಥುನದ ಚಟ ಒಳ್ಳೆಯದಲ್ಲ. ಅತಿಯಾದರೆ ಅದು ನಿಮ್ಮ ಮುಖದ ಕಾಂತಿ ಶರೀರದಲ್ಲಿನ ಶಕ್ತಿ , ದೇಹದ ತೂಕ ಕೂದಲು ಉದುರುವಿಕೆಗೆ ಇದಲ್ಲದಕ್ಕೂ ಅತಿ ದೊಡ್ಡ ಕಾರಣವಾಗಬಹುದು .

26 .ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚಹಾ ಕುಡಿಯಬಾರದು . 27 . ದಿನಕ್ಕೆ ಎರಡು ವೇಳೆ ಆಹಾರವನ್ನು ಸೇವಿಸುವವನು, ಎರಡು ಸಾರಿ ಮಲವಿಸರ್ಜನೆ ಮಾಡುವವನು, ಅಲ್ಪ ಪ್ರಮಾಣದಲ್ಲಿ ಸ್ತ್ರೀ ಸಂಭೋಗ ಮಾಡುವವನು, ಆರು ಸಾರಿ ಮೂತ್ರ ವಿಸರ್ಜನೆ ಮಾಡುವನು, ಸದಾ ಎಡಗಡೆ ಮಲಗುವವನು, ಚಿಂತೆಯನ್ನು ದೂರ ಮಾಡುವ ಶಕ್ತಿಯನ್ನು ಪಡೆದಿರುವವನು ಧೀಘಾ೯ಯುಷಿ ಆಗುವನು .

Leave a Comment