ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!!

0

ನಾವು ಈ ಲೇಖನದಲ್ಲಿ ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳನ್ನು ಬಳಸಲೇಬೇಡಿ…!! ಎಂಬ ವಿಷಯದ ಬಗ್ಗೆ ತಿಳಿಯೋಣ . ಮಾತು ಆಡಿದರೆ ಹೋಯಿತು , ಮುತ್ತು ಒಡೆದರೆ ಹೋಯಿತು, ಎಂಬ ಗಾದೆ ಮಾತಿನಂತೆ, ಬೈಗುಳ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು,ಆಡಿಸಿಕೊಂಡವನಿಗೂ ಕೇಡು. ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ ,

ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾಡುವವನಿಗೆ ಸ್ವತಃ ಹಾನಿ . ಅವುಗಳನ್ನು ನಾವು ಗಟ್ಟಿಯಾಗಿ ಉಚ್ಚರಿಸಲು ಬಾರದು. ಕೆಲವು ಪದಗಳನ್ನು ಹೇಳಲು ಬಾರದು. ಹಾಗೆ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಹಾಗೆ ಆಗಿ ಬಿಡುತ್ತದೆ , ಎಂಬ ನಂಬಿಕೆ ಇದೆ. ಇದು ಸುಳ್ಳಲ್ಲ ಎಂದು ಚಾಣಕ್ಯನು ಸಮರ್ಥಿಸುತ್ತಾನೆ .ಹಾಗಿದ್ದರೆ ಆ ಮಾತುಗಳು ಯಾವುವು ಎಂದು ನೋಡೋಣ.

1 . ಥೂ ದರಿದ್ರ : – ನಾವು ಕೆಲವೊಮ್ಮೆ ನಮಗೆ ಏನಾದರೂ ಕೆಟ್ಟದಾದರೆ , ನಮಗೆ ಇಷ್ಟ ಆಗದವರು ಯಾರಾದರೂ ಬಂದರೆ , ನಮಗೆ ಬೇಡದೆ ಇದ್ದದ್ದು ದೊರೆತರೆ , ಬೇಕಾದದ್ದು ಸಿಗದೇ ಹೋದರೆ ಹೀಗೆ ಬೈದುಕೊಳ್ಳುತ್ತೇವೆ .ದರಿದ್ರ ಎಂಬ ಪದದ ಅರ್ಥ ಬಡತನ ಎಂದು ಬೈದು ಕೊಳ್ಳುವವನ ಮೇಲೆ ಬಡತನಕ್ಕೆ ಪ್ರೀತಿ ಉಂಟಾಗುತ್ತದೆ . ಆದ್ದರಿಂದ ತಪ್ಪಿಯೂ ಈ ಪದವನ್ನು , ಹೇಳಬೇಡಿ .

2 . ಗ್ರಹಚಾರ : – ಜಾತಕದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ . ಆದರೆ ನಾವು ಗ್ರಹಚಾರ ಎಂದು ಉದರಿಸುವುದು ನಮಗೆ ಏನಾದರೂ ಕೆಟ್ಟದ್ದು ಸಂಭವಿಸಿದಾಗ .ನಾವು ಆಡುವ ಮಾತಿನ ಧ್ವನಿಯಲ್ಲಿ ಕೆಟ್ಟದ್ದು ಎಂಬುದು ಹೊರಸೂಸುತ್ತಾ ಇರುತ್ತದೆ. ಇದು ನಿಮ್ಮ ಜಾತಕದಲ್ಲಿರುವ ಕೆಲವು ಗ್ರಹಗಳಿಗೆ ಇಷ್ಟವಾಗದು. ಹೀಗಾಗಿ ಗ್ರಹಗಳಿಗೆ ಕೋಪ ತರಿಸಬೇಡಿ …….

Leave A Reply

Your email address will not be published.