ನಾವು ಈ ಲೇಖನದಲ್ಲಿ ಧನ ಸಂಪತ್ತನ್ನು ನಾಶ ಮಾಡುವ ಐದು ಸಸ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಭಗವಂತನಾದ ಶ್ರೀ ಕೃಷ್ಣನ ಮಿತ್ರನು ಕೃಷ್ಣರನ್ನು ಭೇಟಿಯಾಗಲು ದ್ವಾರಕಾ ನಗರಕ್ಕೆ ಬರುತ್ತಾನೆ. ಭಗವಂತನಾದ ಶ್ರೀ ಕೃಷ್ಣನು ಅವರನ್ನು ಸ್ವಾಗತ ಮಾಡುತ್ತಾನೆ. ಅವರು ಬಂದಿರುವ ಉದ್ದೇಶದ ಕಾರಣವನ್ನು ಕೇಳುತ್ತಾರೆ. ಶ್ರೀ ಕೃಷ್ಣನ ಮಿತ್ರರು ಈ ರೀತಿಯಾಗಿ ಹೇಳುತ್ತಾರೆ. ನೀನಂತೂ ಸರ್ವಂತ ಯಾಮಿ ಎಲ್ಲವೂ ತಿಳಿದಿದೆ. ಇನ್ನು ನಾನು ನಿನ್ನ ಬಳಿ ಒಂದು ವಿಷಯವನ್ನು ತಿಳಿದುಕೊಳ್ಳಲು ಬಂದಿರುವೆನು. ಮನುಷ್ಯರು ಯಾವ ಯಾವ ವೃಕ್ಷಗಳನ್ನು ಬೆಳೆಸಬೇಕು ಮನೆಯ ಹತ್ತಿರ ಯಾವ ಯಾವ ವೃಕ್ಷಗಳನ್ನು ಬೆಳೆಸಬೇಕು ಯಾವ ವೃಕ್ಷಗಳನ್ನು ಮನೆಯ
ಹತ್ತಿರ ಬೆಳೆಸುವುದರಿಂದ ದರಿದ್ರತೆಯು ದೂರವಾಗುತ್ತದೆ ಜೊತೆಗೆ ಶತ್ರು ರೋಗ ಭಯ ಭೂತ ಪಿಶಾಚಿ ಇತ್ಯಾದಿ ಸಂಕಟಗಳಿಂದ ದೂರವಾಗಲು ಯಾವ ಸಸ್ಯಗಳನ್ನು ಮನೆಯ ಹತ್ತಿರ ಬೆಳೆಸಬೇಕು. ಎಂಬುದನ್ನು ತಿಳಿದುಕೊಳ್ಳಲು ಬಂದಿರುವೆನು. ಭಗವಂತನಾದ ಶ್ರೀ ಕೃಷ್ಣನು ಮುಗುಳ್ನಗುತ್ತಾ ಈ ರೀತಿ ಹೇಳುತ್ತಾರೆ. ಇಂದು ನೀನು ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ತುಂಬಾ ಉತ್ತಮವಾದ ಪ್ರಶ್ನೆಯನ್ನು ಕೇಳುತ್ತಿದ್ದೀಯಾ ವೃಕ್ಷಗಳ ಯೋಗ ಧಾನ ತುಂಬಾ ದೊಡ್ಡದಾಗಿದೆ. ವೃಕ್ಷಗಳು ಯಾವತ್ತಿಗೂ ಪೂಜೆನೀಯವಾಗಿದೆ.
ಇಂದು ನೀನು ಸರಿಯಾದ ಪ್ರಶ್ನೆಯನ್ನೇ ಕೇಳುತ್ತಿದ್ದೀಯಾ ಮನೆಯ ಅಂಗಳದಲ್ಲಿ ವೃಕ್ಷಗಳನ್ನು ನೆಡುವುದರಿಂದ ಅತ್ಯಂತ ಶುಭ ಫಲಗಳು ದೊರಕುತ್ತವೆ. ವೃಕ್ಷಗಳು ಮನೆಯ ಸೌಂದರ್ಯವನ್ನು ಹೆಚ್ಚಿಗೆ ಮಾಡುತ್ತದೆ. ಜೊತೆಗೆ ವಾತಾವರಣವನ್ನು ಶುದ್ಧವಾಗಿ ಇಡುತ್ತದೆ. ಗಿಡಗಳಿಂದ ಸಕಾರಾತ್ಮಕ ಶಕ್ತಿಯ ಸಂಚಾರ ವಾಗುತ್ತದೆ. ಮನೆಯ ಮುಂದೆ ಶುಭ ಸಸ್ಯಗಳನ್ನು ನೆಡುವುದರಿಂದ ಮನೆಗೆ ಸುಖ ಸಮೃದ್ಧಿ ಉಂಟಾಗುತ್ತದೆ. ಜೊತೆಗೆ ಈ ಸಸ್ಯಗಳು ವಾಸ್ತವಿನ ಹಲವಾರು ದೋಷಗಳನ್ನು ನಿವಾರಿಸುತ್ತದೆ.
ಮನೆಯ ಮುಂದೆ ಇರುವಂತಹ ಸಸ್ಯಗಳು ದೇವರ ರೀತಿ ಮನೆಯನ್ನು ಕಾಪಾಡುತ್ತದೆ. ಹೇ ಮಿತ್ರನೇ ಮನೆಯ ಮುಂದೆ ಯಾವ ಸಸ್ಯಗಳನ್ನು ನೆಡಬೇಕು ಯಾವ ಸಸ್ಯಗಳನ್ನು ನೆಡಬಾರದು ಇವುಗಳನ್ನು ತಿಳಿಸುವ ಮುನ್ನ ಒಂದು ಪ್ರಾಚೀನ ಕಥೆಯನ್ನು ಹೇಳುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮರು ಹೇಳುತ್ತಾರೆ. ಇದು ಪೂರ್ವಕಾಲಿಕ ವಿಷಯವಾಗಿದೆ . ಮಧ್ಯ ದೇಶದಲ್ಲಿ ಒಂದು ಸುಂದರವಾದ ನಗರವಿತ್ತು. ಧನೇಶ್ವರ ಎಂಬಂತಹ ಒಬ್ಬ ಮನುಷ್ಯನು ತನ್ನ ಹೆಂಡತಿಯ ಸುಮತಿಯೊಡನೆ ವಾಸ ಮಾಡುತ್ತಿದ್ದನು.
ಈತನು ಭಗವಂತನಾದ ವಿಷ್ಣುವಿನ ಪರಮ ಭಕ್ತನಾಗಿದ್ದನು. ಈತನ ಹೆಂಡತಿಯು ತುಂಬಾ ಗುಣವಂತಳಾಗಿದ್ದಳು. ಇವರಿಗೆ ದನ ಧಾನ್ಯಗಳ ಕೊರತೆ ಇರಲಿಲ್ಲ. ಕೆಲವು ದಿನಗಳ ನಂತರ ಧನೇಶ್ವರನ ಹೆಂಡತಿಯು ಮನೆಯ ಮುಂದೆ ಕೆಲವು ಗಿಡಗಳನ್ನು ನೀಡುತ್ತಾಳೆ. ಪ್ರತಿದಿನ ನೀರನ್ನು ಹಾಕಿ ಅವುಗಳ ಸೇವೆಯನ್ನು ಮಾಡತೊಡಗಿದಳು. ಆಕೆಗೆ ಯಾವ ವೃಕ್ಷಗಳು ಇಷ್ಟವಾಗುತ್ತವೆಯೋ ಆ ವೃಕ್ಷಗಳನ್ನು ನೀಡುತ್ತಾಳೆ. ಯಾವ ವೃಕ್ಷಗಳು ಅ ಶುಭ ಫಲಗಳನ್ನು ನೀಡುತ್ತದೆಯೋ ಅಂತ ವೃಕ್ಷಗಳನ್ನು ಮನೆಯ ಮುಂದೆ ಹಾಕುತ್ತಾಳೆ. ಈ ಕಾರಣದಿಂದ ದನೇಶ್ವರನಿಗೆ ವ್ಯಾಪಾರದಲ್ಲಿ ಹೆಚ್ಚಿನ ನಷ್ಟ ಆಗಲು ಆರಂಭವಾಯಿತು.
ಈ ಕಾರಣದಿಂದ ಗಂಡ ಹೆಂಡತಿಯ ನಡುವೆ ಪದೇ ಪದೇ ಕ್ಲೇಶವಾಗಲು ಆರಂಭವಾಯಿತು. ಅವರಿಬ್ಬರ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳು ಬಂದು ಒದಗಿದವು. ದನೇಶ್ವರನ ಎಲ್ಲಾ ವ್ಯಾಪಾರವು ಮುಳುಗಿ ಹೋಯಿತು. ಈಗ ದನೇಶ್ವರನ ಬಳಿ ಕಾಳುಗಳನ್ನು ಖರೀದಿ ಮಾಡಲು ಸಹ ಹಣವಿರಲಿಲ್ಲ ಅಂತ ಉಪವಾಸದಿಂದ ಇರಲು ಶುರು ಮಾಡಿದನು. ಇದನ್ನು ನೋಡಿದ ಆತನ ಹೆಂಡತಿಯು ಸಿಟ್ಟಾಗಿ ಏನಾದರೂ ಕೆಲಸ ಮಾಡಲು ಹೇಳಿದಳು. ಆಗ ದನೇಶ್ವರನು ಕೆಲಸಕ್ಕಾಗಿ ಹುಡುಕಾಟ ಮಾಡಲು ತೊಡಗಿದನು.
ಆತನಿಗೆ ಎಲ್ಲಿಯೂ ಸಹ ಕೆಲಸ ದೊರಕಲಿಲ್ಲ . ಆತನು ಮರಳಿ ಬಂದು ತನ್ನ ಹೆಂಡತಿಗೆ ಈ ರೀತಿಯಾಗಿ ಹೇಳಿದನು . ನನಗೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ನಾನು ಎಲ್ಲಿಗೆ ಹೋಗಲಿ ಪೂರ್ತಿಯಾಗಿ ಇಬ್ಬರು ಸಹ ನಿರಾಶೆ ಕೊಂಡರು . ಉದ್ಯೋಗ ಮಾಡಲು ಇಬ್ಬರ ಬಳಿಯೂ ಸಹ ಏನು ಇರಲಿಲ್ಲ ಧನೇಶ್ವರನು ತನ್ನ ಹೆಂಡತಿಯ ಬಂಗಾರ ಮಾರಿದನು ಅದರಿಂದ ಬಂದ ಹಣದಿಂದ ತನ್ನ ಹೊಟ್ಟೆಯನ್ನು ತುಂಬಿಸಿಕೊಂಡನು. ಅ ಶುಭ ವೃಕ್ಷಗಳನ್ನು ನೆಟ್ಟ ಕಾರಣದಿಂದಾಗಿ ಇಬ್ಬರ ಜೀವನದಲ್ಲಿಯೂ ಸಹ ದರಿದ್ರತೆಯು ಬಂದೊರಗಿತು. ಆದರೆ ಅವರಿಬ್ಬರಿಗೂ ಈ ವಿಷಯವು ತಿಳಿದಿರಲಿಲ್ಲ.
ಆಗ ಒಂದು ದಿನ ಸಾಧು ಮಹಾತ್ಮರು ಧನೇಶ್ವರನ ಮನೆ ಮುಂದೆ ಬರುತ್ತಾರೆ. ಅವರನ್ನು ನೋಡಿ ಧನೇಶ್ವರನು ನಮಸ್ಕರಿಸುತ್ತಾರೆ. ಆನಂತರ ಈ ರೀತಿಯಾಗಿ ಕೇಳಿಕೊಳ್ಳುತ್ತಾರೆ . ಹೇ ಸಾಧು ಮಹಾರಾಜರೇ ಈ ಬಡವನ ಮನೆಗೆ ನಿಮಗೆ ಸ್ವಾಗತ ನಾನು ನಿಮಗೆ ಯಾವ ರೀತಿಯ ಸಹಾಯವನ್ನು ಮಾಡಲಿ ಎಂದು ಕೇಳಿಕೊಳ್ಳುತ್ತಾರೆ. ಆಗ ಸಾಧು ಸಂತರು ಹೇಳುತ್ತಾರೆ ಹೇ ಮಾನವ ನಾನು ತೀರ್ಥಯಾತ್ರೆಗೆ ಹೋಗುತ್ತಿದ್ದೇನೆ. ವಿಶ್ರಮಿಸಲು ಸ್ಥಳವನ್ನು ಹುಡುಕುತ್ತಿದ್ದೇನೆ ಒಂದು ವೇಳೆ ನಿಮಗೆ ಯಾವ ಅಭ್ಯಂತರವೂ ಇಲ್ಲದೆ ಹೋದರೆ ನಿಮ್ಮ ಮನೆಯಲ್ಲಿ ನಮಗೆ ಸ್ಥಳವನ್ನು ಕೊಡಿ.
ನಾನು ಅನೇಕ ದಿನದಿಂದ ಊಟ ಮಾಡಿಲ್ಲ ಏನಾದರು ತಿನ್ನಲು ದೊರೆತರೆ ದೊಡ್ಡ ಉಪಕಾರವಾಗುತ್ತದೆ. ಸಾಧು ಮಹಾರಾಜರ ಮಾತನ್ನು ಕೇಳಿದ ದನೇಶ್ವರನು ಈ ರೀತಿಯಾಗಿ ಹೇಳುತ್ತಾನೆ. ಖಂಡಿತವಾಗಿಯೂ ನೀವು ಮಹಾಸಾಧುವಂತರಾಗಿದ್ದೀರಾ ನಿಮಗೆ ಸೇವೆ ಏನು ಮಾಡುವಂತ ಸೌಭಾಗ್ಯ ನಮಗೆ ದೊರಕುತ್ತಿದೆ ದಯವಿಟ್ಟು ನಮ್ಮ ಮನೆಯ ಒಳಗಡೆ ಬನ್ನಿ. ನಂತರ ಸಾಧುಮಹಾರಾಜರು ಮನೆಯ ಒಳಗಡೆ ಹೋಗುತ್ತಾರೆ. ವಿಶ್ರಮಿಸಲು ಆರಂಭಿಸುತ್ತಾರೆ. ಧನೇಶ್ವರನು ಕೂಡ ಸಾಧು ಮಹಾರಾಜರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಆದರೆ ಆತನ ಹತ್ತಿರ ದವಸ ಧಾನ್ಯಗಳು ಇರಲಿಲ್ಲ ಅವನು ತನ್ನ ಹೆಂಡತಿಗೆ ಈ ರೀತಿಯಾಗಿ ಹೇಳುತ್ತಾನೆ.
ನಮ್ಮ ಮನೆಗೆ ಈ ದಿನ ಸಾಧು ಸಂತರು ಬಂದಿರುತ್ತಾರೆ . ಅವರು ತುಂಬಾ ಪುಣ್ಯವಂತರ ರೀತಿಯಲ್ಲಿ ಕಾಣಿಸುತ್ತಾರೆ. ನಾವು ಅವರ ಊಟಕ್ಕಾಗಿ ಏನಾದರೂ ತಯಾರಿ ಮಾಡಬೇಕು. ನಾನು ಊರಿನಲ್ಲಿ ಹೋಗಿ ಯಾರಾದ ಹತ್ತಿರವಾದರೂ ಭಿಕ್ಷೆಯನ್ನು ಬೇಡಿ ಬರುತ್ತೇನೆ. ಇಷ್ಟು ಹೇಳಿ ಧನೇಶ್ವರನು ಊರಿನಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯ ಹತ್ತಿರ ಹೋಗುತ್ತಾನೆ. ಆ ವ್ಯಕ್ತಿಯ ಹತ್ತಿರ ಸಾಲವನ್ನು ಕೇಳುತ್ತಾನೆ ಆದರೆ ಆ ವ್ಯಕ್ತಿ ಸಾಲವನ್ನು ನೀಡಲು ನಿರಾಕರಿಸುತ್ತಾನೆ.
ನೀನು ತೆಗೆದುಕೊಂಡ ಹಣವನ್ನು ವಾಪಸ್ ಕೊಡಲು ನಿನಗೆ ಶಕ್ತಿ ಇಲ್ಲ ಎಂದು ಹೇಳುತ್ತಾನೆ. ದಯವಿಟ್ಟು ಸ್ವಲ್ಪ ನನಗೆ ಹಣದ ಸಹಾಯ ಮಾಡಿ ನಾನು ನಿನಗೆ ಹಣವನ್ನು ಕೊಡಲು ಸಾಧ್ಯವಾಗದ ಪಕ್ಷದಲ್ಲಿ ನನ್ನ ಮನೆಯನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಆ ಶ್ರೀಮಂತ ವ್ಯಕ್ತಿಯು ಒಂದು ವೇಳೆ ಹಣವನ್ನು ಕೊಡದೆ ಹೋದ ಪಕ್ಷದಲ್ಲಿ ಮನೆಯನ್ನು ಕೊಡಬೇಕಾಗುತ್ತದೆ ಎಂದು ಹೇಳುತ್ತಾನೆ. ಆಗ ಧನೇಶ್ವರನ್ನು ನಾನು ನಿಮಗೆ ಮಾತನ್ನು ಕೊಡುತ್ತಿದ್ದೇನೆ ಹಣವನ್ನು ಕೊಡದೆ ಹೋದ ಪಕ್ಷದಲ್ಲಿ ಮನೆಯನ್ನು ನೀಡುತ್ತೇನೆ ಎಂದು ಹೇಳುತ್ತಾನೆ. ನಂತರ ಧನೇಶ್ವರನು
ಆ ವ್ಯಕ್ತಿ ಹತ್ತಿರ ಹಣವನ್ನು ತೆಗೆದುಕೊಂಡು ಸಂತೆಗೆ ಹೋಗಿ ಅಲ್ಲಿ ಬೇಕಾದ ವಸ್ತುಗಳನ್ನು ಖರೀದಿಸುತ್ತಾನೆ. ಆ ನಂತರ ಮರಳಿ ಮನೆಗೆ ಬಂದು ತನ್ನ ಹೆಂಡತಿಗೆ ಆ ಸಾಧು ಮಹಾರಾಜರಿಗೆ ಅಡುಗೆಯನ್ನು ತಯಾರಿಸು ಎಂದು ಹೇಳುತ್ತಾನೆ. ನಂತರ ಅಡುಗೆಯನ್ನು ಮಾಡಿ ಆ ಸಾಧು ಸಂತರಿಗೆ ಬಡಿಸುತ್ತಾರೆ. ಧನೇಶ್ವರನ ಭಕ್ತಿ ಮತ್ತು ನಿಷ್ಠೆಯನ್ನು ನೋಡಿ ಆ ಸಾಧು ಮಹಾಸಂತರು ಧನೇಶ್ವರನಿಗೆ ಒಲಿಯುತ್ತಾರೆ. ಊಟ ಮಾಡಿ ಸಾಧು ಸಂತರ ಹೊರಡುವ ವೇಳೆಗೆ ಒಂದು ಮಾತನ್ನು ಹೇಳುತ್ತೆನೆ. ನಾನು ನಿನ್ನ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ್ದೇನೆ. ಏನಾದರೂ ಇಚ್ಛೆ ಇದ್ದರೆ ಅದನ್ನು ನನಗೆ ತಿಳಿಸು ನಾನು ಖಂಡಿತವಾಗಿಯೂ ಅದನ್ನು ಪೂರ್ತಿ ಮಾಡುತ್ತೇನೆ ಎಂದು ಹೇಳುತ್ತಾನೆ.
ಮಹಾತ್ಮರೆ ನಿಮ್ಮ ಆಶೀರ್ವಾದವೇ ಎಲ್ಲದಕ್ಕಿಂತ ದೊಡ್ಡದಾಗಿದೆ ಆದರೆ ನನ್ನಲ್ಲಿ ಒಂದು ಪ್ರಶ್ನೆ ಇದೆ ಯಾವ ಪಾಪದ ಕಾರಣದಿಂದಾಗಿ ನಾನು ದರಿದ್ರತೆಯನ್ನು ಅನುಭವಿಸುತ್ತಿದ್ದೇನೆ ನಾವು ಭಗವಂತನಾದ ವಿಷ್ಣುವಿನ ಪೂಜೆಯನ್ನು ಪ್ರತಿನಿತ್ಯ ತಪ್ಪದೇ ಮಾಡುತ್ತೇವೆ. ಆದರೆ ನಮ್ಮ ಜೀವನದಲ್ಲಿ ಯಾಕೆ ದರಿದ್ರತೆಯು ಬಂದಿದೆ ಇದಕ್ಕಿರುವ ಕಾರಣವೇನು ಈ ದರಿದ್ರತೆಯನ್ನು ದೂರ ಮಾಡಲು ನಾನು ಏನು ಮಾಡಬೇಕು ಎಂದು ಕೇಳುತ್ತಾನೆ. ಹೇ ಬಾಲಕ ಯಾವಾಗ ನಾನು ನಿಮ್ಮ ಮನೆಯ ಮುಂದೆ ಬಂದೆನೋ ಈ ವಿಷಯದ ಬಗ್ಗೆ ಅನುಮಾನ ಮೂಡಿತ್ತು. ಯಾವ ವೃಕ್ಷಗಳು ನಿಮ್ಮ ಮನೆಯ ಮುಂದೆ ಇದೆಯೋ ಹಾಗೂ ನಿಮ್ಮ ದರಿದ್ರಕ್ಕೆ ಕಾರಣವಾಗಿದೆ. ಹಾಗಾಗಿ ಆದರೆ ವೃಕ್ಷಗಳನ್ನು ತೆಗೆದು ಶುಭ ವೃಕ್ಷಗಳನ್ನು ಹಾಕಬೇಕು.
ನಿನ್ನ ಹೆಂಡತಿ ಯಾವ ವೃಕ್ಷಗಳನ್ನು ನಿನ್ನ ಮನೆಯ ಮುಂದೆ ಹಾಕಿದ್ದಾಳೆ ಅವುಗಳು ಅಶುಭ ವೃಕ್ಷಗಳಾಗಿವೆ. ಅವುಗಳ ಕಾರಣದಿಂದಾಗಿ ನಿನ್ನ ಪರಿಸ್ಥಿತಿ ಈ ರೀತಿ ಆಗಿದೆ. ಆಗ ಧನೇಶ್ವರನ್ನು ಹೇಳುತ್ತಾನೆ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಿಗೆ ಆಗಲು ಯಾವ ವೃಕ್ಷಗಳನ್ನು ಬೆಳೆಸಬೇಕು ಎಂದು ಕೇಳುತ್ತಾನೆ. ಜೊತೆಗೆ ಯಾವ ಗಿಡಮರಗಳನ್ನು ಬೆಳೆಸಬಾರದು ಸವಿಸ್ತಾರವಾಗಿ ತಿಳಿಸಿ ಎಂದು ಕೇಳಿಕೊಳ್ಳುತ್ತಾನೆ. ನಂತರ ಸಾಧು ಸಂತರು ಹೇಳುತ್ತಾರೆ ನಾನು ಮೊದಲಿಗೆ ಶುಭ ಸಸ್ಯಗಳ ಬಗ್ಗೆ ತಿಳಿಸಿಕೊಡುತ್ತೇನೆ.
ಇವುಗಳ ಬಗ್ಗೆ ಗಮನವಿಟ್ಟು ಕೇಳಿಸಿಕೋ. ಯಾವುದಾದರೂ ಜಲಾಶಯದ ಹತ್ತಿರ ಅರಳಿ ಮರವನ್ನು ನೆಡುವಂತಹ ಮನುಷ್ಯನಿಗೆ ನೂರಾರು ಯಜ್ಞಗಳ ಫಲ ಸಿಕ್ಕಾಗುತ್ತದೆ. ಯಾವಾಗ ಅರಳಿಮರದ ಎಲೆಯು ನೀರಿನಲ್ಲಿ ಬೀಳುತ್ತದೆಯೋ ಅದು ಪಿಂಡಕ್ಕೆ ಸಮಾನವಾಗಿ ಪಿತೃಗಳಿಗೆ ನೆಮ್ಮದಿಯನ್ನು ಕೊಡುತ್ತದೆ. ಇದರಿಂದ ಎಲ್ಲ ಪ್ರಕಾರದ ಪಿತೃ ದೋಷಗಳು ದೂರವಾಗುತ್ತದೆ. ಯಾವ ಮನುಷ್ಯರು ಪ್ರತಿನಿತ್ಯ ಅರಳಿ ಮರವನ್ನು ಸ್ಪರ್ಶ ಮಾಡುತ್ತಾರೋ ಅವರಿಗೆ ಎಲ್ಲಾ ಪಾಪಗಳಿಂದ ದೂರವಾಗುತ್ತದೆ.
ಯಾವತ್ತಿಗೂ ಸೋಲುವುದಿಲ್ಲ ಅರಳಿ ಮರವನ್ನು ಪ್ರದಕ್ಷಣೆ ಮಾಡಿದರೆ ಆಯಸ್ಸು ವೃದ್ಧಿಯಾಗುತ್ತದೆ. ಅರಳಿ ಮರದಲ್ಲಿ ಸಾಕ್ಷಾತ್ ವಿಷ್ಣುವಿನ ವಾಸವೇ ಇರುತ್ತದೆ. ಯಾವುದೇ ಕಾರಣಕ್ಕೂ ಅರಳಿ ಮರಕ್ಕೆ ಮನುಷ್ಯನು ಹಾನಿ ಮಾಡಬಾರದು. ಇಲ್ಲವಾದರೆ ನರಕದಲ್ಲಿ ಸ್ಥಾನ ಪಡೆಯುತ್ತಾರೆ. ಎರಡನೆಯ ವೃಕ್ಷವೆಂದರೆ ಗುಡ್ಡದ ನೆಲ್ಲಿಕಾಯಿ ಗಿಡವಾಗಿದೆ. ಇದು ಇಡೀ ಜಗತ್ತಿನಲ್ಲಿ ಪ್ರಸಿದ್ಧ ಪವಿತ್ರವಾಗಿದೆ . ಗುಡ್ಡದ ನೆಲ್ಲಿಕಾಯಿ ಗಿಡವನ್ನು ನೆಡುವುದರಿಂದ ಸ್ತ್ರೀ ಮತ್ತು ಪುರುಷರು ಜನ್ಮ ಮತ್ತು ಮೃತ್ಯುವಿನ ಬಂಧನದಿಂದ ಮುಕ್ತಿಯನ್ನು ಹೊಂದುತ್ತಾರೆ. ಈ ಪವಿತ್ರ ಹೆಣ್ಣು ಭಗವಂತನಾದ ವಿಷ್ಣು ಪರಮಾತ್ಮನನ್ನು ಒಲಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ.
ಇದನ್ನು ತಿನ್ನುವುದರಿಂದ ಎಲ್ಲಾ ಪಾಪಗಳಿಂದಲೂ ಮುಕ್ತಿ ಸಿಗುತ್ತದೆ. ಇದನ್ನು ಈ ಹಣ್ಣನ್ನು ತಿನ್ನುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. ಇದರ ನೀರನ್ನು ಕುಡಿಯುವುದರಿಂದ ರೋಗಗಳ ನಾಶವಾಗುತ್ತದೆ. ಈ ಹಣ್ಣನ್ನು ಸ್ನಾನ ಮಾಡುವ ನೀರಿನಲ್ಲಿ ಸೇರಿಸಿ ಸ್ನಾನ ಮಾಡುವುದರಿಂದ ದರಿದ್ರತೆಯು ದೂರವಾಗುತ್ತದೆ. ಎಲ್ಲಾ ಪ್ರಕಾರದ ಐಶ್ವರ್ಯ ಸಿಗುತ್ತದೆ ಯಾರ ಮನೆಯ ಮುಂದೆ ಗುಡ್ಡದ ನೆಲ್ಲಿಕಾಯಿ ಗಿಡವು ಇರುತ್ತದೆಯೋ ಆ ಮನೆಗೆ ದೈತ್ಯರು ರಾಕ್ಷಸರು ಬರುವುದಿಲ್ಲ. ಯಾರು ತಮ್ಮ ತಲೆಗೆ ಗುಡ್ಡದ ನೆಲ್ಲಿಕಾಯಿಯನ್ನು ಬಳಸುತ್ತಾರೋ ಅವರು ಮರಳಿ ಮೃತ್ಯುಲೋಕದಲ್ಲಿ ಜನಿಸುವುದಿಲ್ಲ.
ಯಾರ ಮನೆಯಲ್ಲಿ ಗುಡ್ಡದ ನೆಲ್ಲಿಕಾಯಿ ಗಿಡವಿರುತ್ತದೆಯೋ, ಆ ಮನೆಯಲ್ಲಿ ಸಾಕ್ಷಾತ್ ವಿಷ್ಣು ಪರಮಾತ್ಮರು ವಾಸಿಸುತ್ತಾರೆ. ಇನ್ನು ಮೂರನೆಯದಾಗಿ ಅಶೋಕ ವೃಕ್ಷ ಅಶೋಕ ವೃಕ್ಷದಲ್ಲಿ ಅಪ್ಸರೆಯರು ವಾಸವಾಗಿರುತ್ತಾರೆ. ಈ ವೃಕ್ಷವು ದುಃಖವನ್ನು ನಾಶಮಾಡುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ . ಅಶೋಕ ವೃಕ್ಷವು ಯೌವ್ವನವನ್ನು ನೀಡುತ್ತದೆ. ತಾಯಿ ಮಹಾಲಕ್ಷ್ಮಿಯು ಸೀತಾಮಾತೆಯ ರೂಪದಲ್ಲಿ ಧರೆಗೆ ಬಂದಿದ್ದಾಗ ರಾವಣರಿಂದ ಅಪರಿಸಲ್ಪಟ್ಟಾಗ ಅವರ ವಾಸ ಅಶೋಕ ಮರದ ಕೆಳಗಡೆ ಇತ್ತು. ಅಶೋಕ ವೃಕ್ಷವು ತಾಯಿ ಸೀತಾಮಾತೆಯ ಸೇವೆಯನ್ನು ಮಾಡಿತ್ತು.
ಹಾಗಾಗಿ ಸೀತಾಮಾತೆಯು ಅಶೋಕ ವೃಕ್ಷಕ್ಕೆ ಈ ವರವನ್ನು ನೀಡಿದ್ದಳು. ಯಾವ ಸ್ಥಾನದಲ್ಲಿ ಈ ವೃಕ್ಷವಿರುತ್ತದೆಯೋ ಅಲ್ಲಿ ಸೀತಾಮಾತೆಯ ವಾಸವಿರುತ್ತದೆ. ನಾಲ್ಕನೇದಾಗಿ ಬಸರಿಮರ ಈ ಬಸರಿಮರವನ್ನು ನೆಡುವುದರಿಂದ ಮಹಾ ಯಜ್ಞದ ಫಲ ದೊರಕುತ್ತದೆ. ಕಲಿಯುಗದಲ್ಲಿ. ಮನುಷ್ಯರಿಗೆ ಯಜ್ಞಗಳನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ ಖಂಡಿತವಾಗಿ ಇವರು ಬಸರಿಮರವನ್ನು ಬೆಳೆಸಬೇಕು. ಐದನೆಯದಾಗಿ ಬೇವಿನ ಮರ ಬೇವಿನ ಮರವನ್ನು ಬೆಳೆಸುವುದರಿಂದ ಸೂರ್ಯದೇವನ ಆಶೀರ್ವಾದ ಸಿಗುತ್ತದೆ.
ಆಯಸ್ಸನ್ನು ನೀಡುತ್ತದೆ ಮನೆಯ ಮುಂದೆ ಇದನ್ನು ಬೆಳೆಸುವುದರಿಂದ ನಾನ ಪ್ರಕಾರ ರೋಗಗಳಿಂದ ಮುಕ್ತಿ ಸಿಗುತ್ತದೆ. ತಾಯಿ ಲಕ್ಷ್ಮಿ ದೇವಿಯು ಬೇವಿನಮರದಲ್ಲಿ ವಾಸ ಮಾಡುತ್ತಾರೆ. ಹಾಗಾಗಿ ಧನ ಸಂಪತ್ತಿನ ಪ್ರತಿಯೊಂದು ಆಗುತ್ತದೆ. ಕೊನೆಯದಾಗಿ ನೇರಳೆ ಹಣ್ಣಿನ ಗಿಡ. ಮನುಷ್ಯರಿಗೆ ಕನ್ಯೆಪ್ರಾಪ್ತಿಯ ಇಚ್ಛೆ ಇದ್ದರೆ ಅಂಥವರು ಖಂಡಿತವಾಗಿಯೂ ನೇರಳೆ ಹಣ್ಣಿನ ಮರವನ್ನು ಬೆಳೆಸಬೇಕು. ಯಾರ ಮನೆಯ ಮುಂದೆ ನೇರಳೆ ಹಣ್ಣಿನ ಮರವಿರುತ್ತದೆ ಅಲ್ಲಿ ಕನ್ಯೆಯ ಚಲನೆ ಆಗುತ್ತದೆ. ಅವರು ಕುಲದ ಗೌರವವನ್ನು ಹೆಚ್ಚಿಗೆ ಮಾಡುತ್ತಾರೆ. ಏಳನೆಯದಾಗಿ ಬಿಲ್ವಪತ್ರೆಯ ಮರ.
ಬಿಲ್ವಪತ್ರೆ ಮರದಲ್ಲಿ ಭಗವಂತನಾದ ಶಿವ ಮತ್ತು ಪಾರ್ವತಿಯ ವಾಸವಿರುತ್ತದೆ. ಜೊತೆಗೆ ಗುಲಾಬಿ ಗಿಡದಲ್ಲಿ ತಾಯಿ ಪಾರ್ವತಿ ದೇವಿಯ ವಾಸವಿದೆ. ಬಿಲ್ವಪತ್ರೆ. ಮರದ ಪಕ್ಕದಲ್ಲಿ ಗುಲಾಬಿ ಗಿಡವನ್ನು ಸೇರಿಸಿ ಬೆಳೆಸುವುದರಿಂದ ಪಾರ್ವತಿ ದೇವಿಯ ಆಶೀರ್ವಾದ ನಿಮಗೆ ದೊರಕುತ್ತದೆ. ಆ ಮನೆಯಲ್ಲಿ ಯಾವತ್ತಿಗೂ ದುಃಖ ಮತ್ತು ದರಿದ್ರತೆಗಳು ಕಾಡುವುದಿಲ್ಲ. ಆ ಮನೆಯಲ್ಲಿ ಯಾವತ್ತಿಗೂ ಸಹ ಅಕಾಲಿಕಾ ಮೃತ್ಯು ಆಗುವುದಿಲ್ಲ. ಎಂಟನೆಯದಾಗಿ ತೆಂಗಿನ ಮರ ತೆಂಗಿನ ಮರವನ್ನು ಬೆಳೆಸುವುದರಿಂದ ಪುರುಷರು ಅನೇಕ ಸ್ತ್ರೀಯರ ಪತಿಯಾಗುತ್ತಾರೆ. ತೆಂಗಿನ ಮರವು ಧಾರ್ಮಿಕ ಕಾರ್ಯಗಳ ಅವಶ್ಯಕತೆ ಅಂಗವಾಗಿದೆ.
ಇದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಮನೆಯ ಅಂಗಳದಲ್ಲಿ ತೆಂಗಿನ ಮರವಿದ್ದರೆ ಯಾವತ್ತಿಗೂ ಆ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತಿರುತ್ತವೆ. ಆ ಮನೆಯ ಸದಸ್ಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವಗಳು ಮನ್ನಣೆಗಳು ದೊರಕುತ್ತದೆ. ಸುಂದರವಾದಂತಹ ಹೆಣ್ಣನ್ನು ಮದುವೆ ಪಡುವ ಮದುವೆಯಾಗಲು ಬಯಸುವಂತಹ ಹುಡುಗರು ದಾಳಿಂಬೆ ಗಿಡವನ್ನು ಬೆಳೆಸಬೇಕು. ವಂಶರುದ್ದಿ ಮಾಡಲು ಇಷ್ಟಪಡುವಂತಹ ಜನರು ಅಂಕೋಲ ಗಿಡವನ್ನು ಬೆಳೆಸಬೇಕು. ಮನೆಯಲ್ಲಿ ಕಳ್ಳರ ಭಯ ಕಾಡುತ್ತಿದ್ದರೆ ಅಂತವರು ಬಿದಿರು ಗಿಡವನ್ನು ಮನೆಯ ಮುಂದೆ ನೋಡಬೇಕು. ಈ ರಿಕ್ಷವು ಕಳ್ಳರಿಗೆ ಭಯವನ್ನು ಮೂಡಿಸುತ್ತದೆ.
ಮತ್ತು ಮನೆಯ ರಕ್ಷಣೆಯನ್ನು ಸಹ ಮಾಡುತ್ತದೆ. ಶ್ರೀಗಂಧದ ಮರವು ಲಕ್ಷ್ಮಿ ಪ್ರಾಪ್ತಿಯನ್ನು ನೀಡುತ್ತದೆ. ಮನೆಯ ಉತ್ತರ ಭಾಗದಲ್ಲಿ ಕನಕ ಚಂಪಾ ಸಸ್ಯವನ್ನು ಬೆಳೆಸುವುದರಿಂದ ಧನಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ. ಬಾಳೆಹಣ್ಣಿನ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣುವಿನ ಮಾಸವಿರುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಪಾರಿಜಾತ ಗಿಡದ ಸೃಷ್ಟಿಯಾಗಿದ್ದು ತಾಯಿ ಲಕ್ಷ್ಮಿ ದೇವಿಯು ಸಹ ಸಮುದ್ರ ಮಂಥನದಲ್ಲಿ ಹುಟ್ಟಿದ್ದಾರೆ. ಹಾಗಾಗಿ ಪಾರಿಜಾತ ಸಸ್ಯಕ್ಕೆ ಅತ್ಯಂತ ದೊಡ್ಡ ಮಹತ್ವವಿದೆ. ಪಾರಿಜಾತ ಗಿಡವನ್ನು
ಮನೆಯಲ್ಲಿ ಬೆಳೆಸುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪವು ನಿಮಗೆ ಸಿಗುತ್ತದೆ. ಮನುಷ್ಯರು ಯಾವತ್ತಿಗೂ ಸಹ ಸಿಂಧಿ ಮರವನ್ನು ಬೆಳೆಸಬಾರದು. ಇದು ಸಂತಾನವನ್ನು ನಾಶ ಮಾಡುತ್ತದೆ. ಯಾರ ಮನೆಯ ಮುಂದೆ ತಿಂಡಿ ಮರವಿರುತ್ತದೆಯೋ ಆ ಮನೆಯಲ್ಲಿ ಎಂದಿಗೂ ಸಂತಾನವು ಉದ್ಧಾರವಾಗುವುದಿಲ್ಲ. ಇದು ತಾರೆ ಮರ ಮತ್ತು ಶಾಂತಿ ಮರ ಇದನ್ನು ಯಾವುದೇ ಕಾರಣಕ್ಕೂ ಮನೆಯ ಮುಂದೆ ನೋಡಬಾರದು ಈ ವೃಕ್ಷದಲ್ಲಿ ಪ್ರೇತಗಳ ವಾಸವಿರುತ್ತದೆ. ಈ ಮರದ ಕೆಳಗಡೆ ಕುಳಿತುಕೊಂಡು ಯಾವತ್ತಿಗೂ ಸಹ ಪೂಜೆ ಪಾಠಗಳನ್ನು ಮಾಡಬಾರದು. ಒಂದು ವೇಳೆ ಯಾವುದಾದರು ವ್ಯಕ್ತಿಗಳಿಗೆ ಶತ್ರುವಿನ ಕಾಟ ಕಾಡುತ್ತಿದ್ದರೆ
ಅಂಥವರು ಕೇದಿಗೆಯ ಸಸ್ಯವನ್ನು ಬೆಳೆಸಬೇಕು. ಯಾವ ಮರಗಳನ್ನು ಕತ್ತರಿಸಿದ ಹಾಲು ಬರುತ್ತದೆಯೋ ಅಂತಹ ಸಸ್ಯ ಮತ್ತು ಗಿಡಗಳನ್ನು ಬೆಳೆಸಬಾರದು. ಮನೆಯ ಮುಂದೆ ಜಾಲಿ ಮರವನ್ನು ಸಹ ಬೆಳೆಸಬಾರದು. ಮನೆಯ ಮುಂದೆ ಬಾರೆ ಗಿಡವನ್ನು ಸಹ ಅಚ್ಚಬಾರದು. ಇದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ. ಧನ ಸಂಪತ್ತು ಸಹ ನಾಶವಾಗುತ್ತದೆ. ಯಾವುದೇ ಮನುಷ್ಯರು ಸಹ ಮನೆಯ ಮುಂದೆ ಪಪ್ಪಾಯ ಗಿಡವನ್ನು ಬೆಳೆಸಬಾರದು. ಇದರಿಂದ ದನಸಂಪತ್ತಿನ ನಾಶವಾಗುತ್ತದೆ.
ಮನೆಯ ಪೂರ್ವ ಭಾಗದಲ್ಲಿ ಅರಳಿ ಮರವಿದ್ದರೆ ಮನೆಯಲ್ಲಿ ನಿರ್ದನತೆ ಬರುತ್ತದೆ. ಮನೆಯ ಪಶ್ಚಿಮದಲ್ಲಿ ಆಲದ ಮರವಿದ್ದರೆ ಮನೆಯಲ್ಲಿ ಶೋಕ ಚಿರಕಾಲವಿರುತ್ತದೆ. ಇದಕ್ಕಿಂತ ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವಿದ್ದರೆ ಮನೆಯಲ್ಲಿರುವ ಮಕ್ಕಳು ಕಷ್ಟವನ್ನು ಅನುಭವಿಸುತ್ತಾರೆ. ಯಾವುದಾದರೂ ಒಣಗಿರುವ ಮರದ ನೆರಳು ಮನೆಯ ಮೇಲೆ ಬಿದ್ದರೆ ಅದು ಮೃತ್ಯುವಿನ ಸೂಚಕವಾಗಿರುತ್ತದೆ. ಒಣಗಿರುವಂತಹ ವೃಕ್ಷವನ್ನು ತಕ್ಷಣವೇ ಕಿತ್ತು ಬಿಸಾಕಬೇಕು. ಹೇ ಸಜ್ಜನ ಮಾನವ ನಾನು ಎಲ್ಲಾ ಶುಭ ಮತ್ತು ಅಶುಭ ವೃಕ್ಷಗಳ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದೇನೆ ಹಾಗಾಗಿ ನೀನು ಒಳ್ಳೆಯ ಸಸಿಗಳನ್ನು ಮನೆಯ ಮುಂದೆ ಬೆಳೆಸಿಕೊ.
ಜೊತೆಗೆ ನಿನಗೆ ಭಗವಂತನ ಕೃಪೆಯು ಸಹ ದೊರಕುತ್ತದೆ. ಆಗ ದನೇಶ್ವರನು ಹೇಳುತ್ತಾನೆ ಹೇ ಉತ್ತಮರೆ ನೀವು ನನಗೆ ಒಳ್ಳೆಯ ಜ್ಞಾನವನ್ನು ಕೊಟ್ಟಿದ್ದೀರಾ ಧನ್ಯವಾದಗಳು ಆಗ ನಂತರ ಸಾಧು ಮಹಾರಾಜರು ಧನೇಶ್ವರನಿಗೆ ಆಶೀರ್ವಾದವನ್ನು ಮಾಡಿ ಅಲ್ಲಿಂದ ಮಾಯವಾಗುತ್ತಾರೆ. ಆಗ ಧನೇಶ್ವರನ್ನು ಮತ್ತು ಅವನ ಹೆಂಡತಿಗೆ ಇದರ ಬಗ್ಗೆ ಅರಿವಾಗುತ್ತದೆ. ಸಾಕ್ಷಾತ್ ಭಗವಂತನಾದ ವಿಷ್ಣುವೇ ಅವರ ಮನೆಗೆ ಬಂದಿದ್ದರು ಎಂದು ತಿಳಿಯುತ್ತದೆ. ಹಾಗಾದರೆ ತಮ್ಮ ಮನೆಯ ಮುಂದೆ ಸಾಧು ಮಹಾರಾಜರು ಹೇಳಿದಂತೆ ಒಳ್ಳೆಯ ಮರಗಳನ್ನು ನೆಡುತ್ತಾರೆ.
ಇದರಿಂದ ಚಾಣಕ್ಯಾಗೆ ಅವರಿಗೆ ಒಳ್ಳೆಯ ಧನ ಸಂಪತ್ತು ಲಭಿಸುತ್ತದೆ. ನಂತರ ಅವರ ದರಿದ್ರತೆಯು ದೂರವಾಗುತ್ತದೆ .ಧನೇಶ್ವರ ಮತ್ತು ಅವರ ಹೆಂಡತಿ ಭಗವಂತನಾದ ವಿಷ್ಣು ಪರಮಾತ್ಮನಿಗೆ ಧನ್ಯವಾದಗಳು ತಿಳಿಸುತ್ತಾರೆ. ಭಗವಂತನಾದ ಶ್ರೀ ಕೃಷ್ಣರು ಹೇಳುತ್ತಾರೆ. ಹೇ ಸ್ನೇಹಿತ ಈ ರೀತಿಯಾಗಿ ನಿನಗೆ ಶುಭ ಮತ್ತು ಅಶುಭ ವೃಕ್ಷಗಳ ಬಗ್ಗೆ ತಿಳಿಸಿದ್ದೇನೆ. ಈಗ ನೀನು ಹೋಗಿ ಈ ಶುಭ ವೃಕ್ಷಗಳನ್ನ ಮನೆಯ ಮುಂದೆ ಬೆಳೆಸು ಎಂದು ಹೇಳುತ್ತಾರೆ. ಈ ರೀತಿಯಾಗಿ ಶ್ರೀ ಕೃಷ್ಣ ಪರಮಾತ್ಮರು ಮನೆಯ ಮುಂದೆ ಶುಭ ಮತ್ತು ಅಶುಭ ಮರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.