ಮಹಿಳೆಯರು ಹೀಗೆ ಮಲಗಿಕೊಂಡರೆ ತಾಯಿ ಲಕ್ಷ್ಮಿ ದೇವಿಯು ಸಿಟ್ಟಾಗಳು, ಧನ ಸಂಪತ್ತಿನ ನಾಶವು ಸಹ ಆಗುತ್ತದೆ. ದರಿದ್ರ ತೆಗೆಯು ಮನೆಗೆ ಬರುತ್ತದೆ. ಯಾವುದೇ ಸ್ತ್ರೀಯು ಈ ರೀತಿ ಮಲಗಲೇಬಾರದು. ಶ್ರೀ ಕೃಷ್ಣನು ಈ ರೀತಿ ಹೇಳುತ್ತಾರೆ. ನಮ್ಮ ಶರೀರದ ಮೇಲೆ ಅತ್ಯಂತ ಮೋಹವನ್ನು ಮಾಡಬಾರದು. ಜೊತೆಗೆ ಪರಮಾತ್ಮ ನೀಡಿರುವಂತಹ ಶರೀರವನ್ನು ನಾಶ ಕೂಡ ಮಾಡಬಾರದು.
ಮನುಷ್ಯರು ಅನೇಕ ತಪ್ಪುಗಳನ್ನು ಮಾಡಿ ತಮ್ಮ ಶರೀರವನ್ನು ಕೊಳಕು ಮಾಡಿರುತ್ತಾರೆ. ಪಾಪ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತಾರೆ. ಮನುಷ್ಯನು ಹೇಗೆ ತನ್ನ ಶರೀರವನ್ನು ಪವಿತ್ರವಾಗಿ ಅದರಲ್ಲೂ ಸ್ತ್ರೀಯು ಹೇಗೆ ಇಟ್ಟುಕೊಳ್ಳಬೇಕೆಂದು ನೋಡೋಣ. ರಾತ್ರಿ ಮಲಗುವ ಸಮಯದಲ್ಲಿ ಮಹತ್ವಪೂರ್ಣ ನಿಯಮವನ್ನು ಪಾಲಿಸಬೇಕು. ಈ ವಿಷಯಗಳನ್ನು ತಿಳಿದುಕೊಳ್ಳಿ.
ಮೊದಲಿಗೆ ಮನುಷ್ಯ ದಿನ ಸ್ನಾನವನ್ನು ಮಾಡಬೇಕು ಸ್ನಾನ ಮಾಡದೆ ಇರಬಾರದು. ಸ್ನಾನದಿಂದ ಶರೀರದ ಶುದ್ದಿಕರಣವಾಗುತ್ತದೆ. ಸ್ನಾನ ಮಾಡದೆ ಪೂಜೆಯನ್ನು ಊಟವನ್ನು ಮಾಡಬಾರದು. ಹಿಂದೂ ಧರ್ಮದಲ್ಲಿ ತಲೆಕೂದಲಿಗೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಸ್ತ್ರೀಯು ತಲೆ ಕೂದಲು ಯಾವ ರೀತಿ ಇಟ್ಟುಕೊಳ್ಳಬೇಕುಯಾವ ದಿನ ಕೂದಲನ್ನು ಕತ್ತರಿಸಬೇಕು.
ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವು ಒಂದೊಂದು ದೇವರಿಗೆ ಸಮರ್ಪಣೆಯಾಗಿದೆ. ಶಾಸ್ತ್ರಗಳ ಪ್ರಕಾರ ತಲೆಕೂದಲನ್ನು ಮಂಗಳವಾರ ಗುರುವಾರ ಶನಿವಾರ ಯಾವುದೇ ಕಾರಣಕ್ಕೂ ಕತ್ತರಿಸಬಾರದು. ಮಂಗಳವಾರ ಮಂಗಳ ಗ್ರಹದ ವಾರ ವಾಗಿರುವುದರಿಂದ ಆ ದಿನ ತಲೆ ಕೂದಲು ಕತ್ತರಿಸಿದರೆ ಶತ್ರುಗಳು ಹೆಚ್ಚಾಗುತ್ತಾರೆ.
ಗುರುವಾರ ತಲೆ ಕೂದಲು ಕತ್ತರಿಸಿದ್ದರೆ ಗುರುಬಲ ಕಮ್ಮಿಯಾಗುತ್ತದೆ ಮತ್ತು ಆಯಸ್ಸು ಸಹ ಕಮ್ಮಿಯಾಗುತ್ತದೆ. ಧನ ಸಂಪತ್ತಿನ ನಾಶವೂ ಸಹ ಆಗುತ್ತದೆ. ಶನಿವಾರ ತಲೆ ಕೂದಲು ಕತ್ತರಿಸಿದರೆ ಅಶುಭ ಘಟನೆಗಳು ನಡೆಯುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯದು ಸಹ ತಲೆ ಕೂದಲನ್ನು ಕತ್ತರಿಸಬಾರದು ಆ ದಿನ ಕತ್ತರಿಸಿದರು ಅವರಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಹಬ್ಬದ ದಿನ ಮತ್ತು ಗ್ರಹಣದ ಸಮಯದಲ್ಲೂ ತಲೆಕೂದಲನ್ನು ಕತ್ತರಿಸಬಾರದು. ಮಹಿಳೆಯರ ಉದ್ದವಾದ ಕೂದಲು ಇರುವುದು ಅದು ಸೌಂದರ್ಯದ ಪ್ರತಿಕ ಎಂದು ಹೇಳಬಹುದು. ಶಾಸ್ತ್ರದ ಪ್ರಕಾರ ಮಹಿಳೆಯರ ತಲೆ ಕೂದಲು ಸೊಂಟದ ಕೆಳಗೆ ಇರಬಾರದು ಒಂದು ವೇಳೆ ಇದ್ದರೆ ನೆಲಕ್ಕೆ ಸ್ಪರ್ಶವಾಗದಂತೆ ಕಟ್ಟಿಕೊಳ್ಳಬೇಕು. ಸ್ತ್ರೀಯರು ತಮ್ಮ ತಲೆ ಕೂದಲನ್ನು ಗಲೀಜಾಗಿ ಇಟ್ಟುಕೊಳ್ಳಬಾರದು. ಸ್ತ್ರೀಯರು ಯಾವಾಗಲೂ ಹಣೆ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಸೌಭಾಗ್ಯದ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು. ಶಾಸ್ತ್ರ ಹೇಳುವ ಪ್ರಕಾರ ಮಹಿಳೆಯರು ತನ್ನ ತಲೆಕೂದಲನ್ನು ಕೆರೆದುಕೊಳ್ಳುತ್ತಾ ಪೂಜೆ ಮಾಡುವುದರಿಂದ ಪೂಜೆ ಫಲ ಸಿಗುವುದಿಲ್ಲ. ಬಾಚಿದ ನಂತರ ತಲೆಕೂದಲನ್ನು ಎಲ್ಲಿಬೇಕಲ್ಲಿ ಎಸೆಯಬಾರದು. ಶಾಸ್ತ್ರದ ಪ್ರಕಾರ ಮಹಿಳೆಯ ಋತುಚಕ್ರದ ಸಮಯದಲ್ಲಿ ಮೂರು ದಿನಗಳ ತನಕ ಕಳೆದುಕೊಳ್ಳಬಾರದು.
ವೈಜ್ಞಾನಿಕವಾಗಿ ನೋಡುವುದಾದರೆ ಋತುಚಕ್ರದ ಸಮಯದಲ್ಲಿ ಮಹಿಳೆಯರ ದೇಹ ತುಂಬಾ ದುರ್ಬಲವಾಗಿರುತ್ತದೆ, ಈ ಸಮಯದಲ್ಲಿ ಒತ್ತಡದ ಕೆಲಸಗಳನ್ನು ಮಾಡಬಾರದು. ಯಾವತ್ತೂ ಸೂರ್ಯಸ್ತ ಆದ ನಂತರ ತಲೆ ಕೂದಲುಗಳನ್ನು ತೊಳೆಯಬಾರದು. ಈ ರೀತಿ ಮಾಡುವುದು ಶುಭ ಎಂದು ತಿಳಿಯಲಾಗಿದೆ. ಮಲಗುವಂತ ಸಮಯದಲ್ಲಿ ತನ್ನ ತಲೆಯನ್ನು ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಮಾಡಿ ಮಲಗಬೇಕು. ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗೋದು ಅಶುಭ ಎಂದು ಹೇಳಲಾಗುತ್ತದೆ.