ನಾವು ಈ ಲೇಖನದಲ್ಲಿ ಸುಂದರವಾಗಿ ಕಾಣಲು ಯಾವ ರೀತಿಯ ಸೌಂದರ್ಯ ಮಂತ್ರವನ್ನು ಪಠಿಸಬೇಕು ಎಂಬುದನ್ನು ನೋಡೋಣ. ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಹಾಗೂ ಸುಲಭ ಮಂತ್ರ . ಸೌಂದರ್ಯ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನವೇನು ಗೊತ್ತಾ ..?ಸೌಂದರ್ಯ ಮಂತ್ರವನ್ನು ಹೇಗೆ ಪಠಿಸಬೇಕು..?
ಮಂತ್ರ ವೆಂದರೆ ಅದೊಂದು ಶಬ್ದ ಪದ ಅಥವಾ ಪದಗಳ ಪುಂಜ .ಮಂತ್ರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ . ಮಂತ್ರಗಳನ್ನು ಪ್ರಾರ್ಥನೆ ಮಾಡಲು ಅಥವಾ ದೇವರನ್ನು ಒಲಿಸಿಕೊಳ್ಳಲು ಬಳಸಲಾಗುತ್ತದೆ . “ಓಂ” ಎನ್ನುವುದು ಸಂಪ್ರದಾಯಿಕ ಮಂತ್ರವಾಗಿದ್ದು , ಅದು ಹೆಚ್ಚಿನ ಮಂತ್ರಗಳ ಆರಂಭ . “ಲೋಕ್ತಃ ಸಮಸ್ತಃ ಸುಖಿನೋ ಭವಂತು” ಎನ್ನುವುದು, ಎಲ್ಲಾ ಜೀವಿಗಳಿಗೆ ಶಾಂತಿಯನ್ನು ತರುವ ಪ್ರಾರ್ಥನೆಯಾಗಿದೆ.
ಮಂತ್ರ ಎಂದರೇನು? ಮಂತ್ರ ಎಂಬುದು ಸಂಸ್ಕೃತ ಪದವಾಗಿದ್ದು ,ಮನ ಮತ್ತು ತ್ರ ಎನ್ನುವ ಎರಡು ಶಬ್ದಗಳ ಸಂಗಮವಾಗಿದೆ. ಮನ ಎಂದರೆ ಮನಸ್ಸು ಅಥವಾ ಯೋಚಿಸುವುದು ಎಂದರ್ಥ .ಹಾಗೆಯೇ ತ್ರ ಎಂದರೆ ಸಾಧನ ಎಂದರ್ಥ. ಹಾಗಾಗಿ ಮಂತ್ರ ವೆಂದರೆ ಚಿಂತೆಯ ಸಾಧನ ಎಂಬರ್ಥವನ್ನು ನೀಡುತ್ತದೆ . ಮಂತ್ರವನ್ನು ಪಠಿಸುವುದರಿಂದ ನಮ್ಮ ಆಲೋಚನೆಗಳು ಮತ್ತು ಮನಸ್ಸಿನ ಸ್ಥಿತಿಯು ಪರಿವರ್ತನೆ ಯಾಗುವುದು. ನಾವು ದಿನನಿತ್ಯ ಪಠಿಸಬಹುದಾದ ಹಲವಾರು ಮಂತ್ರಗಳಿವೆ.
ಪ್ರತಿಯೊಂದು ದೇವರಿಗೂ ಅದರದ್ದೇ ಆದ ಪ್ರತ್ಯೇಕ ಮಂತ್ರಗಳಿವೆ . ಹಾಗೇ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಮಂತ್ರಗಳಿವೆ ಎಂದರೆ ನೀವು ನಂಬುತ್ತೀರಾ.? ಇಲ್ಲ .ನೀವು ನಂಬಲೇಬೇಕು . ಈ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಸೌಂದರ್ಯ ವೃದ್ಧಿಯಾಗುವುದು . ಇದರಿಂದ ನಾವು ಸುಂದರವಾಗಿ ಕಾಣಲು ಸಾಧ್ಯ. ಆದರೆ ಆ ಸೌಂದರ್ಯ ಮಂತ್ರ ಯಾವುದು ..? ಈ ಮಂತ್ರವನ್ನು ಪಠಿಸುವುದರಿಂದ ಆಗುವ ಲಾಭವೇನು…? ತಿಳಿದುಕೊಳ್ಳೋಣ .
ಸೌಂದರ್ಯ ಮಂತ್ರ : -!! ” ಓಂ ಸೌಂದರ್ಯೇ ಸೌಂದರ್ಯ ಪ್ರದಾಯ ಸಿದ್ದಿಂ ದೇಹಿ ನಮಃ” !!
ಸೌಂದರ್ಯ ಮಂತ್ರ ನೋಡಲು , ಪಠಿಸಲು ಚಿಕ್ಕದಾಗಿದ್ದರೂ ಅದರ ಪ್ರಭಾವ ಅತ್ಯಂತ ಗಣನೀಯ. ಅತ್ಯಂತ ಪ್ರಾಚೀನ ಕಾಲದಿಂದಲೂ ಈ ಮಂತ್ರವನ್ನು ಪಠಿಸಲಾಗುತ್ತಿದೆ . ಸೌಂದರ್ಯ ಓರ್ವ ವ್ಯಕ್ತಿಯ ಅಂತರಾಳದ ಭಾವನೆಯನ್ನು ಹೊರ ಸೂಸುವ ಸಾಮರ್ಥ್ಯವನ್ನು ಹೊಂದಿರುತ್ತದೆ .ಪ್ರತಿಯೊಬ್ಬರಿಗೂ ಕೂಡ ನಾನು ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇದ್ದೇ ಇರುತ್ತದೆ .
ತಾವು ಸುಂದರವಾಗಿ ಕಾಣಲು ಅದೆಷ್ಟು ಹಣವನ್ನು ಖರ್ಚು ಮಾಡುತ್ತಾರೆ . ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ .ಆದರೆ ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಸೌಂದರ್ಯ ನೈಸರ್ಗಿಕವಾಗಿರುತ್ತದೆ. ಸೌಂದರ್ಯ ಎನ್ನುವುದು ಕೇವಲ ಒಂದು ಸುಂದರವಾದ ನೋಟ ಅಲ್ಲ .ಬದಲಾಗಿ ಅದೊಂದು ಹೋಲಿಸಲಾಗದು ನಿರ್ದಿಷ್ಟ ದಿಕ್ಕಿಗೆ ಪ್ರಾಕೃತಿಕವಾಗಿ ಅಂತರಂಗವನ್ನು ಮತ್ತು ಬಹಿ ರಂಗವನ್ನು ಅಭಿವೃದ್ಧಿಪಡಿಸುವುದು .ಅಲ್ಲಿ ನೀವು ಮತ್ತು ನಿಮ್ಮ ನೆಚ್ಚಿನ ದೇವತೆ ಒಂದೇ ಎನ್ನುವ ಭಾವನೆಯನ್ನು ನೀವು ಅನುಭವಿಸುವಿರಿ
ಎಂದು ಆದಿ ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿಯಲ್ಲಿ ಬಣ್ಣಿಸಿದ್ದಾರೆ . ಸೌಂದರ್ಯ ಮಂತ್ರವನ್ನು ಹೇಳುವ ಸಮಯ. : ಸೋಮವಾರದಿಂದ ನೀವು ಈ ಮಂತ್ರವನ್ನು ಪಡಿಸಲು ಆರಂಭಿಸಬೇಕು ಅದರಲ್ಲೂ ರಾತ್ರಿ ವೇಳೆ ಪೂರ್ವಾ ಅಥವಾ ಉತ್ತರಕ್ಕೆ ಮುಖ ಮಾಡಿ ಹಾಸನ ಭಂಗಿಯಲ್ಲಿ ಕುಳಿತುಕೊಂಡು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ, ನಂತರ ಈ ಮಂತ್ರವನ್ನು 11 ಬಾರಿ ಪಠಿಸಿ.
ಸುಮಾರು 21 ದಿನಗಳವರೆಗೆ ಈ ಮಂತ್ರವನ್ನು ಪಠಿಸಬಹುದು. ಸೌಂದರ್ಯ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನ : – 1 . ಸುಂದರ ನೋಟ, ಆಕರ್ಷಣೆ , ಹೊಳೆಯುವ ಚರ್ಮ, ಸೌಂದರ್ಯ ಮತ್ತು ಧನಾತ್ಮಕ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ಓರ್ವ ವ್ಯಕ್ತಿಯು ಪಠಿಸಬಹುದಾದ ಮಂತ್ರ ಇದಾಗಿದೆ . 2 . ಮಂತ್ರದ ಪಠಣೆ ಮತ್ತು ಸಾಧನವು ಆ ವ್ಯಕ್ತಿಯ ಚರ್ಮವನ್ನು ಹೊಳೆಯುವಂತೆ ಮತ್ತು ಮುಖದ ಆಕರ್ಷಣೆಯನ್ನು ಹೆಚ್ಚಾಗುವಂತೆ ಮಾಡುತ್ತದೆ.
3 . ಮುಖದ ಮೇಲಿನ ಅನಗತ್ಯ ಕಲೆಗಳನ್ನು ,ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ಈ ಮಂತ್ರ ನಿವಾರಿಸುತ್ತದೆ ಎನ್ನುವುದು ತಿಳಿದು ಬಂದಿದೆ . ಈ ಸೌಂದರ್ಯ ಮಂತ್ರವನ್ನು ನೀವು 21 ದಿನಗಳ ವರೆಗೆ ಮಾತ್ರವಲ್ಲ ನಿಮಗೆ ಇಷ್ಟವಾದರೆ ನೀವು ಇನ್ನು ಹೆಚ್ಚಿನ ಸಮಯಗಳವರೆಗೂ ಕೂಡ ಪಠಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ತಾಯಿ ಲಕ್ಷ್ಮಿಯು ನಮ್ಮ ಸೌಂದರ್ಯವನ್ನು ವೃದ್ಧಿಸುವಳು .ಹಾಗೂ ನಮ್ಮಲ್ಲಿ ಧನಾತ್ಮಕ ಅರಿವು ಹೆಚ್ಚಾಗುತ್ತದೆ . ಹೀಗೆ ನಾವು ಹೇಳಿದ ರೀತಿ ಮಾಡಿದಲ್ಲಿ ಸೌಂದರ್ಯವು ವೃದ್ಧಿಯಾಗುತ್ತದೆ ಎಂದು ಹೇಳಬಹುದು.