ಪ್ರತಿದಿನ ಈ 10 ನಿಮಿಷ ತುಂಬಾ ಪವರ್‌ ಫುಲ್‌ ಈ ಸಮಯದಲ್ಲಿ ನೀವು ಏನೇ ಕೇಳಿದರು 100% ನೆರವೇರುತ್ತೆ

ನಾವು ಈ ಲೇಖನದಲ್ಲಿ ಪ್ರತಿದಿನ ಈ ಒಂದು 10 ನಿಮಿಷದ ಸಮಯ ಅತ್ಯಂತ ತುಂಬಾ ಶಕ್ತಿಯುತವಾಗಿ ಇರುತ್ತದೆ .ಈ ಸಮಯದಲ್ಲಿ ನೀವು ಏನೇ ಕೇಳಿದರೂ ನಿಮ್ಮ ಮನಸ್ಸಿನ ಕೋರಿಕೆಯನ್ನು ಈ ಸಮಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಖಂಡಿತ ನಿಮ್ಮ ಕೋರಿಕೆಗಳು ಈಡೇರುತ್ತದೆ . ಹಾಗಾದರೆ ದಿನದಲ್ಲಿ 10 ನಿಮಿಷದ ಶಕ್ತಿಯುತ ಸಮಯ ಯಾವಾಗ ಇರುತ್ತದೆ , ಅದರ ಮಹತ್ವವೇನು ಎಂಬ ಕುತೂಹಲಕಾರಿ ರಹಸ್ಯದ ಮಾಹಿತಿಯನ್ನು ನಾವು ಈಗ ನೋಡೊಣ ಎಂಬುದನ್ನು ಹೇಳಲಾಗಿದೆ.

ಮನುಷ್ಯ ಅಂದಮೇಲೆ ಆಸೆಗಳು ಇದ್ದೇ ಇರುತ್ತದೆ .ಆಸೆಗಳು ಇಲ್ಲ ಎಂದರೆ ಜೀವನದಲ್ಲಿ ರುಚಿಯೇ ಇರುವುದಿಲ್ಲ .ಎಲ್ಲರಿಗೂ ಸಾಮಾನ್ಯವಾಗಿ ಆಸೆ ಎಂದರೆ ಚೆನ್ನಾಗಿ ಬದುಕಬೇಕು ಎಂಬುದು . ಈ ಆಸೆ ಅನ್ನುವುದು ಎಲ್ಲಾ ಜೀವ ಜಂತು ಗಳಿಗೂ ಕೂಡ ಇರುತ್ತದೆ .ಮನುಷ್ಯರಿಗೆ ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಆಸೆ ಎನ್ನುವ ರೈಲು ಶುರುವಾಗುತ್ತದೆ . ಬಗೆ ಬಗೆಯ ಭಕ್ಷ ಗಳನ್ನು ತಿನ್ನುವ ಆಸೆ ,

ಸುಂದರವಾಗಿ ಕಾಣಿಸುವಂತಹ ಆಸೆ , ಯಾರನ್ನೋ ಅನುಕರಣೆ ಮಾಡುವ ಆಸೆ , ಕುಟುಂಬಸ್ಥರಿಗೆ ಚೆನ್ನಾಗಿ ಬದುಕಬೇಕೆಂಬ ಆಸೆ , ಸನ್ಯಾಸಿಗಳಿಗೆ ದೇವರನ್ನು ಒಲಿ ಸಿಕೊಳ್ಳಬೇಕೆಂಬ ಆಸೆ , ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಸೆಗಳ ಪುರಾಣ ರಾಮಾಯಣ ದಷ್ಟು ದೊಡ್ಡದಾಗಿ ಎಂದು ಮುಗಿಯದ , ಮಹಾ ಪ್ರಬಂಧವಾಗಿ ಬಿಡುತ್ತದೆ . ಆಸೆಗಳು ನೆರವೇರುವಾಗ ಸಿಗುವಂತಹ ಆನಂದ ಅದನ್ನು ಅನುಭವಿಸುವವರಿಗೆ ಗೊತ್ತು. ಎಲ್ಲರೂ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದಕ್ಕೆ ಶ್ರಮ ಪಡುತ್ತಾರೆ .

ಹಾಗಂತ ಅತಿಯಾದ ಆಸೆಗಳು ಒಳ್ಳೆಯದಲ್ಲ . ಮನುಷ್ಯ ಎಷ್ಟು ಆಸೆ ಬುರುಕನಾಗಿ ಇರುತ್ತಾನೆ . ಅಷ್ಟು ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡು ಈಡೇರಿಕೆಯಲ್ಲಿ ಬದುಕನ್ನು ಸವೆಸುತ್ತಾನೆ .ಆಸೆ ಚಿಕ್ಕಂದಿನಿಂದ ಹಿಡಿದು ಅತಿ ದೊಡ್ಡ ಆಸೆ ಇರುತ್ತದೆ .ಆಸೆಗಳು ಎಷ್ಟೇ ಇದ್ದರೂ ಎಲ್ಲರ ಆಸೆಗಳು ಈಡೇರುವುದಿಲ್ಲ .ಕೆಲವು ಆಸೆಗಳನ್ನು ಅವರೇ ಕಡೆಗಣಿಸುತ್ತಾರೆ . ಇನ್ನು ಕೆಲವು ಆಸೆಗಳು ಪರಿಸ್ಥಿತಿಯ ಒತ್ತಡದಿಂದ ನೆರವೇರುವುದಿಲ್ಲ . ಇನ್ನು ಕೆಲವರು ತಮ್ಮ ಆಸೆಗಳನ್ನು ಹೇಳಿಕೊಳ್ಳಲಾಗದೆ ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡು ಕೊರಗುತ್ತಿರುತ್ತಾರೆ .

ಆಸೆಗಳು ಈಡೇರದೆ ಒಬ್ಬ ಮನುಷ್ಯ ಸತ್ತು ಹೋದರೆ , ಅವನು ಪ್ರೇತವಾಗುತ್ತಾನೆ ಎಂಬ ಹೆದರಿಕೆಯೂ ಅವರ ಆಸೆಯನ್ನು ಈಡೇರಿಸಲು ಸಹಾಯ ಮಾಡುತ್ತದೆ .ಆದರೆ ಎಲ್ಲರ ಆಸೆಗಳು ನೆರವೇರುತ್ತಿದೆಯೇ , ಸಾಧ್ಯವಿಲ್ಲ .ಯಾಕೆಂದರೆ ಮನುಷ್ಯನ ಆಸೆಗಳಿಗೆ ಮಿತಿಯೇ ಇರುವುದಿಲ್ಲ . ಅವು ರಕ್ತ ಬೀಜಾ ಸುರನಂತೆ ಮತ್ತೆ ಮತ್ತೆ ಹುಟ್ಟಿ ಬರುತ್ತಿರುತ್ತವೆ .

ಒಂದು ಆಸೆ ಈಡೇರಿದಾಗ ಮತ್ತೊಂದು ಆಸೆ ಕಣ್ಮುಂದೆ ಬರುತ್ತದೆ. ಕಡಿಮೆ ಹಣ ಇರುವ ಮನುಷ್ಯನ ಆಸೆಗಿಂತ ಶ್ರೀಮಂತನ ಆಸೆ ಬೇಗ ಅಥವಾ ಸುಲಭವಾಗಿ ನೆರವೇರುತ್ತದೆ .ಹಾಗಾಗಿ ಹಣ ಎನ್ನುವುದು ಮನುಷ್ಯನ ಆಸೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ .ಆಸೆ ನೆರ ವೇರದೆ ಇದ್ದರೂ ದುಃಖ ಉಂಟಾಗುತ್ತದೆ . ಆಸೆಗಳನ್ನು ಈಡೇರಿಸಿಕೊಳ್ಳಲು ಕೆಲವೊಮ್ಮೆ ಮನುಷ್ಯ ನೀಚನಾಗಿ ಬಿಡುತ್ತಾನೆ .ಮನುಷ್ಯನಿಗೆ ಆಸೆಗಳು ಇರಬೇಕೇ ಹೊರತು ದುರಾಸೆಗಳು ಇರಬಾರದು .

ಅಂತಹ ದುರಾಸೆಗಳನ್ನು ಪೂರೈಸಲು ಅಡ್ಡದಾರಿ ಹಿಡಿದು , ಕೆಟ್ಟ ಕೆಲಸ , ಅಪರಾಧ ಮಾಡಿ ಜೈಲು ಸೇರುವ ವ್ಯಕ್ತಿಗಳು ಕೂಡ ಇರುತ್ತಾರೆ .ಒಂದೇ ವಸ್ತುವಿಗಾಗಿ ಹಲವಾರು ಜನ ಆಸೆಪಟ್ಟರೆ ಅಲ್ಲಿ ಜಗಳ ,ವೈ ಮನಸ್ಸು ,,ಹಿಂಸೆ , ಕಿತ್ತಾಟ, ವಂಚನೆ ,ಮೋಸ ಎಲ್ಲಾ ನಡೆದು ಯಾರು ಬಲಿಷ್ಠ ನೋ ಅವನಿಗೆ ಆ ವಸ್ತು ಸಿಕ್ಕಿ , ಅವನ ಆಸೆ ಈಡೇರುತ್ತದೆ. ಸ್ಪರ್ಧೆಗಳಲ್ಲಿ ತನಗೆ ಮೊದಲು ಬಹುಮಾನ ಸಿಕ್ಕಬೇಕು ಎಂದು ಪ್ರತಿಯೊಬ್ಬ ಸ್ಪರ್ದಾಳುವಿಗೂ ಆಸೆ ಇರುವುದು ಸಹಜ .

ಜೀವನವೆಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ತಾವು ಗೆಲ್ಲಬೇಕು ಎಂಬ ಹುನ್ನಾರದಲ್ಲಿ ಷಡ್ಯಂತ್ರ , ಕುತಂತ್ರ , ಯುಕ್ತಿ , ಶಕ್ತಿ ಎಲ್ಲವನ್ನು ಪ್ರಯೋಗಿಸಿ ಗೆಲ್ಲುವುದಕ್ಕೆ ಪ್ರಯತ್ನ ಪಡುತ್ತಾರೆ .ಆದಷ್ಟು ಮನುಷ್ಯ ಕೆಟ್ಟವನಾದಷ್ಟು ತನ್ನ ಆಸೆ ಗಳನ್ನು ಈಡೇರಿಸೆಕೊಳ್ಳುವುದಕ್ಕೆ ದುಷ್ಟತನವನ್ನು ತೋರಿ ಬಹುತೇಕ ಆಸೆಗಳನ್ನು ಈಡೇರಿಸಿ ಕೊಳ್ಳುತ್ತಾನೆ .ಮೋಸ , ವಂಚನೆ , ಕೊಲೆ ಇತ್ಯಾದಿಗಳನ್ನು ಸಹ ಮನುಷ್ಯನ ದುರಾಸೆಗಳ ಕಾರಣದಿಂದಲೇ ನಡೆಯುತ್ತದೆ .ಬೇರೆಯವರ ದುಡ್ಡು ,

ಮನೆ , ಆಸ್ತಿ , ಭೂಮಿ ಇತ್ಯಾದಿಗಳನ್ನು ತಮ್ಮದಾಗಿಸಿ ಕೊಳ್ಳುವುದಕ್ಕೆ ಏನು ಮಾಡುವುದಕ್ಕೂ ಸಿದ್ದರಾಗಿ ಕ್ರೌರ್ಯದ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ .ಆದ್ದರಿಂದ ನಮ್ಮ ಆಸೆಗಳು ಹಿತವಾಗಿ ಮಿತವಾಗಿ ಇರಬೇಕು .ಯಾರಿಗೂ ಯಾವುದಕ್ಕೂ ಹಾನಿಯಾಗದಂತೆ ಆಸೆಗಳನ್ನು ನೆರವೇರಿಸಿ ಕೊಳ್ಳುವುದಕ್ಕೆ ಪ್ರಯತ್ನ ಪಡಬೇಕು .
ಆದರೆ ಕೆಲವರಿಗಂತೂ ಜೀವನದಲ್ಲಿ ಏನೇ ಬಯಸಿದರು ಅದು ಕೈಗೆ ಎಟುಕದ ನಕ್ಷತ್ರವೇ ಆಗಿರುತ್ತದೆ .ಚಿಕ್ಕ ಚಿಕ್ಕ ಆಸೆಗಳು ಕೂಡ ನೆರವೇರದೆ ಅವರು ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ .

ಯಾವುದಕ್ಕೆ ಕೈ ಹಾಕಿದರೂ ಎಲ್ಲದರಲ್ಲೂ ಸೋಲು ಸೋಲು .ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ , ನೀವು ಈ ಒಂದು ಪ್ರಯೋಗವನ್ನು ಮಾಡಲೇಬೇಕು . ನಿಮ್ಮ ಆಸೆಗಳ ಈಡೇರಿಕೆಗೆ ಮಾಡಬಹುದಾದ ಒಂದು ಸರಳ ಪ್ರಯೋಗದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ .ಬೆಳಗಿನ ಜಾವ ಮೂರು ಗಂಟೆಯ ಸಮಯ ಬಹಳ ಮಹತ್ವಪೂರ್ಣವಾಗಿದೆ.

ಇದರ ಬಗ್ಗೆ ಬಹಳಷ್ಟು ಜನರಿಗೆ ಅರಿವು ಇರುವುದಿಲ್ಲ .ಆ ಸಮಯದಲ್ಲಿ ನಾವು ಸಕ್ಕರೆ ನಿದ್ದೆಯಲ್ಲಿ ತೇಲುತ್ತಿರುತ್ತೇವೆ .ಅಂದರೆ ಈ ಸಮಯದಲ್ಲಿ ಧ್ಯಾನ ಮಾಡಿದರೆ , ಮಾನಸಿಕ ಅಭಿವೃದ್ಧಿಯಾಗಿ ಸತ್ವ ಗುಣ ಹೆಚ್ಚಾಗುತ್ತದೆ . ಇದರಿಂದ ರಜಸ್ಸು ಮತ್ತು ತಮೋ ಗುಣಗಳಿಂದ ಉಂಟಾಗುವ , ಮನಸ್ಸಿನ ವಿಪರೀತ ಚಟುವಟಿಕೆ , ಆಲಸ್ಯ ಮನಸ್ಸು ರೇಗುವುದು ನಿಂತು ಹೋಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಾಡುವ ಒಂದು ಸರಳ ಪ್ರಯೋಗದಿಂದ ನಿಮ್ಮ ಮನಸ್ಸಿನ ಆಸೆಗಳನ್ನು ಈಡೇರಿಸಿಕೊಳ್ಳಬಹುದು .

ಅದು ಹೇಗೆ ಎಂದು ತಿಳಿಯೋಣ ಬನ್ನಿ .ಬೆಳಗಿನ ಜಾವ 3 ಗಂಟೆ 10 ನಿಮಿಷಕ್ಕೆ ಸರಿಯಾಗಿ ಈ ಪ್ರಯೋಗವನ್ನು ಆರಂಭಿಸಬೇಕು 3 ಗಂಟೆ 20 ನಿಮಿಷಕ್ಕೆ ಈ ಪ್ರಯೋಗವನ್ನು ಮುಗಿಸಬೇಕು .ಈ ಸಮಯದಲ್ಲಿ ಸಾಕ್ಷಾತ್ ಸರಸ್ವತಿ ದೇವಿಯೇ ನಾಲಿಗೆ ಮೇಲೆ ಕುಳಿತಿರುತ್ತಾಳೆ ಅನ್ನೋ ನಂಬಿಕೆಯು ಶಾಸ್ತ್ರಗಳಲ್ಲಿ ಇದೆ. ಶಿಕ್ಷಣ , ಜ್ಞಾನ ಮತ್ತು ಉತ್ಕೃಷ್ಟತೆಯ ದೇವತೆ ಸರಸ್ವತಿ ದೇವಿಗೆ ಹಿಂದೂ ಧರ್ಮದಲ್ಲಿ ಒಂದು ಪ್ರಮುಖವಾದ ಸ್ಥಾನವಿದೆ .ಸರಸ್ವತಿ ಎಂಬ ಹೆಸರು ಸಂಸ್ಕೃತ ಪದದ ಸೃ ನಿಂದ ಬಂದಿದೆ.

ಶುದ್ಧ ನೀರು ಜ್ಞಾನ ಅಥವಾ ಬುದ್ಧಿವಂತಿಕೆಯ ನಿರಂತರ ಮತ್ತು ಸ್ವಯಂ ನವೀಕರಣದ ಅರಿವನ್ನು ಸೂಚಿಸುತ್ತದೆ .ಸರಸ್ವತಿ ದೇವಿಯು ಜ್ಞಾನದ ಸಂಕೇತ .ಇದರ ಹರಿವು ನದಿಯಂತೆ , ಧರ್ಮವೂ ಸರಸ್ವತಿ ಕೈಗಳನ್ನ ನಾಲ್ಕು ಕೈಗಳಿಂದ ಚಿತ್ರಿಸಿದೆ. ನಾಲ್ಕು ಕೈಗಳು ನಾಲ್ಕು ಅಂಶವನ್ನು ಪ್ರತಿನಿಧಿಸುತ್ತದೆ.ಅವುಗಳೆಂದರೆ ಮನಸ್ಸು , ಜಾಗರೂಕತೆ , ಬುದ್ಧಿವಂತಿಕೆ , ಮತ್ತು ಅಹಂ ಇದರ ಜೊತೆಯಲ್ಲಿ ನಾಲ್ಕು ತೋಳುಗಳು ಹಿಂದೂ ಧರ್ಮ ಗ್ರಂಥಗಳಲ್ಲಿ ಮುಖ್ಯವಾದ ,ನಾಲ್ಕು ವೇದಗಳನ್ನು ಸಾಂಕೇತಿಸುತ್ತದೆ.

ಸರಸ್ವತಿ ದೇವಿಯು ತನ್ನನ್ನು ಎಂದಿಗೂ ಪ್ರಕಾಶಮಾನವಾದ ಬಣ್ಣಗಳಿಂದ ಅಲಂಕರಿಸಲಿಲ್ಲ . ಅವಳ ಬಿಳಿ ಸೀರೆ ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ . ತಾಯಿ ಸರಸ್ವತಿ ಶುದ್ಧ ಮತ್ತು ಭವ್ಯವಾದ ಪ್ರಕೃತಿಯ ಕಿರೀಟವನ್ನು ಧರಿಸಿದ್ದಾಳೆ . ಋಗ್ವೇದ ,ಯಜುರ್ವೇದ, ಸಾಮವೇದ, ಮತ್ತು ಅಥರ್ವಣ ವೇದ ಈಕೆಯ ಮಕ್ಕಳು . ತಾಯಿ ಸರಸ್ವತಿ ತ್ರಿಮೂರ್ತಿಗಳ ಭಾಗವಾಗಿದ್ದಾಳೆ .ಲಕ್ಷ್ಮಿ , ಸರಸ್ವತಿ, ಮತ್ತು ಪಾರ್ವತಿ .

ಈ ಮೂರು ರೂಪಗಳು ಬ್ರಹ್ಮ ,ವಿಷ್ಣು ಮತ್ತು ಶಿವನಿಗೆ ಜಗತ್ತನ್ನ ಸರಾಗವಾಗಿ ಸೃಷ್ಟಿಸಲು ಮತ್ತು ನಡೆಸಲು , ಸಹಾಯ ಮಾಡಿವೆ . ಇಂತಹ ತಾಯಿ ಸರಸ್ವತಿಯೇ ನಾಲಿಗೆ ಮೇಲೆ ಹಾಸೀನಳಾಗಿ ಇರುವ ಬೆಳಗಿನ 3 ಗಂಟೆಯ ಸಮಯ ಬಹಳ ಪ್ರಭಾವಶಾಲಿಯಾದ ಸಮಯವೇ ಸರಿ . ಈ ಸಮಯದಲ್ಲಿ ಎದ್ದು ಸ್ನಾನ ಮಾಡಿ ದೇಹ ಶುದ್ಧ ಮಾಡಿಕೊಳ್ಳಬೇಕು.

ಈ ಪ್ರಯೋಗ ಆರಂಭಿಸುವ ಮೊದಲು ಕೈಗಳನ್ನು , ಮುಖವನ್ನು , ಕಣ್ಣುಗಳನ್ನು ತಣ್ಣೀರಿನಿಂದ ಶುದ್ಧವಾಗಿ ತೊಳೆದುಕೊಳ್ಳಬೇಕು . ಮೂಗನ್ನು ,ಹಲ್ಲುಗಳನ್ನು , ನಾಲಿಗೆಯನ್ನು , ಶುದ್ಧ ಮಾಡಿಕೊಳ್ಳಬೇಕು .ಅದೇ ರೀತಿ ಪಾದಗಳನ್ನು ಶುಚಿ ಮಾಡಿಕೊಂಡು, ನೆಲದ ಮೇಲೆ ಉಣ್ಣೆಯ ಹಾಸನ ಹಾಕಿ ಕುಳಿತುಕೊಳ್ಳಬೇಕು . ಆದರೆ ಹೊಸ ಬಟ್ಟೆ ಆಗಿರಬೇಕು. ಕುಳಿತುಕೊಳ್ಳುವಾಗ ಬೆನ್ನು ಉರಿ ನೆಟ್ಟಗೆ ಇರಬೇಕು. ಬೆನ್ನು ಬಾಗಿರ ಬಾರದು .ಪ್ರಯೋಗ ಮುಗಿಯುವವರೆಗೂ ಬೆನ್ನು ನೇರವಾಗಿ ಇರಬೇಕು.

ನಂತರ ಒಂದು ದೀರ್ಘ ಶ್ವಾಸ ತೆಗೆದುಕೊಳ್ಳಬೇಕು. ನಂತರ ಉಸಿರು ಬಿಡಬೇಕು .ಇದರಿಂದ ಮನಸ್ಸು ಪ್ರಶಾಂತ ಆಗುತ್ತದೆ .ಪ್ರಯೋಗದ ಸಮಯದಲ್ಲಿ ಯಾವುದೇ ಚಿಂತೆ ,ದುಃಖ, ಒತ್ತಡ ,ನಿಮ್ಮ ಮನಸ್ಸಿನಲ್ಲಿ ಇರಬಾರದು . ನೀವು ಈಡೇರಿಸಿ ಕೊಳ್ಳಬೇಕಾದ ಆಸೆ ಏನೇನು ಅನ್ನುವುದನ್ನು ಬಿಟ್ಟು, ಬೇರೆ ಯಾವುದೇ ವಿಷಯ ನಿಮ್ಮ ಮನಸ್ಸಿನಲ್ಲಿ ಬರಬಾರದು .

ಈಗ ಕಣ್ಣು ಮುಚ್ಚಿ ನಿಮ್ಮ ಮನಸ್ಸಿನಲ್ಲಿರುವ ಆಸೆಗಳನ್ನು ಕಣ್ಣ ಮುಂದೆ ತಂದು ಹೇಳಬೇಕು. ಈ ಪ್ರಯೋಗದಲ್ಲಿ ಏಕಾಗ್ರತೆ ಬಹಳ ಮುಖ್ಯ . ನಿಮ್ಮ ಆಸೆಗಳ ಹೊರತಾಗಿ ಬೇರೆ ಯಾವುದೇ ವಿಷಯ ಮನಸ್ಸಿನಲ್ಲಿ ಬರಬಾರದು .ಈ ಹತ್ತು ನಿಮಿಷದಲ್ಲಿ ಕೇವಲ ನಿಮ್ಮ ಇಚ್ಛೆ ಬಯಕೆಗಳನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು .ನಿಮ್ಮ ಜೀವನದಲ್ಲಿ ಯಾವ ಯಾವ ಆಸೆಗಳು ಇದೆಯೋ ಏನೇನು ಕೆಲಸಗಳು ಕೈ ಗೂಡಬೇಕು ಅವುಗಳನ್ನ ನಿಮ್ಮ ಕಣ್ಣನ್ನು ಮುಚ್ಚಿ ಆಸೆಗಳನ್ನು ಕಣ್ಣ ಮುಂದೆ ತಂದು ಏಕಾಗ್ರತೆಯಿಂದ ಹೇಳಿಕೊಳ್ಳಬೇಕು .

ಆಸೆಗಳನ್ನು ಈಡೇರಿಸುವಂತೆ ಮನಸ್ಸಿನಲ್ಲಿ ಹೇಳಿಕೊಳ್ಳಿ .ನಿಮ್ಮ ಇಷ್ಟವಾದ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ .ಈ ಹತ್ತು ನಿಮಿಷಗಳ ಕಾಲ ಬೆನ್ನು ನೇರವಾಗಿ ಇರಬೇಕು. ಅದೇ ರೀತಿ ನಿಮ್ಮ ಪ್ರಯೋಗ ಆರಂಭಿಸುವ ಮೊದಲು ನಿಮ್ಮ ಪಕ್ಕದಲ್ಲಿ ಒಂದು ಲೋಟ ನೀರನ್ನು ಇಟ್ಟುಕೊಳ್ಳಬೇಕು. ನೀರು ತುಂಬ ಬಿಸಿಯೂ ಇರಬಾರದು, ತುಂಬಾ ತಂಪಾಗಿಯೂ ಇರಬಾರದು .ಸರಿಯಾಗಿ ಮೂರು ಗಂಟೆ 20 ನಿಮಿಷಕ್ಕೆ ಧ್ಯಾನ ಮುಗಿಸಿ,

ಹೇಗೆ ಕುಳಿತಿರುತ್ತೀರೋ ಅದೇ ಸ್ಥಿತಿಯಲ್ಲಿ ಕಣ್ಣು ಬಿಟ್ಟು ಈ ನೀರನ್ನ ಕುಡಿಯಿರಿ .ಈ ಪ್ರಯೋಗವನ್ನು ಅದೇ ಸಮಯಕ್ಕೆ ಪ್ರತಿ ದಿನ 21 ದಿವಸ ಮಾಡಬೇಕು. ಇದು ಯಾವುದೇ ತಂತ್ರ ಮಂತ್ರ ಪ್ರಯೋಗ ಅಲ್ಲ .ಕೇವಲ ನಿಮ್ಮ ಧ್ಯಾನದ ಪ್ರಯೋಗ ಅಷ್ಟೇ . ನಾವು ಹೇಳಿದ ರೀತಿಯಲ್ಲಿ ಅದೇ ಸಮಯಕ್ಕೆ ಪ್ರತಿದಿನ ಮಾಡಿದರೆ ,ನಿಮ್ಮ ಮನೋ ಕಾಮನೆಗಳು ಪೂರ್ತಿ ಆಗುವುದು ಖಚಿತ . ನೆನಪಿರಲಿ ನೀವು ಮಾಡುವ ಪ್ರಯೋಗವನ್ನು ಯಾರೂ ಕೂಡ ನೋಡಬಾರದು .

ಯಾರ ಜೊತೆಗೂ ಕುರಿತು ಇದರ ಬಗ್ಗೆ ಮಾತನಾಡಬಾರದು .ಪ್ರಯೋಗದ ಸಮಯದಲ್ಲಿ ನಿಮ್ಮ ಮುಖ ದಕ್ಷಿಣ ದಿಕ್ಕಿನ ಕಡೆ ಇರಬೇಕು. ಪೂರ್ಣವಾಗಿ ಈ ಪ್ರಯೋಗವನ್ನು ಪೂರ್ತಿ ಮಾಡಬೇಕು .ಈ ಪ್ರಯೋಗ ಸಫಲ ಆಗಬೇಕಾದರೆ ಏಕಾಗ್ರತೆ ಉಚ್ಚ ಮಟ್ಟದಲ್ಲೇ ಇರಬೇಕು . ಇಷ್ಟು ಮಾಡಿದಾಗ ಈ ಪ್ರಯೋಗ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ನೀಡುತ್ತದೆ. ಈ ಪ್ರಯೋಗದ ನಂತರ ನೀವು ಮಲಗಬಹುದು , ಅಥವಾ ದೈನಂದಿನ ಕೆಲಸಗಳನ್ನು ಮಾಡಬಹುದು .

ಪ್ರಯೋಗದಲ್ಲಿ ಗಮನ ಇಡಬೇಕಾದ ಒಂದು ಮುಖ್ಯ ಸಂಗತಿ ಎಂದರೆ, ಯಾವ ವ್ಯಕ್ತಿ ಜೀವನದಲ್ಲಿ ಕೇವಲ ಕಷ್ಟಗಳನ್ನು , ನಿರಾಸೆಯನ್ನು ಅನುಭವಿಸಿ ನಿರಾಶ್ರಿತ ನಾಗಿರುತ್ತಾನೆ ಇಂತಹ ವ್ಯಕ್ತಿಗಳು ತಮ್ಮ ಒಳ್ಳೆಯದಕ್ಕೆ ತಮ್ಮ ಇಚ್ಚೆಗಳ ಈಡೇರಿಕೆಗೆ ಈ ಪ್ರಯೋಗವನ್ನು ಮಾಡಬಹುದು .ಆದರೆ ಯಾರಿಗಾದರೂ ಕೆಡಕು ಮಾಡುವುದಕ್ಕೆ ಅಥವಾ ಕೆಟ್ಟ ಉದ್ದೇಶ ಇಟ್ಟುಕೊಂಡು ಈ ಪ್ರಯೋಗ ಮಾಡಬಾರದು .

ಹಾಗೆ ಮಾಡೋದೇ ಆದರೆ ನಿಮಗೆ ಫಲ ಕೊಡುವುದಿಲ್ಲ ಬದಲಾಗಿ ವಾಪಸ್ ತಿರುಗುತ್ತದೆ .ನಿಮ್ಮ ಹಾಗೂ ನಿಮ್ಮ ಆತ್ಮೀಯರ ಒಳಿತಿಗಾಗಿ ಒಳ್ಳೆಯ ಉದ್ದೇಶಕ್ಕೆ ಮಾತ್ರ ಈ ಪ್ರಯೋಗವನ್ನು ಮಾಡಬೇಕು .ಈ ಪ್ರಯೋಗವನ್ನು 21 ದಿವಸ ಮಾಡಿದ್ದೇ ಆಗಿದ್ದಲ್ಲಿ ಕೇಳಿದ್ದು ನಿಮಗೆ ಖಂಡಿತ ಸಿಗುತ್ತದೆ .ನಿಮ್ಮ ಆಸೆಗಳು ಖಂಡಿತ ನೆರವೇರುತ್ತದೆ.ಪ್ರತಿ ದಿನ ಈ ಒಂದು 10 ನಿಮಿಷದ ಸಮಯ ಅತ್ಯಂತ ಶಕ್ತಿ ಯುತವಾಗಿರುತ್ತದೆ .ಈ ಸಮಯದಲ್ಲಿ ನೀವು ಏನೇ ಕೋರಿದರು ನಿಮ್ಮ ಮನಸ್ಸಿನ ಕೋರಿಕೆಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ ಖಂಡಿತ ಕೋರಿಕೆಗಳು ಈಡೇರುತ್ತದೆ .ಎಂದು ಹೇಳಲಾಗಿದೆ .

Leave a Comment