ನಾವು ಈ ಲೇಖನದಲ್ಲಿ ಸ್ವಸ್ತಿಕ್ ಚಿತ್ರ ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ತಿಳಿಯೋಣ . ಸ್ವಸ್ತಿಕ ವನ್ನು ಎಲ್ಲಿ ಹಾಕಬೇಕು..? ಪ್ರಯೋಜನ ತಿಳಿದರೆ ಇಂದೇ ಹಾಕುವಿರಿ …. ! ಸನಾತನ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಅತ್ಯಂತ ಶುಭ ಮತ್ತು ಪವಿತ್ರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ . ಸ್ವಸ್ತಿಕ ಚಿಹ್ನೆಯನ್ನು ಮನೆಯಲ್ಲಿ ಹಾಕುವುದರಿಂದ , ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತೇ ..? ಸ್ವಸ್ತಿಕ ವನ್ನು ಮನೆಯ ಯಾವ ಸ್ಥಳಗಳಲ್ಲಿ ಹಾಕಿದರೆ ಶುಭ…? ಇಂದೇ ಸ್ವಸ್ತಿಕ ವನ್ನು ಈ ಸ್ಥಳಗಳಲ್ಲಿ ಹಾಕಿ ನೋಡಿ . ಸನಾತನ ಧರ್ಮ ವಾದ ಹಿಂದೂ ಧರ್ಮದಲ್ಲಿ ಸ್ವಸ್ತಿಕ ಸಂಕೇತವನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ .
ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ ಚಿಹ್ನೆಯನ್ನು ಕಾಣಬಹುದು . ಈ ಸ್ವಸ್ತಿಕ ಚಿಹ್ನೆಯನ್ನು ಗಣೇಶನ ರೂಪ ಎಂದು ಹೇಳಲಾಗುತ್ತದೆ . ಮತ್ತು ಈ ಶುಭ ಚಿಹ್ನೆ ಆರ್ಯದಿಂದ ಹುಟ್ಟಿಕೊಂಡಿತು . ಜ್ಯೋತಿಷ್ಯ ಮತ್ತು ಹಿಂದೂ ಧರ್ಮದಲ್ಲೂ ಸ್ವಸ್ತಿಕ ಚಿಹ್ನೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ . ಸ್ವಸ್ತಿಕ ಚಿಹ್ನೆಯನ್ನು ಎಲ್ಲಿ ಹಾಕಬೇಕು ….? ಸ್ವಸ್ತಿಕ ಚಿಹ್ನೆ ಹಾಕುವುದರ ಪ್ರಯೋಜನವೇನು…?
1 . ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ವನ್ನು ಬಿಡಿಸಿ . ಸ್ವಸ್ತಿಕ ವನ್ನು ಹಾಕುವಾಗ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯವಾದ ಅಂಶವೆಂದರೆ , ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕ ಚಿಹ್ನೆಗಳನ್ನು ಹಾಕಬೇಕು . ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ . ಮತ್ತು ಮನೆಯಲ್ಲಿ ವಾಸ್ತು ದೋಷಗಳನ್ನು ತೊಡೆದು ಹಾಕುತ್ತದೆ . ಆದರೆ ಮುಖ್ಯ ದ್ವಾರದಲ್ಲಿ ಹಾಕುವ ಸ್ವಸ್ತಿಕವು ಒಂಬತ್ತು ಬೆರಳುಗಳಷ್ಟು ಉದ್ದ ಮತ್ತು ಅಗಲವನ್ನು ಹೊಂದಿರಬೇಕು . ಹಾಗೂ ಸ್ವಸ್ತಿಕವು ಕೆಂಪು ಅಥವಾ ಸಿಂಧೂರ ಬಣ್ಣದಲ್ಲಿ ಇರಬೇಕು . ಮುಖ್ಯವಾಗಿ ಸ್ವಸ್ತಿಕವನ್ನು ಸಿಂಧೂರದಿಂದ ಹಾಕಿದರೆ ಶುಭದಾಯಕ .
2 . ಅಂಗಳದಲ್ಲಿ ಸ್ವಸ್ತಿಕ . ಅಂಗಳದ ಮಧ್ಯದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕುವುದರ ಮೂಲಕ ಶುಭ ಫಲಿತಾಂಶಗಳನ್ನು ಸಹ ಪಡೆಯಬಹುದು ಎಂದು ಹೇಳಲಾಗುತ್ತದೆ . ಅದೇ ರೀತಿ , ಮನೆಯ ಅಂಗಳದಲ್ಲಿ ಸಗಣಿಯಿಂದ ಸ್ವಸ್ತಿಕ ಚಿಹ್ನೆಯನ್ನು ಹಾಕಬೇಕು . ಇದರಿಂದ ಪೂರ್ವಜರ ಆಶೀರ್ವಾದವನ್ನು ಪಡೆದುಕೊಳ್ಳಬಹುದು . ಅಷ್ಟು ಮಾತ್ರವಲ್ಲ , ಮನೆಯ ಅಂಗಳದಲ್ಲಿ ಸಗಣಿಯಿಂದ ಸ್ವಸ್ತಿಕವನ್ನು ಬಿಡಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ . ಹಾಗೂ ಮನೆಯಲ್ಲಿನ ಋಣಾತ್ಮಕ ಶಕ್ತಿಗಳು ದೂರವಾಗುತ್ತದೆ .
3 . ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ . ಹೆಚ್ಚಾಗಿ ಸ್ವಸ್ತಿಕ ಚಿಹ್ನೆಯನ್ನು ಮನೆಯ ದೇವರ ಕೋಣೆಯಲ್ಲಿ ನೋಡಬಹುದು . ಮನೆಯ ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆ ಹಾಕುವುದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ . ದೇವರ ಕೋಣೆಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ ಹಾಗೆ ಇಡಬಾರದು . ಬದಲಾಗಿ ದೇವರ ಕೋಣೆಯಲ್ಲಿ ಬಿಡಿಸಿದ ಸ್ವಸ್ತಿಕ ಚಿಹ್ನೆಯ ಮೇಲೆ ದೇವರ ವಿಗ್ರಹವನ್ನು ಸ್ಥಾಪಿಸಬೇಕು . ಮತ್ತು ಆ ವಿಗ್ರಹವನ್ನು ಪ್ರತಿದಿನ ಪೂಜಿಸಬೇಕು . ಇದರಿಂದ ಮನೆಯಲ್ಲಿ ಎಂದಿಗೂ ಶಾಂತಿ , ಸಂತೋಷ , ನೆಮ್ಮದಿ ಮತ್ತು ಸಮೃದ್ಧಿಗೆ ಕೊರತೆ ಇರುವುದಿಲ್ಲ. ಮತ್ತು ಆ ಮನೆಯ ಶುಭದ ಸಂಕೇತವಾಗಿದೆ .
4 . ತಿಜೋರಿಯಲ್ಲಿ ಸ್ವಸ್ತಿಕ . ನಿಮ್ಮ ಹಣವನ್ನು ನೀವು ಇಟ್ಟುಕೊಳ್ಳುವ ವಾರ್ಡ್ರೋಬ್ , ತಿಜೋರಿ ಅಥವಾ ಹಣವನ್ನು ಇಟ್ಟುಕೊಳ್ಳುವ ಯಾವುದೇ ಸ್ಥಳದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಮಾಡಬೇಕು . ಇದು ಸಮೃದ್ಧಿಯನ್ನು ತರುವುದು ಮಾತ್ರವಲ್ಲ , ಯಾವುದೇ ರೀತಿ ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಮುಕ್ತ ಗೊಳಿಸುತ್ತದೆ . ವಿಶೇಷವಾಗಿ
ದೀಪಾವಳಿ ಹಬ್ಬದಂದು ಸ್ವಸ್ತಿಕ ಚಿಹ್ನೆಯನ್ನು ತಿಜೋರಿಯಲ್ಲಿ ಇಡಬೇಕು .
5 . ಹೊಸ್ತಿಲಿನ ಮಧ್ಯದಲ್ಲಿ ಸ್ವಸ್ತಿಕ ಬಿಡಿಸಿ . ಮನೆಯನ್ನು ಮುಖ್ಯ ಹೊಸ್ತಿಲಿನಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕುವ ಮೂಲಕ ಮನೆಯ ಹೊಸ್ತಿಲನ್ನು ಪೂಜಿಸಲಾಗುತ್ತದೆ . ಹೊಸ್ತಿಲಿನ ಮೇಲೆ ಸ್ವಸ್ತಿಕ ಹಾಕುವುದರಿಂದ , ಆ ಮನೆಯಲ್ಲಿ ಲಕ್ಷ್ಮಿ ದೇವಿಯು ಶಾಶ್ವತವಾಗಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಇದೆ . ಮುಂಜಾನೆ ಎದ್ದು , ಮನೆಯನ್ನು ಸ್ವಚ್ಛಗೊಳಿಸಿ , ಹೊಸ್ತಿಲಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ . ನಂತರ ಧೂಪ ಮತ್ತು ದೀಪಗಳಿಂದ ಹೊಸ್ತಿಲನ್ನು
ಪೂಜಿಸಿ . ಸ್ವಸ್ತಿಕ ಚಿಹ್ನೆಯನ್ನು ಮಾಡಿದ ನಂತರ , ಅದರ ಮೇಲೆ ಒಂದೆರೆಡು ಕಾಳು ಅಕ್ಷತೆಯನ್ನು ತಪ್ಪದೇ ಇಡಿ. ಇದರಿಂದ ನೀವು
ಲಕ್ಷ್ಮಿ ಯ ಆಶೀರ್ವಾದ ಪಡೆಯಬಹುದು . ಯಾಕೆಂದರೆ ಲಕ್ಷ್ಮೀ ದೇವಿಯು ಪ್ರತಿಯೊಂದು ಮನೆಯ ಹೊಸ್ತಿಲಿನಲ್ಲಿ ವಾಸವಾಗಿ ಇರುತ್ತಾಳೆ , ಎನ್ನುವ ನಂಬಿಕೆ ಇದೆ .
ಹೀಗೆ ನಾವು ಮೇಲೆ ಹೇಳಿದ ಸ್ಥಳಗಳಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹಾಕಿ ಎಂದು ಹೇಳಲಾಗಿದೆ .