ತಂದೆ ತಾಯಿಯಂದಿರಿಗೆ ವಿಶೇಷವಾದ ಸಲಹೆ ನಿಮ್ಮ ಮಕ್ಕಳ ಮದುವೆ ಮಾಡಬೇಡಿ ನಿಮ್ಮ ಮಕ್ಕಳು ಕಲೆಕ್ಟರ್, ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್ ಆಗದೇ ಇರಬಹುದು. ಆದರೆ ಅವರು ಗಂಡ, ಹೆಂಡತಿ, ಅಪ್ಪ ಅಮ್ಮ, ಸೊಸೆ ಮತ್ತು ಅಳಿಯ ಅಂತೂ ಖಂಡಿತವಾಗಿಯೂ ಆಗೆ ಆಗುತ್ತಾರೆ. ಆದ್ದರಿಂದ ಅವರಿಗೆ ಏನನ್ನಾದರೂ ಕಲಿಸಿ ಅಥವಾ ಬಿಡಿ ಆದರೆ ಅವರಿಗೆ ಒಂದು ಒಳ್ಳೆ ಕುಟುಂಬ ಹೇಗೆ ನಡಿಸಬೇಕೆಂದು ತಪ್ಪದೇ ಕಲಿಸಿ.
ನಾಳೆ ನಿಮ್ಮ ಮಗ ಮುಗ್ಧವಾದ ಹುಡುಗಿಯ ಬದುಕನ್ನು ನರಕ ಮಾಡಿದರೆ ಅಥವಾ ನಿಮ್ಮ ಮಗಳು ಒಬ್ಬ ಒಳ್ಳೆ ಹುಡುಗನ ಜೀವನವನ್ನು ನರಕ ಮಾಡಿದರೆ ನಿಮ್ಮನ್ನೇ ದ್ವೇಷಿಸಲಾಗುವುದು ಎಂಥ ಮಕ್ಕಳು, ಇವರ ತಂದೆ ತಾಯಿ ಒಳ್ಳೆ ಸಂಸ್ಕಾರ ಕಲಿಸಿ ಕೊಟ್ಟಿಲ ಅಂತ. ಆದ್ದರಿಂದ ಅವರು ಏನೇ ಆದ್ರೂ ಯಾವುದೇ ಕೆಲಸ ಮಾಡಿದರೂ ಕೂಡ ಮದುವೆಯ ನಂತರ ತಮ್ಮ ಜೀವನದಲ್ಲಿ ಖುಷಿಯಾಗಿ ಇರೋಕೆ ಸಾಧ್ಯವಿಲ್ಲ.
ಅದರಿಂದ ಅವರ ಮದುವೆ ಮಾಡಬೇಡಿ ಏನು ಪ್ರಯೋಜನ ಹೇಳಿ ಒಬ್ಬರ ತಂದೆ ತಾಯಿಯ ಮಗಳ ಭವಿಷ್ಯ ಹಾಳು ಮಾಡೋಕೆ ಅವರಿಗೆ ಯಾವ ಹಕ್ಕು ಇಲ್ಲ. ಅದೇ ತರಹ ಒಬ್ಬರ ತಂದೆ ತಾಯಿಯ ಮಗನ ಭವಿಷ್ಯ ಹಾಳು ಮಾಡೋಕೆ ನಿಮ್ಮ ಮಗಳಿಗೆ ಯಾವ ಹಕ್ಕೂ ಇಲ್ಲ.
ಕೆಲವರು ಮದುವೆ ಆಗಿಲಿ ಎಲ್ಲ ಸರಿ ಹೋಗುತ್ತದೆ ಸುಧಾರಣೆ ಆಗುತ್ತದೆ. ಜವಾಬ್ದಾರಿ ಬರುತ್ತದೆ ಅಂತ ಎಲ್ಲಾ ಹೇಳುತ್ತಾರೆ. ಆದರೇ ನೀವೇ ಹೇಳಿ ಅದು ಹೇಗೆ ಸಾಧ್ಯ ಅಂತ. ಮದುವೆ ಅಂದ್ರೆ ಎರಡು ಆತ್ಮಗಳು ಸೇರಿ ಒಂದೇ ಆತ್ಮ ಆಗುವುದು. ಎರಡು ಮನಸುಗಳು ಸೇರಿ ಒಂದೇ ಮನಸು ಆಗುವುದು.
ಎರಡು ಹೃದಯಗಳು ಸೇರಿ ಒಂದೇ ಹೃದಯ ಆಗುವುದು. ಎರಡು ಮನಸಿನ ಭಾವನೆಗಳು ಸೇರಿ ಒಂದೇ ಭಾವನೆ ಆಗುವುದು. ಎರಡು ಜೀವಿಗಳ ಕನಸುಗಳು ಸೇರಿ ಒಂದೇ ಕನಸಾಗುವುದು. ಎರಡು ಕಷ್ಟಗಳು ಸೇರಿ ಒಂದೇ ಕಷ್ಟವಾಗುವುದು. ಎರಡು ನೋವುಗಳು ಸೇರಿ ಒಂದೇ ನೋವು ಆಗುವುದು. ಇವೆಲ್ಲವೂ ಸೇರಿ ಒಂದು ಪವಿತ್ರವಾದ ಸಂಬಂಧ ಮುಖಾಂತರ ಮದುವೆ ಆಗುವುದು.