ತುಲಾ ರಾಶಿಯವರ ಗುಣಲಕ್ಷಣಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ತುಲಾ ರಾಶಿಯವರು ಇವರ ಜೊತೆ ಯಾರು ಇರುತ್ತಾರೋ ಅವರಿಗೆ ತುಂಬಾ ಹೊಂದಾಣಿಕೆಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ವಾತಾವರಣ ಶಾಂತ ರೀತಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಜೀವನವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಸಂಬಂಧಗಳನ್ನು ಹೇಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ಗೊತ್ತಿರುತ್ತದೆ.
ಇವರು ಇತರರು ತನ್ನ ಬಗ್ಗೆ ತಿಳಿದುಕೊಳ್ಳಬೇಕು ಅರ್ಥಮಾಡಿಕೊಳ್ಳಬೇಕೆಂದು ಇಷ್ಟಪಡುತ್ತಾರೆ. ತುಲಾರಾಶಿಯ ರಾಶಿಯ ಅಧಿಪತಿ ಶುಕ್ರಗ್ರಹವಾಗಿದೆ. ಶುಕ್ರಗ್ರಹವು ಯಾವ ರೀತಿ ಹೊಳೆಯುತ್ತದೆಯೊ ಅದೇ ರೀತಿ ಎಲ್ಲರೂ ನನ್ನನ್ನು ಇಷ್ಟಪಡಬೇಕು ಮತ್ತು ಗುರುತಿಸಬೇಕೆಂದು ಆಸೆ ಪಡುತ್ತಾರೆ. ಇವರ ನೆನಪಿನ ಶಕ್ತಿ ತುಂಬಾ ಚೆನ್ನಾಗಿರುತ್ತದೆ. ಯಾರಾದರೂ ಇವರನ್ನು ಹೊಗಳಿದರೇ ಇವರು ಅವರನ್ನು ಮರೆಯುವುದಿಲ್ಲ. ಜನರು ಒಳ್ಳೆಯವರೋ, ಕೆಟ್ಟವರೋ ಎಂದು ತಿಳಿದುಕೊಳ್ಳುತ್ತಾರೆ
ಮತ್ತು ಜನರನ್ನು ಬಹಳ ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಆಗಾಗಿ ಜನ ಬೇಗ ಇವರ ಹತ್ತಿರ ಬೆರೆಯುತ್ತಾರೆ. ಇವರಿಗೆ ಜೀವನದಲ್ಲಿ ಪ್ರೀತಿ ವಿಷಯ, ಹಣದ ವಿಷಯವಾಗಿದ್ದರೂ ಅದು ಕಡಿಮೆ ಎನಿಸಿದರೇ ಅದೇ ಕೊರಗಿನಲ್ಲಿ ಇರುತ್ತಾರೆ. ಏಕೆಂದರೆ ಜೀವನವನ್ನು ಸಮತೋಲನವಾಗಿಟ್ಟುಕೊಳ್ಳಲು ಇಷ್ಟಪಡುತ್ತಾರೆ. ಇವರು ಆಸೆಪಟ್ಟಿದ್ದು ಸುಲಭವಾಗಿ ಸಿಗಲಿ ಎಂಬುದಾಗಿರುತ್ತದೆ ಮತ್ತು ಕಷ್ಟಪಡಲು ತಯಾರು ಇರುವುದಿಲ್ಲ. ಇವರು ಶಾಂತ ಸ್ವಭಾವದವರನ್ನು ಇಷ್ಟಪಡುತ್ತಾರೆ.
ಇವರಿಗೆ ಒಳ್ಳೆಯ ಹವ್ಯಾಸಗಳು ಇರುತ್ತದೆ. ಒಳ್ಳೆಯ ಹೊಸ ಹೊಸ ಯೋಚನೆಗಳು ಬರುತ್ತದೆ ಮತ್ತು ಕ್ರಿಯೇಟಿವ್ ಆಗಿ ಇರುತ್ತಾರೆ. ಹೊಸ ಹೊಸ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಲ್ಲಿ ಇರುತ್ತಾರೆ. ತುಲಾರಾಶಿಯ ಅಧಿಪತಿ ಶುಕ್ರಗ್ರಹವಾಗಿರುವುದರಿಂದ ಇದು ಲವ್, ರಿಲೇಷನ್ ಶಿಪ್, ರೊಮ್ಯಾನ್ಸ್, ಶ್ರೀಮಂತಿಕೆಯ ಜೀವನವನ್ನು ಸೂಚಿಸುತ್ತದೆ. ಇವರಿಗೆ ಕಲೆಯಲ್ಲಿ ಆಸಕ್ತಿ ಇರುತ್ತದೆ. ಹೊಸ ಸಂಬಂಧವನ್ನು ಬೆಳೆಸಲು ಇಷ್ಟಪಡುತ್ತಾರೆ.
ತುಲಾ ರಾಶಿಯವರ ರಿಲೇಷನ್ ಶಿಪ್ ಆಸೆಗಳು ಎಲ್ಲವೂ ಬ್ಯಾಲೆನ್ಸ್ ಆಗಿ ಇರಬೇಕೆಂದು ಇಷ್ಟಪಡುತ್ತಾರೆ. ಶನಿಗ್ರಹಕ್ಕೆ ತುಲಾರಾಶಿ ತುಂಬಾ ಕಂಫರ್ಟ್ ಟಬಲ್ ಫೀಲ್ ಕೊಡುತ್ತದೆ ಮತ್ತು ತುಲಾರಾಶಿ ಸೊಸೈಟಿ, ಪಾರ್ಟ್ ನರ್ ಶಿಪ್ , ರಿಲೇಷನ್ ಶಿಪ್ ಬ್ಯುಜಿನೆಸ್, ಲಾ ಮತ್ತು ಜಸ್ಟೀಸ್ ಅನ್ನು ಸೂಚಿಸುತ್ತದೆ. ಆಗಾಗಿ ಶನಿ ಗ್ರಹವು ತುಲಾರಾಶಿಯಲ್ಲಿ ಪ್ರಭಾವ ಶಾಲಿಯಾಗಿ ಇರುತ್ತದೆ.
ತುಲಾರಾಶಿ ಏಳನೇ ಮನೆಯನ್ನು ಸೂಚಿಸುತ್ತದೆ. ಇದು ಸಂಗಾತಿ ಪಾರ್ಟ್ ನರ್ ಶಿಪ್, ರಿಲೇಷನ್ ಶಿಪ್ ಅನ್ನು ಸೂಚಿಸುತ್ತದೆ. ತುಲಾರಾಶಿ ಕಿಡ್ನಿ, ಲೋವರ್ ಬ್ಯಾಕ್ ಸೂಚಿಸುವುದರಿಂದ ಈ ಭಾಗದ ಸಮಸ್ಯೆ ಇದ್ದರೇ ಬಹಳ ಹೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ತುಲಾರಾಶಿಯವರಿಗೆ ಸಂತಾನದ ಸಮಸ್ಯೆ ಇರುತ್ತದೆ. ಕಫ, ಕೋಲ್ಡ್, ಉಸಿರಾಟದ ತೊಂದರೆ ಬರುತ್ತದೆ ಆಗಾಗಿ ಆರೋಗ್ಯದ ಕಡೆ ಕಾಳಜಿ ವಹಿಸಿ. ಕೆರಿಯರ್ ವಿಷಯಕ್ಕೆ ಬಂದರೆ ಟೀಂ ಬ್ಯುಲ್ಡರ್ ಆಗಿರುತ್ತಾರೆ. ಜನರ ಜೊತೆ ಒಳ್ಳೆಯ ರೀತಿಯ ರಿಲೇಷನ್ ಶಿಪ್ ಅನ್ನು ಇಟ್ಟುಕೊಂಡಿರುತ್ತಾರೆ ಮತ್ತು ಜನರಿಂದ ಕೆಲಸ ಮಾಡಿಸಿಕೊಳ್ಳುವುದು
ಈ ಎಲ್ಲಾ ವಿಷಯದ ಬಗ್ಗೆ ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ತುಲಾರಾಶಿಯವರು ತುಂಬಾ ಕ್ರಿಯೇಟಿವ್ ಆಗಿರುವುದರಿಂದ ಒಳ್ಳೇಯ ಆಲೋಚನೆಗಳು ನಿಮಗೆ ಬರುವುದರಿಂದ ನಿಮ್ಮ ಮೇಲಾಧಿಕಾರಿಯಿಂದ ಒಳ್ಳೆಯ ರಿಲೇಷನ್ ಇರುತ್ತದೆ. ಕಲೆ, ಮ್ಯೂಸಿಕ್ ಬಗ್ಗೆ ಆಸಕ್ತಿ ಇರುವುದರಿಂದ ಚೆನ್ನಾಗಿ ಆಗಿ ಬರುತ್ತದೆ. ನಿಮಗೆ ಬ್ಯೂಟಿ ಪ್ರಾಡಕ್ಟ್ ಜಾಬ್, ಫಿಲ್ಮ್ ಇಂಡಸ್ಟ್ರಿ ಈ ಫೀಲ್ಡ್ ಆಗಿ ಬರುತ್ತದೆ.
ನಿಮಗೆ ಬ್ಯುಜಿನೆಸ್ ತುಂಬಾ ಚೆನ್ನಾಗಿ ಆಗಿ ಬರುತ್ತದೆ. ಪಾರ್ಟ್ ನರ್ ಶಿಪ್ ಕೂಡ ಆಗಿಬರುತ್ತದೆ. ತುಲಾ ರಾಶಿಯವರು ಹಣಕ್ಕಿಂತ ಹೆಚ್ಚು ಲಗ್ಜುರಿ ಲೈಫ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ಹಣ ಬರುತ್ತದೆ ಆದರೇ ಅಷ್ಟೇ ಬೇಗ ಖರ್ಚಾಗುತ್ತದೆ. ಜನರ ದೃಷ್ಟಿಯಲ್ಲಿ ನಿಮ್ಮ ಹತ್ತಿರ ಹಣ ಇರುತ್ತದೆ ಎಂದು ಕೊಳ್ಳುತ್ತಾರೆ. ಬೇರೆಯವರ ವ್ಯಕ್ತಿತ್ವವನ್ನು ಬಹಳ ಬೇಗ ಕಂಡುಹಿಡಿಯುತ್ತೀರಿ. ಹಣವನ್ನು ಖರ್ಚು ಮಾಡುತ್ತೀರಿ ಆದ್ದರಿಂದ ಖರ್ಚು ಕಡಿಮೆ ಮಾಡಿದರೆ ಒಳ್ಳೆಯದು.