ವೃಷಭರಾಶಿಯವರ ಗುಣ ಲಕ್ಷಣಗಳ

0

ಈ ಲೇಖನದಲ್ಲಿ ವೃಷಭರಾಶಿಯವರ ಗುಣ ಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ವೃಷಭರಾಶಿಯವರು ತುಂಬಾ ತಾಳ್ಮೆಯನ್ನು ಹೊಂದಿರುವಂತಹವರು. ಜೀವನದಲ್ಲಿ ಏನಾನ್ನಾದರೂ ಸಾಧಿಸಲು ಬೇಕಾಗಿರುವ ತಾಳ್ಮೆ ಮತ್ತು ಶ್ರಮಪಟ್ಟು ಮಾಡುವ ಗುಣ ಇವರಲ್ಲಿರುತ್ತದೆ. ಮೇಷರಾಶಿಯವರು ಹೊಸ ಹೊಸ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ ಆದರೇ ವೃಷಭರಾಶಿಯವರು ಒಂದು ವಿಷಯದಲ್ಲಿ ಫೆಕ್ಷಿಬಲ್ ಆಗಿ ಇರಲು ಇಷ್ಟಪಡುತ್ತಾರೆ.

ವೃಷಭರಾಶಿಯವರು ಹಾರ್ಡ್ ವರ್ಕಿಂಗ್ ಆಗಿರುವುದರಿಂದ ಬೇರೆಯವರು ಇವರ ಮೇಲೆ ಅವಲಂಬಿತವಾಗಿರುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಕಂಪ್ಲೀಟ್ ಮಾಡುತ್ತಾರೆ. ಹಾಗಾಗಿ ಬೇರೆಯವರಿಗೆ ಇವರು ಕೆಲಸ ಮಾಡಿ ಮುಗಿಸುತ್ತಾರೆಂಬ ನಂಬಿಕೆಯಲ್ಲಿರುತ್ತಾರೆ. ಈ ರಾಶಿಯವರು ನೋಡಲು ಶಾಂತ ಸ್ವಭಾವ. ಇವರು ಕೋಪವನ್ನ ಯಾರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ. ಕೋಪ ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.

ಯಾರಾದರೂ ಇವರಿಗೆ ಚಾಲೆಂಜ್ ಮಾಡಿದರೇ ಇವರ ಕೋಪವು ಬಹಿರಂಗಗೊಳ್ಳುತ್ತದೆ. ಖರ್ಚಿನ ವಿಷಯಕ್ಕೆ ಬಂದರೇ ಇವರು ಬೇರೆಯವರಿಗೆ ಖರ್ಚು ಮಾಡಲು ನೂರು ಸಲ ಯೋಚನೆ ಮಾಡುತ್ತಾರೆ, ಏಕೆಂದರೆ ಇವರು ಉಳಿತಾಯದ ಮನೋಭಾವದವರಾಗಿರುತ್ತಾರೆ. ಅವರ ಅವಶ್ಯಕತೆಗೆ ತಕ್ಕಂತೆ ಖರ್ಚು ಮಾಡುತ್ತಾರೆ. ಇವರ ನೆಗೆಟಿವ್ ಗುಣ ಏನೆಂದರೆ ಅನುಮಾನ ಪಡುವುದು ಹೆಚ್ಚು. ಇವರ ಜೊತೆ ಯಾರಾದರೂ ತುಂಬಾ ಚೆನ್ನಾಗಿದ್ದರೇ ಅದರ ಬಗ್ಗೆ ಅನುಮಾನ ಪಡುತ್ತಾರೆ ಹೆಚ್ಚು ಅನುಮಾನ ಪಟ್ಟು ರಿಲೇಷನ್ ಶಿಪ್ ಅನ್ನು ಹಾಳುಮಾಡಿಕೊಳ್ಳಬೇಡಿ. ವೃಷಭರಾಶಿಯವರು ಅವರೇ ಮುಂದೆ ಹೋಗಿ ಕೆಲಸ ಮಾಡುವುದು ಕಡಿಮೆ.

ಬೇರೆಯವರು ಈ ಕೆಲಸ ಮಾಡು ಎಂದು ಅಡ್ವೈಸ್ ಮಾಡಿದರೇ ಆ ಕೆಲಸವನ್ನು ಕಂಪ್ಲೀಟ್ ಮಾಡಿ ಮುಗಿಸುತ್ತಾರೆ. ವೃಷಭರಾಶಿಯವರು ಪೃಥ್ವಿ ಸ್ವಭಾವ ಆದ್ದರಿಂದ ಇವರಿಗೆ ಸಹನೆ ತುಂಬಾ ಇರುತ್ತದೆ. ಇವರು ಕುಟುಂಬದ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಇವರ ಅಧಿಪತಿ ಗ್ರಹ ಶುಕ್ರ ಗ್ರಹವಾಗಿರುತ್ತದೆ. ಇದು ಲವ್, ಆರ್ಟ್, ರೊಮ್ಯಾನ್ಸ್ ಅನ್ನು ಸೂಚಿಸುತ್ತದೆ. ಇವರು ಕಲೆಯನ್ನು ಹೆಚ್ಚು ಇಷ್ಟಪಡುವವರು ಮತ್ತು ಅವರಿಗೆ ಆ ಟ್ಯಾಲೆಂಟ್ ಕೂಡ ಇರುತ್ತದೆ.

ಇವರು ಇವರು ಮತ್ತು ಇವರ ಫ್ಯಾಮಿಲಿಗೆ ಹೆಚ್ಚು ಆಸಕ್ತಿ ತೋರಿಸುತ್ತಾರೆ ಮತ್ತು ರುಚಿರುಚಿಯಾದ ಅಡುಗೆ ಮಾಡಲು ಆಸಕ್ತಿ ತೋರಿಸುತ್ತಾರೆ. ವೃಷಭರಾಶಿಯು ಗಂಟಲನ್ನು ಸೂಚಿಸುತ್ತದೆ ಆದ್ದರಿಂದ ಇವರ ಧ್ವನಿಯು ಮಧುರವಾಗಿರುತ್ತದೆ. ಇವರಿಗೆ ಶೀತ, ಕಫ, ಬೇಗ ಕಂಡುಬರುತ್ತದೆ. ಕೋಲ್ಡ್ ಸಮಸ್ಯೆ ಇರುವುದರಿಂದ ಇವರಲ್ಲಿ ಸೋಮಾರಿತನ ತುಂಬಾ ಕಂಡುಬರುತ್ತದೆ. ಕೋಲ್ಡ್ ಸಮಸ್ಯೆ ಇರುವುದರಿಂದ ಕೇರ್ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಕಿವಿಯನ್ನು ಆದಷ್ಟೂ ಶೀತದ ವಾತಾವರಣದಲ್ಲಿ ಮುಚ್ಚಿಕೊಳ್ಳಿ ಇದರಿಂದ ಕೋಲ್ಡ್ ನಿಂದ ತಪ್ಪಿಸಿಕೊಳ್ಳಬಹುದು.

ಪ್ರೀತಿಯನ್ನು ಹೇಗೆ ಪಡೆಯಬೇಕೆನ್ನುವುದು ಇವರಿಗೆ ಗೊತ್ತಿರುತ್ತದೆ. ಫ್ಯಾಮಿಲಿ ಬಗ್ಗೆ ತುಂಬಾ ಕೇರಿಂಗ್ ಇರುತ್ತದೆ ಮತ್ತು ಯಾವ ರೀತಿ ಕುಟುಂಬವನ್ನು ನಡೆಸಿಕೊಂಡು ಹೋಗಬೇಕು ಎನ್ನುವುದು ಇವರಿಗೆ ತಿಳಿದಿರುತ್ತದೆ. ಇವರು ಹಾರ್ಡ್ ವರ್ಕ್ ಆಗಿರುವುದರಿಂದ ಇವರ ಕೆರಿಯರ್ ಚೆನ್ನಾಗಿ ಇರುತ್ತದೆ. ಇವರಿಗೆ ಸಿಂಗಿಂಗ್, ಮ್ಯೂಸಿಕ್, ಫೋಟೋಗ್ರಾಫಿ, ಮೀಡಿಯಾ ಈ ಕ್ಷೇತ್ರ ಚೆನ್ನಾಗಿ ಆಗಿ ಬರುತ್ತದೆ. ಹಾಗೆಯೇ ಫುಡ್ ರಿಲೇಟೆಡ್ ಬ್ಯುಜಿನೆಸ್ ಆಗಿ ಬರುತ್ತದೆ.

ಹಣಕಾಸಿನ ಬಗ್ಗೆ ಹೇಳುವುದಾದರೇ ಹಣವನ್ನು ಕೂಡಿ ಇಡಲು ಇಷ್ಟಪಡುತ್ತಾರೆ ಮತ್ತು ಹಣವನ್ನು ಹೇಗೆ ಖರ್ಚು ಮಾಡಬೇಕೆನ್ನುವುದು ಇವರಿಗೆ ತಿಳಿದಿರುತ್ತದೆ. ಈ ರಾಶಿಯವರ ಅಧಿಪತಿ ಶುಕ್ರನಾಗಿರುವುದರಿಂದ ಯಾವ ರೀತಿಯಿಂದಾದರೂ ಹಣವು ಬರುತ್ತದೆ. ನಿಮ್ಮಲ್ಲಿ ಎಲ್ಲಾ ರೀತಿಯ ಪಾಸಿಟಿವ್ ಗುಣವಿದ್ದರೂ ನಿಮ್ಮಲ್ಲಿರುವ ಅನುಮಾನ ಪಡುವ ಗುಣ ಮತ್ತು ಹೊಟ್ಟೆಕಿಚ್ಚಿನ ಬುದ್ದಿಯಿಂದಾಗಿ ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳು ಬರುತ್ತವೆ ಆದಷ್ಟೂ ಇವುಗಳನ್ನು ಕಡಿಮೆ ಮಾಡಿಕೊಂಡಿದ್ದೇ ಆದರೇ ನಿಮ್ಮಂತಹ ಒಳ್ಳೆಯ ವ್ಯಕ್ತಿಗಳು ಮತ್ತೊಬ್ಬರೂ ಯಾರು ಇಲ್ಲವೆಂದರೇ ತಪ್ಪಾಗಲಾರದು.

Leave A Reply

Your email address will not be published.