ನಾವು ಈ ಲೇಖನದಲ್ಲಿ ವೃಷಭ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ವೃಷಭ ರಾಶಿಯವರ ಲಾಂಛನವು ಎತ್ತು ಆಗಿರುತ್ತದೆ .ರಾಶಾಧಿಪತಿ ಶುಕ್ರನಾಗಿರುತ್ತಾನೆ .ಭೂಮಿ ತತ್ವದ ರಾಶಿ ಆಗಿರುತ್ತದೆ. ದಕ್ಷಿಣ ದಿಕ್ಕಿನ ರಾಶಿಯಾಗಿದ್ದು ಸ್ತ್ರೀ ಲಿಂಗವಾಗಿರುತ್ತದೆ. ಸೌಮ್ಯ ಸ್ವಭಾವದ ರಾಶಿ ಆಗಿರುತ್ತದೆ. ಅದೃಷ್ಟದ ಬಣ್ಣ ನೀಲಿ ಮತ್ತು ಬಿಳಿಯಾಗಿರುತ್ತದೆ .ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನಗಳಾಗಿರುತ್ತದೆ . ಅದೃಷ್ಟದ ದೇವತೆಯು ಶ್ರೀ ಮಹಾಲಕ್ಷ್ಮಿ ತಾಯಿಯಾಗಿರುತ್ತಾಳೆ.
ಅದೃಷ್ಟದ ಸಂಖ್ಯೆ ಆರು ಮತ್ತು ಎಂಟು ಆಗಿರುತ್ತದೆ . ಅದೃಷ್ಟದ ದಿನಗಳು 6 ,15 , 24 ಆಗಿರುತ್ತದೆ . ಮಕರ ಮತ್ತು ಕುಂಭ ರಾಶಿಗಳು ಮಿತ್ರ ರಾಶಿಗಳಾಗಿರುತ್ತಾರೆ. ಸಿಂಹ , ಧನುಸ್ಸು , ಮೀನಾ ರಾಶಿಗಳು ಶತ್ರು ರಾಶಿಗಳಾಗಿರುತ್ತದೆ. ವೃಷಭ ರಾಶಿಯ ವ್ಯಕ್ತಿತ್ವದವರು ತುಂಬಾ ದಯಾಮಯಿಗಳಾಗಿರುತ್ತಾರೆ. ಕಷ್ಟಕ್ಕೆ ಹೆಚ್ಚು ಕರಗುತ್ತಾರೆ ಬೇರೆಯವರಿಗೆ ಸಹಾಯ ಮಾಡುವ ಮನಸ್ಥಿತಿಯಲ್ಲಿ ಇರುತ್ತಾರೆ.
ಪುರುಷರೇ ಆಗಿರಲಿ ಸ್ತ್ರೀಯರೇ ಆಗಿರಲಿ ಬೇರೆಯವರ ಕಷ್ಟಕ್ಕೆ ತುಂಬಾ ಮರುಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಮೃದು ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ . ವೃಷಭ ರಾಶಿಯವರು ಐಶಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಮತ್ತು ಆಭರಣಪ್ರಿಯರಾಗಿರುತ್ತಾರೆ . ಈ ತಿಂಗಳಿನಲ್ಲಿ ನಿಮಗೆ ಮನಸ್ಸಿನಲ್ಲಿ ಭಯ ಕಾಡುತ್ತಿರುತ್ತದೆ. ಮನಸ್ಸಿನಲ್ಲಿ ತೊಳಲಾಟಗಳು ಹೆಚ್ಚಾಗುತ್ತದೆ ಹಣಕಾಸಿನ ಪರಿಸ್ಥಿತಿ ಸರಿ ಹೋಗಬಹುದಾ ಅಥವಾ ಸಂಬಂಧಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ ಎಂದು ನಾನಾ ರೀತಿಯ ಯೋಚನೆಗಳನ್ನು ಮಾಡುತ್ತಿರುತ್ತೀರಾ. ಬಹಳಷ್ಟು ಪ್ರಶ್ನೆಗಳು
ನಿಮ್ಮ ತಲೆಯಲ್ಲಿ ಓಡುತ್ತಿರುತ್ತದೆ. ಆದರೆ ನೀವು ಚಿಂತೆ ಮಾಡದೆ ದೃಢ ನಿರ್ಧಾರವನ್ನು ಕೈಗೊಂಡು ಹಠದಿಂದ ಮುನ್ನುಗ್ಗಿದರೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. “ಧೈರ್ಯಂ ಸರ್ವತ್ರ ಸಾಧನಂ “ಎಂಬ ನುಡಿಯನ್ನು ಗಮನದಲ್ಲಿಟ್ಟುಕೊಳ್ಳಿ. ಒಳ್ಳೆಯ ಆದಾಯವಿದ್ದರೂ ಸಹ ಖರ್ಚು ಹೆಚ್ಚಿಗೆ ಇರುತ್ತದೆ . ಹಣಕಾಸಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಹಣಕಾಸಿನ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ಖಂಡಿತವಾಗಿಯೂ ಒಳ್ಳೆಯ ಫಲಗಳು ಲಾಭಗಳು ನಿಮಗೆ ದೊರಕುತ್ತದೆ.
ಹಣಕಾಸಿನ ವಿಚಾರದಲ್ಲಿ ಏರುಪೇರುಗಳು ಮತ್ತು ಮಾನಸಿಕ ಒತ್ತಡಗಳು ಉಂಟಾಗುತ್ತದೆ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳು ತೋರಿಕೆಗೆ ಅಧ್ಯಯನ ಮಾಡದೆ ಒಳ್ಳೆಯ ಮನಸ್ಥಿತಿಯಿಂದ ದೃಢ ವಿಶ್ವಾಸದಿಂದ ಅಧ್ಯಯನ ಮಾಡಿದರೆ ಮಾತ್ರ ನಿಮಗೆ ಯಶಸ್ಸು ನಿಮ್ಮದಾಗುತ್ತದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕು . ಮದುವೆಯ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಅಷ್ಟೇನೂ ಫಲಗಳು ದೊರಕುವುದಿಲ್ಲ ಆದರೆ ನಿಮ್ಮ ನಿರಂತರ ಪ್ರಯತ್ನ ವಿರಲಿ.
ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ ಮತ್ತು ಪಾಲುದಾರಿಕೆಯ ವ್ಯವಹಾರವನ್ನು ನೀವು ಮಾಡುವುದನ್ನೇ ನಿಲ್ಲಿಸಿ ನಿಮಗೆ ಇದು ಅಷ್ಟೊಂದು ಅನುಕೂಲವನ್ನು ಮಾಡಿ ಕೊಡುವುದಿಲ್ಲ. ನೀವು ಪ್ರಯತ್ನವನ್ನು ಮಾಡಿದರೆ ಸಾಲದಿಂದ ಹೊರಗಡೆ ಬರಲು ಅನುಕೂಲವಾಗುತ್ತದೆ. ವಿವಾಹಿತರಿಗೆ ಸಣ್ಣ ಪುಟ್ಟ ವಿಚಾರಕ್ಕೆ ಗೊಂದಲಗಳಿರುತ್ತದೆ . ಪತಿ ಮತ್ತು ಪತ್ನಿಯರಲ್ಲಿ ದಾಂಪತ್ಯ ಜೀವನದಲ್ಲಿ ಸಂಬಂಧಿಕರಲ್ಲಿ ಮಾನಸಿಕ ಒತ್ತಡಗಳು ಉಂಟಾಗುತ್ತದೆ ಅದನ್ನು ಶಾಂತವಾಗಿ ನಿಭಾಯಿಸಿಕೊಂಡು ಹೊರಗಡೆ ಬನ್ನಿ, ಎಲ್ಲ ಸಮಸ್ಯೆಗಳು ದೂರವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಷ್ಟೇ ಕಷ್ಟಪಟ್ಟರು ತೊಂದರೆ ಏನು ಇರುವುದಿಲ್ಲ
ನೀವು ದುಡಿದಿರುವಂತಹ ಶ್ರಮಕ್ಕೆ ಫಲ ಇದ್ದೇ ಇರುತ್ತದೆ . ಇದರ ಬಗ್ಗೆ ಹೆಚ್ಚಿಗೆ ಚಿಂತೆ ಮಾಡಬೇಡಿ. ದುಡಿದಿದ್ದನ್ನು ಉಳಿಸಿಕೊಂಡು ಹೋಗುವಂತಹ ಫಲವೂ ಈ ತಿಂಗಳಿನಲ್ಲಿ ನಿಮಗೆ ಸಿಗುತ್ತದೆ. ಸರಕಾರಿ ಮತ್ತು ಅರೆ ಸರ್ಕಾರಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಒತ್ತಡವು ಹೆಚ್ಚಿಗೆ ಯಾಗುತ್ತದೆ. ಗೊಂದಲ ಮತ್ತು ಸವಾಲುಗಳು ಏರ್ಪಡುತ್ತದೆ. ಅದನ್ನು ಸಮಾಧಾನದಿಂದ ನಿರ್ವಹಿಸಿಕೊಳ್ಳಬೇಕಾಗುತ್ತದೆ.
ಪಾಲುದಾರಿಕೆಯಲ್ಲಿ ಲಾಭಾಂಶ ಕಡಿಮೆ ಇರುತ್ತದೆ . ವಿದೇಶದಲ್ಲಿ ಉದ್ಯೋಗ ಮಾಡುವವರಿಗೆ ಕೆಲವೊಂದು ವಿವಾದಗಳು ತಲೆದೋರುವ ಸನ್ನಿವೇಶವು ಉಂಟಾಗುತ್ತದೆ. ವಿದೇಶದಲ್ಲಿರುವವರು ಹೊರ ರಾಜ್ಯದಲ್ಲಿರುವವರು ಮನೆ ಬಿಟ್ಟು ಕೆಲಸ ಮಾಡುವಂಥವರು ಯಾರೊಂದಿಗೂ ಸಹ ಶತ್ರುತ್ವ ಮತ್ತು ದ್ವೇಷವನ್ನು ಇಟ್ಟುಕೊಳ್ಳಬೇಡಿ ಆದಷ್ಟು ಕಿರಿಕಿರಿಯಿಂದ ದೂರ ಉಳಿದುಕೊಳ್ಳಿ . ತಾಳ್ಮೆಯಿಂದ ವ್ಯವಹರಿಸಿ. ಔಷಧಿ ತಯಾರಿಕೆಯಲ್ಲಿ ,ವಿತರಣೆಯಲ್ಲಿ ಮಂದಗತಿಯಲ್ಲಿದ್ದರೂ ಸಹ ಅದಕ್ಕೆ ವೇಗವನ್ನು ಕೊಡುವ ಪ್ರಯತ್ನವನ್ನು ಮಾಡಿ.
ಇದರಿಂದ ಒಳ್ಳೆಯ ಲಾಭ ಮತ್ತು ಅದ್ಭುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಕೀಲರಾದರೆ ಕೆಲವೊಂದು ಸಂದರ್ಭಗಳಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವೈದ್ಯಕೀಯ ರಂಗದಲ್ಲಿರುವವರಿಗೆ ಬಹಳಷ್ಟು ಒಳ್ಳೆಯ ಆದಾಯ ದೊರಕುತ್ತದೆ. ವ್ಯಾಪಾರಸ್ಥರು ಹೆಚ್ಚಿಗೆ ಲಾಭಾಂಶವನ್ನು ಗಳಿಸಬಹುದು . ಗೃಹಿಣಿಯರಲ್ಲಿ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕಲಾವಿದರುಗಳು ಹೆಚ್ಚಿನ ಪ್ರಯತ್ನಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ವಿಶೇಷವಾಗಿ ರಾಜಕಾರಣಿಗಳು ಇರುವಂತಹ ಸ್ಥಾನಮಾನಗಳನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ.
ಇನ್ನು ಹೆಚ್ಚಿಗೆ ಸ್ಥಾನಮಾನಕ್ಕೆ ಆಸೆಪಟ್ಟುಕೊಳ್ಳಲು ಹೋಗಬೇಡಿ. ಇರುವಂತಹ ಸ್ಥಾನಮಾನವನ್ನು ಉಳಿಸಿಕೊಂಡು ನಿಮ್ಮ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸಿಕೊಂಡು ಹೋಗಬೇಕಾಗುತ್ತದೆ. ಇದರಿಂದ ಮುಂದೆ ಬರುವ ದಿನಗಳಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತದೆ. ವೃಷಭ ರಾಶಿಯವರು ಈ ತಿಂಗಳಿನಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂದರೆ ಶ್ರೀ ದತ್ತಾತ್ರೇಯ ಸ್ವಾಮಿಯ ಆರಾಧನೆಯನ್ನು ಮಾಡಿಕೊಳ್ಳಿ. ದತ್ತಾತ್ರೇಯ ಸ್ವಾಮಿ ಸ್ತೋತ್ರವನ್ನು ಪ್ರಯತ್ನ ಪಠಣೆಯ ಮಾಡಿಕೊಳ್ಳಿ. ಮನೆದೇವರ ಪ್ರಾರ್ಥನೆಯನ್ನು ಅಂದರೆ ಕುಲದೇವತೆಯ ಪ್ರಾರ್ಥನೆಯನ್ನು ಮಾಡಿಕೊಳ್ಳಿ ದೈವ ಕೃಪೆಗೆ ಪಾತ್ರರಾಗಿ. ದೈವ ಕೃಪೆಗೆ ಪಾತ್ರರಾದರೇ ನೀವು ಮಾಡುವಂತಹ ಸಕಲ ಕೆಲಸ ಕಾರ್ಯಗಳಲ್ಲಿಯೂ ಸಹ ಜಯ ಲಭಿಸುತ್ತದೆ.