ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಯುಗಾದಿಯ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯವರಿಗೆ ಗುರುವಿನ ಅನುಗ್ರಹವು ತುಂಬಾ ಚೆನ್ನಾಗಿರುತ್ತದೆ . ಗುರುವು 7ನೇ ಮನೆಯಲ್ಲಿ ಬರುತ್ತಾರೆ. ನಿಮಗೆ ಉತ್ತಮವಾದ ಫಲ ಕಂಡು ಬರುತ್ತದೆ . ಸಂಪೂರ್ಣವಾದ ಗುರು ಬಲವಿರುತ್ತದೆ. ನಿಮಗೆ ಎಲ್ಲಾ ರೀತಿಯಿಂದಲೂ ಶುಭ ಫಲವನ್ನೇ ಕೊಡುತ್ತಾನೆ. ಗುರುವು ಶುಭ ಪ್ರದನಾಗಿರುವುದರಿಂದ ಪ್ರಾಪಂಚಿಕ ಜೀವನದಲ್ಲಿ ನಿಮಗೆ ಶುಭ ಫಲಗಳು ದೊರಕುತ್ತದೆ.
ಪತಿ-ಪತ್ನಿಯರಲ್ಲಿ ಪ್ರೀತಿ ವಿಶ್ವಾಸವಿರುತ್ತದೆ. ಪ್ರೇಮಿಗಳ ಮಧ್ಯೆ ಒಳ್ಳೆಯ ಬಾಂಧವ್ಯವಿರುತ್ತದೆ. ಮನೆಯಲ್ಲಿ ಒಳ್ಳೆಯ ವಾತಾವರಣ ನೆಲೆಸುತ್ತದೆ. ದೈಹಿಕ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕಂಡುಬರುತ್ತದೆ. ಮಾನಸಿಕ ಆರೋಗ್ಯವೂ ಸಹ ಕಂಡುಬರುತ್ತದೆ. ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲವು ಮತ್ತು ನಿಮ್ಮಲ್ಲಿ ಇರುತ್ತದೆ. ನೂತನ ವಾಹನಗಳ ಖರೀದಿ ಬೆಲೆಬಾಳುವ ವಸ್ತ್ರಾಭರಣಗಳ ಖರೀದಿಯ ಯೋಗವು ಇರುತ್ತದೆ. ಬಂಧು ಬಾಂಧವರೊಡನೆ ಸಂತೋಷದಿಂದ ಇರುತ್ತೀರಾ .
ಬೇರೆ ಜನರೊಡನೆ ಮತ್ತು ಸಜ್ಜನರೊಡನೆ ಪ್ರೀತಿ ವಿಶ್ವಾಸ ಬಾಂಧವ್ಯಗಳು ನೆಲೆಸುತ್ತದೆ. ಸೇವಕ ವರ್ಗದವರಿಂದ , ಮತ್ತು ಹಿತೈಷಿಗಳಿಂದ ಉತ್ತಮ ಧನ ಸಂಪಾದನೆಯಾಗುತ್ತದೆ. ಪೂಜ್ಯರು ಅಂದರೆ ಸಾಧು ಸಂತರ ದರ್ಶನವಾಗುತ್ತದೆ. ಇದರಿಂದ ನಿಮ್ಮ ಮನಸ್ಸಿಗೆ ವಿಪರೀತ ನೆಮ್ಮದಿ ನೆಲೆಸುತ್ತದೆ. ಪುಣ್ಯ ಕ್ಷೇತ್ರಗಳ ದರ್ಶನ ಪ್ರಾಪ್ತಿಯಾಗುತ್ತದೆ. ಸಾರ್ವಜನಿಕ ಗೌರವಗಳಿಗೆ ಪಾತ್ರರಾಗುತ್ತೀರಾ . ವೃಶ್ಚಿಕ ರಾಶಿಯವರ ವ್ಯಕ್ತಿತ್ವವೆಂದರೆ, ಬೇರೆಯವರಿಗೆ ಸಹಾಯ ಮಾಡುವುದೇ ಆಗಿರುತ್ತದೆ.
ಸಾರ್ವಜನಿಕ ವಲಯದಲ್ಲಿ ನಿಮಗೆ ಒಳ್ಳೆಯ ಮಾನ ಮತ್ತು ಮನ್ನಣೆಗಳು ದೊರಕುತ್ತದೆ. ಸರ್ಕಾರಿ ನೌಕರರಿಂದ ಉತ್ತಮವಾದ ಜನಪ್ರಿಯವಾಗುತ್ತದೆ . ಶನಿದೇವನು ವರ್ಷ ದ ಆರಂಭದಿಂದ ವರ್ಷದ ಅಂತ್ಯದವರೆಗೂ , ನಾಲ್ಕನೇ ಮನೆಯಲ್ಲಿ ಶನಿ ಇರುತ್ತಾನೆ. ಅರ್ಧಾಷ್ಟಮ ಶನಿ ಎಂದು ಕರೆಯಬಹುದು .ಅರ್ಧ ಅಷ್ಟಮ ಶನಿ ಆಗಿರುವುದರಿಂದ ಕೆಲವೊಂದು ಎಚ್ಚರಿಕೆಗಳನ್ನು ನೀವು ಪಾಲಿಸಬೇಕಾಗುತ್ತದೆ ಬಂದಿರುವ ಧನ ಸಂಪತ್ತನ್ನು ಉಳಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ . ವಿಪರೀತ ಖರ್ಚು ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.
ಲೇವಾದೇವಿ ವ್ಯವಹಾರವನ್ನು ಮಾಡಬೇಕೆಂದರೆ ಸ್ವಲ್ಪ ನಂಬಿಕೆಯ ಅಗತ್ಯವಿದೆ. ಮಾಡುವ ಕೆಲಸದಲ್ಲಿ ಸ್ವಲ್ಪ ಪರಿಣಾಮಗಳು ಇರುತ್ತದೆ. ಶನಿದೇವನ ಪ್ರಭಾವದಿಂದ ಇದರಿಂದ ನೀವು ಸ್ವಲ್ಪ ಎಚ್ಚರಿಕೆಯನ್ನು, ತೆಗೆದುಕೊಳ್ಳಬೇಕಾಗುತ್ತದೆ. ಶತ್ರುಗಳ ಬಾದೆಯು ಹೆಚ್ಚಾಗುತ್ತದೆ. ಜನಗಳ ಜೊತೆಯಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಡಬೇಕು. ಸಿಟ್ಟಿನ ಭರದಲ್ಲಿ ಆತುರವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿಚಾರ ಮಾಡಿ ಬಹಳ ಜಾಣ್ಮೆಯಿಂದ ಕೆಲಸಗಳನ್ನು ನಿರ್ವಹಿಸಿ.
ಹೂಡಿಕೆ ಮಾಡುವಾಗ ಸ್ವಲ್ಪ ನಿಗಾ ವಹಿಸಬೇಕು .ಕೋರ್ಟು ಕಚೇರಿಯ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಿ. ಸಾರ್ವಜನಿಕ ವಲಯಗಳಲ್ಲಿ ಏರಿಳಿತಗಳು ಇರುತ್ತದೆ .ಇದನ್ನು ಎಚ್ಚರಿಕೆಯಿಂದ ನಿರ್ವಹಿಸಿ. ವಿಶೇಷವಾಗಿ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರಿದಾರರಿಗೆ ಪ್ರಗತಿಯ ಯೋಗವಿದೆ. ಗುರುವಿನಿಂದ ಒಳ್ಳೆಯ ಫಲವು ಲಭಿಸುವುದು. ಹಿಂದೆ ಉಳಿದಿರುವ ಕೆಲಸಗಳೆಲ್ಲವೂ ಪೂರ್ಣಗೊಳ್ಳುತ್ತದೆ .ಜೊತೆಗೆ ಬಡ್ತಿ ದೊರೆಯುತ್ತದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಾ. ಎಲ್ಲರಿಂದ ಗೌರವಕ್ಕೆ ಪಾತ್ರರಾಗುತ್ತೀರಾ.
ಸೇವಕ ವರ್ಗದವರಿಂದ ಲಾಭವೂ ಸಹ ಆಗುತ್ತದೆ. ಇದು ಗುರು ದೇವನಿಂದ ನಿಮಗೆ ಸಿಗುತ್ತದೆ. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರಿಗೆ , ಮತ್ತು ಉದ್ಯೋಗದಲ್ಲಿರುವವರಿಗೆ, ಉತ್ತಮ ಧನ ಲಾಭವಿರುತ್ತದೆ. ಖರ್ಚಿಗೆ ಕಡಿವಾಣವನ್ನು ಹಾಕಿ. ಸಮಯಕ್ಕೆ ಅನುಸಾರವಾಗಿ ವ್ಯಾಪಾರಸ್ಥರು ಬದಲಾವಣೆಯನ್ನು ತಂದುಕೊಳ್ಳಿ. ಇದರಿಂದ ಅಧಿಕ ಲಾಭವು ನಿಮಗೆ ದೊರಕುತ್ತದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಂಭವಗಳುಂಟು .ಇದರಿಂದ ನೀವು ಎಚ್ಚರದಿಂದ ಇರಬೇಕಾಗುತ್ತದೆ.
ಕೃಷಿಕರಿಗೆ ಶ್ರಮಪಟ್ಟು ಕೆಲಸ ಮಾಡಿದರೆ ಒಳ್ಳೆಯ ಧನ ಲಾಭವಾಗುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ , ಪದವೀಧರರಿಗೆ, ಶ್ರಮವನ್ನು ವಹಿಸಿದರೆ ನಿಮಗೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಇದರಿಂದ ಹೆಚ್ಚಿಗೆ ಅಂಕವು ಸಹ ನಿಮಗೆ ದೊರೆಯುತ್ತದೆ. ವಿದ್ಯಾರ್ಥಿಗಳು ಅಂದುಕೊಂಡ ಅಂತಹ ಗುರಿಯನ್ನು ಸಹ ತಲುಪಬಹುದು. ದೂರವಾಣಿಯ ಬಳಕೆಯನ್ನು ಕಡಿಮೆ ಮಾಡಿಕೊಂಡು ,ನಿಮ್ಮ ಸಾಧನೆಯ ಬಗ್ಗೆ ಗಮನಹರಿಸಿ. ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳಿಗೆ ಉತ್ತಮ ಫಲ ಲಭಿಸುತ್ತದೆ.
ಜೊತೆಗೆ ಆಶ್ವಿಜ ಮಾಸ , ಒಂದು ,ಆರು, ಹನ್ನೊಂದನೇ ತಿಥಿಗಳು ,ಶುಕ್ರವಾರ ರೇವತಿ ನಕ್ಷತ್ರ, ಇವುಗಳು ಘಾತವಾಗಿರುತ್ತದೆ. ಇದರ ಬಗ್ಗೆ ಜಾಗೃತವಹಿಸಿ. ಇದರ ಜೊತೆಗೆ ದೇವಸ್ಥಾನದಲ್ಲಿ , ಮಾಡುವಂತಹ ಸರ್ಪ ಶಾಂತಿಗಳಿಗೆ ನಿಮ್ಮ ಕೈಲಾದಂತಹ ಸೇವೆಯನ್ನು ಮಾಡಿ. ಮಹಾರುದ್ರ ಪಠಣೆಯನ್ನ ಮಾಡಿ. ಪವಿತ್ರ ಕ್ಷೇತ್ರಗಳಲ್ಲಿ ನಾಗವೋಮವನ್ನು ಮಾಡಿಸಿ. ಕೇಸರಿ ತಿಲಕವನ್ನು ಧಾರಣೆ ಮಾಡಿ. ಕಾಗೆಗಳಿಗೆ ಆಹಾರವನ್ನು ನೀಡಿದರೆ ಬಹಳ ಒಳ್ಳೆಯ ಅನುಕೂಲಕರ ವಾತಾವರಣ ಸಿಗುತ್ತದೆ. ಕುಲ ದೇವತಾರಾಧನೆಯನ್ನು ಮಾಡಿದರೆ ಒಳ್ಳೆಯ ಪ್ರತಿಫಲಗಳು ನಿಮಗೆ ದೊರೆಯುತ್ತದೆ.