ಮಹಿಳೆಯರೇ ದಯವಿಟ್ಟು ಸ್ವಲ್ಪ ಸಮಯ ಮಾಡಿಕೊಂಡು ಇದನ್ನು ಪೂರ್ತಿ ಓದಿ. ಸ್ವಲ್ಪ ಕೂಡ ಎಣ್ಣೆ ಹೀರದೇ ಚೆನ್ನಾಗಿ ಉಬ್ಬಿಕೊಂಡು ಬರುವ ಪೂರಿಗಳನ್ನು ತಯಾರಿಸಲು ಹಿಟ್ಟು ಕಲಸುವಾಗ ಸ್ವಲ್ಪ ರವೆ ಹಾಗೂ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಸೇರಿಸಿ ಹಿಟ್ಟನ್ನು ಕಲಸಿ.
ಅಕ್ಕಿ ತೊಳೆಯುವಾಗ ಸ್ವಲ್ಪ ಉಪ್ಪನ್ನು ಸೇರಿಸಿ ಅಕ್ಕಿ ತೊಳೆಯುವುದರಿಂದ ಚೆನ್ನಾಗಿ ಬಿಳಿಯಾಗುತ್ತದೆ. ಹಾಲು ಬೇಗ ಹಾಳಾಗದೇ ಇರಲು ಅದಕ್ಕೆ ಒಂದು ಚಿಟಿಕೆ ಅಡಿಗೆ ಸೋಡಾ ಹಾಕುವುದರಿಂದ ಹಾಲು ಬೇಗ ಹಾಳಾಗದೇ ಇರುತ್ತದೆ.
ಊಟ ಮಾಡುವ ಟೇಬಲ್ ಮೇಲೆ ಉಪ್ಪು ನೀರಿನಿಂದ ಶುಭ್ರಗೊಳಿಸುವುದರಿಂದ ನೊಣಗಳ ಕಾಟ ಇರುವುದಿಲ್ಲ. ಸಕ್ಕರೆ ಡಬ್ಬಿಯಲ್ಲಿ ಇರುವೆಗಳು ಬರುತ್ತಿದ್ದರೆ ಅದಕ್ಕೆ ಒಂದರಿಂದ ಎರಡು ಲವಂಗ ಹಾಕಿ ಮುಚ್ಚಿಡಿ.
ಕಿಚನ್ ಸಿಂಕಿನ ಒಳಗೆ ನೆಫ್ತಲಿನ ಬಾಲ್ ಹಾಕುವುದರಿಂದ ಜಿರಲೆಗಳು ಬರುವುದಿಲ್ಲ. ಗಟ್ಟಿಯಾದ ಮತ್ತು ರುಚಿಯಾದ ಮೊಸರನ್ನು ತಯಾರಿಸಲು ಮಣ್ಣಿನ ಪಾತ್ರೆಯನ್ನು ಬಳಸಿ. ಕಿಚನ್ ಸೆಲ್ಫಲ್ಲಿ ಸ್ವಲ್ಪ ಬೂದಿಯನ್ನು ಪೇಪರ್ನಲ್ಲಿ ಕಟ್ಟಿ ಇಡುವುದರಿಂದ ಹುಳುಗಳು ಬರುವುದಿಲ್ಲ.
ಕಾಫಿ ಪೌಡರ್ ಅನ್ನು ಹಂಚಿನ ಮೇಲೆ ಉರಿದು ಹೊಗೆ ಹಾಕುವುದರಿಂದ ಸೊಳ್ಳೆಗಳು ಬರುವುದಿಲ್ಲ. ಮಕ್ಕಳಿಗೆ ಹಾಲು ಕೊಡುವಾಗ ಸ್ವಲ್ಪ ಕಲ್ಲು ಸಕ್ಕರೆಯನ್ನು ಬೆರೆಸಿ ಕೊಡಿ.