ಶುಂಠಿ ಟೀ ಕುಡಿಯುವುದರಿಂದ ದೇಹಕ್ಕೆ ಏನಾಗುತ್ತದೆ ಗೊತ್ತಾ?

ಚಹಾ ಪ್ರಿಯರಿಗೆ ಚಹಾ ಕುಡಿಯೋದಕ್ಕೆ ಒಂದು ಕಾರಣ ಬೇಕು ಅಷ್ಟೇ. ಕೂತರು ನಂಟರು ಕೈಯಲ್ಲಿ ಒಂದು ಕಪ್ ಚಹಾ ಇರಬೇಕು. ಅಷಿದ್ದರೆ ಅದರ ಮಜಾನೇ ಬೇರೆ.  ಅದರಲ್ಲೂ ಶುಂಠಿ ಚಹಾ ಸಿಕ್ಕಿದರಂತೂ ಇನ್ನು ಮಜಾ. ಶುಂಠಿ ಚಹಾ ನಾಲಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಶುಂಠಿಯು ಔಷಧೀಯ ಗುಣಗಳಿಂದ ತುಂಬಿದೆ. ಶುಂಠಿಯಲ್ಲಿ ಆ್ಯಂಟಿ ಇನಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಗುಣಗಳು ಕಂಡುಬರುತ್ತವೆ. ಇಷ್ಟು ಮಾತ್ರವಲ್ಲ, ಇದರಲ್ಲಿ  ವಿಟಮಿನ್ ಎ, ವಿಟಮಿನ್ ಇ, ಕಬ್ಬಿಣ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತವೆ. ಶುಂಠಿ ಚಹಾವನ್ನು ಶೀತದ ಸಂದರ್ಭದಲ್ಲಿ ಬಹಳ ಪ್ರಯೋಜನಕಾರಿಯಾಗಿರುತ್ತದೆ.  

1. ಶೀತ, ನೆಗಡಿ :  ಶುಂಠಿ ಚಹಾವನ್ನು ಶೀತಕ್ಕೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ನೆಗಡಿ ಬರುವುದು ಸಾಮಾನ್ಯ. ಆಗ ಒಂದು ಕಪ್ ಬಿಸಿ ಬಿಸಿ ಶುಂಠಿ ಟೀ ಕುಡಿಯಬಹುದು. ಇದು ಶೀತಗಳಿಂದ ಮಾತ್ರವಲ್ಲದೆ ವೈರಲ್ ನಿಂದಲೂ ರಕ್ಷನೆ ನೀಡುತ್ತದೆ. ರೋಗನಿರೋಧಕ ಶಕ್ತಿ: ಶುಂಠಿಯಲ್ಲಿ ಆ್ಯಂಟಿ ಇನಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಆಕ್ಸಿಡೆಂಟ್  ಕಂಡುಬರುತ್ತವೆ. ಇದು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ವಿಟಮಿನ್‌ಗಳು ಸಹ ಕಂಡುಬರುತ್ತವೆ.  ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

3. ಬೊಜ್ಜು: ಶುಂಠಿ ಚಹಾವನ್ನು ಕುಡಿಯುವುದರಿಂದ ಸ್ಥೂಲಕಾಯದ ಸಮಸ್ಯೆಯನ್ನು ನಿವಾರಿಸಬಹುದು. ಶುಂಠಿಯಲ್ಲಿ ಕಾರ್ಟಿಸೋಲ್ ಇರುವುದರಿಂದ ಹೊಟ್ಟೆಯ ಕೊಬ್ಬು ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಕೊಬ್ಬನ್ನು ಕಡಿಮೆ ಮಾಡಬಹುದು .4. ಜೀರ್ಣಕ್ರಿಯೆ: ಶುಂಠಿ ಚಹಾವನ್ನು ಜೀರ್ಣಕ್ರಿಯೆ, ಗ್ಯಾಸ್, ಮಲಬದ್ಧತೆಗೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಶುಂಠಿ ಚಹಾವನ್ನು ಸೇವಿಸಬಹುದು.

Leave a Comment