ಬೆಳ್ಳಿಯ ಉಂಗುರ ಧರಿಸುವುದರಿಂದ ಸಿಗುವ ಲಾಭಗಳು ಬೆಳ್ಳಿಯಲ್ಲಿ ಬಲವಾದ ಆಂಟಿ ಮೈಕ್ರೋಬಿಯಲ್ ಏಜೆಂಟ್ ಇದೆ. ಅಂದರೆ ಉತ್ತಮ ಜೀವನಿರೋಧಕ ಶಕ್ತಿಯಿದೆ. ಇದು ಸೋಂಕುಗಳ ವಿರುದ್ಧ ಹೋರಾಡುವುದು ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು.
ಜ್ಯೋತಿಷ್ಯಶಾಸ್ತ್ರದಲ್ಲಿ ಬೆಳ್ಳಿಯು ನವಗ್ರಹಗಳಲ್ಲಿ ಚಂದ್ರಗ್ರಹ ಮತ್ತು ಶುಕ್ರಗ್ರಹಕ್ಕೆ ಸಂಬಂಧಿಸಿದ ಧಾತುವಾಗಿದೆ. ಶುಕ್ರ ಗ್ರಹ ಸುಖ, ಸಂಪತ್ತು, ಐಶ್ವರ್ಯ ನೀಡುವಂತಹ ಗ್ರಹವಾಗಿದೆ ಮತ್ತು ಚಂದ್ರ ಗ್ರಹ ಮನಸ್ಸನ್ನು ಶಾಂತವಾಗಿಡುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಯಾರಿಗೆಲ್ಲ ಸಣ್ಣಪುಟ್ಟ ವಿಷಯಕ್ಕೆ ಸಿಟ್ಟು ಕೋಪ ಬರುವುದು ಅಂತವರ ಮನಸ್ಸನ್ನು ಶಾಂತಗೊಳಿಸಿ ಉಲ್ಲಾಸದಾಯಕವಾಗಿಡಲು ಸಹಾಯಕವಾಗುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಮನಸ್ಸಿನ ಚಂಚಲತೆಯನ್ನು ದೂರ ಮಾಡುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಭಗವಂತನಾದ ಶಿವನ ಆಶೀರ್ವಾದ ಮತ್ತು ತಾಯಿ ಪಾರ್ವತಿ ದೇವಿಯ ಆಶೀರ್ವಾದ ದೊರೆಯುವುದು. ಈ ಒಂದು ಕಾರಣಕ್ಕಾಗಿ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಅಸಾಧ್ಯವಾದ ಕೆಲಸವನ್ನು ಸಾಧಿಸಲು ಸಾಧ್ಯವಾಗಿ ದೈವಿಶಕ್ತಿಯು ಬೇಗನೆ ಸಿದ್ಧಿಸುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ರಕ್ತಕ್ಕೆ ಸಂಬಂಧಿಸಿದ ರೋಗ ನಿವಾರಣೆ ಮಾಡುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಚಂದ್ರನ ಮತ್ತು ಬುಧನ ಅನುಗ್ರಹ ಸಿಗುತ್ತದೆ. ಬುಧಗ್ರಹವು ಬುದ್ಧಿಯ ದೇವತೆಯಾಗಿದ್ದಾರೆ. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಅವರ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಕುಂಡಲಿಯಲ್ಲಿ ಧನ ಯೋಗವನ್ನು ಸೃಷ್ಟಿಸುತ್ತದೆ.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳಾದ ಕೆಮ್ಮು, ಕಫ, ಸಂಧಿವಾತ, ಎಲುಬು, ಕೀಲುನೋವು ಸಮಸ್ಯೆಗಳು ನಿವಾರಣೆಯಾಗುವುದು.
ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಮುಖದಲ್ಲಿ ಕಾಂತಿ ಹೊಳಪು ಬರುತ್ತದೆ. ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ ಮತ್ತು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದು, ಮುಖದ ಮೇಲಿರುವ ಮೊಡವೆ ಮತ್ತು ಕಪ್ಪು ಕಲೆಗಳನ್ನ ಸಹ ಕಡಿಮೆ ಮಾಡುತ್ತದೆ ಮತ್ತು ಚರ್ಮದ ರೋಗವು ದೂರವಾಗುತ್ತದೆ.
ಬೆಳ್ಳಿಯ ಉಂಗುರವನ್ನು ತೆಗೆದುಕೊಂಡು ಬಂದ ಕೂಡಲೇ ಹಾಗೇ ಧರಿಸಬಾರದು. ಅದಕ್ಕೆ ಶುಭವಾರ ಶುಭ ಸಮಯದಲ್ಲಿ ಗೋಮೂತ್ರ ಅಥವಾ ತೆಂಗಿನ ನೀರಿನಲ್ಲಿ ಇಲ್ಲವೇ ಪವಿತ್ರವಾದ ಗಂಗಾಜಲದಲ್ಲಿ 24 ಗಂಟೆಯವರೆಗೆ ನೆನೆಸಿ ಇಡಬೇಕು. ಇದರಿಂದಾಗಿ ಅದರಲ್ಲಿರುವ ಅಶುದ್ಧತೆ ಹೋಗಿ ಶುದ್ಧವಾಗುವುದು. ನಂತರ ಕುಲದೇವರನ್ನು ನೆನೆಸಿಕೊಂಡು ಸೋಮವಾರ ದಿವಸ ಶುಕ್ಲಪಕ್ಷದಲ್ಲಿ ಕಿರುಬೆರಳಿಗೆ ಧರಿಸಬೇಕು.