ನಾವು ಈ ಲೇಖನದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಸ್ತ್ರೀಯರು ಈ ಸ್ತೋತ್ರ ಪಾರಾಯಣ ಮಾಡಿದರೆ,ಅವರ ಕಷ್ಟಗಳು ದೂರವಾಗುತ್ತವೆ.ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದು ಅತ್ಯಂತ ಶಕ್ತಿಯುತವಾದ ಸ್ತೋತ್ರ ಪರಾಶಕ್ತಿ ಸೂತ್ರವನ್ನು ದಿನ ಪಠಿಸುತ್ತಾ ಹೋದಂತೆ ನಿಮ್ಮ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳನ್ನು ನೀವು ಕಾಣಬಹುದು.
ಮುಟ್ಟಿನ ಸಮಸ್ಯೆಯಿಂದಲೂ ಹಲವಾರು ಹೆಣ್ಣು ಮಕ್ಕಳು ಬಳಲುತ್ತಾ ಇರುತ್ತಾರೆ, ಕೆಲವರಿಗೆ ಹೆಚ್ಚು ರಕ್ತಸ್ರಾವ ಆಗುವುದು , ಕೆಲವರಿಗೆ ಅತಿ ಕಡಿಮೆ ಆಗುವುದು , ಇನ್ನು ಕೆಲವರಿಗೆ ಬಿಳಿ ಮುಟ್ಟು ಹೋಗುವುದು ಆಗುತ್ತಿರುತ್ತದೆ. ಎಷ್ಟೇ ವೈದ್ಯರಿಗೆ ತೋರಿಸಿದರು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ನಿಮ್ಮ ವೈದ್ಯರ ಸಲಹೆಯನ್ನು ತಪ್ಪದೆ ಪಾಲಿಸುವುದರೊಂದಿಗೆ ಈ ಸ್ತೋತ್ರಗಳನ್ನು ಪಠಿಸಿ.
ಈ ಸ್ತೋತ್ರವನ್ನು ಈಗ ಪಠಿಸಬೇಕು ಎಂದು ಈಗ ಹೇಳಲಾಗಿದೆ. ಮೊದಲನೆಯದಾಗಿ ಮಹಿಳೆಯರು ಮುಂಜಾನೆ ಬೇಗನೆ ಎದ್ದು ,ಮನೆಯನ್ನು ಶುಚಿಯಾಗಿ ಇಟ್ಟು ,ಸ್ನಾನ ಮಾಡಿ ಹೊಸಲನ್ನು ಪೂಜಿಸಿ ರಂಗೋಲಿಯನ್ನು ಹಾಕಬೇಕು.
ನಂತರ ದೇವರ ಕೋಣೆಯಲ್ಲಿ ಇರುವ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ತಪ್ಪದೆ ದೀಪವನ್ನು ಹಚ್ಚಿರಿ ನಂತರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ದೇವಿಯಲ್ಲಿ ಕೋರಿ ಕೊಂಡು , ಅವಳನ್ನು ನೆನೆಯುತ್ತಾ, ಈ ಪರಾ ಶಕ್ತಿ ಸ್ತೋತ್ರವನ್ನು ಪಠಿಸಬೇಕು . ಪರಾಶಕ್ತಿ ದೇವಿಯ ಸ್ತೋತ್ರವು ಹೀಗಿದೆ :
ಪರಾಶಕ್ತಿ ಪ್ರಬಲ ದೋಷ ನಿವಾರಿಣಿಂ ಮಹಾ ಸುಂದರಾಂಗಿಂ ಮಹಾಮಂತ್ರ ವಾಸಿನೀ , ಮಹಾಮಾಯಾ ದೇವಿ ಕರುಣಾಕರಿಂ ಆರೋಗ್ಯಂ ದೇಹಿ ಮಾತಾ ತವಶರಣಂ” . ಈ ಮಂತ್ರವನ್ನು ದಿನವೂ ಪಠಣೆ ಮಾಡಬೇಕು .ನಿಮ್ಮ ಶಕ್ತ್ಯಾನುಸಾರ ಪ್ರತಿದಿನ ಐದು , ಹನ್ನೊಂದು , ಇಪ್ಪತ್ತೊಂದು, ಅಥವಾ ನಲವತ್ತೆಂಟು ಬಾರಿ ಈ ಮಂತ್ರವನ್ನು ಪಠಿಸಬೇಕು.
ಈ ಮಂತ್ರವನ್ನು 11 ದಿನ ಅಥವಾ 48 ದಿನಗಳ ಕಾಲ ಪಠಿಸಬೇಕು .ನಿಮಗೆ ಸಾಧ್ಯವಾದರೆ ಪ್ರತಿದಿನ ಪಠಿಸುವುದು ಕೂಡ ತುಂಬಾ ಒಳ್ಳೆಯದು. ನಡುವೆ ಮುಟ್ಟಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಬಂದರೆ, ಮುಟ್ಟಿನ ಸಮಯದಲ್ಲಿ ಐದು ದಿನಗಳು ಬಿಟ್ಟು ಮತ್ತೆ ಮುಂದುವರಿಸಲು ಯಾವುದೇ ಅಡ್ಡಿ ಇಲ್ಲ.
ದೇವಿಯಲ್ಲಿ ನಂಬಿಕೆ ಇಟ್ಟು ಶ್ರದ್ದೆಯಿಂದ ಈ ಮಂತ್ರವನ್ನು ನೀವು ಪಠಿಸಿದಲ್ಲಿ ನಿಮ್ಮ ತೊಂದರೆಗಳು ದೂರವಾಗಿ ಮನಸ್ಸಿನಲ್ಲಿ ನೆಮ್ಮದಿ ದೊರಕುವುದು. ಯಾವುದೇ ಮಂತ್ರವಾದರೂ ಫಲ ಕೊಡಲು ದೇವರಲ್ಲಿ ಶ್ರದ್ದೆ ಮತ್ತು ನಂಬಿಕೆ ತುಂಬಾ ಮುಖ್ಯವಾಗಿರುತ್ತದೆ. ಹೀಗೆ ಈ ಮೇಲೆ ಹೇಳಿದ ಹಾಗೆ ನೀವು ಮಾಡುತ್ತಾ ಬಂದಲ್ಲಿ ನಿಮಗೆ ಒಳ್ಳೆಯದು ಆಗುತ್ತದೆ ಎಂಬುದನ್ನು ಹೇಳಲಾಗಿದೆ.