ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಮುಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ. ಇನ್ನು ಹೀಗೆ ಮುಂದಿನ ಭವಿಷ್ಯವನ್ನು ಮತ್ತು ನಮ್ಮ ವ್ಯಕ್ತಿತ್ವವನ್ನು ತಿಳಿಯಬೇಕಾದರೆ ಹುಟ್ಟಿದ ದಿನಾಂಕ, ಹುಟ್ಟಿದ ತಿಂಗಳು, ಹುಟ್ಟಿದ ವರ್ಷ, ಹುಟ್ಟಿದ ವಾರಗಳ ಆಧಾರದ ಮೇಲೆ ತಿಳಿಯಬಹುದು. ಇನ್ನು ಇಂದಿನ ನಮ್ಮ ಲೇಖನದಲ್ಲಿ ಶುಭ ಆಗಿರುವ ಶುಕ್ರವಾರದಂದು ಹುಟ್ಟಿದವರ ಬಗ್ಗೆ ತಿಳಿಯೋಣ ಬನ್ನಿ..ಅದಕ್ಕೂ ಮುನ್ನ ನೀವು ಕೂಡ ಮಹಾಲಕ್ಷ್ಮೀ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟಿದ ಘಳಿಗೆಯಿಂದ ಹಿಡಿದು ಹುಟ್ಟಿದ ದಿನ ,ಹುಟ್ಟಿದ ವಾರ, ಹುಟ್ಟಿದ ತಿಂಗಳು, ಹುಟ್ಟಿದ ವರ್ಷ ಮತ್ತು ಹುಟ್ಟಿದ ಸಮಯ ಇವೆಲ್ಲವೂ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ. ಇನ್ನು ಹುಟ್ಟಿದ ವಾರ ಮತ್ತು ಹುಟ್ಟಿದ ದಿನಾಂಕ ದಿಂದ ನಮ್ಮ ಗುಣ ಸ್ವಭಾವಗಳನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ವಾರಗಳಲ್ಲಿ ಶುಭವಾದ ಶುಕ್ರವಾರದಂದು ಹುಟ್ಟಿದವರ ಬಗ್ಗೆ ತಿಳಿಯೋಣ ಬನ್ನಿ. ಶುಕ್ರವಾರವನ್ನು ಮಹಾಲಕ್ಷ್ಮೀ ವಾರ ಎಂದು ಕರೆಯಲಾಗುತ್ತದೆ.
ಇನ್ನೂ ಶುಕ್ರವಾರದಂದು ದೇವಿ ಮಹಾ ಲಕ್ಷ್ಮಿಯನ್ನು ಪೂಜಿಸುವುದರಿಂದ ದೇವಿಯ ಸಂಪೂರ್ಣ ಆಶೀರ್ವಾದ ನಮಗೆ ಸಿಗಲಿದೆ. ಇನ್ನು ಶುಕ್ರವಾರ ಹುಟ್ಟಿದವರು ಲಕ್ಷ್ಮೀಯ ಕೃಪಾಕಟಾಕ್ಷ ದಿಂದ ಜನಿಸಿರುತ್ತಾರೆ. ಶುಕ್ರವಾರದಂದು ಜನಿಸಿರುವವರ ಮೇಲೆ ಶುಕ್ರನ ಪ್ರಭಾವ ಹೆಚ್ಚಾಗಿರುತ್ತದೆ. ಇವರಿಗೆ ಸಾಕಷ್ಟು ಅದೃಷ್ಟ ಲಭಿಸುತ್ತದೆ. ಅಂದುಕೊಂಡಂತೆ ಎಲ್ಲಾ ಕೆಲಸಗಳಲ್ಲೂ ಜಯ ಸಾಧಿಸಲಿದ್ದಾರೆ.ಇನ್ನೂ ಯಾವುದೇ ಕಠಿಣ ಕೆಲಸಗಳಲ್ಲೂ ಕಠಿಣ ಪರಿಶ್ರಮ ವಹಿಸಿ ಕೆಲಸವನ್ನು ಮುಗಿಸಿ ಬಿಡುತ್ತಾರೆ.ಇನ್ನೂ ಶುಕ್ರವಾರದಂದು ಹುಟ್ಟಿದವರು ಮುಟ್ಟಿದ್ದೆಲ್ಲ ಚಿನ್ನವಾಗುವ ಯೋಗದಲ್ಲಿ ಜನಿಸಿರುತ್ತಾರೆ.
ಇನ್ನು ಈ ವಾರ ದಂದು ಹುಟ್ಟಿರುವುದರಿಂದ ಯಾವುದೇ ದುಷ್ಟ ಶಕ್ತಿಗಳು ಇವರನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಇವರು ಬಹುಬೇಗ ಎಲ್ಲರನ್ನು ತಮ್ಮತ್ತ ಆಕರ್ಷಣೆ ಮಾಡುತ್ತಾರೆ. ಇನ್ನು ಶುಕ್ರವಾರದಂದು ಜನಿಸಿದವರು ಅತಿ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ, ಇವರು ಸಂತೋಷದಿಂದ ಜೀವನವನ್ನು ಸಾಗಿಸುತ್ತಾರೆ. ಇವರು ಖುಷಿಯಾಗಿದ್ದು , ಇವರ ಜೊತೆ ಇರುವವರನ್ನು ಖುಷಿಯಾಗಿಡುವಲ್ಲಿ ಇವರು ಯಶಸ್ವಿಯಾಗುತ್ತಾರೆ. ಇವರು ಬಹಳ ವಿಶಾಲ ಹೃದಯದವರು ಆಗಿರುವುದರಿಂದ ಇವರಿಗೆ ದ್ವೇಷ ,
ಅಸೂಯೆ , ಹೊಟ್ಟೆಕಿಚ್ಚು ನಂತಹ ದುರ್ಗುಣ ಇರುವುದಿಲ್ಲ. ಇನ್ನೂ ಧಾರಾಳವಾಗಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತಾರೆ. ಇನ್ನೂ ತಮ್ಮಂತೆ ಜೊತೆ ಇರುವವರು ಸಹ ಬೆಳೆಯಬೇಕು ಎಂದು ಇಷ್ಟಪಡುತ್ತಾರೆ. ಇನ್ನೂ ಯಾವುದೇ ಕೆಲಸವನ್ನು ಮಾಡಿದರು ಇವರು ವಿಭಿನ್ನ ರೀತಿಯಲ್ಲಿ ಅವರದ್ದೇ ಆದ ವಿಭಿನ್ನ ಶೈಲಿಯಲ್ಲಿ ಮಾಡಿ ಮುಗಿಸುತ್ತಾರೆ. ಇನ್ನು ಇವರು ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಗಳಾಗಿರುತ್ತಾರೆ. ಸದಾ ಗೆಳೆಯರೊಡನೆ ಕಾಲಕಳೆಯುವುದರಿಂದ ಗೆಳೆಯರ ಆಪ್ತತೆ ಹೆಚ್ಚಾಗಿರುತ್ತದೆ. ಆದರೂ ಅತಿಯಾಗಿ ಬುದ್ಧಿವಂತಿಕೆ ತೋರಿಸಲಾರರು.
ಸಹನಶಕ್ತಿ ಹೆಚ್ಚಾಗಿರುವುದರಿಂದ ಬಹಳ ತಾಳ್ಮೆಯಿಂದ ಎಲ್ಲವನ್ನೂ ತಮ್ಮ ವಶ ಮಾಡಿಕೊಳ್ಳುವ ಸಾಹಸ ಪ್ರವೃತ್ತಿ ಉಳ್ಳವರು ಇವರಾಗಿರುತ್ತಾರೆ. ಶುಕ್ರವಾರದಂದು ಹುಟ್ಟಿದವರು ಮುಖ್ಯವಾಗಿ ಕ್ರೀಡೆಗಳಲ್ಲಿ ಹೆಚ್ಚು ಸಾಹಸವನ್ನು ತೋರಿಸಿ ಹೆಸರು ಮಾಡುತ್ತಾರೆ. ಆಂತರಿಕ ಸೌಂದರ್ಯದ ಜೊತೆಗೆ ಬಾಹ್ಯ ಸೌಂದರ್ಯವು ಇವರಿಗೆ ಹೆಚ್ಚಾಗಿರುತ್ತದೆ. ಕಲೆ ಸಾಹಿತ್ಯ ಸಂಗೀತದಂತಹ ಕ್ಷೇತ್ರಗಳಲ್ಲಿ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ.ನೀವು ಕೂಡ ಶುಕ್ರವಾರದಂದು ಜನಿಸಿದ್ದರೆ “ಜೈ ಮಹಾಲಕ್ಷ್ಮೀ” ಎಂದು ಕಾಮೆಂಟ್ ಮಾಡಿ ತಿಳಿಸಿ. ಧನ್ಯವಾದಗಳು.