ವ್ಯಕ್ತಿ ನಾಯಕ ಎಂದು ಕರೆಯಿಸಿಕೊಳ್ಳಲು ಮೊದಲು ಜನರ ಮೇಲೆ ಪ್ರಭಾವ ಬೀರಬೇಕು. ಈ ರಾಶಿಗೆ ತಕ್ಕ ನಾಗಿ ಇರುವುದು ಆ ಐದು ರಾಶಿಗಳು. ಆ ಐದು ರಾಶಿಯ ಜನ ಲೀಡರ್ ತರಹ ವ್ಯಕ್ತಿತ್ವವುಳ್ಳವರು. ತಾವಷ್ಟೆ ಬೆಳೆಯುವುದಿಲ್ಲ ತಮ್ಮ ಜೊತೆಗಿರುವವರಿಗೆ ಎನರ್ಜಿ ತುಂಬುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಈ ರಾಶಿಯವರ ಮಾತು ಕೇಳಿದರೇ ಇತರರಿಗೂ ಉತ್ಸಾಹದಿಂದ ಇರುವುದು ಕಂಡುಬರುತ್ತದೆ. ಬಹಳಷ್ಟು ಜನರ ಏನಾದರೂ ಸಾಧನೆ ಮಾಡಲು ಸ್ಫೂರ್ತಿಯಾಗುತ್ತಾರೆ.
ಇವರ ಒಳ್ಳೆಯ ಕ್ವಾಲಿಟಿಯ ಗುಣಗಳನ್ನು ನೋಡಿ ಜನರು ಇವರ ಫಾಲೋವರ್ ಕೂಡ ಆಗುತ್ತಾರೆ. ಆ ಐದು ಸ್ಪೆಷಲ್ ರಾಶಿಗಳು ಯಾವುವು ಎಂದರೆ ಬೇರೆಯವರಿಗೆ ತಮ್ಮ ಎನರ್ಜಿಯಿಂದ ಪ್ರೇರಣೆಯಾಗುವ ರಾಶಿ ಯಾವುದು ಎಂದರೆ ಮೇಷರಾಶಿ. ದಿಟ್ಟ ಹಾಗೂ ಸಾಹಸಮಯ ವ್ಯಕ್ತಿತ್ವವುಳ್ಳವರು. ಇವರು ನಾಯಕತ್ವವನ್ನು ತೆಗೆದುಕೊಳ್ಳಲು ಸಿದ್ಧವಾಗಿರುತ್ತಾರೆ. ತಾವು ಬೆಳೆಯಬೇಕು ಮತ್ತು ತಮ್ಮ ಜೊತೆಗಾರರಿಗೂ ದಾರಿ ಮಾಡಿಕೊಡಬೇಕೆನ್ನುವುದು ಇವರ ಉದ್ದೇಶವಾಗಿರುತ್ತದೆ.
ಯಾರೇ ಸಲಹೆ ಕೇಳಿಕೊಂಡು ಬಂದರೂ ಅವರಿಗೆ ಸಲಹೆಯನ್ನು ತಿಳಿಸುತ್ತಾರೆ ಮತ್ತು ತಮ್ಮ ಅನುಭವದ ಮೂಲಕ ಅವರಿಗೆ ದೀಪವಾಗುತ್ತಾರೆ. ಭಯ ಬಿಡಬೇಕು ಎಂದು ಸಾಧನೆ ಮಾಡುವ ಮೂಲಕ ಜನರಿಗೆ ಸ್ಫೂರ್ತಿಯನ್ನು ಕೊಡುತ್ತಾರೆ. ಇದೇ ತರಹ ಸ್ಫೂರ್ತಿಯನ್ನು ಕೊಡುವ ರಾಶಿ ಎಂದರೆ ಸಿಂಹರಾಶಿ. ಇವರು ಹುಟ್ಟಿನಿಂದಲೇ ಲೀಡರ್ ಶಿಪ್ ಅನ್ನು ಮಾಡುವಂತಹವರು. ಎಲ್ಲರನ್ನ ಸೆಳೆಯುವ ವ್ಯಕ್ತಿತ್ವ ಇವರಲ್ಲಿರುತ್ತದೆ. ಹಾಗಾಗೀ ಜನರು ಇವರಿಗೆ ಗೌರವವನ್ನು ಕೊಡುತ್ತಾರೆ.
ಸಿಂಹರಾಶಿಯವರಿಗೆ ಎಂತಹ ಸನ್ನಿವೇಶದಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿರುತ್ತದೆ. ಪ್ರತಿಕ್ಷಣವು ನಮಗೆ ಬೇಕಾದ ರೀತಿಯಲ್ಲಿ ಬದುಕಿ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬೇಕೆಂಬ ಅಭಿಪ್ರಾಯ ಇವರದ್ದು ಇವರ ಈ ರೀತಿಯ ಗುಣಗಳಿಂದ ಇತರರಿಗೆ ಪ್ರೇರಣೆಯಾಗುತ್ತಾರೆ. ತಮ್ಮ ಎನರ್ಜಿ ಮತ್ತು ತಮ್ಮ ಕೆಲಸದಿಂದ ಇತರರಿಗೆ ಸ್ಫೂರ್ತಿಯಾಗುವ ಮತ್ತೊಂದು ರಾಶಿ ಎಂದರೆ ಪ್ರಯಾಣ ಪ್ರಿಯರಾದ ಧನುರ್ ರಾಶಿಯವರು. ಪ್ರವಾಸ ಮಾಡಲು, ಟ್ರಕ್ಕಿಂಗ್ ಮಾಡಲು ಅಥವಾ ಧೈರ್ಯವಂತ ಕೆಲಸವನ್ನ ಮಾಡಲು ಈ ರಾಶಿಯವರಿಗೆ ಆಸಕ್ತಿ ಹೆಚ್ಚು ಇರುತ್ತದೆ. ಇವರು ಯಾವಾಗಲೂ ಕಲಿಯುವ ಸ್ವಭಾವದವರು.
ಇನ್ನು ಓದಬೇಕು ಮತ್ತು ಕಲಿಯಬೇಕು ಎಂದು ಉತ್ಸಾಹವಿರುತ್ತದೆ. ಹೊಸ ಜಾಗಕ್ಕೆ ಹೋಗಬೇಕು, ಹೊಸ ಜನರ ಜೊತೆ ಬೆರೆಯಬೇಕು ಹೀಗೆ ಹೊಸದನ್ನ ಇಷ್ಟಪಡುವ ಜನರು. ಧನುರ್ ರಾಶಿಯ ಜನ ಜೀವನವನ್ನು ಚಾಲೆಂಜ್ ತರಹ ನೋಡುವುದರಿಂದ ಎಲ್ಲೂ ಸೋಲುವುದಿಲ್ಲ ಮತ್ತು ಜೀವನವನ್ನು ಖುಷಿಯಾಗಿ ಕಳೆಯಬೇಕು, ಗೆಲ್ಲಬೇಕು ಎನ್ನುವುದೇ ಇವರ ಗುರಿಯಾಗಿರುತ್ತದೆ.
ಈ ಎಲ್ಲಾ ಗುಣಗಳಿಂದಲೇ ಇತರರಿಗೆ ಪ್ರೇರಣೆಯಾಗುತ್ತಾರೆ. ಈ ರಾಶಿಯ ಜನಕ್ಕೆ ಕನಸು ಕಾಣಲು ಗೊತ್ತು, ನನಸು ಮಾಡಲು ಗೊತ್ತು ಇತರರಿಗೇ ದಾರಿದೀಪವಾಗುತ್ತಾರೆ. ಅಂತಹ ರಾಶಿ ಯಾವುದು ಎಂದರೆ ಮೀನಾರಾಶಿ. ಈ ರಾಶಿಯವರಿಗೆ ಕನಸಿನ ಬಗ್ಗೆ ಹೆಚ್ಚು ಯೋಚನೆ ಇರುತ್ತದೆ. ನಾಳೆ ಏನು ತೊಂದರೆಯಾಗುತ್ತದೆ ಎಂದು ಆಲೋಚಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತಹ ಜನರು ಮೀನಾರಾಶಿಯವರು ಆಗಿರುತ್ತಾರೆ. ಜನರ ಜೊತೆ ಹೇಗೆ ವರ್ತನೆ ಮಾಡಬೇಕು
ಮತ್ತು ಯಾವ ದಾರಿಯಲ್ಲಿ ಹೋದರೇ ಬೇಗ ಯಶಸ್ಸು ಸಿಗುತ್ತದೆ ಎಲ್ಲರ ಬಗ್ಗೆ ಮೊದಲೇ ಯೋಚನೆ ಮಾಡಿ ಯೋಜನೆಯನ್ನು ಮಾಡಿಕೊಳ್ಳುತ್ತಾರೆ. ಸೃಜನಶೀಲರು ಮತ್ತು ತಮ್ಮ ಕಲ್ಪನೆಗೆ ವಿಶಿಷ್ಟ ಜೀವ ತುಂಬುವ ಶಕ್ತಿ ಇವರಲ್ಲಿರುತ್ತದೆ. ಕನಸನ್ನು ನನಸು ಮಾಡಿಕೊಳ್ಳಲು ತುಂಬಾ ಶ್ರಮಪಡುತ್ತಾರೆ. ಕಲೆ, ಸಂಗೀತ ಬಗ್ಗೆ ಆಸಕ್ತಿ ಕೊಡುವುದರ ಜೊತೆಗೆ ಆಧ್ಯಾತ್ಮಿಕವಾಗಿಯೂ ಕೂಡ ಆಸಕ್ತಿ ಇರುತ್ತದೆ. ಎಲ್ಲವನ್ನು ಕಳೆದುಕೊಂಡರೂ ನಂಬಿಕೆ ಬಿಡಬೇಡಿ, ದೇವರಲ್ಲಿ ನಂಬಿಕೆ ಇಡಿ,
ಪ್ರತಿಯೊಂದು ಘಟನೆಗಳು ಆಗುವುದಕ್ಕೆ ಒಂದಲ್ಲ ಒಂದು ಕಾರಣವಿರುತ್ತದೆ ಎಂಬುದು ಇವರ ಅಭಿಪ್ರಾಯ. ಇವರ ಈ ವಿಶಿಷ್ಟ ಗುಣಗಳಿಂದಲೇ ಬೇರೆಯವರಿಗೆ ಪ್ರೇರಣೆಯಾಗುತ್ತಾರೆ. ಕೊನೆಯದಾಗಿ ಬರುವ ರಾಶಿ ಯಾವುದು ಎಂದರೆ ಇವರು ಮೇಲು ನೋಟಕ್ಕೆ ಸ್ವಲ್ಪ ಒರಟು ಎನ್ನಬಹುದು ಆದರೇ ಪ್ರೇರೇಪಣೆ ಮಾಡುವ ವ್ಯಕ್ತಿತ್ವ ಇವರಲ್ಲಿದೆ. ಆ ರಾಶಿ ಚೇಳಿನ ಸಂಕೇತವಿರುವ ವೃಶ್ಚಿಕ ರಾಶಿ.
ಈ ರಾಶಿಯವರಿಗೆ ಬಹಳ ಬೇಗ ಕೋಪ ಬರುತ್ತದೆ. ಮಾತು ಕೂಡ ಒರಟಾಗಿರುತ್ತದೆ. ಎಷ್ಟೇ ಕಷ್ಟದಲ್ಲಿರಲಿ, ಯಾವುದೇ ಸಂದರ್ಭದಲ್ಲೂ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಗುರಿ ಸಾಧನೆ ಮಾಡಲು ಯಾವುದೇ ಅಡೆತಡೆ ಬಂದರೂ ಹಿಂಜೆರೆಯುವುದಿಲ್ಲ. ಏನಾದರೂ ಬೇಕೆನಿಸಿದರೇ ಅದನ್ನು ಪಡೆದೇ ಪಡೆಯುತ್ತಾರೆ. ವೃಶ್ಚಿಕ ರಾಶಿಯವರು ಸೋಲೇ ಗೆಲುವಿನ ಸೋಪಾನ ಎನ್ನುವ ಮಾತನ್ನು ಕರಗತ ಮಾಡಿಕೊಂಡಿರುವಂತಹವರು. ಮತ್ತೆ ಮತ್ತೆ ಪ್ರಯತ್ನ ಪಟ್ಟು ಗೆಲುವನ್ನು ಪಡೆಯುವವರು ಇಂತಹ ವ್ಯಕ್ತಿತ್ವದಿಂದ ಜನರಿಗೆ ಸ್ಫೂರ್ತಿಯಾಗುತ್ತಾರೆ. ಇವರು ಅಸಾಧ್ಯವಾಗದಿದ್ದನ್ನು ಸಾಧನೆ ಮಾಡುತ್ತಾರೆ. ಉಳಿದ ರಾಶಿಗಳು ಇತರರಿಗೆ ಪ್ರೇರಣೆ ಮಾಡುತ್ತಾರೆ ಅವುಗಳಲ್ಲಿ ಟಾಪ್ 5 ರಾಶಿಗಳು ಹೆಚ್ಚು ಪ್ರೇರೇಪಣೆ ಮಾಡುವ ರಾಶಿಗಳಾಗಿವೆ.