ನಾವು ಈ ಲೇಖನದಲ್ಲಿ 2024ರ ಕುಂಭ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಇಲ್ಲಿ ನಿಜವಾಗಿ ನಡೆದ ಘಟನೆ ಮತ್ತು ಆಘಾತಕಾರಿ ವಿಚಾರಗಳ ಬಗ್ಗೆ ಇಲ್ಲಿ ತಿಳಿಸಲಾಗುತ್ತದೆ. ಜನ್ಮ ಶನಿಯ ಸಂದರ್ಭದಲ್ಲಿ , ಇದರ ಸಾಧಕ ಭಾದಕಗಳು , ತೊಂದರೆ ತಾಪತ್ರೆ ಗಳು , ಇಂಥಹುದೆಲ್ಲಾ ಮೊದಲೇ ನಿಮ್ಮ ಅನುಭವಕ್ಕೆ ಬಂದಿರುತ್ತದೆ .ಇನ್ನೂ ಕೆಲವು ಕುಂಭ ರಾಶಿಯ ಜನರಿಗೆ ಇಂತಹ ಅನುಭವ ಕೂಡ ಆಗದೇ ಇರಬಹುದು .
ಅಂದರೆ ಕುಂಭ ರಾಶಿಯ ಜನರಿಗೆ ಸಾಡೇ ಸಾತಿ ನಡೆಯುತ್ತಿರುವುದರಿಂದ , ನಿಮ್ಮ ರಾಶಿಯಲ್ಲಿ ದಶ ಭುಕ್ತಿ ನಡೆಯುತ್ತಿದ್ದು , ನಿಮ್ಮ ರಾಶಿಯಲ್ಲಿ ಶನಿಯ ಬಲ ಹೇಗಿದೆ, ನಿಮ್ಮ ಜಾತಕದ ಗ್ರಹ ಬಲಾಬಲ ಎಷ್ಟಿದೆ , ಹೇಗೆ ಬದಲಾವಣೆಗಳು ಆಗುತ್ತವೆ. ವಿಶೇಷವಾಗಿ ಒಂದು ಎಚ್ಚರಿಕೆಯ ಅವಶ್ಯಕತೆ ಇದೆ . ಈ ವರ್ಷದಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು . ನಿಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆಗಳು ಬರುತ್ತವೆ ಎಂದು ನೋಡೋಣ . ಇಲ್ಲಿ ಶನಿ ಹೇಳಿಕೊಡುವ ಪಾಠ ಯಾವಾಗಲೂ ಕಠಿಣವಾಗಿ ಅಥವಾ ಒರಟಾಗಿ ಇರುತ್ತದೆ . ಜೀವನದ ವಾಸ್ತವವನ್ನು ಪರಿಚಯಿಸುವ ಮಟ್ಟಕ್ಕೆ ಅವು ಗಂಭೀರವಾಗಿ ಇರುತ್ತವೆ. ಜೀವನ ಅನ್ನೋದು ತುಂಬಾ ಕಷ್ಟ ಇರುತ್ತದೆ .
ಈ ಸಾಡೇ ಸಾತಿ ಅನ್ನೋ ಸಮಯದಲ್ಲಿ ಜೀವನದ ಬಗ್ಗೆ ಅರ್ಥ ಆಗುತ್ತದೆ. ಅರ್ಥ ಮಾಡಿ ಕೊಂಡಿರುವವರೆಗೂ ಕೂಡ ಪರಿಸ್ಥಿತಿ ಸುಲಭವಾಗಿ ಇರುವುದಿಲ್ಲ . ಹಾಗೆನೇ ಸಂದರ್ಭಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಆಗುವ ಸಾಧ್ಯತೆ ಇದೆ . ಸಾಡೇ ಸಾತಿಗೂ ಮುನ್ನ ಇರುವ ವ್ಯಕ್ತಿಯೇ ಬೇರೆ ಆಗಿರುತ್ತದೆ . ಇದಾದ ನಂತರ ಆ ವ್ಯಕ್ತಿಯ ಮೌಲ್ಯ , ಅವನಿಗೆ ಆಗುವ ಪಾಠಗಳು , ಅಥವಾ ಅನುಭವಗಳು , ಈ ತರಹದ ಪಾಠಗಳಿಂದ ಮನಸ್ಸು ಪರಿಪಕ್ವತೆ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹೊಸ ವ್ಯಕ್ತಿಗಳಾಗಿ ಬದಲಾಗಬಹುದು .
ಏಳುವರೆ ವರ್ಷದಲ್ಲಿ ಕುಂಭ ರಾಶಿಯವರು ಪೂರ್ತಿಯಾಗಿ ಬದಲಾವಣೆ ಆಗುತ್ತಾರೆ ಅಂದರೆ , ಅವರ ಜೀವನದಲ್ಲಿ ಪರಿವರ್ತನೆಗಳು ಶನಿ ಮಹಾತ್ಮನ ದಯೆಯಿಂದ ಆಗುತ್ತದೆ ಎಂದು ಹೇಳಬಹುದು . ಈ ಬದಲಾವಣೆ ಆಗುವ ಸಂದರ್ಭದಲ್ಲಿ ಬರುವ ಕಷ್ಟಗಳನ್ನು ತಪ್ಪಿಸಲು ಸಾಧ್ಯವಿಲ್ಲ . ಆದರೆ ನಾವು ಧೈರ್ಯವಾಗಿ ಅದನ್ನು ಎದುರಿಸುವ ಮಟ್ಟದಲ್ಲಿ ನಾವು ಇರಬೇಕು . ಶನಿ ಉದ್ಯೋಗ ಕಾರಕ ಆಗಿರುವುದರಿಂದ, ಕೆಲಸದಲ್ಲಿ ಬಹಳಷ್ಟು ಅಲ್ಲೋಲ ಕಲ್ಲೋಲಗಳು ಉಂಟಾಗುತ್ತದೆ .
ಅಂದರೆ ಜೀವನದಲ್ಲಿ ಪ್ರಮುಖವಾಗಿರುವ ವಿಚಾರಗಳನ್ನು ತಿಳಿದು ಕೊಳ್ಳಬೇಕಾಗುತ್ತದೆ . ಜನ್ಮ ಶನಿಯ ಸಂದರ್ಭದಲ್ಲಿ ನಡೆಯುವ ಘಟನೆಗಳು ತುಂಬಾ ಆಘಾತಕಾರಿ ವಿಚಾರಗಳು ಆಗಿರುತ್ತದೆ .ಹೊಸ ಜವಾಬ್ದಾರಿಗಳು , ಇದನ್ನೆಲ್ಲ ಸಮತೋಲನವಾಗಿ ಇಟ್ಟುಕೊಳ್ಳಲು ನಿಮಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ . ಕರ್ತವ್ಯಗಳನ್ನು ನಿಭಾಯಿಸುವ ಜವಾಬ್ದಾರಿ ಬಂದಾಗ , ನಿಮ್ಮ ಹಿರಿಯರು ಮಾಡಿರುವ ಕರ್ಮಗಳ ಜವಾಬ್ದಾರಿ ನಿಮ್ಮ ತಲೆಯ ಮೇಲೆ ಬರುತ್ತದೆ .
ನಿಮ್ಮ ಹಿರಿಯರು ಮಾಡಿದ ಕರ್ಮ ಫಲವನ್ನು ನೀವು ಅನುಭವಿಸಬೇಕಾಗುತ್ತದೆ . ಶನಿ ಕೆಲಸ ಮಾಡುವ ಹಾಗೆ ಮಾಡುವ ಇನ್ನೆರಡು ಗ್ರಹಗಳು ಯಾವುದೆಂದರೆ , ರಾಹು ಮತ್ತು ಕೇತು ಗ್ರಹ . ಇದಾದ ಮೇಲೆ ಗುರುಗ್ರಹ . ಈ ಮೂರು ಗ್ರಹಗಳೂ ಕೂಡ ಶನಿ ಮಾಡುವ ಕೆಲಸಗಳನ್ನೇ ಮಾಡುತ್ತವೆ. ಬಹಳ ಅದ್ಭುತವಾದ ಪರಿಣಾಮಗಳನ್ನು ಈ ಗ್ರಹಗಳಿಂದಲೂ ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ . ಒಂದಷ್ಟು ವಿಚಾರದಲ್ಲಿ ಈ ಗ್ರಹಗಳಿಂದ ಧನಾತ್ಮಕವಾಗಿಯೇ ಇರುತ್ತದೆ .
ಈ ನಾಲ್ಕು ಗ್ರಹಗಳ ಒಟ್ಟಾರೆ ಯಾವ ಪರಿಣಾಮ ನಿಮ್ಮ ರಾಶಿಯ ಮೇಲೆ ಯಾವ ರೀತಿ ಇರುತ್ತದೆ . ನಾವು ಇದರ ಬಗ್ಗೆ ತಿಳಿಯುವುದರಿಂದ ಮುಂದಿನ ಪ್ರಗತಿ ಕಾಣಬಹುದು . ಈ ವರ್ಷ ಮೂರು ನಾಲ್ಕು ಗ್ರಹಗಳು ನಿಮ್ಮ ರಾಶಿಯಲ್ಲಿ ಸೇರಿ ಪರಿಣಾಮ ಉಂಟುಮಾಡಲು ಶುರು ಮಾಡುತ್ತವೆ . ಪಾದರಸದ ರೀತಿ ಕೆಲಸ ಮಾಡುವ ಗ್ರಹಗಳು ರಾಹು ಮತ್ತು ಕೇತು .ಹಾಗೆ ಬೆಳ್ಳಿ ಹಾಗೆ ಕೆಲಸ ಮಾಡುವುದು ಗುರುವಿನ ಕೆಲಸ ಆಗಿರುತ್ತದೆ . ಶನಿಯ ಮೂಲ ತತ್ವ ದುಃಖ ಕಾರಕ .
ಅಂದರೆ ದುಃಖವನ್ನು ಕೊಡುತ್ತಿರುವುದು . ಮೊದಲಿಗೆ ಇದರ ಮೂಲ ತತ್ವ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು .ಈ ಗ್ರಹಗಳು ಮಾಡುವ ಅಂಶವನ್ನು ಅರ್ಥ ಮಾಡಿಕೊಂಡಾಗ , ನಮ್ಮ ಪ್ರಶ್ನೆಗಳಿಗೆ ಉತ್ತರ ತಾನಾಗಿಯೇ ಸಿಗುತ್ತಾ ಹೋಗುತ್ತದೆ . ಇವು ಕುಂಭ ರಾಶಿಗೆ ಬಹಳ ಹತ್ತಿರದಲ್ಲಿಯೇ ಇದೆ. ಬಹಳ ಅದ್ಭುತವಾದ ಪರಿಣಾಮಗಳನ್ನು ಈ ಗ್ರಹಗಳಿಂದಲೂ ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ . ಒಂದಷ್ಟು ವಿಚಾರದಲ್ಲಿ ಈ ಗ್ರಹಗಳಿಂದ ಧನಾತ್ಮಕವಾಗಿಯೇ ಇರುತ್ತದೆ .
ಈ ನಾಲ್ಕು ಗ್ರಹಗಳ ಒಟ್ಟಾರೆ ಯಾವ ಪರಿಣಾಮ ನಿಮ್ಮ ರಾಶಿಯ ಮೇಲೆ ಯಾವ ರೀತಿ ಇರುತ್ತದೆ .ನಾವು ಇದರ ಬಗ್ಗೆ ತಿಳಿಯುವುದರಿಂದ ಮುಂದಿನ ಪ್ರಗತಿ ಕಾಣಬಹುದು . ಈ ವರ್ಷ ಮೂರು ನಾಲ್ಕು ಗ್ರಹಗಳು ನಿಮ್ಮ ರಾಶಿಯಲ್ಲಿ ಸೇರಿ ಪರಿಣಾಮ ಉಂಟುಮಾಡಲು ಶುರು ಮಾಡುತ್ತವೆ ..ಈ ಗ್ರಹಗಳು ಮಾಡುವ ಅಂಶವನ್ನು ಅರ್ಥ ಮಾಡಿಕೊಂಡಾಗ , ನಿಮ್ಮ ರಾಶಿಯಲ್ಲಿ ಶನಿ ಗ್ರಹ ಇರುವುದರಿಂದ , ನಾವು ರಾಹು ಕೇತುವಿನ ದಾರಿ ಆಯ್ಕೆ ಮಾಡಿಕೊಳ್ಳುವುದಾದರೆ,
ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಿಕೊಂಡು ಮುಂದೆ ಹೋಗಬೇಕು . ಈ ದಾರಿಯಲ್ಲಿ ನಿಗೂಢವಾದ ವ್ಯಕ್ತಿತ್ವ ಇವರದು ಆಗಿರುತ್ತದೆ . ಗುರುವಿನ ದಾರಿಯಲ್ಲಿ ಹೋಗುವುದಾದರೆ ಬೇರೆಯವರಿಗೆ ಸಾಕಷ್ಟು ಒಳ್ಳೆಯದನ್ನು ಮಾಡುವುದು . ಮತ್ತು ತಮಗೆ ತಾವೇ ಒಳ್ಳೆಯದನ್ನು ಮಾಡಿಕೊಂಡು ಅಂದರೆ , ಧನಾತ್ಮಕವಾದ ದಾರಿಯಲ್ಲಿ ನಡೆಯುವುದು .ಈ ತರಹದ ವಿಚಾರವನ್ನು ಆಯ್ಕೆ ಮಾಡಿಕೊಂಡಾಗ ಗುರುವಿನ ದಾರಿಯಲ್ಲಿ ನಡೆದು ಸಾಗಬೇಕು .ಹಾಗೆಯೇ ಕೂಡ ಈ ವಿಚಾರಗಳಲ್ಲಿ ಭಯ ಇರಬೇಕು .
ಇಂತಹ ಭಯ ಇದ್ದಾಗ , ನಮ್ಮ ಜೀವನದಲ್ಲಿ ಹಾದಿ ತಪ್ಪುವ ಕೆಲಸಗಳು ನಡೆಯುವುದಿಲ್ಲ . ಮಿತಿಮೀರಿ ದಾರಿಯನ್ನು ನಾವು ತಪ್ಪುತ್ತೇವೆ ಎನ್ನುವ ಭಯ ಇವರಲ್ಲಿ ಕಾಡುತ್ತಿರುತ್ತದೆ . ಶನಿ ಗ್ರಹ ಜೀವನದಲ್ಲಿ ಏರುಪೇರುಗಳನ್ನು ನೀಡುತ್ತಿರುತ್ತದೆ . ಹಲವಾರು ರೀತಿಯ ಪಾಠಗಳು ನಿಮಗೆ ಸಿಗುತ್ತಿರುತ್ತವೆ .ಗುರುವಿನ ದಾರಿ ಎಂದರೆ , ನೀವು ಪ್ರಾರ್ಥನೆ ಮಾಡಿದಷ್ಟು ನಿಮ್ಮ ಜೀವನದಲ್ಲಿ ನಿಮಗೆ ಧೈರ್ಯ ಸಿಗುತ್ತಾ ಹೋಗುತ್ತದೆ . ನೀವು ಧನಾತ್ಮಕವಾಗಿ ಇರಬೇಕು ಎಂದರೆ , ಗುರುವಿನ ಮಾರ್ಗವನ್ನು ಅನುಸರಿಸಬೇಕು .
ಆ ಮಾರ್ಗ ಯಾವುದೆಂದರೆ , ಯೋಗ , ಪೂಜೆ , ಪುನಸ್ಕಾರಗಳು , ಪ್ರಾರ್ಥನೆ , ಈ ರೀತಿ ಮಾಡುವುದರಿಂದ , ನಿಮ್ಮ ಜೀವನದಲ್ಲಿ ಧೈರ್ಯ ಹೆಚ್ಚಾಗುತ್ತದೆ .ನೀವು ನದಿ ಅಥವಾ ಪ್ರಕೃತಿಯ ಸುಂದರ ತಾಣಗಳಲ್ಲಿ ಸಮಯ ಕಳೆಯುವುದರಿಂದ , ನಿಮ್ಮ ಜೀವನದಲ್ಲಿ ಪರಿವರ್ತನೆಗಳು ಆಗುವ ಸಾಧ್ಯತೆ ಇರುತ್ತದೆ . ನೀವು ಮಾರ್ಗದರ್ಶನ ನೀಡುವ ವ್ಯಕ್ತಿಗಳ ಜೊತೆಯಲ್ಲಿ ಸಮಯ ಕಳೆಯುವುದು ಉತ್ತಮವಾಗಿರುತ್ತದೆ . ಅಂದರೆ ನಿಮ್ಮ ಗುರು ಹಿರಿಯರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿದುಕೊಂಡು ಮಾರ್ಗದರ್ಶನ ಪಡೆಯುವುದು ಒಳ್ಳೆಯದು .
ಈ ಸಂದರ್ಭದಲ್ಲಿ ಅನುಭವ ಇರುವ ವ್ಯಕ್ತಿಗಳಿಂದ ನೀವು ಮಾರ್ಗದರ್ಶನ ಪಡೆದು ಕೊಳ್ಳುವುದರಿಂದ , ಅವರು ನಿಮಗೆ ಸಾಕಷ್ಟು ರೀತಿಯ ಧೈರ್ಯ ತುಂಬುವ ಸಾಧ್ಯತೆ ಹೆಚ್ಚಾಗಿರುತ್ತದೆ .ನಿಮ್ಮ ಮಟ್ಟಿಗೆ ಹೇಳುವುದಾದರೆ , ಇದೇ ಒಂದು ಪಾಠವಾಗಿ ಇರುತ್ತದೆ .ಅನುಭವ ವ್ಯಕ್ತಿಗಳಿಂದ ಸಲಹೆ ಪಡೆದುಕೊಳ್ಳುವುದು ಕೂಡ , ಗುರು ಮಾರ್ಗ ಆಗಿರುತ್ತದೆ .ಅಂದರೆ ಗುರುವಿನ ದಾರಿ . ನೀವು ದೇವರಿಗೆ ಮಾಡುವ ಪ್ರಾರ್ಥನೆ ಕೂಡ ಗುರುವಿಗೆ ತಲುಪುತ್ತದೆ . ಈ ಎಲ್ಲ ವಿಚಾರಗಳು ನಿಮ್ಮನ್ನ ಧನಾತ್ಮಕವಾಗಿ ಇರಲು ಸಹಾಯ ಮಾಡುತ್ತದೆ .
ನೀವು ಅಮಾವಾಸ್ಯೆಯ ಕತ್ತಲನ್ನು ತೊರೆದು , ಹುಣ್ಣಿಮೆಯ ಚಂದ್ರನನ್ನು ಆಯ್ಕೆ ಮಾಡಿಕೊಳ್ಳಬೇಕು . ಸಾಡೇ ಸಾತಿ ಸಂದರ್ಭದಲ್ಲಿ ವ್ಯಕ್ತಿಗಳು ಮಾಡಬಾರದ ವಿಚಾರ ಯಾವುದೆಂದರೆ , ಶನಿ ಗ್ರಹದಿಂದ ಯಾವಾಗ ಯಾವ ರೀತಿ ಸಮಸ್ಯೆಗಳು ಆಗುತ್ತದೆ ಎಂದು ಹೇಳಲು ಸಾಧ್ಯವಾಗದ ಕಾರಣ , ನೀವು ಯಾವುದೇ ರೀತಿಯ ಭ್ರಾಂತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು . ನಿಮಗೆ ಹೆಚ್ಚಿನ ಮಟ್ಟದಲ್ಲಿ ಹಣ ದೊರೆಯುವುದು , ನಿಮ್ಮ ಜೀವನದ ಹಾದಿಯನ್ನು ಬಹಳಷ್ಟು ಬಾರಿ ತಪ್ಪಿಸುತ್ತದೆ ಎಂದು ಹೇಳಬಹುದು ..
ನೀವು ಈ ತರಹದ ಬ್ರಾಂತಿಯಲ್ಲಿ ಯಾವತ್ತಿಗೂ ತೇಲಾಡಬಾರದು . ಇದರಿಂದ ತುಂಬಾ ಸಮಸ್ಯೆಗಳು ಆಗುವ ಸಾಧ್ಯತೆ ಇದೆ .ಯಾವುದೇ ಕಾರಣಕ್ಕೂ ನೀವು ಅಹಂಕಾರ , ತಪ್ಪು ಕಲ್ಪನೆ , ಇವುಗಳನ್ನು ಇಟ್ಟುಕೊಳ್ಳಬಾರದು . ಇದೆಲ್ಲವನ್ನು ತೊರೆದು , ನೀವು ಜೀವನದಲ್ಲಿ ಮುಂದುವರಿಯುವುದರಿಂದ , ಧನಾತ್ಮಕ ಚಿಂತನೆಗಳು ಎದುರಾಗುತ್ತವೆ ಎಂದು ಹೇಳಬಹುದು. ನಿಮ್ಮ ದಶ ಭುಕ್ತಿಗಳ ಬಲಕ್ಕಿಂತ ನಿಮ್ಮ ಆತ್ಮ ಬಲಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು .ಮನಸ್ಸಿನ ಧೈರ್ಯ ಬಲ ಎನ್ನುವುದನ್ನ ಪ್ರಚೋದನೆ ಮಾಡಿಕೊಳ್ಳಬೇಕು .ಮತ್ತೆ ಪ್ರಾರ್ಥನೆ ಗುರುಗಳ ಕಡೆ ಸಾಗುವುದು .ಇದಿಷ್ಟು ಮಾಡುವುದರಿಂದ ನೀವು ಜೀವನದಲ್ಲಿ ಖುಷಿಯಾಗಿ ಮತ್ತು ಧನಾತ್ಮಕ ಚಿಂತನೆಗಳಿಂದ ಜೀವನ ನಡೆಸಬಹುದು .