ಹುಟ್ಟಿದ ದಿನಾಂಕದ ಮೂಲಕ ಯಾವಾಗ ವಿವಾಹ ಆಗುವದೆಂದು ತಿಳಿಯಿರಿ

0

ಎಲ್ಲರಿಗೂ ಒಂದು ಕ್ಯೂರಿಯಾಸಿಟಿ ಇರುತ್ತದೆ, ನನ್ನ ಮದುವೆ ಯಾವಾಗ ಆಗಬಹುದು? ಅಥವಾ ಈ ಮೊದಲೇ ಮದುವೆಯಾಗಿದ್ದರೆ ಈ ವರ್ಷದಲ್ಲೇ ಮದುವೆ ಯಾಕೆ ಆಯಿತು? ಹಾಗಾದರೆ ನನ್ನ ಡೇಟ್ ಆಫ್ ಬರ್ತ್ಗೂ ಮದುವೆಯಾದ ವರ್ಷಕ್ಕೂ ಸಂಬಂಧ ಇದೆಯಾ? ಇದನ್ನು ನ್ಯೂಮರಾಲಜಿಯಲ್ಲಿ ನಮ್ಮ ಡೇಟ್ ಆಫ್ ಬರ್ತ್ ತೆಗೆದುಕೊಂಡು ಅದರಲ್ಲಿ ಆರಿಜಿನ್ ನಂಬರ್ ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯೋದರ ಮೂಲಕ ನಾವು ಇಂತಹ ವರ್ಷದಲ್ಲಿ ಮದುವೆಯಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವ ರೀತಿ ಕಂಡುಹಿಡಿಯೋದು?

ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ನಾವು ಇಲ್ಲಿ ನೋಡೋಣ. ಒರಿಜಿನ್ ನಂಬರ್ನ್ನು ಕಂಡುಹಿಡಿಯುವಂಹದು ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯುವಂತಹದ್ದು ಇಲ್ಲಿ ಒಂದು ಹುಟ್ಟಿದ ತಾರೀಖು ತೆಗೆದುಕೊಳ್ಳೋಣ 14-02-1992 ಈ ದಿನಾಂಕದಲ್ಲಿ ಒರಿಜಿನ್ ನಂಬರ್ನ್ನು ಕಂಡುಹಿಡಿಯಲು ಹುಟ್ಟಿದ ದಿನಾಂಕ 14 ಇದನ್ನು ನಾವು ಒಂದು ಅಂಕಿಗೆ ವರ್ಗಾಯಿಸಬೇಕು ಅಂದರೆ,

1+4=5, 5 ಒರಿಜಿನ್ ನಂಬರ್. ತಿಂಗಳು 02 ನ್ನು ಹಾಗೇ ಇಟ್ಟುಕೊಳ್ಳೋಣ, ಇನ್ನು ವರ್ಷ 1992, ಈ ಹುಟ್ಟಿದ ದಿನಾಂಕದವರಿಗೆ ಮದುವೆ 2023ರಲ್ಲಿ ನಡೆಯುತ್ತದೆಯಾ? ಎಂದು ಕಂಡುಹಿಡಿಯಲು ಆದುದರಿಂದ 14-02-2023 ಎಂದು ತೆಗೆದುಕೊಳ್ಳುವ, ಈಗ ಪರ್ಸನಲ್ ವರ್ಷವನ್ನು ಕಂಡುಹಿಡಿಯಬೇಕು. ಇಲ್ಲಿ 1+4+0+2+2+0+2+3=7+7=14=1+4=5. ಒರಿಜಿನ್ ನಂ.5 ಹಾಗೂ ಪರ್ಸನಲ್ ವರ್ಷವೂ 5 ಅದನ್ನು ಈಗಾಗಲೇ ಸಿದ್ಧಪಡಿಸಿರುವ ಚಾರ್ಟ್ ನಲ್ಲಿ ಪರಿಶೀಲಿಸಬೇಕು ಒರಿಜಿನ್ ನಂಬರ್ಪ ರ್ಸನಲ್ ವರ್ಷ

1 1, 4, 5, 7, 9 . 2 1, 2, 5, 6, 8 .3 3, 6, 7, 9. 4 1, 2, 4, 7, 8.5 2, 3, 5, 7, 9. 6 1, 2, 3, 5, 6, 8.7 1, 2, 4, 8.8 1, 2, 4, 6, 8
9 1, 2, 3, 6, 7

ಮೇಲಿನ ಹುಟ್ಟಿದ ದಿನಾಂಕದ ಒರಿಜಿನ್ ನಂ. ಹಾಗೂ ಪರ್ಸನಲ್ ನಂ. ಈ ಚಾರ್ಟ್ನಲ್ಲಿದೆಯೇ ಎಂದು ನೋಡಿಕೊಳ್ಳಬೇಕು, ಇದ್ದರೆ ಮದುವೆ ಆಗುತ್ತೆ. ಎಂದರ್ಥ. ಇನ್ನೊಂದು ಉದಾಹರಣೆ, ಈಗಾಗಲೇ ಮದುವೆಯು ನಡೆದಿರುತ್ತದೆ. ಆ ವಿವಾಹವಾದಂತಹ ವರ್ಷವನ್ನು ತೆಗೆದುಕೊಂಡು ಸರಿಯಿದೆಯೇ ಎಂದು ನೋಡೋಣ. 4-3-2019 ಈ ದಿನಾಂಕದಲ್ಲಿ 04 ಹುಟ್ಟಿದ ದಿನಾಂಕ, 03 ಹುಟ್ಟಿದ ತಿಂಗಳು, ಮದುವೆಯಾಗಿರುವುದರಿಂದ ಹುಟ್ಟಿದ ವರ್ಷವು ಬೇಕಾಗುವುದಿಲ್ಲ ಆದುದರಿಂದ ವಿವಾಹವಾದ ವರ್ಷವನ್ನು ತೆಗೆದುಕೊಳ್ಳೋಣ 2019 ಇನ್ನು ಇದನ್ನು ಸಿಂಗಲ್ ಡಿಜಿಟ್ಗೆ ವರ್ಗಾಯಿಸುವಂತದ್ದು.

ಇದರಲ್ಲಿ ಒರಿಜಿನ್ ನಂ.4 ಇನ್ನು ಪರ್ಸನಲ್ ವರ್ಷವನ್ನು ಕಂಡುಹಿಡಿಯಲು 4+3+2+0+1+9=19=1+9=10=1+0=1. ಚಾರ್ಟ್ನಲ್ಲಿ 4 – 1 ಅಂದರೆ ಒರಿಜಿನ್ ಹಾಗೂ ಪರ್ಸನಲ್ ವರ್ಷ ಇರುವುದರಿಂದ ಮದುವೆಯಾದ ವರ್ಷದಿಂದ ಮದುವೆ ಆಗಿದೆಯೇ ಎಂದು ತಿಳಿಯಬಹುದು. ಮತ್ತೊಂದು ಉದಾಹರಣೆ: 26-06-1994 ಈ ಹುಟ್ಟಿದ ದಿನಾಂಕದವರಿಗೆ 2013ರಲ್ಲಿ ಮದುವೆ ಆಗುತ್ತದೆಯೇ ಎಂದು ಕಂಡುಹಿಡಿಯಲು, ಹುಟ್ಟಿದ ದಿನಾಂಕ 26, 2+6=8 ಆದ್ದರಿಂದ ಒರಿಜಿನ್ ನಂ.8. 8+6+2+0+2+3=14+7=1+4+7=5+7=12=1+2=3. ಪರ್ಸನಲ್ ವರ್ಷ

3, ಇವೆರಡನ್ನು ಚಾರ್ಟ್ನಲ್ಲಿ ಪರಿಶೀಲಿಸಿದಾಗ 8-3 ಇರುವುದಿಲ್ಲ, ಹಾಗಾಗಿ 2023ರಲ್ಲಿ ಮದುವೆಯು ನಡೆಯುವುದಿಲ್ಲ, ಆದ್ದರಿಂದ ಮುಂದಿನ ಒರಿಜಿನ್ ನಂ.9ರಲ್ಲಿ ಪರಿಶೀಲಿಸಿದಾಗ ಅದರಲ್ಲಿ 3 ಪರ್ಸನಲ್ ವರ್ಷವು ಇರುತ್ತದೆ. ಇದರಿಂದ 2024ಕ್ಕೆ ಮದುವೆಯು ನಡೆಯುತ್ತದೆ ಎಂದು ತಿಳಿಯಬಹುದು. ಈ ವಿಧಾನ ಸರಿಯಿಲ್ಲ ಎಂದು ಕೆಲವರಿಗೆ ಅನ್ನಿಸಿದರೆ ಬರ್ತ್ ಚಾರ್ಟ್ನ್ನು ಪರಿಶೀಲಿಸಬೇಕಾಗುತ್ತದೆ. ಏಕೆಂದರೆ ಅದರಲ್ಲಿ ಕರ್ಮದ ಸೂಕ್ಷ್ಮ ಎಳೆಗಳಿರುತ್ತದೆ, ಬೇರೆ ಬೇರೆ ಕಂಡೀಷನ್ ಇರುತ್ತದೆ ಆ ಕಾರಣದಿಂದಾಗಿ ನ್ಯೂಮರಾಲಜಿಯಲ್ಲಿ ವ್ಯತ್ಯಾಸಬಂದಿರಬಹುದು.

Leave A Reply

Your email address will not be published.