ಲಕ್ಷ್ಮಿ ದೇವಿಗೆ ಕೋಪ ಬರುವ ಈ ಕೆಲಸ ಮಾಡಿದರೆ ಬದುಕಿನಲ್ಲಿ ಏಳಿಗೆ ಆಗೋಲ್ಲ

ನಾವು ಈ ಲೇಖನದಲ್ಲಿ ಲಕ್ಷ್ಮಿ ದೇವಿಗೆ ಕೋಪ ಬರುವ ಈ ಕೆಲಸ ಮಾಡಿದರೆ ಬದುಕಿನಲ್ಲಿ ಏಕೆ ಏಳಿಗೆ ಆಗುವುದಿಲ್ಲ ಎಂಬ ವಿಷಯದ ಬಗ್ಗೆ ತಿಳಿಯೋಣ . ಯಾವ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ , ಮಾಡುವ ಕೆಲಸದಲ್ಲಿ ಸದಾ ಅಡೆತಡೆ , ಒಂದೊಂದು ರೂಪಾಯಿಗೂ ಸಂಕಷ್ಟ , ಯಶಸ್ಸು ಅನ್ನುವುದೇ ಇಲ್ಲ ಎಂದರೆ , ಮೊದಲು ಮನೆಯಲ್ಲಿ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು .

ಇಲ್ಲ ಅಂದರೆ ನೀವು ಎಷ್ಟೇ ಭಕ್ತಿ ಭಾವದಿಂದ ದೀಪ ಹಚ್ಚಿದರು , ಬೇಡಿಕೊಂಡರು ಕಷ್ಟಗಳು ಮಾತ್ರ ಕರಗುವುದಿಲ್ಲ . ನೀವು ತಿಳಿಯದ ಹಾಗೆ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ನೆಮ್ಮದಿ ಹಾಗೂ ಹಣ ನೆಲೆಸುವುದಿಲ್ಲ . ಸಾಕ್ಷಾತ್ ಲಕ್ಷ್ಮಿ ಅಂಶಗಳು ಎಂದರೆ, ಮನೆಯಲ್ಲಿ ಸಂತೋಷ , ನೆಮ್ಮದಿ , ಹಣ , ಆರೋಗ್ಯ ಸ್ಥಿರವಾಗಿ ಇರುವುದು . ಆ ಸ್ಥಿರತೆಯೇ ಮನೆಯಲ್ಲೇ ಇಲ್ಲ ಅಂದರೆ ಲಕ್ಷ್ಮಿ ಅಂಶವು ಕೂಡ , ಮನೆಯಲ್ಲಿ ನೆಲೆಸುವುದಿಲ್ಲ .ಕಷ್ಟದ ಮೇಲೆ ಕಷ್ಟಗಳು ಎದುರಾಗುತ್ತದೆ .

ಮೊದಲನೆಯದಾಗಿ ಸ್ನಾನ ಮಾಡುವಾಗ ಅಥವಾ ಕೈ ಕಾಲುಗಳನ್ನು ತೊಳೆಯಬೇಕಾದರೆ , ಎಷ್ಟೋ ಜನರು ಒಂದು ಕಾಲಿಂದ ಮತ್ತೊಂದು ಕಾಲನ್ನು ಹುಜ್ಜಿ ಸ್ನಾನ ಮಾಡುತ್ತಾರೆ . ಕಾಲುಗಳನ್ನು ತೊಳೆಯುತ್ತಾರೆ . ಈ ತಪ್ಪು ಮಾತ್ರ ಮಾಡಬಾರದು . ಇದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ಎಂದಿಗೂ ನೆಲೆಸುವುದಿಲ್ಲ . ಯಾರ ಮನೆಯಲ್ಲಿ ವ್ಯಸನಿಗಳು ಇರುತ್ತಾರೋ , ಅಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ .ವ್ಯಸನಕ್ಕೂ ಒಂದು ಮಿತಿ ಅನ್ನೋದು ಇರಬೇಕು . ಆ ಮಿತಿ ಮೀರಿದರೆ ಮನೆಯಲ್ಲಿ ಲಕ್ಷ್ಮಿ ದೇವಿಯ ಬದಲಿಗೆ ದಾರಿದ್ರ್ಯ ದೇವಿ ಬಂದು ನೆಲೆಸುತ್ತಾಳೆ .

ಮನೆಯಲ್ಲಿ ದೇವರ ಚಿತ್ರಕಲೆ ಅಥವಾ ಪೇಪರ್ ಮೇಲೆ ಫೋಟೋ ಇದ್ದರೆ, ಆ ಫೋಟೋಗಳನ್ನು ಮುದುರಿ ಎಸೆಯಬಾರದು . ಒಡೆದು ಹೋದ ಚಿತ್ರ ಪಟಗಳನ್ನು ಅಥವಾ ಫೋಟೋಗಳನ್ನು ಮನೆಯಲ್ಲಿ ಇಡಬಾರದು . ಒಡೆದು ಹೋದ ಫೋಟೋಗಳನ್ನು ನೀರಿನಲ್ಲಿ ಬಿಡುವುದು , ಅರಳಿ ಮರದ ಕೆಳಗಡೆ ಇಡುವುದು ಮಹಾ ದೊಡ್ಡ ತಪ್ಪು .ಪ್ರಕೃತಿಯನ್ನು ದೇವರ ರೀತಿಯಲ್ಲಿಯೇ ನೋಡಬೇಕು . ನಮ್ಮ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಅಥವಾ ಮತ್ತೊಂದು ಜೀವ ಸಂಕುಲಕ್ಕೆ ನಮ್ಮಿಂದ ಗಾಜಿನ ಚೂರುಗಳಿಂದ ತೊಂದರೆಯಾಗಬಹುದು ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿ ಇರಬೇಕು .

ಹಾಗೆಯೇ ಊಟ ಮಾಡುವಾಗ ನಿಮಗೆ ಎಷ್ಟು ಅವಶ್ಯಕತೆ ಇರುತ್ತದೆಯೋ , ಅಷ್ಟೇ ಆಹಾರವನ್ನು ತಟ್ಟೆಗೆ ಬಡಿಸಿಕೊಳ್ಳಬೇಕು . ಹೇಗೆ ಬೇಕೋ ಹಾಗೆ ಅನ್ನದ ಮೇಲೆ ನಿಮ್ಮ ಅಹಂಕಾರ ಕೋಪ ತೋರಿಸಬಾರದು ..ಟಿವಿ , ಮೊಬೈಲ್ ಗಳನ್ನು ನೋಡುತ್ತಾ ಊಟವನ್ನು ಮಾಡುವುದು , ಊಟ ಮಾಡುವಾಗ ಕಾಲುಗಳನ್ನು ಅಲ್ಲಾಡಿಸುವುದು , ಊಟವನ್ನು ಹಾಕಿಕೊಂಡು ಸರಿಯಾಗಿ ತಿನ್ನದೆ ಚೆಲ್ಲುವುದು , ನಿರಂತರವಾಗಿ ಈ ತಪ್ಪುಗಳನ್ನು ಮಾಡುತ್ತಾ ಬಂದರೆ , ಒಂದೇ ಒಂದು ಕ್ಷಣವೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ .

ಮಕ್ಕಳು ಈ ತಪ್ಪುಗಳನ್ನು ಮಾಡುತ್ತಿದ್ದರೆ ತಪ್ಪದೇ ಅವರಿಗೆ ತಿಳಿ ಹೇಳಬೇಕು . ಇದರಿಂದ ಲಕ್ಷ್ಮಿ ದೇವಿಗೆ ಕೋಪ ಬಂದು ಮನೆಯನ್ನು ಬಿಟ್ಟು ಹೋಗುತ್ತಾಳೆ . ಹಾಗೆಯೇ ಮಂಗಳವಾರದ ದಿನ ಸಾಲವನ್ನು ಪಡೆದುಕೊಳ್ಳಬಾರದು . ಜೀವನಪೂರ್ತಿ ಆ ಋಣದಲ್ಲಿ ಇರಬೇಕಾಗುತ್ತದೆ . ಸಾಲ ತೀರಿಸಲು ಆಗದೆ ವಿಪರೀತ ಖಿನ್ನತೆಗೆ ಒಳಗಾಗಬೇಕಾಗುತ್ತದೆ . ಯಾರ ಬಳಿಯಾದರೂ ಸಾಲ ಮಾಡಬೇಕು ಅಂದರೆ ಮಂಗಳವಾರದ ದಿನ ಮಾತ್ರ ಸಾಲ ಮಾಡಬೇಡಿ . ಇನ್ನು ಬುಧವಾರದ ದಿನ ಯಾವುದೇ ವ್ಯಕ್ತಿಗೂ ಸಾಲವನ್ನು ನೀಡಬಾರದು .

ಆರೋಗ್ಯದ ಸಮಸ್ಯೆ ಇದ್ದಾಗ ಮಾತ್ರ ಬುಧವಾರ ಸಾಲ ನೀಡಬಹುದೇ ವಿನ: . ಸುಮ್ಮನೆ ಬುಧವಾರ ಸಾಲ ನೀಡಿದರೆ ಆ ಹಣ ಮರಳಿ ಬರುವುದು , ತುಂಬಾ ಕಷ್ಟವಾಗುತ್ತದೆ . ಲಕ್ಷ್ಮೀದೇವಿ ನಿಮ್ಮಿಂದ ದೂರ ಹೋಗುತ್ತಾಳೆ . ಶುಕ್ರವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು . ಲಕ್ಷ್ಮೀ ದೇವಿಗೆ ನೀಲಿ ಬಣ್ಣ ಎಂದರೆ ಬಹಳ ಇಷ್ಟ . ಕ್ಷೀರಸಾಗರದಿಂದ , ಹಾಲಿನ ಸಮುದ್ರದಿಂದ ಬಂದಂತಹ , ಮಹಾಲಕ್ಷ್ಮಿಗೆ ನೀಲಿ ಎಂದರೆ ಇಷ್ಟ . ಶುಕ್ರವಾರ ನೀಲಿ ಬಣ್ಣದ ವಸ್ತ್ರವನ್ನು ಬಳಸಿ ,

ಆದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬೇಡಿ . ಇನ್ನು ಮನೆಯ ಉತ್ತರದ ದಿಕ್ಕಿನಲ್ಲಿ ಕಪ್ಪು ಬಣ್ಣದ ವಸ್ತುವನ್ನು ಇಡಬಾರದು . ಉತ್ತರ ದಿಕ್ಕು ದುಡ್ಡಿಗೆ ಸಂಬಂಧಪಟ್ಟ ದಿಕ್ಕು ಆಗಿರುತ್ತದೆ . ಉತ್ತರ ದಿಕ್ಕು ಕುಬೇರನ ದಿಕ್ಕು ಆಗಿರುತ್ತದೆ . ಹಾಗೆಯೇ ಸಂಚರಿಸುವ ದಿಕ್ಕು . ಆ ದಿಕ್ಕಿನಲ್ಲಿ ಕಗ್ಗತ್ತಲೆ ಅಥವಾ ಕಪ್ಪು ಬಣ್ಣದ ವಸ್ತುವನ್ನು ಇಡಬಾರದು . ಇದರಿಂದ ಆ ಮನೆಗೆ ಲಕ್ಷ್ಮೀದೇವಿಯ ಅನುಗ್ರಹ ಕಡಿಮೆಯಾಗುತ್ತಾ ಹೋಗುತ್ತದೆ . ಹಾಗೆಯೇ ಲಕ್ಷ್ಮಿ ದೇವಿಗೆ ಪ್ರಿಯ ಆಗುವಂತಹ

ಈ ಒಂದು ಪುಷ್ಪ ಹಾಗೂ ಈ ಎಲೆಯ ವಿಚಾರದಲ್ಲಿ ಈ ಒಂದು ತಪ್ಪು ಆಗದಂತೆ ನೋಡಿಕೊಳ್ಳಬೇಕು . ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸುವಂತಹ ಕಮಲದ ಪುಷ್ಪ ಹಾಗೂ ಬಿಲ್ವಪತ್ರೆ ಎಲೆಗಳು ಎಂದಿಗೂ ಕೂಡ ನೀವು ಪೂಜೆಗೆ ಅರ್ಪಿಸುವಾಗ ಮುದುಡಿ ಇರಬಾರದು . ನಿಮ್ಮ ಕೈಯಾರೆ ಆ ಪುಷ್ಪ ಮತ್ತು ಎಲೆಗಳನ್ನು ಮುದುರಬಾರದು . ಲಕ್ಷ್ಮಿ ಪೂಜೆಯಲ್ಲಿ ಈ ತಪ್ಪು ನಡೆದರೆ ಆ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸುವುದಿಲ್ಲ . ಲಕ್ಷ್ಮಿ ಸ್ವರೂಪವಾದ ಬಾಗಿಲನ್ನು , ಮುಖ್ಯ ದ್ವಾರವನ್ನು ಕಾಲಿನಿಂದ ತಳ್ಳುವುದು , ಒದೆಯುವುದು ಮಾಡಬಾರದು . ಸದಾ ಸ್ತ್ರೀಯರು ಮನೆಯಲ್ಲಿ ಕಣ್ಣೀರನ್ನು ಹಾಕಬಾರದು .

ಆ ಮನೆಗೆ ದಾರಿದ್ರ್ಯ ದೋಷಗಳು ಹೆಚ್ಚಾಗುತ್ತಾ ಹೋಗುತ್ತದೆ . ಮನೆಯಲ್ಲಿ ಇಟ್ಟ ಹಣವನ್ನು ಮನೆಯ ಸದಸ್ಯರೇ ಕದಿಯಬಾರದು . ಇದರಿಂದ ಲಕ್ಷ್ಮಿಯ ಅಂಶ ಮತ್ತು ಲಕ್ಷ್ಮೀದೇವಿಯ ಕೃಪೆ ಆ ಮನೆಗೆ ಕಡಿಮೆಯಾಗುತ್ತಾ ಹೋಗುತ್ತದೆ . ಇದರಿಂದ ಹಣಕಾಸಿನ ಸಂಕಷ್ಟಗಳು ಮನೆಯಲ್ಲಿ ಉಲ್ಬಣವಾಗುತ್ತದೆ . ಮನೆಯಲ್ಲಿ ಎಲ್ಲಿ ಅಂದರೆ ಅಲ್ಲಿ ಚಿಲ್ಲರೆ ಅಥವಾ ಹಣವನ್ನು ಇಡಬಾರದು . ಒಂದು ಪರಿಶುದ್ಧವಾದ ಜಾಗದಲ್ಲಿ ಲಕ್ಷ್ಮಿ ದೇವಿಯ ಸ್ವರೂಪ ವಾದ ಹಣವನ್ನು ಇಡಬೇಕು . ಊಟ ಮಾಡಿದ ನಂತರ ತಟ್ಟೆಯನ್ನು ಒಣಗಲು ಬಿಡಬಾರದು . ಇದರಿಂದ ದಾರಿದ್ರ್ಯ ತನ ಮನೆಗೆ ಹೆಚ್ಚಾಗುತ್ತಾ ಹೋಗುತ್ತದೆ .ಆರೋಗ್ಯದ ಸಮಸ್ಯೆಗಳು ಕೂಡ ಎದುರಾಗುತ್ತದೆ . ಗೊತ್ತಿದ್ದು ಗೊತ್ತಿಲ್ಲದೆ ಮಾಡುವ ಕೆಲವೊಂದು ತಪ್ಪುಗಳಿಂದ ಹಣಕಾಸಿನ ಸಂಕಷ್ಟಗಳು ಯಾವ ರೀತಿ ಎದುರಾಗುತ್ತದೆ , ಲಕ್ಷ್ಮೀದೇವಿ ಯಾವ ರೀತಿ ಮನೆ ಬಿಟ್ಟು ಹೋಗುತ್ತಾಳೆ ಎಂದು ಇಲ್ಲಿ ತಿಳಿಸಲಾಗಿದೆ .

Leave a Comment