ಮೈ ಮೇಲೆ ಹಲ್ಲಿ ಬಿದ್ದರೆ

ನಾವು ಈ ಲೇಖನದಲ್ಲಿ ಮೈ ಮೇಲೆ ಹಲ್ಲಿ ಬಿದ್ದರೆ , ಹೇಗೆ ಅಪಶಕುನ ಎಂಬುದರ ಬಗ್ಗೆ ತಿಳಿದುಕೊಳ್ಳೋಣ .
ಮೈ ಮೇಲೆ ಹಲ್ಲಿ ಬೀಳುವುದು ಅಪಶಕುನವೇ …! ಮಹಿಳೆಯರ ದೇಹದ ಈ ಭಾಗದ ಮೇಲೆ ಬಿದ್ದರೆ , ಶುಭ ಶಕುನ ಖಂಡಿತ…! ಮೈಮೇಲೆ ಹಲ್ಲಿ ಬೀಳುವುದು ಅಪಶಕುನ ಎನ್ನುವುದು , ಕೆಲವರ ವಾದ .

ಇನ್ನೂ ಕೆಲವರು ಹಲ್ಲಿ ಬೀಳುವುದು ಶುಭ ಸೂಚನೆ ಎನ್ನುತ್ತಾರೆ . ಆದರೆ ಮಹಿಳೆಯರ ದೇಹದ ಕೆಲ ಭಾಗದ ಮೇಲೆ ಹಲ್ಲಿ ಬೀಳುವುದು , ಶುಭ ಶಕುನದ ಸೂಚನೆ ಎನ್ನುತ್ತದೆ ಧಾರ್ಮಿಕ ನಂಬಿಕೆ . ಧಾರ್ಮಿಕ ನಂಬಿಕೆಗಳನ್ನು ಕೆಲವರು ಅನುಸರಿಸಿದರೆ , ಇನ್ನು ಕೆಲವರು ಅದನ್ನು ತೆಗಳುತ್ತಾರೆ , ಕೆಲವರು ಮೂಡನಂಬಿಕೆ ಎನ್ನುತ್ತಾರೆ.

ಆದರೆ ಧಾರ್ಮಿಕ ನಂಬಿಕೆಗಳಿಗೆ ಅವರದ್ದೇ ಆದ ಅರ್ಥವಿದೆ . ಅದನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು . ಮೈ ಮೇಲೆ ಹಲ್ಲಿ ಬೀಳುವ ವಿಚಾರವನ್ನು ಹಾಗೆಯೇ ಬಿಡುತ್ತಾರೆ. ಕೆಲವರು ಮೈ ಮೇಲೆ ಹಲ್ಲಿ ಬಿದ್ದ ತಕ್ಷಣ ಹೋಗಿ , ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ . ಅಲ್ಲದೆ ಇದು ಅಪಶಕುನ ಎನ್ನುತ್ತಾರೆ .
ಆದರೆ ಮಹಿಳೆಯರ ದೇಹದ ಕೆಲವು ಭಾಗಗಳ ಮೇಲೆ ಹಲ್ಲಿ ಬೀಳುವುದು ಶುಭ ಶಕುನವನ್ನು ಸೂಚಿಸುತ್ತದೆ . ಎನ್ನುತ್ತದೆ ಧಾರ್ಮಿಕ ನಂಬಿಕೆ . ಆದರೆ ಹೆಣ್ಣು ಮಕ್ಕಳ ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ, ಶುಭ ಶಕುನ ಎಂದು ನೋಡೋಣ .

ತುಟಿಯ ಮೇಲೆ ಹಲ್ಲಿ ಬೀಳುವುದರಿಂದ , ಕೆಲವು ಸಮಸ್ಯೆಗಳು ಉಂಟಾಗಬಹುದು. ಬೆನ್ನಿನ ಮೇಲೆ ಹಲ್ಲಿ ಬೀಳುವುದರಿಂದ , ಸಾವಿನ ಸುದ್ದಿ ಎದುರಾಗಬಹುದು , ಉಗುರಿನ ಮೇಲೆ ಹಲ್ಲಿ ಬೀಳುವುದರಿಂದ , ಯಾವುದೋ ಸಮಸ್ಯೆ ನಿಮ್ಮನ್ನು ಕಾಡಬಹುದು . ಕೈ ಮೇಲೆ ಹಲ್ಲಿ ಬೀಳುವುದರಿಂದ , ಆರ್ಥಿಕ ಸಮಸ್ಯೆಗಳಿಂದ ಸುಧಾರಣೆ ಸಾಧ್ಯವಾಗುತ್ತದೆ .

ತಲೆಯ ಮೇಲೆ ಹಲ್ಲಿ ಬೀಳುವುದರಿಂದ , ಸಾವಿನ ಭಯ ಕಾಡಬಹುದು . ತಲೆ ಬಾಚುತ್ತಿರುವಾಗ ಬಾಚಣಿಗೆಯ ಮೇಲೆ ಹಲ್ಲಿ ಬಿದ್ದರೆ , ರೋಗಗಳ ಭಯ ಕಾಡಬಹುದು . ಎಡ ಕಣ್ಣಿನ ಭಾಗದಲ್ಲಿ ಹಲ್ಲಿ ಬೀಳುವುದರಿಂದ , ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಆಗಬಹುದು . ಬಲ ಕಣ್ಣಿನ ಭಾಗದಲ್ಲಿ ಹಲ್ಲಿ ಬೀಳುವುದರಿಂದ , ಒತ್ತಡ ಎದುರಾಗುವ ಸಾಧ್ಯತೆ ಹೆಚ್ಚಾಗುತ್ತದೆ .

ಎಡಗೈ ಮೇಲೆ ಹಲ್ಲಿ ಬಿದ್ದರೆ, ಮಾನಸಿಕ ತೊಂದರೆ ಉಂಟಾಗಬಹುದು . ಬೆರಳುಗಳ ಮೇಲೆ ಹಲ್ಲಿ ಬಿದ್ದರೆ, ಹೊಸ ಆಭರಣಗಳನ್ನು ಖರೀದಿಸುತ್ತೀರಿ ಎಂದರ್ಥ . ಬಲ ಭುಜದ ಮೇಲೆ ಹಲ್ಲಿ ಬೀಳುವುದರಿಂದ , ಪ್ರಣಯ ಸಂಭವಿಸಬಹುದು . ಭುಜಗಳ ಮೇಲೆ ಹಲ್ಲಿ ಬೀಳುವುದರಿಂದ , ಹೊಸ ಆಭರಣಗಳನ್ನು ಖರೀದಿಸಬಹುದು .

ಬಲ ಕಿವಿಯ ಮೇಲೆ ಹಲ್ಲಿ ಬೀಳುವುದರಿಂದ , ಆರ್ಥಿಕ ಅಭಿವೃದ್ದಿ ಸಾಧ್ಯವಾಗುತ್ತದೆ . ಮೇಲಿನ ತುಟಿ ಮೇಲೆ ಹಲ್ಲಿ ಬೀಳುವುದರಿಂದ , ಅನುಮಾನ ಎದುರಿಸುವ ಸಾಧ್ಯತೆ ಇರುತ್ತದೆ . ಕೆಳಗಿನ ತುಟಿಯ ಮೇಲೆ ಹಲ್ಲಿ ಬೀಳುವುದರಿಂದ , ಹೊಸ ವಸ್ತುಗಳನ್ನು ಖರೀದಿಸುವ ಯೋಗವಿದೆ ಎಂದರ್ಥ .

ತಲೆ ಮೇಲೆ ಹಲ್ಲಿ ಬೀಳುವುದರಿಂದ , ಮನೆಗೆ ಅತಿಥಿಗಳ ಆಗಮನ ಆಗುವ ಸಾಧ್ಯತೆ ಇರುತ್ತದೆ .
ಹೀಗೆ ಹಲ್ಲಿಯಿಂದ ಹಲವಾರು ಸಮಸ್ಯೆಗಳು ಬರಬಹುದು . ಅಥವಾ ನಿಮಗೆ ಸಹಾಯವೂ ಕೂಡ ಆಗುತ್ತದೆ ಎಂದು ಹೇಳಬಹುದು .

Leave a Comment