ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿಗಾಗಿ ಹೆಣ್ಣು ಮಕ್ಕಳು ಇಂತ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನೆ ಉದ್ದಾರವಾಗಲು ಮತ್ತು ಉದ್ದಾರವಾಗದಿರಲು ಎರಡಕ್ಕೂ ಕಾರಣ ಹೆಣ್ಣು ಅಂತ ಹಿರಿಯರು ಹೇಳುತ್ತಾರೆ . ಆದರೆ ಎಲ್ಲಾ ಸಲವೂ ಹೆಣ್ಣೇ ತಪ್ಪು ಮಾಡುತ್ತಾಳೆ ಎಂದಲ್ಲ . ಆದರೆ ಹೆಣ್ಣು ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ ಮನೆ ಉದ್ಧಾರವಾಗುವುದಿಲ್ಲ , ಅಂತ ಹೇಳಲಾಗುತ್ತದೆ . ಯಾವುದು ಅಂತ ತಪ್ಪುಗಳು ಎಂದು ನೋಡೋಣ .
ಮೊದಲನೆಯ ಕೆಲಸ ಅಡುಗೆ ಮನೆಗೆ ಚಪ್ಪಲಿ ಹಾಕಿ ಹೋಗುವುದು. ನಿಮ್ಮ ಪೂರ್ವಜರು ಹೀಗೆ ಮಾಡುತ್ತಿರಲಿಲ್ಲ . ಆದರೆ ಇಂದಿನ ಕಾಲದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಮನೆಯಲ್ಲಿ ಚಪ್ಪಲಿ ಹಾಕಿ ತಿರುಗುವ ಚಟ ಇರುತ್ತದೆ .ಅಂಥವರು ಅಡುಗೆ ಮನೆಗೆ ಚಪ್ಪಲಿ ಹಾಕಿ ಕೊಂಡು ಹೋಗುತ್ತಾರೆ . ಆದರೆ ಅಡುಗೆ ಮನೆಗೆ ಚಪ್ಪಲಿ ಧರಿಸಿ ಹೋಗುವುದು ಅನ್ನ ಪೂರ್ಣೇಶ್ವರಿಗೆ ಅವಮಾನ ಮಾಡಿದ್ದಂತೆ . ಹೆಣ್ಣು ಮಕ್ಕಳು ಈ ತಪ್ಪು ಮಾಡಿದರೆ ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ .
ಎರಡನೆಯ ಕೆಲಸ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು . ಹೊಸ್ತಿಲನ್ನು ಕೂಡ ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ . ಅಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ.
ಎಂಬ ನಂಬಿಕೆ ಇದೆ. ಹಾಗಾಗಿ ಹೊಸ್ತಿಲ್ಲ ಮೇಲೆ ಕುಳಿತು ಕೊಳ್ಳಬಾರದು , ನಿಲ್ಲಬಾರದು , ಅದರಲ್ಲೂ ಸಂಜೆ ಹೊತ್ತು ಹೊಸ್ತಿಲ ಮೇಲೆ ಕುಳಿತುಕೊಳ್ಳಲೇ ಬಾರದು . ಅಂತವರ ಮೇಲೆ ಲಕ್ಷ್ಮಿ ದೇವಿ ಎಂದಿಗೂ ಕೃಪೆ ತೋರಿಸುವುದಿಲ್ಲ .
ಮೂರನೆಯ ಕೆಲಸ ರಾತ್ರಿ ಪಾತ್ರೆ ತೊಳೆಯದೆ ಇರುವುದು . ರಾತ್ರಿ ಮಲಗುವ ಮುನ್ನ ಅಡುಗೆ ಪಾತ್ರೆ ಉಂಡ ಬಟ್ಟಲು ಸೇರಿ ಎಲ್ಲ ಪಾತ್ರೆಗಳನ್ನು ತೊಳೆದು ಮಲಗಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ .
ನಾಲ್ಕನೆಯ ಕೆಲಸ ಕಸದ ಪೊರಕೆಯನ್ನು ಕಾಲಿನಿಂದ ಮುಟ್ಟುವುದು , ಹೊದೆಯುವುದು, ಈ ಕೆಲಸವನ್ನು ಎಂದಿಗೂ ಮಾಡಬಾರದು. ಕೆಲವರು ಕಸ ಪೊರಕೆಯನ್ನು ಕಾಲಿನಿಂದ ತುಳಿಯುತ್ತಾರೆ, ಸರಿಸುತ್ತಾರೆ.
ಆದರೆ ಕಸ ಪೂರಕೆಗೆ ಕಾಲು ತಾಕಿಸ ಬಾರದು . ಏಕೆಂದರೆ ಕಸ ಪೊರಕೆ ಲಕ್ಷ್ಮಿ ದೇವಿಗೆ ಸಮ ಅದು .ನಮ್ಮ ಮನೆಯಲ್ಲಿ ದೂಳು ಕಸವನ್ನು ತೆಗೆದು ಮನೆಯಲ್ಲಿ ಸರಾತ್ಮಕತೆ ಮೂಡಿಸುತ್ತದೆ . ಹಾಗಾಗಿ ಕಸ ಪೊರಕೆಯನ್ನು ಕಾಲಿನಿಂದ ತುಳಿಯಬಾರದು .
ಇನ್ನು ಪ್ರತಿದಿನ ಸ್ನಾನ ಮಾಡದಿರುವುದು . ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಇಟ್ಟು ಪೂಜೆ ಆಚರಣೆ ಮಾಡಿದರೆ ಆ ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ಆದರೆ ಸ್ನಾನ ಮಾಡದೆ ದಿನವಿಡಿ ಟಿವಿ , ಮೊಬೈಲ್ , ತಿನ್ನುವುದು , ಮಲಗುವುದು ,ಇದಿಷ್ಟೇ ಅವರ ಜೀವನ ಆಗಿದ್ದರೆ , ಆ ಮನೆಯ ಏಳಿಗೆ ಆಗುವುದಿಲ್ಲ . ಮನೆ ಮನಸ್ಸು ಎರಡು ಕೂಡ ಸ್ವಚ್ಛವಾಗಿ ಇರಬೇಕು. ಪ್ರತಿದಿನ ಸಣ್ಣಪುಟ್ಟ ಯಾವುದೇ ಇರಲಿ ಅದರಲ್ಲಿ ಸಂತೋಷ ಹುಡುಕಲು ಪ್ರಯತ್ನಿಸಿ ಮತ್ತು ಪ್ರತಿದಿನ ನಿಮ್ಮನ್ನು ಸುಧಾರಿಸಿ ಕೊಳ್ಳಬೇಕು.