ನಾವು ಈ ಲೇಖನದಲ್ಲಿ ಧನುರ್ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಧನು ರಾಶಿಯವರು ಸಾಡೇಸಾತಿ ಮುಗಿದು ಜೀವನದಲ್ಲಿ ತುಂಬಾ ನೆಮ್ಮದಿಯಾಗಿ ಮತ್ತು ಬಹಳಷ್ಟು ಜನ ಓದಿನ ವಿಚಾರದಲ್ಲಿ ಹಣಕಾಸಿನ ವಿಚಾರದಲ್ಲಿ ಶುಭ ಲಾಭಗಳನ್ನು ಪಡೆದಿದ್ದೀರ .ಆದರೆ ಇದೇ ರೀತಿಯ ಜೀವನ ಗುರು ಪರಿವರ್ತನೆಯ ಬದಲಾವಣೆಯ ನಂತರ ಇರುವುದಿಲ್ಲ .2024 ಮೇ ತಿಂಗಳಲ್ಲಿ ಗುರು ಪರಿವರ್ತನೆಯು ಆಗುತ್ತದೆ .ಗುರು ಪರಿವರ್ತನೆಯಾದ ನಂತರ ಅಶುಭ ಫಲಗಳನ್ನು ತರುವ ಸೂಚನೆ ಉಂಟಾಗುತ್ತದೆ .
ಅಂದು ಕೊಳ್ಳದೆ ಇರುವ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ. ಗುರು ಪರಿವರ್ತನೆಯಾದ ನಂತರ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವ ವಿಚಾರದಲ್ಲಿ ನೀವು ಜಾಗರೂಕರಾಗಿರಬೇಕು. ಎಷ್ಟು ದಿನಗಳ ಕಾಲ ಈ ಎಚ್ಚರಿಕೆಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. 2024 ಮೇ 1ನೇ ತಾರೀಕಿನಂದು ಗುರುಗು ಮೇಷ ರಾಶಿಯಿಂದ ವೃಷಭ ರಾಶಿಗೆ ಹೋಗುತ್ತಾನೆ. ಅದು ನಿಮ್ಮಿಂದ ಆರನೇ ಮನೆ ಆಗಿರುತ್ತದೆ .ಅಂದರೆ ಶಿಷ್ಟ ಭಾವದಲ್ಲಿ ಇರುತ್ತಾನೆ.
ಈ ಸ್ಥಾನಕ್ಕೆ ಮತ್ತೊಂದು ಹೆಸರೇ ಋಣ ಸ್ಥಾನ ಎಂದು ಕರೆಯಬಹುದು. ಈ ಸ್ಥಾನಕ್ಕೆ ಗುರು ಹೋದಾಗ ತುಂಬಾ ಜನ ಪಡೆದುಕೊಂಡಿರುವ ಉಪಕಾರಕ್ಕೆ ಪ್ರತಿಉಪಕಾರವನ್ನು ಮಾಡುವ ಸಮಯವಿದು. ಹಣಕಾಸಿನ ವಿಚಾರದಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚು . ಧನುರಾಶಿಯ ಜನ ಈ ಹಿಂದೆ ಬಹಳಷ್ಟು ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದೀರಾ. ಆದರೆ ಮೇ ಒಂದನೇ ತಾರೀಕಿನ ನಂತರ ಹೊಸ ವ್ಯವಹಾರಕ್ಕೆ ತೊಡಗಿಸಿಕೊಂಡರೆ, ಬಂಡವಾಳವನ್ನು ಹೂಡಿಕೆ ಮಾಡಿದರೆ ನಿಮಗೆ ದುಡ್ಡು ಬರುವ ಸಾಧ್ಯತೆ ಕಮ್ಮಿ ಇರುತ್ತದೆ.
ಬಹಳಷ್ಟು ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರುಗಳು ಉಂಟಾಗುತ್ತದೆ. ಮತ್ತು ಖರ್ಚುಗಳು ಹೆಚ್ಚಾಗಲಿದೆ. ಮತ್ತು ನಿಮ್ಮ ಉಳಿತಾಯದ ಹಣ ಖಾಲಿಯಾಗಲಿದೆ. ದುಡ್ಡಿನ ವಿಚಾರದಲ್ಲಿ ನೀವು ತುಂಬಾ ಮುಂಜಾಗ್ರತೆ ವಹಿಸಬೇಕು .ಇನ್ನು ಕೆಲವು ಸಂದರ್ಭದಲ್ಲಿ ನಿಮ್ಮನ್ನು ಯಾಮಾರಿಸಿ ದುಡ್ಡು ಹೊಡೆದುಕೊಂಡು ಹೋಗುವ ಪರಿಸ್ಥಿತಿಯು ಸಹ ಬರಬಹುದು. ಧನು ರಾಶಿಯ ಜನರು ತುಂಬಾ ಮೃದುತ್ವವನ್ನು ಹೊಂದಿರುತ್ತಾರೆ. ಆಹಾರದ ವಿಚಾರದಲ್ಲಿ ಹೆಚ್ಚು ಜನ ಹೆಚ್ಚಿಗೆ ಹಣವನ್ನು ವ್ಯರ್ಥ ಮಾಡುವರು.
ತರಾವರಿ ಆಹಾರ ಖಾದ್ಯಗಳನ್ನು ದುಬಾರಿ ವೆಚ್ಚವಾದರೂ ಅದನ್ನು ಖರೀದಿಸಿ ತಿನ್ನಬೇಕು ತೆಗೆದುಕೊಳ್ಳಬೇಕು ಖುಷಿಪಡಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ . ಮತ್ತು ಬೇಕಾ ಬಿಟ್ಟಿಯಾಗಿ ಆಹಾರವನ್ನು ತೆಗೆದುಕೊಂಡು ತೊಂದರೆ ಅನುಭವಿಸುವ ಪರಿಸ್ಥಿತಿಯು ಬರುತ್ತದೆ . ಕೆಳ ಹೊಟ್ಟೆ ನೋವು ಅಸಿಡಿಟಿ ಕರುಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಅತಿಯಾದರೆ ಅಮೃತವು ವಿಷದ ಹಾಗೆ ಎಂಬ ರೀತಿಯಲ್ಲಿ ಅತಿಯಾಗಿ
ಆಹಾರವನ್ನು ಸೇವಿಸಿ ಆಹಾರ ವಿಷವಾಗಿ ಪರಿಣಮಿಸುವ ಪರಿಸ್ಥಿತಿಯೂ ಸಹ ಬರಲಿದೆ. ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಗೆ ತೊಂದರೆಯೂ ಉಂಟಾಗುತ್ತದೆ. ಅಂದರೆ ಗುರು ಶಿಷ್ಟ ಭಾಗದಲ್ಲಿ ಇರುವುದರಿಂದ ಈ ರೀತಿಯ ಪರಿವರ್ತನೆಗಳು ಉಂಟಾಗುತ್ತದೆ .ಈ ರೀತಿಯ ಪರಿವರ್ತನೆಯು ಮೇ 14 2025 ಕೊನೆಗೊಳ್ಳಲಿದೆ. ಗುರುವು ಆರನೇ ಮನೆಯಲ್ಲಿದ್ದಾಗ ಮುಖ್ಯವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮವು ಉಂಟಾಗುತ್ತದೆ. ಗುರುವಿನಿಂದ ಬರುವ ನಕರಾತ್ಮಕ ಫಲಗಳನ್ನು ಎದುರಿಸಲು ಈ ಮಂತ್ರವನ್ನು ಪಠಣೆ ಮಾಡಿಕೊಳ್ಳಿ .
ಶರೀರಂ ಚೈವ ವಾಚಂ ಚ ಬುದ್ದಿಂದ್ರಿಯ ಮನಂ ಸಿಚ | ನಿಯಮ್ಯ ಪ್ರಾಂಜಲಿಃ ತಿಷ್ಠೇತ್ ವೀಕ್ಷಮಾಣೋ ಗುರೋ ರ್ಮುಖಂ II ಈ ಮಂತ್ರವನ್ನು ಹೇಳಿದರೆ ಸಮಸ್ಯೆಗಳು ಬರುವುದಿಲ್ಲ ಎಂದರ್ಥವಲ್ಲ ಆದರೆ ಎದುರಿಸುವ ಮನೋಬಲವು ನಿಮಗೆ ಬರುತ್ತದೆ. ಗುರುವು ಈ ವರ್ಷ ಬಹಳಷ್ಟು ಜನರ ಮನೋಬಲ ಕ್ಷೀಣಿಸುವ ಹಾಗೆ ಮಾಡುತ್ತಾನೆ. ಸಣ್ಣ ಪುಟ್ಟ ಕಿರಿಕಿರಿಯು ಶುರುವಾಗಿ ಅದು ಬೆಳೆಯುತ್ತಾ ಹೋಗುತ್ತದೆ. ಕೆಲಸದ ಕಿರಿಕಿರಿ ಮನೆಯಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗುತ್ತದೆ.
ಧನು ರಾಶಿಯವರ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಕುಂಠಿತವಾಗುವ ಪರಿಸ್ಥಿತಿಯೂ ಉಂಟಾಗುತ್ತದೆ. ಜೊತೆಯಲ್ಲಿರುವವರು ನಿಮ್ಮ ಬಗ್ಗೆ ಗಾಳಿ ಸುದ್ದಿಯನ್ನು ಪ್ರಚಾರ ಮಾಡಿ ಅದರಿಂದ ನಿಮಗೆ ಮಾನಸಿಕವಾಗಿ ತುಂಬಾ ನೋವು ಉಂಟಾಗುತ್ತದೆ. ಗುರುವು ಆರನೇ ಮನೆಯಲ್ಲಿದ್ದಾಗ ಅದನ್ನು ರೋಗ ಸ್ಥಾನ ಎಂದು ಕರೆಯುತ್ತಾರೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿಗೆ ನಿರ್ಲಕ್ಷ್ಯ ವಹಿಸಬೇಡಿ. ತುಂಬಾ ದಿನದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಶಸ್ತ್ರ ಚಿಕಿತ್ಸೆಯೂ ಸಹ ಆಗಬಹುದು. ಇದರಿಂದ ಸ್ವಲ್ಪ ನೋವನ್ನು ಅನುಭವಿಸಬಹುದು ಮತ್ತೆ ಕೆಲವರು ಪೆಟ್ಟು ಮಾಡಿಕೊಂಡು ಹಾಸಿಗೆಯನ್ನು ಸಹ ಹಿಡಿಯಬಹುದು.
ಹೀಗೆ ಸಾಕಷ್ಟು ರೀತಿಯಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮಗೆ ಹಳೆಯ ನೋವುಗಳಿದ್ದರೆ ಅದು ಮರುಕಳಿಸುವ ಸಾಧ್ಯತೆಯೂ ಸಹ ಹೆಚ್ಚಿರುತ್ತದೆ. ಗುರು ಬಲಹೀನ ಇರುವಾಗ ಶತ್ರುಗಳ ಉಪಟಳವು ಸಹ ನಿಮಗೆ ಜಾಸ್ತಿಯಾಗುತ್ತದೆ. ನಿಮ್ಮ ಮುಂದೆ ಒಳ್ಳೆಯವರ ರೀತಿ ನಟಿಸಿ ನಿಮಗೆ ಮೋಸ ಮಾಡುವ ಸಾಧ್ಯತೆಯೂ ಸಹ ಹೆಚ್ಚಿರುತ್ತದೆ. ಬಾಡಿಗೆ ಮನೆಯಲ್ಲಿರುವವರು ಅವರ ಮನೆಯ ಯಜಮಾನನ ಜೊತೆಯಲ್ಲಿ ವಾದ ವಿವಾದಕ್ಕೆ ಇಳಿಯಬೇಡಿ.
ತಂದೆ ಮತ್ತು ತಂದೆಯ ಸಮಾನ ವಯಸ್ಕರ ಜೊತೆಯಲ್ಲಿ ಬಹಳ ಎಚ್ಚರಿಕೆಯಿಂದ ನೀವು ಮಾತನಾಡಬೇಕಾಗುತ್ತದೆ. ಇಲ್ಲವಾದರೆ ನಿಮ್ಮ ಮಾತು ಜಗಳಕ್ಕೆ ಮತ್ತು ವಿಪರೀತಕ್ಕೆ ಹೋಗುತ್ತದೆ. ಮೇ 14 2025 ರ ತನಕ ಗುರುವಿನಿಂದ ಈ ರೀತಿಯ. ನಕರಾತ್ಮಕ ಫಲಗಳನ್ನು ಹೆಚ್ಚಿಗೆ ಪಡೆಯುತ್ತೀರಾ . ಗುರುವು ಶುಭದಲ್ಲಿದ್ದಾಗ ಹೆಚ್ಚಿಗೆ ಫಲಗಳನ್ನು ನೀಡುತ್ತಾನೆ . ಮತ್ತು ಗುರು ಪರಿವರ್ತನೆಯಾದಾಗ ಹೆಚ್ಚಿಗೆ ನಿಮಗೆ ನಷ್ಟವನ್ನು ಉಂಟು ಮಾಡುತ್ತಾನೆ. ನಿಮಗೆ 30 ರಿಂದ 35ರಷ್ಟು ಶುಭಫಲವನ್ನು ಕೊಡುತ್ತಾನೆ. ಇದನ್ನು ಹೆಚ್ಚಿಗೆ ಮಾಡಿಕೊಳ್ಳಲು ಮತ್ತು ಗುರುವಿನ ಅನುಗ್ರಹವನ್ನು ಪಡೆಯಲು ಮಂತ್ರವನ್ನು ಪಡಿಸಿಕೊಳ್ಳಿ.