ನಾವು ಈ ಲೇಖನದಲ್ಲಿ ಮಕರ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಸಕಲ ರೋಗಕ್ಕೂ ಸಾರಾಯಿ ಮದ್ದು ಎಂದರೆ ಮಾನವನ ಭಾಷೆಯಲ್ಲಿ ಸರ್ವ ರೋಗಗಳಿಗೂ ಸಾರಾಯಿ ಮದ್ದು ಎನ್ನುವ ಹಾಗೆ ಆಗಿದೆ. ಆದರೆ ಸಕಲ ರೋಗಗಳಿಗೂ ಅಂದರೆ ಸಕಲ ಕಷ್ಟಗಳಿಗೂ ಸಾರಾಯ ಎಂದರೆ ಆಧ್ಯಾತ್ಮವೇ ಮದ್ದು ಎನ್ನುವಂತೆ ನಾವು ಅರ್ಥಮಾಡಿಕೊಳ್ಳಬೇಕು .ಸಂಕಟ ಬಂದಾಗ ವೆಂಕಟರಮಣ. ಈ ಗಾದೆ ಮಾತು ನಿಮಗೆ ತಿಳಿದಿರಬೇಕು. ಮಕರ ರಾಶಿಯವರಿಗೆ ಒಂದೇ ಒಂದು ಪರಿಹಾರ ಸೂತ್ರವೆಂದರೆ ಸಕಲ ರೋಗಕ್ಕೂ ಒಂದು ಮದ್ದನ್ನು ನೀಡುವುದಿದೆ . ಆ ಮದ್ದು ಏನೆಂದರೆ ಆ ಮದ್ದಿನಿಂದ ಏನು ಒಳ್ಳೆ ಫಲಿತಾಂಶಗಳು ಸಿಗುತ್ತದೆ.
ರೋಗಕ್ಕೆ ಸಾಲಕ್ಕೆ ಹಣಕಾಸಿನ ಸಮಸ್ಯೆಗೆ ಕೆಲಸ ಇಲ್ಲದೆ ಇರುವವರಿಗೆ ಕೆಲಸ ಸಿಗುವ ಬಗ್ಗೆ ಅಂಗಡಿ ವ್ಯಾಪಾರ ಮಾಡುವವರಿಗೆ ಇಂತಹ ಎಲ್ಲಾ ಪರಿವರ್ತನೆಗಳನ್ನು ತರುವಂತಹ ಸಾಮರ್ಥ್ಯ ಆ ವಿಚಾರಕ್ಕೆ ಇದೆ. ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಕೃಷಿಗೆ ಸಂಬಂಧಿಸಿದಂತೆ ನೀರಿಲ್ಲದೆ ಒದ್ದಾಡುತ್ತಿರುವ ಜನರಿಗೆ ಪರಿಹಾರ ಸಿಗುತ್ತದೆಯೇ ಆ ಪರಿವರ್ತನೆ ಮತ್ತು ಸಕಾರಾತ್ಮಕ ಬೆಳವಣಿಗೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಮೇ ತಿಂಗಳಿನಲ್ಲಿ ಗಮನ ವಿಶೇಷವಾಗಿ ನಿಮ್ಮ ಪೂರ್ವ ಪುಣ್ಯದ ಸ್ಥಾನದ ಮೇಲೆ ನಿಂತಿರುತ್ತದೆ .
ಪೂರ್ವ ಪುಣ್ಯಸ್ಥಾನ ಎಂದರೆ ಕರ್ಮ ಸಿದ್ದಾಂತ ಏನು ಹೇಳುತ್ತದೆ ಎಂದರೆ ನಾವು ಈ ಭೂಮಿಗೆ ಬಂದಿರುವುದೇ ಒಂದಷ್ಟು ತಪ್ಪು ಮತ್ತು ಒಂದಷ್ಟು ಸರಿ . ಹಿಂದಿನ ಜನ್ಮದಲ್ಲಿ ಮಾಡಿರುವಂತಹ ತಪ್ಪು ಸರಿಗಳು ನಮ್ಮನ್ನ ಇಲ್ಲಿಗೆ ಕರೆದುಕೊಂಡು ಬಂದಿರುತ್ತದೆ. ನಾವು ಮತ್ತೆ ಭೂಮಿಗೆ ಬಂದ ಮೇಲೆ ಅದೇ ತಪ್ಪನ್ನು ಮಾಡುತ್ತೇವೆ. ನಮಗೆ ದುಃಖವಿದ್ದಾಗ ಒಂದು ರೀತಿಯ ವರ್ತನೆಯನ್ನು ತೋರಿಸುವುದು ನಾವು ಸಂತೋಷದಲ್ಲಿದ್ದಾಗ ಮತ್ತೊಂದು ರೀತಿಯ ವರ್ತನೆಯನ್ನು ತೋರಿಸುವುದು.
ಈ ರೀತಿ ಅಂತಹ ಆಲೋಚನೆಯನ್ನು ನಾವು ಬೆಳೆಸಿಕೊಂಡಿರುತ್ತೇವೆ. ಘಟನೆಗಳು ಖುಷಿ ಮತ್ತು ದುಃಖವನ್ನು ಉಂಟು ಮಾಡುವುದಿಲ್ಲ . ಒಳ್ಳೆ ಘಟನೆ ಯಾಗಲಿ ಅಥವಾ ಕೆಟ್ಟ ಘಟನೆ ಆಗಲಿ ನಮ್ಮ ಮೆದುಳಿನಲ್ಲಿ ಬರುವಂತಹ ರಾಸಾಯನಿಕಗಳು ಖುಷಿ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ನಿಮ್ಮ ಯೋಚನೆ ಶಕ್ತಿಯು ಯಾಕೆ ಈ ರೀತಿ ಬದಲಾಗುತ್ತದೆ .ಎಂದರೆ ನಿಮಗೆ ಸಾಡೇಸಾತಿ ನಡೆಯುತ್ತಿರುವುದರಿಂದ ಶನಿಗ್ರಹವಿರುವ ವಿಶೇಷ ಪ್ರಭಾವದಿಂದ ಈ ರೀತಿ ಆಗುತ್ತದೆ. ನಕರಾತ್ಮಕ ಚಿಂತನೆಗಳು ಹೆಚ್ಚಾಗಿ ಬಂದು ಒಳ್ಳೆಯ ಚಿಂತನೆಗಳನ್ನು ಕಸಿಯುತ್ತಿರುತ್ತದೆ. ಸಾಡೇಸಾತಿಯ ಮುಗಿಯುತ್ತಿರುವುದರಿಂದ ನಿಮ್ಮ ಜೀವನದ ಹಾದಿ ಬದಲಾಗುತ್ತಾ ಹೋಗುತ್ತದೆ.
ಮೆದುಳಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬರುವ ಹಾಗೆ ಮಾಡಿಕೊಳ್ಳುವುದು ಹೇಗೆ ಎಂದರೆ ನಮ್ಮ ಯೋಚನಾ ಶಕ್ತಿಯನ್ನು ಸರಿ ಮಾಡಿಕೊಳ್ಳುತ್ತೇನೆ ಎನ್ನುವ ದೃಢಸಂಕಲ್ಪಕ್ಕೆ ಬರಬೇಕು. ಪೂರ್ವ ಪುಣ್ಯ ಸ್ಥಾನ ಎಂದರೆ ನಿಮ್ಮ ಆಸ್ತಿ ಇರಬಹುದು ಮಕ್ಕಳು ತಂದೆ ಮತ್ತು ತಂದೆ ಸಮಾನರಾದಂತಹ ವ್ಯಕ್ತಿಗಳ ಜೊತೆ ಈ ರೀತಿಯ ವಿಚಾರಗಳು ತುಂಬಾ ಗಾಂಭೀರ್ಯವನ್ನು ಪಡೆದುಕೊಳ್ಳುತ್ತದೆ. ಹೂಡಿಕೆ ವಿಚಾರಗಳು ಸಹ ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಪೂರ್ವ ಪುಣ್ಯ ಸ್ಥಾನದಲ್ಲಿ ಬಹಳ ಗ್ರಹಗಳು ಮೇ ಒಂದನೇ ತಾರೀಕಿನಿಂದ ಮೇಷದಿಂದ ವೃಷಭಕ್ಕೆ ಬಂದಾಗ ನಿಮ್ಮ ಪೂರ್ವ ಪುಣ್ಯ ಸ್ಥಾನಕ್ಕೆ ಬಂದು ಸೇರುತ್ತದೆ. ಗುರು ಗ್ರಹಕ್ಕೆ ತುಂಬಾ ಇಷ್ಟಪಡುವ ಸ್ಥಾನವಾಗಿರುತ್ತದೆ . ಅಂದ್ರೆ ಪಂಚಮ ಸ್ಥಾನವಾಗಿರುತ್ತದೆ . ಗುರುವಿನ ಅನುಗ್ರಹ ನಿಮ್ಮದಾಗಿರುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಹ ವ್ಯಕ್ತಿಗಳಿಗೆ ಬಹಳ ಉನ್ನತಿ ದೊರೆಯುತ್ತದೆ . ಧ್ಯಾನ ಪ್ರಾಣಾಯಾಮ ಹಣಕಾಸಿನ ವಿಚಾರದಲ್ಲಿ ಮತ್ತು ಖರ್ಚನ್ನು ಮಾಡುವಲ್ಲಿ ಶಿಸ್ತನ್ನು ರೂಡಿಸಿಕೊಳ್ಳುವುದು. ಬದುಕನ್ನು ನಿರ್ವಹಿಸಿಕೊಂಡು ಹೋಗುವುದು ಆದಾಯ ವೃದ್ಧಿಯಾಗುತ್ತಾ ಹೋಗುತ್ತದೆ.
ಉದ್ಯೋಗದಲ್ಲಿ ಬಡ್ತಿ ಗೌರವ ಮನ್ನಣೆಗಳು ಸಿಗುತ್ತಾ ಹೋಗುತ್ತದೆ. ಪದವಿ ಮತ್ತು ಪುರಸ್ಕಾರಗಳನ್ನು ಪಡೆಯಬಹುದು. ಮಕರ ರಾಶಿಯ ವಿದ್ಯಾರ್ಥಿಗಳಿಗೆ ವಿಶೇಷವಾದ ಶ್ರೇಯಸ್ಸು ದೊರಕುತ್ತದೆ. ಇಷ್ಟು ದಿನ ಸಾಡೇ ಸಾತಿನ ಪ್ರಭಾವ ಮತ್ತು ಬೇರೆ ಕಾರಣಗಳಿಂದ ತುಂಬಾ ಒದ್ದಾಟವನ್ನು ನಡೆಸಿರುತ್ತೀರಾ. ಇದೆಲ್ಲದರಿಂದ ಶನಿಯು ಮುಕ್ತಿ ಕೊಡುತ್ತಾನೆ. ಸಾಡೆ ಸಾತಿ ಮುಗಿಯುವ ಮೊದಲೇ ಗುರುವಿನಿಂದ ಸಾಕಷ್ಟು ಒಳ್ಳೆಯ ಅನುಕೂಲಗಳು ನಿಮಗೆ ದೊರೆಯುತ್ತದೆ. ಮೇ ತಿಂಗಳಿನಲ್ಲಿ ಇದರ ಯಶಸ್ಸು ಸಿಗದೇ ಹೋದರು ಕೂಡ ಮುಂಬರುವ ತಿಂಗಳಲ್ಲಿ ಅಂದರೆ ವರ್ಷಾಂತದವರೆಗೂ ನಿಮಗೆ ಒಳ್ಳೆಯ ಯಶಸ್ಸು ಲಭಿಸುತ್ತದೆ .