ನಾವು ಈ ಲೇಖನದಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಮನುಷ್ಯನನ್ನು ಸರ್ವನಾಶ ಮಾಡುವಂತಹ ಮೂರು ಕಾರಣಗಳನ್ನು ಮತ್ತು ಸನ್ಯಾಸಿಯ ಮನಸ್ಸು ಬದಲಿಸಿದ ಮಹಾರಾಣಿಯ ಕಥೆಯ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ್ಯದಲ್ಲಿ ಒಬ್ಬ ಪುತ್ರನು ಜನಿಸುತ್ತಾನೆ. ಅತಿ ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸ ಗೋಸ್ಕರ ಆ ರಾಜನು ಗುರುಕುಲಕ್ಕೆ ಬೇರೆ ಊರಿಗೆ ಕಳುಹಿಸುತ್ತಾನೆ.
ಹಾಗೂ ಗುರುಕುಲದಲ್ಲಿ ಈ ಹುಡುಗನು ಬಹಳ ಹೆಸರು ಮಾಡುತ್ತಾನೆ. ಆ ಹುಡುಗನು ಸಕಲಶಾಸ್ತ್ರಗಳನ್ನು ವೇದಪುರಾಣಗಳನ್ನು ಅಭ್ಯಾಸ ಮಾಡುತ್ತಾನೆ . ಆದರೆ ಆ ಹುಡುಗನು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಒಂದು ಪ್ರಕೃತಿ ವಿಪತ್ತಿನಲ್ಲಿ ತನ್ನ ತಂದೆ ತಾಯಿ ಮತ್ತು ಬಂಧು ಬಾಂಧವರನ್ನು ಸೋದರರನ್ನು ಸಹ ಪೂರ್ತಿ ಕುಟುಂಬವನ್ನು ಕಳೆದುಕೊಳ್ಳುತ್ತಾನೆ. ಎಲ್ಲರನ್ನೂ ಕಳೆದುಕೊಂಡು ದುಃಖದಲ್ಲಿದ್ದ ಹುಡುಗನಿಗೆ ಸಾಂಸಾರಿಕ ಜೀವನದ ಮೇಲೆ ಇದ್ದ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ.
ಆ ಹುಡುಗನು ಆಗಲೇ ಒಂದು ಪ್ರತಿಜ್ಞೆಯನ್ನು ಮಾಡುತ್ತಾನೆ . ತನ್ನ ವಿದ್ಯಾಭ್ಯಾಸ ಮುಗಿದು ಗುರುಕುಲದಿಂದ ಹೊರಗಡೆ ಬಂದ ನಂತರ ಪ್ರಜೆಗಳ ಕ್ಷೇಮ ಗೋಸ್ಕರವೇ ತನ್ನ ಜೀವನವನ್ನು ಕಳೆಯುವುದಾಗಿ ನಿರ್ಧಾರ ಮಾಡುತ್ತಾರೆ . ಆನಂತರ ಆ ಬಾಲಕನು ಸನ್ಯಾಸಿಯಾಗಿ ಬದಲಾಗುತ್ತಾನೆ . ಸಾಂಸಾರಿಕ ಜೀವನವನ್ನು ತ್ಯಜಿಸಿ ಹಿಮಾಲಯಕ್ಕೆ ಹೊರಟು ಹೋಗುತ್ತಾನೆ. ಅಲ್ಲಿ ಬಹಳ ಕಾಲದವರೆಗೆ ತಪಸ್ಸು ಮಾಡುತ್ತಾನೆ. ಮತ್ತು ಶಿಷ್ಯರಿಗೆ ಬೋಧಿಸಲು ಶುರು ಮಾಡುತ್ತಾನೆ. ಸುತ್ತಮುತ್ತಲು ಹೆಸರುವಾಸಿಯಾಗುತ್ತಾರೆ .
ಆತನ ಕುರಿತು ಚರ್ಚಾಸ್ಪದ ವಿಷಯಗಳಾದವು ದೂರ ತೀರದಿಂದಲೂ ಕೂಡ ಪ್ರಜೆಗಳು ಬಂದು ತಮ್ಮ ಸಮಸ್ಯೆಗಳನ್ನು ಆತನ ಬಳಿ ಹೇಳಿಕೊಳ್ಳುತ್ತಾರೆ. ಮತ್ತು ಶಿಕ್ಷಣ ಪಡೆಯಲು ಬಯಸುತ್ತಾರೆ. ಆ ಸನ್ಯಾಸಿಯು ಎಂತಹ ಸಮಸ್ಯೆಯಾದರೂ ಸಹ ಚಿಟಿಕೆಯಲ್ಲಿಯೇ ಪರಿಹಾರ ಮಾಡುತ್ತಿದ್ದರು. ಆ ಸನ್ಯಾಸಿಯು ನಗರದಲ್ಲಿ ತುಂಬಾ ಹೆಸರುವಾಸಿಯಾದರು. ಆ ಸಮಯದಲ್ಲಿ ಸನ್ಯಾಸಿ ಇದ್ದಂತಹ ರಾಜ್ಯದಲ್ಲಿ ಮಹಾರಾಜನು ಬಹಳ ಕ್ರೂರಿ ಆಗಿದ್ದರು . ಆ ರಾಜನು ಕೂಡ
ಈ ಸನ್ಯಾಸಿಯ ಬಗ್ಗೆ ತಿಳಿದು ಈತನನ್ನು ಹೇಗಾದರೂ ಮಾಡಿ ಭೇಟಿಯಾಗಬೇಕೆಂದು ಮಾರನೇ ದಿನ ಬೆಳಗ್ಗೆ ಆತನ ಕುಟೀರದ ಕಡೆಗೆ ಹೋಗಿ. ಸನ್ಯಾಸಿಯನ್ನು ಭೇಟಿಯಾದನು. ಆನಂತರ ಒಂದು ಚಮತ್ಕಾರ ನಡೆಯಿತು. ಆ ರಾಜನಿಗೆ ಬಹಳ ಕ್ರೂರಿ ಎಂದು ಹೆಸರಿತ್ತು . ಆದರೆ ಈ ಸನ್ಯಾಸಿಯನ್ನು ಭೇಟಿಯಾದ ನಂತರ ಒಳ್ಳೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ನಿರ್ಣಯವನ್ನು ಕೈಗೊಳ್ಳುತ್ತಾನೆ. ಆತನ ಮನಸ್ಸಿನಲ್ಲಿ ಒಂದೇ ಆಲೋಚನೆ ಬರುತ್ತದೆ . ಎಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ಸನ್ಯಾಸಿಯು ನನ್ನನ್ನು ಹೇಗೆ ಬದಲಾಯಿಸಿದನೆಂಬ ಯೋಚನೆ ಬರುತ್ತದೆ . ಈ ಸನ್ಯಾಸಿಯ ಬಳಿ ತುಂಬಾ ಮಹತ್ವವಾದ ಅಂಶವಿದೆ.
ಈ ಸನ್ಯಾಸಿಯು ನನ್ನ ಬಳಿಯೇ ಇದ್ದರೆ ನನ್ನ ಜೀವನ ಪೂರ್ತಿ ಬದಲಾಗಬಹುದು ಆಲೋಚಿಸುತ್ತಾನೆ .ಹೀಗೆ ಆಲೋಚಿಸಿದ ಮಹಾರಾಜನು ತನ್ನ ಜೊತೆ ಬರಬೇಕೆಂದು ವಿನಂತಿಸಿಕೊಳ್ಳುತ್ತಾನೆ . ಆ ವಿನಂತಿಯನ್ನು ಕೇಳಿದಂತಹ ಸನ್ಯಾಸಿಯು ಅದನ್ನು ಅಂಗೀಕರಿಸಿ ಮಹಾರಾಜನ ಜೊತೆ ಆಸ್ಥಾನಕ್ಕೆ ಹೋಗುತ್ತಾನೆ. ಆಸ್ಥಾನಕ್ಕೆ ಹೋದ ನಂತರ ಆ ಸನ್ಯಾಸಿಗೆ ಮಹಾರಾಜನು ಸಕಲ ಸತ್ಕಾರಗಳನ್ನು ತೋರಿ ಪಂಚಪಕ್ಷ ಪರಮಾನಗಳಿಂದ ಸತ್ಕರಿಸುತ್ತಾನೆ. ಭೋಜನದ ನಂತರ ಆ ರಾಜನಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಇಲ್ಲಿಂದ ಹೊರಡುತ್ತೇನೆ ಎಂದು ಹೇಳುತ್ತಾರೆ.
ಅದಕ್ಕೆ ರಾಜನು ಸನ್ಯಾಸಿಯನ್ನು ಕುರಿತು ತಮ್ಮ ಉದ್ಯಾನವನದಲ್ಲಿ ಇಲ್ಲೇ ಇರಬೇಕೆಂದು ಇಲ್ಲಿ ನಿಮಗೆ ಬೇಕಾಗಿರುವಂತಹ ಸಕಲ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ ಎಂದು ಹೇಳುತ್ತಾನೆ. ಅದಕ್ಕೆ ಸನ್ಯಾಸಿಯು ಒಪ್ಪಿಕೊಳ್ಳುತ್ತಾರೆ . ಆಗ ತಕ್ಷಣವೇ ಮಹಾರಾಜನು ತನ್ನ ಸೇವಕರನ್ನು ಕರೆದು ಸನ್ಯಾಸಿಗೆ ಬೇಕಾದಂತಹ ಅನುಕೂಲಗಳನ್ನು ಮಾಡಿಕೊಡಬೇಕೆಂದು ಹೇಳುತ್ತಾನೆ. ರಾಜನ ಆಜ್ಞೆಯಂತೆ ಸೇವಕರು ಆ ಉದ್ಯಾನವನದಲ್ಲಿ ಒಂದು ಚಂದದ ಕುಟೀರವನ್ನು ನಿರ್ಮಿಸುತ್ತಾರೆ.
ಕೆಲವು ವರ್ಷಗಳವರೆಗೆ ಸನ್ಯಾಸಿಯು ಆ ಕುಟೀರದಲ್ಲಿ ವಾಸವಿರುತ್ತಾರೆ. ರಾಜರು ಕೂಡ ಆ ಸನ್ಯಾಸಿಗೆ ಬೇಕಾದಂತಹ ಸೌಲಭ್ಯಗಳನ್ನು ಒದಗಿಸುತ್ತಿದ್ದರು. ಸ್ವಲ್ಪ ದಿನಗಳಾದ ಮೇಲೆ ಮಹಾರಾಜನಿಗೆ ತನ್ನ ರಾಣಿಯ ಸಮೇತ ಬೇರೆ ಪ್ರಾಂತ್ಯಕ್ಕೆ ಹೋಗಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಆ ಸನ್ಯಾಸಿಯ ಅನುಕೂಲಕ್ಕಾಗಿ ಒಬ್ಬ ಸೇವಕನನ್ನು ನೇಮಿಸಿ ರಾಜಾರಾಣಿಯರು ಬೇರೆ ಪ್ರಾಂತ್ಯಕ್ಕೆ ತೆರಳುತ್ತಾರೆ. ಆ ಸೇವಕನು ಅನಾರೋಗ್ಯದ ಕಾರಣ ರಾಜರು ಹೋದ ಮೇಲೆ ತನ್ನ ಊರಿಗೆ ತೆರಳುತ್ತಾನೆ.
ನಂತರ ತಿರುಗಿ ಬರಲೇ ಇಲ್ಲ. ಸನ್ಯಾಸಿಗೆ ಸಮಯಕ್ಕೆ ಊಟ ಸರಿಯಾಗಿ ಊಟ ಕೊಡುವವರು ಯಾರು ಇರಲಿಲ್ಲ. ಸ್ವಲ್ಪ ದಿನಗಳ ನಂತರ ರಾಜರು ಮರಳಿ ಬಂದರು. ರಾಜರನ್ನು ನೋಡಿ ಸನ್ಯಾಸಿಯು ಆತನ ಮೇಲೆ ಕೋಪೋದ್ರಿಗ್ತರಾದರು. ಮನಸ್ಸು ಇಚ್ಚೆ ಬೈದರು. ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗದ ಮೇಲೆ ನೀನೇ ಏಕೆ ತೆಗೆದುಕೊಂಡೆ ಎಂದು ಕೇಳಿದರು. ಆಗ ರಾಜರು ಸನ್ಯಾಸಿಯನ್ನು ಕುರಿತು ಸ್ವಾಮಿ ನನ್ನನ್ನು ಕ್ಷಮಿಸಿ. ಈ ತಪ್ಪಿಗೆ ನಾನೇ ಕಾರಣಕರ್ತ .
ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡನು. ಸ್ವಲ್ಪ ಸಮಯದ ನಂತರ ಸನ್ಯಾಸಿಯು ಶಾಂತಗೊಳ್ಳುತ್ತಾರೆ. ಇದನ್ನು ಮಹಾರಾಣಿಯು ಗಮನಿಸಿ ನೋಡಿ ಶಾಂತವಾಗಿ ಇದ್ದಳು. ನಂತರ ರಾಜನು ಒಂದು ಮಾತು ಕೂಡ ಆಡದೇ ಇರುವ ಹಾಗೆ ಸನ್ಯಾಸಿಗೆ ಮಾಡುತ್ತಾನೆ . ಸಕಲ ಸೌಕರ್ಯಗಳನ್ನು ಸಕ್ರಮವಾಗಿ ನಿರ್ವಹಿಸುತ್ತಾನೆ. ನಂತರ ಸ್ವಲ್ಪ ದಿನಗಳ ನಂತರ ರಾಜನು ಬೇರೆ ಊರಿಗೆ ತೆರಳಬೇಕಾಗಿ ಬರುತ್ತದೆ. ಈ ಸಾರಿ ಬೇರೆ ಯಾವ ಸೇವಕನನ್ನು ನೇಮಿಸದೆ ಸ್ವಂತ ಮಹಾರಾಣಿಯಲ್ಲೇ ನೇಮಿಸುತ್ತಾನೆ.
ಅಂದಿನಿಂದ ರಾಣಿಯು ತಾನೇ ಭೋಜನ ಮಾಡಿ ಸನ್ಯಾಸಿಗೆ ಕಳುಹಿಸಿಕೊಡುತ್ತಿದ್ದಳು. ಒಂದು ದಿನ ರಾಣಿಯೂ ಸ್ನಾನಕ್ಕೆ ಕೊಳಕ್ಕೆ ಎಂದು ಹೋಗಿ ಸನ್ಯಾಸಿಗೆ ಊಟ ಕೊಡುವುದನ್ನು ಮರೆಯುತ್ತಾಳೆ. ಸನ್ಯಾಸಿಯು ಬಹಳ ಸಮಯದವರೆಗೆ ಊಟಕ್ಕೆ ಎದುರು ನೋಡುತ್ತಾಳೆ. ಇಷ್ಟು ಹೊತ್ತಾದರೂ ಊಟ ಬರಲಿಲ್ಲ ಎಂದು ಹೇಳಿ ಸನ್ಯಾಸಿಯು ತಾನೇ ಸ್ವತಃ ಅಂತಪುರಕ್ಕೆ ಹೋಗಿ ವಿಷಯ ತಿಳಿದುಕೊಳ್ಳಬೇಕೆಂದು ಅಂತಪುರಕ್ಕೆ ಹೋಗುತ್ತಾನೆ . ಅಲ್ಲಿ ಅಂತಪುರ ತಲುಪಿದ ನಂತರ ಮಹಾರಾಣಿಯನ್ನು ನೋಡಿ
ಸನ್ಯಾಸಿಯ ಮನಸ್ಸು ಚಂಚಲವಾಗುತ್ತದೆ . ಮಹಾರಾಣಿ ಅಂದ ಚಂದ ರೂಪ ರೇಖೆಗಳನ್ನು ನೋಡಿ ಸನ್ಯಾಸಿಯ ಮನಸ್ಸು ಸೋಲುತ್ತದೆ. ಮನಸ್ಸಿನಲ್ಲಿ ಮಹಾರಾಣಿಯ ಆಲೋಚನೆಗಳು ಕದಲುತ್ತಿರುತ್ತದೆ . ನಂತರ ಊಟ ನಿದ್ದೆ ಬಿಟ್ಟು ಕುಟೀರದಲ್ಲಿಯೇ ಇರತೊಡಗಿದರು. ಬಹಳ ದಿನಗಳು ಅದೇ ರೀತಿ ಉಳಿದುಬಿಟ್ಟಿದ್ದರಿಂದ ಶರೀರವು ಸೋರಗತೊಡಗಿತು. ಸ್ವಲ್ಪ ದಿನಗಳಲ್ಲಿಯೇ ರಾಜನು ಮರಳಿ ರಾಜ್ಯಕ್ಕೆ ಬರುತ್ತಾರೆ. ಸನ್ಯಾಸಿ ಆರೋಗ್ಯದ ಬಗ್ಗೆ ತಿಳಿದ ಮಹಾರಾಜನು ತಕ್ಷಣವೇ ಕುಟೀರಕ್ಕೆ ತೆರಳುತ್ತಾನೆ.
ರಾಜನು ಸನ್ಯಾಸಿಯ ಹತ್ತಿರ ನೀವು ಯಾವುದೋ ಯೋಚನೆಯಲ್ಲಿ ತೊಡಗಿದ್ದೀರ ಆ ಯೋಚನೆ ಏನು ಎಂದು ನನ್ನಲ್ಲಿ ಹೇಳಬಾರದು ಎಂದು ಕೇಳುತ್ತಾನೆ. ನಿಮ್ಮ ಸಮಸ್ಯೆಯನ್ನು ನಾನು ತೀರಿಸಲಾರನೇ ಅಥವಾ ನನ್ನಿಂದ ಏನಾದರೂ ತಪ್ಪಾಯಿತೆ ಎಂದು ಕೇಳುತ್ತಾನೆ. ಆಗ ಸನ್ಯಾಸಿಯು ಮಹಾರಾಜ ನಾನು ನಿನ್ನ ರಾಣಿಯ ಸೌಂದರ್ಯವನ್ನು ನೋಡಿ ಮೋಹಿತನಾಗಿದ್ದೇನೆ ಆಗಿನಿಂದಲೂ ಆಕೆಯೇ ನನ್ನ ಮನಸ್ಸಿನಲ್ಲಿ ಇದ್ದಾಳೆ . ಊಟ ನಿದ್ದೆ ಏನು ಸೇರುತ್ತಿಲ್ಲ ಎಂದು ಹೇಳುತ್ತಾನೆ .
ಆಕೆ ಇಲ್ಲದೆ ಜೀವನ ನಡೆಯದು ಎಂದು ಹೇಳುತ್ತಾನೆ. ಆಗ ಮಹಾರಾಜನು ಇದನ್ನು ಕೇಳಿ ನೀವು ಅಂತಪುರಕ್ಕೆ
ಬನ್ನಿ ನಾನು ಮಹಾರಾಣಿಯನ್ನು ಕೊಡುತ್ತೇನೆ ಎಂದು ಹೇಳುತ್ತಾನೆ. ತಕ್ಷಣವೇ ಮಹಾರಾಜ ಮತ್ತು ಸನ್ಯಾಸಿಯು ಅಂತಪುರಕ್ಕೆ ಹೊರಡುತ್ತಾರೆ . ಆ ಸಮಯದಲ್ಲಿ ಮಹಾರಾಣಿಯೂ ಅಂದವಾದ ವಸ್ತ್ರಾಭರಣಗಳಿಂದ ಬಹಳ ಸುಂದರವಾಗಿ ಕಂಗೊಳಿಸುತ್ತಿದ್ದಳು. ಆಗ ಮಹಾರಾಜನು ಮಹಾರಾಣಿಗೆ ಸನ್ಯಾಸಿಗೆ ನಿನ್ನ ಅವಶ್ಯಕತೆ ಇದೆ ಸನ್ಯಾಸಿಯು ಬಹಳ ಬಲಹೀನರಾಗಿದ್ದಾರೆ ನಮ್ಮ ಕಾರಣದಿಂದ ಸನ್ಯಾಸಿಗಳು ಸಾವನ್ನಪ್ಪುದು ನನಗೆ ಇಷ್ಟವಿಲ್ಲ ಎಂದು ಹೇಳುತ್ತಾನೆ ನಮಗೆ ಆ ಪಾಪ ಅಂಟುವುದು ಬೇಡ ಎಂದು ಹೇಳುತ್ತಾನೆ .
ಇದನ್ನು ಕೇಳಿದಂತಹ ರಾಣಿಯು ಆಶ್ಚರ್ಯಗೊಂಡು ಸನ್ಯಾಸಿಯು ಏಕೆ ಹೀಗೆ ಆಗಿದ್ದಾರೆ ಎಂದು ಕೇಳುತ್ತಾಳೆ .ಆಗ ಮಹಾರಾಜರು ಸನ್ಯಾಸಿಯು ರಾಣಿ ಅಂದವನ್ನು ನೋಡಿ ಆಕೆಯ ಮೇಲೆ ಮೋಹಿತರಾಗಿ ಇರುವುದನ್ನು ರಾಣಿಗೆ ವಿವರಿಸುತ್ತಾರೆ . ಹಾಗಾದರೆ ಇದರ ಚಿಂತೆ ನೀವು ಬಿಟ್ಟು ಬಿಡಿ ಇದನ್ನು ಏನು ಮಾಡಬೇಕು ಎಂಬುದು ನನಗೆ ಗೊತ್ತು ಎಂದು ಮಹಾರಾಣಿ ಹೇಳುತ್ತಾಳೆ . ಒಬ್ಬ ಸನ್ಯಾಸಿಯು ಸಾಯುವ ಕಳಂಕ ಯಾವುದೇ ಕಾರಣಕ್ಕೂ ನಿಮ್ಮ ಮೇಲೆ ಬರದಂತೆ ನೋಡಿಕೊಳ್ಳುತ್ತೇನೆ.
ಮತ್ತು ಪಾತಿವ್ರತ್ಯ ವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ರಾಣಿಯ ಈ ಮಾತುಗಳನ್ನು ಕೇಳಿದ ಮಹಾರಾಜನು ರಾಣಿಯನ್ನು ಸನ್ಯಾಸಿಗೆ ಒಪ್ಪಿಸುತ್ತಾನೆ. ಆಗ ಸನ್ಯಾಸಿಯು ರಾಣಿಯ ಜೊತೆ ಕುಟೀರಕ್ಕೆ ಬರುತ್ತಾನೆ. ಆಗ ರಾಣಿಯು ಸನ್ಯಾಸಿಯನ್ನು ಕುರಿತು ನಾನು ಇರುವುದಕ್ಕೆ ಈ ಕುಟೀರವು ಸರಿ ಹೋಗುವುದಿಲ್ಲ. ನಮಗೊಂದು ಮನೆ ಬೇಕು ಎಂದು ಕೇಳುತ್ತಾಳೆ . ಸನ್ಯಾಸಿಯು ಮಹಾರಾಜನಿಗೆ ಹೇಳಿ ಒಂದು ಭವನವನ್ನು ಏರ್ಪಡಿಸಿಕೊಂಡು ಆ ಭವನಕ್ಕೆ ಬರುತ್ತಾನೆ .ಈ ಭವನವು ಬಹಳ ಚಿಕ್ಕದಾಗಿದೆ. ಎಂದು ಹೇಳುತ್ತಾಳೆ .ಮತ್ತೆ ಮಹಾರಾಜನು ಸನ್ಯಾಸಿಯು ಬಂದು ಮಹಾರಾಜನ ಹತ್ತಿರ ಸರಿಪಡಿಸುವಂತೆ ಹೇಳಿ ಸರಿಪಡಿಸಿಕೊಳ್ಳುತ್ತಾನೆ.
ಆನಂತರ ಮಹಾರಾಣಿಯು ಭವನಕ್ಕೆ ಬಂದು ಸ್ನಾನ ಮಾಡಿ ಮಲಗುವ ಕೋಣೆಗೆ ಬರುತ್ತಾಳೆ. ಆಗ ಸನ್ಯಾಸಿಯು ಆ ಕೋಣೆಗೆ ಬರುತ್ತಾರೆ ಆಗ ಮಹಾರಾಣಿಯೂ ಸನ್ಯಾಸಿಯನ್ನು ಕುರಿತು ಮಹನೀಯರೇ ನೀವು ಯಾರು ನೀವು ಎಲ್ಲಿಂದ ಬಂದಿರಿ ನಿಮಗೆ ನೆನಪಿದೆಯಾ ನಿಮ್ಮ ಮಹಿಮೆಯನ್ನು ತಿಳಿದು ರಾಜರು ನಿಮ್ಮನ್ನು ಇಲ್ಲಿಗೆ ಕರೆ ತಂದರು ಆದರೆ ಈ ದಿನ ನೀವು ನಿಮ್ಮ ನಿಗ್ರಹವನ್ನು ಕಳೆದುಕೊಂಡು ನನ್ನ ದಾಸನಾಗಿ ಬದಲಾಗಿದ್ದಿರಾ ಸಂಸ್ಕಾರ ಎಲ್ಲಿಗೆ ಹೋಯಿತು ನೀವು ಅಭ್ಯಾಸ ಮಾಡಿದ ವಿದ್ಯೆ ಎಲ್ಲಿಗೆ ಹೋಯಿತು ಮತ್ತು ನೀವು ಮಾಡಿದಂತಹ ಪ್ರತಿಜ್ಞೆ ಏನಾಯ್ತು ಎಂದು ಕೇಳಿದಳು ಅದನ್ನು ಕೇಳಿದ ತಕ್ಷಣ ಸನ್ಯಾಸಿಗೆ ತನ್ನ ತಪ್ಪಿನ ಜ್ಞಾನೋದಯವಾಯಿತು.
ತಾನು ಒಬ್ಬ ಸನ್ಯಾಸಿ ಎಂದು ತನ್ನ ಗತವನ್ನು ಮತ್ತು ಆತನು ಸನ್ಯಾಸಿಯಾದ ಪರಿಯನ್ನು ಅರಿತು ಗಟ್ಟಿಯಾಗಿ ಜೋರಾಗಿ ಅಳಲು ಶುರು ಮಾಡಿದನು. ತಕ್ಷಣವೇ ಮಹಾರಾಣಿಯ ಬಳಿ ಮಹಾತಾಯಿ ನನ್ನನ್ನು ಕ್ಷಮಿಸು ಎಂದು ಕೇಳಿದನು . ನಿಮ್ಮನ್ನು ಈಗಲೇ ಮಹಾರಾಜರ ಬಳಿ ಒಪ್ಪಿಸುತ್ತೇನೆ ಎಂದು ಹೇಳುತ್ತಾನೆ. ಯಾವ ದಿನ ಸೇವಕರು ನಿಮ್ಮನ್ನು ಬಿಟ್ಟು ಹೋದರು ಆ ದಿನವೇ ನೀವು ಬಹಳ ಕೋಪದಲ್ಲಿದ್ದೀರಿ ನಿಮ್ಮಲ್ಲಿರುವ ಕೋಪ ಮತ್ತು ಪರಿವರ್ತನೆಗಳನ್ನು ನಾನು ಆಗಲೇ ಗಮನಿಸಿದ್ದೆ.
ಆದರೆ ನಿಮ್ಮಲ್ಲಿ ಈ ಬದಲಾವಣೆಗೋಸ್ಕರ ನಾನು ಎದುರು ನೋಡುತ್ತಿದ್ದೆ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳುತ್ತಾಳೆ. ಅರಣ್ಯದಲ್ಲಿದ್ದಾಗ ನನಗೆ ಸಮಯಕ್ಕೆ ಸರಿಯಾಗಿ ಊಟ ನೀರು ಏನು ಸಿಗುತ್ತಿರಲಿಲ್ಲ ಆದರೆ ಮಹಾರಾಜರ ಜೊತೆ ಬಂದಾಗ ನನಗೆ ಸಕಲ ಸೌಕರ್ಯಗಳು ಹೆಚ್ಚಾಗಿ ಮಾಯಾ ಮತ್ತು ಮೋಹಿತನಾಗಿ ಬಿಟ್ಟೆ. ಇಲ್ಲಿ ಪ್ರತಿಯೊಂದು ಕೂಡ ಸುಲಭವಾಗಿ ಸಿಕ್ಕಿದ್ದರಿಂದ ಅವುಗಳ ಮೇಲೆ ಆಸೆ ಹೆಚ್ಚಾಯಿತು .ಅವುಗಳಲ್ಲಿ ಯಾವುದು ಸಿಗದಿದ್ದರೂ ಕೂಡ
ನನಗೆ ಕೋಪ ಬರುತ್ತಿತ್ತು ಇಷ್ಟ ತೀರದಿದ್ದರೆ ಕೋಪ ಬರುವುದು ಕೋರಿದ ಕೋರಿಕೆ ನೆರವೇರಿದ ಮೇಲೆ ಮತ್ತಷ್ಟು ಇಷ್ಟವಾಗುವುದು ಮಾನವನ ನೈಜ ಗುಣ ಇಂತಹ ವ್ಯಸನಗಳಿಗೆ ಆಕರ್ಷಿತನಾಗಿ ನಿಮ್ಮ ಅಂದ ಚಂದಕ್ಕೆ ಮೋಹಿತನಾದೆನು ನನ್ನನ್ನು ಕ್ಷಮಿಸಿ ತಾಯಿ ಎಂದು ಸನ್ಯಾಸಿ ಮಹಾರಾಣಿಯ ಬಳಿ ಹೇಳುತ್ತಾನೆ. . ಆನಂತರ ಸನ್ಯಾಸಿಯು ಅರಣ್ಯಕ್ಕೆ ಹೋಗಲು ನಿರ್ಧಾರ ಮಾಡಿಕೊಂಡು ಹೊರಟು ಹೋಗುತ್ತಾನೆ . ಭಗವದ್ಗೀತೆಯಲ್ಲಿ ಮನುಷ್ಯನ ವೈಫಲ್ಯಕ್ಕೆ ಕಾರಣ ಕಾಮ , ಕ್ರೋಧ , ಲೋಭ ,ಎಂಬ ಮೂರು ಗುಣಗಳು ಎಂದು ಶ್ರೀ ಕೃಷ್ಣನು ಹೇಳುತ್ತಾರೆ.