ಉತ್ತಮ ಮಹಿಳೆಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ಉತ್ತಮ ಮಹಿಳೆಯರ ಲಕ್ಷಣಗಳು ಯಾವುದು ಎಂದು ತಿಳಿಯೋಣ.
ಪ್ರತಿಯೊಬ್ಬರೂ ಸೂಪರ್ ಹಿಟ್ ದಾರಾವಾಹಿ , ಕಾದಂಬರಿಯಲ್ಲಿ ಇರುವ ಕಾದಂಬರಿ ತರಹ ಅಥವಾ , ಕುಂಕುಮ ಭಾಗ್ಯದಲ್ಲಿರುವ ಗೌರಿ ತರಹ ಗುಣ ಮಹಿಳೆಯರಲ್ಲಿ ಇರಬೇಕೆಂದು ಬಯಸುತ್ತಾರೆ . ಅವು ಯಾವ ಗುಣ ಲಕ್ಷಣಗಳು ಎ೦ದು ನೋಡೋಣ .

ಮಹಿಳೆಯರು ಮನೆ ಕೆಲಸದಲ್ಲಿ ಚುರುಕಾಗಿ ಇರಬೇಕು. ಮಹಿಳೆ ಮಧುರವಾದ ಮಾತುಗಳನ್ನು ಆಡಬೇಕು. ತನ್ನ ಪತಿಯನ್ನು ಪ್ರೀತಿಸಬೇಕು ಮತ್ತು ಪತಿಯ ಮಾತುಗಳನ್ನು ಗೌರವಿಸುವಂತಹ ಸತಿಯು ಸುಲಕ್ಷಣ ಸುಸಂಸ್ಕೃತ ಹಾಗೂ ಸರ್ವ ಗುಣ ಸಂಪನ್ನ ಪತ್ನಿಯಾಗಿರುತ್ತಾಳೆ .

ಮಹಿಳೆಯರು ತನ್ನ ಅತ್ತೆ ಮಾವನ ಜೊತೆ ಹೊಂದಿಕೊಂಡು ಹೋಗಬೇಕು. ತನ್ನ ಸ್ವಂತ ತಂದೆ ತಾಯಿಗೆ ಕೊಡುವಷ್ಟು ಗೌರವ ಕೊಟ್ಟು ನೋಡಿಕೊಳ್ಳಬೇಕು. ಅತ್ತೆ ಮಾವ ಕೂಡ ಯಾವುದೇ ಬೇದ ಭಾವ ತೋರಬಾರದು. ಇದೇ ರೀತಿ ಮಾಡಬೇಕು.

ಮನೆಗೆ ಬರುವ ಅತಿಥಿಗಳನ್ನು ಭೇವ ಭಾವ ಮಾಡದೆ ಆದರದಿಂದ ಸ್ವಾಗತಿಸುವ ಗುಣವನ್ನು ಹೊಂದಿರಬೇಕು. ಮಹಿಳೆಯರು ಚಾಡಿ ಹೇಳುವ ಸ್ವಭಾವವನ್ನು ಹೊಂದಿರಬಾರದು. ಮಹಿಳೆ ಗಂಡನೊಂದಿಗೆ ಸಂಯಮದಿಂದ ಮಾತನಾಡಬೇಕು. ಪತಿ ಕೂಡ ಹೀಗೆ ಅನುಸರಿಸಬೇಕು.

ಅಲ್ಪ ಸಂಪನ್ಮೂಲಗಳಿದ್ದರೂ ಸಹ ಒಬ್ಬ ಮಹಿಳೆ ಮನೆಯನ್ನು ಶಾಂತಿಯಿಂದ ನಿರ್ವಹಿಸಬೇಕು. ಗಂಡ ತಪ್ಪು ಮಾಡಿದರೆ ಸರಿ ದಾರಿಗೆ ತರುವಂತಹ ಬುದ್ದಿ ಶಕ್ತಿ ಒಬ್ಬ ಮಹಿಳೆಗೆ ಇರಬೇಕು. ಮಹಿಳೆಯರಲ್ಲಿ ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸವಿರಬೇಕು. ದೇವರಲ್ಲಿ ಭಕ್ತಿ ಇರಬೇಕು. ಮನೆಯನ್ನು ಸದಾ ಸ್ಯಚ್ಛವಾಗಿಡಬೇಕು.ವಿವಾಹಿತ ಮಹಿಳೆ ಹಣೆಯಲ್ಲಿ ಕುಂಕುಮ ಇರದೇ ಇರಬಾರದು. ಕುಂಕುಮ ಭಾಗ್ಯ ಹೆಣ್ಣಿನ ಅತಿ ಶ್ರೇಷ್ಠ ಉಡುಗೊರೆ ಆಗಿರುತ್ತದೆ . ಎಂಬುವುದನ್ನು ನೆನಪಿಡಬೇಕು.

ಮಹಿಳೆ ಸಂಜೆಯ ಸಮಯದಲ್ಲಿ ಕಣ್ಣೀರು ಹಾಕಬಾರದು. ಮನೆಯಲ್ಲಿ ಏನಾದರು ಇಲ್ಲದಿದ್ದರೆ ಸ್ಯಲ್ಪ ತುಂಬಿದೆ ಎಂದು ಹೇಳಬೇಕು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಸಹಾಯ ಮಾಡಬೇಕು.ಮಹಿಳೆಯರು ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬಾರದು.

ರಾತ್ರಿ ಹೊತ್ತು ಊಟ ಮಾಡದೆ ಮುನಿಸಿಕೊಂಡು ಮಲಗಬಾರದು . ಮಹಿಳೆಯರಲ್ಲಿ ತಾಳ್ಮೆ ಇರಬೇಕು. ತನ್ನ ಗಂಡ ಹಾಗೂ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು. ನಿಮ್ಮ ಪ್ರೀತಿಗೆ ಪಾತ್ರರಾದವರನ್ನು ಪ್ರೀತಿಸಿ ನಿಮ್ಮ ಪತಿಯನ್ನು ಗೌರವಿಸಿ . ಅವನು ನಿಮಗಾಗಿ ತನ್ನ ಖುಷಿ ತ್ಯಾಗ ಮಾಡಿ ದಿನವಿಡೀ ಕಷ್ಟ ಪಟ್ಟು ದುಡಿಯುತ್ತಾನೆ.

ಮೂರನೆಯವರ ಎದುರಿಗೆ ತನ್ನ ಪತಿಯ ತಪ್ಪುಗಳನ್ನ ಹೇಳಿ ಅವನ ಮನಸ್ಸಿಗೆ ನೋವಾಗುವಂತೆ ಠೀಕಿಸಬಾರದು .20 . ಕೊನೆಯದಾಗಿ ಪತಿಯ ಪ್ರತಿಯೊಂದು ಆಜ್ಞೆಯನ್ನು ಪಾಲಿಸುವ ಪತ್ನಿಯನ್ನು ಪ್ರತಿಯೊಬ್ಬ ಪತಿಯು ಇಷ್ಟ ಪಡುತ್ತಾರೆ.

ಆಗ ಮಾತ್ರ ಅವರನ್ನು ಪತಿವ್ರತೆ ಪತ್ನಿ ಎಂದು ಕರೆಯಲಾಗುತ್ತದೆ . ಗಂಡನ ತಪ್ಪು ವಿಷಯವನ್ನು ಸಹ ಪರಿಗಣಿಸಬೇಕು .ಎಂಬುದು ಇದರ ಅರ್ಥವಲ್ಲಗಂಡ ಏನಾದರೂ ತಪ್ಪು ಮಾಡಲು ಹೋದರೆ ಅವನನ್ನು ತಡೆದು ಸರಿಯಾದ ಮಾರ್ಗವನ್ನು ತೋರಿಸುವುದು ಕೂಡ ಒಬ್ಬ ಮಹಿಳೆಯ ಕರ್ತವ್ಯ ಆಗಿರುತ್ತದೆ .

ಇವೆಲ್ಲಾ ವಿಷಯ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಕೂಡ ಅನ್ವಯಿಸುತ್ತದೆ . ಈ ಮೇಲಿನ ಎಲ್ಲಾ ಗುಣಗಳನ್ನು ಹೊಂದಿರುವ ಪತ್ನಿಯನ್ನು ಪಡೆದ ಪತಿಯನ್ನು ಅದೃಷ್ಟವಂತ ಎ೦ದು ಕರೆದರೆ ತಪ್ಪಾಗಲಾರದು .

Leave a Comment