ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು ಎಂದೂ ಕೂಡ ಒದ್ದೆ ತಲೆಯನ್ನು ಬಾಚಬೇಡಿ ಅಥವಾ ಹೇರ್ ಡ್ರೈಯರ್ ನಿಂದ ತಲೆಕೂದಲು ಒಣಗಿಸಬೇಡಿ. ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಜಡೆಗೆ ಹಾಗೂ ಕೂದಲಿಗೆ ಬುಡಕ್ಕೆ ಬಿಗಿಯಾದ ರಬ್ಬರ್ ಬ್ಯಾಂಡ್ ಹಾಕಬೇಡಿ. ಇದರಿಂದ ಕೂದಲು ಕಟ್ ಆಗುತ್ತದೆ.ನಾಟಿ ಕರಿಬೇವು, ದಾಸವಾಳ, ಪಾರಿಜಾತ ಹೂವಿನ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಕಾಂತಿ ಹೆಚ್ಚುವುದು.
ಒಂದು ಕಪ್ಪು ಮೆಹಂದಿ ಪುಡಿಯನ್ನು ಸ್ವಲ್ಪ ನೀರು ಸ್ವಲ್ಪ ಮೊಸರು ಎರಡು ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ಕಲೆಸಿ 6 ಗಂಟೆ ನೆನೆಸಿ ನಂತರ ತಲೆಗೆ ಹಚ್ಚಬೇಕು.
ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಿಳಿದಾಸವಾಳದ ಹೂಗಳನ್ನು ಕಿವುಚಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚುವುದರಿಂದ ಉತ್ತಮ ಸಂರಕ್ಷಣೆ ದೊರೆಯುವುದು.
ಹೊರಗಡೆ ಗಾಳಿಯಲ್ಲಿ ಹೋಗಿ ಬಂದ ನಂತರ ರಾತ್ರಿ ಮಲಗುವಾಗ ಕೂದಲನ್ನು ಹಾಗೆ ಬಿಚ್ಚಿ ಬಿಡಬೇಡಿ, ಮಲಗುವಾಗ ತುದಿಯವರೆಗೂ ಜಡೆಯನ್ನು ಹೆಣೆಯಿರಿ.
ಮೆಂತ್ಯೆ ಕಾಳುಗಳನ್ನು ನೆನೆಸಿ ಅದನ್ನು ಮೊಸರಿನ ಜೊತೆ ರುಬ್ಬಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲ ತುದಿ ಕವಲುಗಳಾದಾಗ ಅವುಗಳನ್ನು ಕತ್ತರಿಸಿದರೇ ಕೂದಲು ಬೆಳವಣಿಗೆ ಚೆನ್ನಾಗಿ ಆಗುತ್ತದೆ.
ಕರಿಬೇವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಹುರಿದು ಪುಡಿಮಾಡಿ ಕೊಬ್ಬರಿ ಎಣ್ಣೆಗೆ ಬೆರೆಸಿ, ರಾತ್ರಿ ಮಲಗುವ ಮೊದಲೇ ತಲೆಯ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಇದರಿಂದ ಕೂದಲಿನ ಕಾಂತಿ ವೃದ್ಧಿಸುವುದು.
ಮೆಹಂದಿಯ ಜೊತೆ ಸೀಗೆಕಾಯಿ, ನೆಲ್ಲಿಕಾಯಿ, ದಾಸವಾಳ ಎಲೆ, ಕರಿಬೇವಿನ ಎಲೆಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿ ಕೂದಲು ಕಾಂತಿಯುಕ್ತವಾಗುವುದು.
ಬೇವು ಆಧಾರಿತ ತೈಲಗಳನ್ನು ಉಪಯೋಗಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು. ಕೂದಲು ಶುಚಿಗೊಳಿಸಲು ಶ್ಯಾಂಪೂಗಳನ್ನು ಆಗಾಗ ಬದಲಾಯಿಸಬೇಡಿ.
ತಲೆಯಲ್ಲಿ ಹೊಟ್ಟು ಆಗದಂತೆ ಎಚ್ಚರವಹಿಸಿ. ಈ ಹೊಟ್ಟಿನಿಂದ ಕೂದಲು ಉದುರುವುದು ಅಲ್ಲದೇ ಹೊಟ್ಟು ಮುಖ ಹಾಗೂ ಬೆನ್ನಿನ ಮೇಲೆ ಬಿದ್ದರೆ ಅಲ್ಲಿ ಗುಳ್ಳೆಗಳಾಗಿ ಚರ್ಮರೋಗಗಳು ಬರುವ ಸಂಭವ ಇರುತ್ತದೆ. ಈ ಕಾರಣಕ್ಕಾಗಿ ಮೇಲಿನ ಟಿಪ್ಸ್ ಗಳನ್ನು ಸರಿಯಾಗಿ ಅನುಸರಿಸಿದರೇ ನಿಮ್ಮ ಕೂದಲು ಸಂರಕ್ಷಣೆಯಾಗುತ್ತದೆ.