ನಾವು ಈ ಲೇಖನದಲ್ಲಿ ಮೇಷ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಹೊಸ ವರ್ಷ ಅಂದ ತಕ್ಷಣ ನಮಗೆ ಹೊಸ ನಿರೀಕ್ಷೆಗಳು , ಹೊಸ ಆಕಾಂಕ್ಷೆಗಳು , ಹೊಸ ಕನಸುಗಳು , ಹೇಗಿರುತ್ತದೆ ಎಂಬ ಕುತೂಹಲ ಇರುತ್ತದೆ . ಒಂದಷ್ಟು ಹಿತವಾದ ತೊಂದರೆಗಳು ಹೊಸ ವರ್ಷದಲ್ಲಿ ಬರುತ್ತದೆ.. ಕೆಲವೊಂದು ತಪ್ಪುಗಳನ್ನು ಕೂಡ ನಿಮ್ಮಿಂದ ಆಗುತ್ತದೆ . ಅಂದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯ ಮಾತಿನಂತೆ .
ಈ ತರಹ ಬಂದು ಹೋಗುವ ವಿಚಾರಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ . ಆದರೆ ನಿಮಗೆ ಇದರ ಬಗ್ಗೆ ಯೋಚನೆ ಮಾಡುವುದಕ್ಕೂ ಸಹ ಸಮಯ ಇರುವುದಿಲ್ಲ . ಈ ತರಹದ ಘಟನೆಗಳು ಸತತವಾಗಿ ನಡೆಯುವ ಸಾಧ್ಯತೆ ಇದೆ . ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು . ಯಾರಿಗಾದರೂ ಸಹಾಯ ಮಾಡುವುದು .ಹೀಗೆ ಒಂದಲ್ಲ ಒಂದು ಚಟುವಟಿಕೆಗಳನ್ನು ತೊಡಗಿಸಿಕೊಂಡಿರುತ್ತಾರೆ . ಇವರು ಯಾವಾಗಲೂ ಕ್ರಿಯಾಶೀಲತೆಯಿಂದ ವರ್ತಿಸುತ್ತಾರೆ..
ಇವರದು ಬಿಡುವಿಲ್ಲದ ಜೀವನ ಆಗಿರುತ್ತದೆ . ಇವರ ಜೀವನದಲ್ಲಿ ಸವಾಲುಗಳು ಕೂಡ ಪದೇ ಪದೇ ಬರುತ್ತಿರುತ್ತವೆ .ಕೆಲಸಗಳು ಜವಾಬ್ದಾರಿಗಳು ಸೃಷ್ಟಿ ಯಾಗುತ್ತಾ ಹೋಗುತ್ತದೆ .ಇಂತಹ ಒಂದು ವಾತಾವರಣ ನಿಮ್ಮನ್ನ ಈ ತಿಂಗಳಿನಲ್ಲಿ ಆವರಿಸಿಕೊಳ್ಳುವ ಸಾಧ್ಯತೆ ಇದೆ . ಶನಿ ಮಹಾತ್ಮ ಏಕಾದಶ ಭಾಗದಲ್ಲಿ ಇದ್ದಾನೆ . ಶನಿ ದೇವರ ಆಶೀರ್ವಾದ ನಿಮಗೆ ಮುಂದುವರೆಯುತ್ತದೆ . ದೀರ್ಘಕಾಲದ ಕೆಲಸಗಳಲ್ಲಿ ಮುನ್ನಡೆ ಮತ್ತು ಪ್ರಗತಿ ಉಂಟಾಗುತ್ತದೆ . ಇದಕ್ಕೆ ಪೂರಕವಾದ ವಾತಾವರಣ ನಿಮ್ಮ ಜೀವನದಲ್ಲಿ ನಿರ್ಮಾಣವಾಗುತ್ತಿದೆ .ಶನಿ ದೇವರು ನಿಮಗೆ ಗಟ್ಟಿಯಾದ ಅಡಿಪಾಯವನ್ನು ಹಾಕಲಿದ್ದಾರೆ .
ಈ ತರದ ಅಂದರೆ ಧೀಘ ಕಾಲದ ಯಶಸ್ಸು ಸಿಗುತ್ತಿಲ್ಲ ಎಂದರೆ ಶನಿ ದೇವರ ಬಗ್ಗೆ ಭಕ್ತಿಯನ್ನು ಬೆಳೆಸಿಕೊಳ್ಳಬೇಕು . ಮನೆ ಕಟ್ಟುವುದು , ವ್ಯಾಪಾರದಲ್ಲಿ ಹೂಡಿಕೆ ಮಾಡುವುದು , ಆಸ್ತಿ – ಪಾಸ್ತಿ ಗಳು ಇಂಥ ಎಲ್ಲಾ ವಿಚಾರಗಳಲ್ಲಿ ನಿಮಗೆ ಯಶಸ್ಸು ಬೇಕು ಅಂದರೆ , ಶನಿವಾರದಂದು ಶ್ರದ್ಧೆ ವಹಿಸಿ ಪ್ರಾರ್ಥನೆಯನ್ನು ಮಾಡಬೇಕು . ನಿಮ್ಮ ಜೀವನದಲ್ಲಿ ಮೊದಲೇ ಪ್ರಗತಿ ಕಾಣಬೇಕಾಗಿತ್ತು . ಇನ್ನೂ ಆಗಿಲ್ಲಾ ಎಂದರೆ , ಸ್ವಲ್ಪ ಇದರ ಕಡೆ ಗಮನ ವಹಿಸಬೇಕು . ವ್ಯಯ ದಲ್ಲಿ ಇರುವ ರಾಹು ಖರ್ಚು ವೆಚ್ಚಗಳನ್ನು ಕೊಡುತ್ತಿದ್ದಾನೆ .ಖರ್ಚು ಹೆಚ್ಚಾಗುತ್ತಿರುತ್ತದೆ .ಅಂದರೆ ನಿಮ್ಮ ಜೀವನದಲ್ಲಿ ಅಗತ್ಯಕ್ಕೂ ಮೀರಿದ ಅನಗತ್ಯ ಖರ್ಚುಗಳು ನಡೆಯುತ್ತಿರುತ್ತವೆ .
ಈ ರಾಶಿಯವರು ಹೆಚ್ಚಿನ ಖರ್ಚನ್ನು ಮಾಡುತ್ತಾರೆ. . ಆದರೆ ನಂತರ ನಿಮಗೆ ಅನ್ನಿಸುತ್ತದೆ, ಖರ್ಚಾಯಿತು ಎಂದು . ಖರ್ಚಿನ ವಿಚಾರದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು . ಹಾಗಾಗಿ ಬೇರೆಯವರಿಂದ ಆಕ್ಷೇಪಗಳನ್ನು ಎದುರಿಸುವ ತೊಂದರೆಗಳು ಕೂಡ ಇರುತ್ತದೆ . ಕೆಲವರು ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಡುವ ಸಾಧ್ಯತೆಯೂ ಕೂಡ ಇರುತ್ತದೆ. ನಿಮ್ಮ ಶ್ರೇಯಸ್ಸನ್ನು ಬಯಸುವವರು ನಿಮಗೆ ಕಿವಿಮಾತು ಹೇಳುತ್ತಾರೆ . ಖರ್ಚಿನ ಬಗ್ಗೆ ನೋಡಿಕೊಂಡು ಖರ್ಚು ಮಾಡಿ ಎಂದು .
ಇನ್ನು ಕೆಲವರು ಆಡಿಕೊಳ್ಳುತ್ತಾರೆ .ಈ ರಾಶಿಯವರಿಗೆ ಖರೀದಿಸುವ ಗುಣ ಹೆಚ್ಚಾಗಿರುತ್ತದೆ . ನೀವು ಖರೀದಿಸುವ ವಸ್ತುಗಳು ಬಹಳಷ್ಟು ಅವಶ್ಯಕತೆ ಇರುತ್ತದೆ . ಆದರೆ ಅನಿವಾರ್ಯ ಇರುವುದಿಲ್ಲ . ಒಂದಷ್ಟು ಗೊಂದಲ ಗೊಜಲು ಗಳಿಗೆ ಸಿಲುಕಿ ಕೊಳ್ಳುವುದನ್ನು ರಾಹು ನಿಮಗೆ ಕೊಡುತ್ತಾನೆ . ನೀವು ನಿದ್ರಾ ಹೀನತೆ ಇಂದ ತೊಂದರೆಯನ್ನು ಅನುಭವಿಸುತ್ತಾರೆ . ನೀವು ಪ್ರಾಣಾಯಾಮವನ್ನು ಮಾಡುವುದರಿಂದ ನಿಮಗೆ ನಿದ್ರಾ ಹೀನತೆಯು ದೂರವಾಗುತ್ತದೆ .ಓಂಕಾರವನ್ನು ಉಚ್ಚಾರಣೆ ಮಾಡುವುದರಿಂದ ನಿಮಗೆ ನಿದ್ರೆಯ ತೊಂದರೆಗಳು ದೂರವಾಗುತ್ತದೆ .ಇದರಿಂದ ಮಾನಸಿಕ ತೊಂದರೆಗಳು ಅಡ್ಡಿ ಆತಂಕಗಳು ಕೂಡ ದೂರವಾಗುತ್ತದೆ .
ರಾಹು ನಿಮ್ಮ ವ್ಯಯ ಭಾಗದಲ್ಲಿ ಬಲಿಷ್ಠನು ಆಗುತ್ತಾ ಹೋಗುತ್ತಿರುತ್ತಾನೆ . ಆದ್ದರಿಂದ , ನೀವು ಪ್ರಯತ್ನ ಮಾಡುವುದನ್ನು ಬಿಡಬೇಡಿ . ಇದೊಂದು ಎಚ್ಚರಿಕೆಯನ್ನು ಮೇಷ ರಾಶಿಯವರು ನಿರ್ವಹಿಸಬೇಕು .ಈ ಒಂದು ಸಂದರ್ಭದಲ್ಲಿ ಭಾಗ್ಯದ ಸ್ಥಾನದಲ್ಲಿ ಕೆಲವೊಂದು ತೊಡಕುಗಳು ಇವೆ .ಜನವರಿ ತಿಂಗಳಲ್ಲಿ ಅದೃಷ್ಟಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹೇಳುವುದಾದರೆ , ಅದೃಷ್ಟದ ಮೇಲೆ ಅವಲಂಬಿತ ಆಗಲು ಸಾಧ್ಯವಿಲ್ಲ . ಭಾಗ್ಯದಲ್ಲಿ ಒಂದಷ್ಟು ಬೇಡದೆ ಇರುವ ಗ್ರಹಗಳು ಬಂದು ಕೂರುತ್ತಾರೆ.
ರವಿ ಕುಜ ಮತ್ತು ಬುಧ ಇವರುಗಳು ಸೇರುವುದರಿಂದ ಸ್ವಲ್ಪ ತೊಂದರೆಗಳು ಉಂಟಾಗುತ್ತದೆ . ಶತ್ರು ಸ್ಥಾನಾಧಿಪತಿಯಾಗಿ ಬುಧ , ಪಂಚಮಾಧಿಪತಿ ಯಾಗಿ ರವಿ , ಹಾಗೆಯೇ ರಾಶಿಯ ಅಧಿಪತಿಯಾಗಿ ಕುಜ . ಸ್ವಲ್ಪ ಗಮನ ಅದೃಷ್ಟದ ಮೇಲೆ ಇರುತ್ತದೆ . ಅದೃಷ್ಟದ ಬಗ್ಗೆ ನಿಮ್ಮ ಯೋಚನೆ ಹೆಚ್ಚಾಗಿರುತ್ತದೆ .ನೀವು ಅದೃಷ್ಟದ ಮೇಲೆ ಅವಲಂಬಿತ ಆಗಲು ಹೋಗಬೇಡಿ . ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ಗಮನಹರಿಸಿ .ನೀವು ಭ್ರಮೆ ಭ್ರಾಂತಿಗಳನ್ನು ಇಟ್ಟುಕೊಳ್ಳಬೇಡಿ .
ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಕಾಣಬೇಕು . ಇಂತಹ ಪ್ರಯತ್ನ ಮಾಡುವವರಿಗೆ ಶನಿಯ ಪ್ರಭಾವ ಇದೆ. ಶನಿ ಹನ್ನೊಂದನೆ ಭಾಗದಲ್ಲಿ ಇರುತ್ತಾನೆ. ಹಾಗೆಯೇ ನಿಮ್ಮ ರಾಶಿಯಲ್ಲಿ ಇರುವ ಗುರು ಕೆಲಸಕ್ಕೆ ಬರುತ್ತಾನೆ. ಆದರೆ ಈ ಪರಿಸ್ಥಿತಿ ಇದೇ ತರ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ .ನಿಧಾನವಾಗಿ ಪ್ರಗತಿ ಆಗುತ್ತದೆ . ಪಿತೃ ಭಾವದಲ್ಲಿ ಇರುವವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು . ವಾತಾವರಣದ ವೈಪರಿತ್ಯ ಗಳು ಇರುವುದರಿಂದ ವಯಸ್ಸಾದವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು .
ವಾತಾವರಣದಲ್ಲಿ ಬಹಳಷ್ಟು ಏರುಪೇರುಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಹಾಗಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ . ಅಸ್ತಮಾ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು .ಹಿರಿಯರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು . ವಾತದ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ .ಇದಕ್ಕೆಲ್ಲ ನಿಮ್ಮನ್ನ ನೀವು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು .
ಈ ಜನವರಿ ತಿಂಗಳಲ್ಲಿ ನೀವು ಕೂತಲ್ಲಿ ಕೂರಬಾರದು . ನೀವು ಹೆಚ್ಚಿನ ಚಟುವಟಿಕೆಯಿಂದ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು .ಅಷ್ಟಮದಲ್ಲಿ ಶುಕ್ರ ಗ್ರಹ ಇರುವುದರಿಂದ , ಷಷ್ಟದಲ್ಲಿ ಇರುವ ಕೇತು ಒಂದು ಮಟ್ಟಿಗೆ ನಿಮಗೆ ಆರೋಗ್ಯವನ್ನು ನೀಡುತ್ತಾನೆ . ಆದರೂ ಕೂಡ ಸ್ವಲ್ಪ ಮಟ್ಟಿನ ಸಮಸ್ಯೆಗಳು ಇರುತ್ತದೆ .ಈ ರಾಶಿಯವರು ಮಕ್ಕಳ ಮೇಲೆ ಹೆಚ್ಚಿನ ಗಮನವನ್ನು ಹರಿಸಬೇಕು .ಈ ರಾಶಿಯವರಿಗೆ ಹಿತವಾದ ತೊಂದರೆಗಳು ಕಂಡುಬರುತ್ತದೆ .