ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು

ನಾವು ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು ಯಾವುದು ಎಂದು ತಿಳಿಯೋಣ .1 . ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿನ ಸ್ಥಳ ಬಿಡಬೇಕು . 2 . ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು . ಅಂದರೆ ಶುಕ್ಲ ಪಕ್ಷದಲ್ಲಿ ಚಂದ್ರನು ದೊಡ್ಡವನು ಆಗುತ್ತಾನೆ. ಅದು ಅಭಿವೃದ್ಧಿಯ ಸಂಕೇತವಾಗಿ ಇರುತ್ತದೆ .

3 . ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯಲ್ಲಿಯೇ ಈಶ್ವರನ ವಾಸ . ಆ ಮೂಲೆಯಲ್ಲಿಯೇ ಪೂಜಾ ಕೋಣೆಯನ್ನು ಕಟ್ಟಬೇಕು . ಜಾಸ್ತಿ ಸ್ಥಳ ಇಲ್ಲದಿದ್ದರೆ , ಒಂದು ಮಂಟಪವನ್ನು ಇಟ್ಟು ಪೂಜಿಸಬೇಕು .

4 . ದೇವರ ಮುಖವನ್ನು ಉತ್ತರ ಪೂರ್ವಾ ಅಥವಾ ಪಶ್ಚಿಮದಲ್ಲಿ ಇಡಬಹುದು . ಆದರೆ ದಕ್ಷಿಣಾಭಿಮುಖವಾಗಿ ದೇವರನ್ನು ಸ್ಥಾಪಿಸಬಾರದು . ದೇವರನ್ನು ಪೂಜಿಸುವ ವ್ಯಕ್ತಿ ಪೂರ್ವಾಭಿಮುಖವಾಗಿ ಇದ್ದರೆ ಒಳ್ಳೆಯದು .

5 . ಶೌಚಾಲಯವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು, ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟಬೇಕು . ಈಶಾನ್ಯ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಕಟ್ಟಬಾರದು . ಪ್ರವೇಶ ದ್ವಾರಕ್ಕೆ ಹೊಂದಿಕೊಂಡು ಶೌಚಾಲಯ ಕಟ್ಟಬಾರದು .

6 . ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳ ಭಾಗವೂ ತಗ್ಗು ಅಥವಾ ಇಳಿಜಾರು ಇದ್ದರೆ ಶುಭ .

7 . ಆಗ್ನೇಯ ಭಾಗದಲ್ಲಿ ಅಡುಗೆ ಮನೆಯು ಇರಬೇಕು . ಒಂದು ವೇಳೆ ಸಾಧ್ಯವಾಗದಿದ್ದರೆ , ವಾಯುವ್ಯ ಭಾಗದಲ್ಲಿ ಅಡುಗೆ ಮನೆ ಮಾಡಬಹುದು . ಈಶಾನ್ಯದಲ್ಲಿ ಅಡುಗೆ ಮನೆ ಇರಬಾರದು . ಮುಖ್ಯ ದ್ವಾರದಿಂದ ನೇರವಾಗಿ ಅಡುಗೆಮನೆ ಇರಬಾರದು .

8 . ಪೂರ್ವ ಉತ್ತರ ಈಶಾನ್ಯ ಗಳಲ್ಲಿ ತುಳಸಿ ಕಟ್ಟೆ ಬೃಂದಾವನವನ್ನು ಕಟ್ಟಬಾರದು, ಆ ದಿಕ್ಕುಗಳಲ್ಲಿ ತುಳಸಿ ಗಿಡಗಳ ಕುಂಡವನ್ನು ಇಡಬಾರದು. ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯದಲ್ಲಿ ತುಳಸಿ ಬೃಂದಾವನವನ್ನು ಕಟ್ಟಬಹುದು ಅಥವಾ ಕುಂಡಗಳನ್ನು ಇಡಬಹುದು .

9 . ಬಾವಿ , ಬೋರ್ವೆಲ್ , ಮತ್ತು ನೀರಿನ ಸಂಪು ಇತ್ಯಾದಿ ನೀರಿನ ಮೂಲಗಳನ್ನು ಈಶಾನ್ಯ ದಿಕ್ಕಿನಲ್ಲಿ ತೆಗಿಸಬೇಕು ಅಥವಾ ಹಾಕಿಸಬೇಕು .

10 . ಮನೆಯ ಮೇಲಕ್ಕೆ ಇರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಏರುವಂತೆ ಇರಬೇಕು ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು .

11 .ವಿದ್ಯಾರ್ಥಿಗಳು ಪೂರ್ವ ಈಶಾನ್ಯ ಅಥವಾ
ಉತ್ತರಾಭಿಮುಖವಾಗಿ
ನೇರವಾಗಿ ಕುಳಿತು ಅಭ್ಯಾಸ ಮಾಡಬೇಕು . ಪೂರ್ವ ಅಥವಾ ಉತ್ತರದ ಗೋಡೆಗೆ ಬರೆಯುವ ಹಲಗೆಯನ್ನು ಅಳವಡಿಸಬೇಕು .

12 . ಕಾರ್ , ಸ್ಕೂಟರ್ ಇತ್ಯಾದಿ ವಾಹನಗಳನ್ನು ಪೂರ್ವ , ಉತ್ತರ ಅಥವಾ ವಾಯುವ್ಯ ಭಾಗದಲ್ಲಿ ನಿಲ್ಲಿಸಬೇಕು .
ಈ ರೀತಿಯಾಗಿ ವಾಸ್ತುಶಾಸ್ತ್ರದ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ .

Leave a Comment