ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು

ನಾವು ಈ ಲೇಖನದಲ್ಲಿ ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ .ಮನೆಗೆ ದಾರಿದ್ರ್ಯ ಬರಲು ಬಹು ಮುಖ್ಯ ಕಾರಣಗಳು : – 1 . ಮುರಿದ ಬಾಚಣಿಗೆಯಿಂದ ತಲೆ ಬಾಚುವುದು . 2 . ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು . 3 . ಮನೆಯಲ್ಲಿ ಹೊಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು . 4 . ಸೂರ್ಯೋದಯ ಆದ ಮೇಲೂ ಕೂಡ ಇನ್ನೂ ಮಲಗಿರುವುದು .

5 . ಬಾತ್ರೂಮ್ ಬಾಗಿಲನ್ನು ಯಾವಾಗಲೂ ತೆರೆದಿಡುವುದು . 6 . ಕತ್ತಲೆಯಲ್ಲಿ ಊಟ ಮಾಡುವುದು . ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು . 7 . ಮನೆಯ ಅಂಗಳದಲ್ಲಿ ರಂಗೋಲಿ ಹಾಕದಿರುವುದು . ರಾತ್ರಿ ಹೊತ್ತು ಮನೆಯ ಕಸ ಗುಡಿಸಿ ಹೊರಗೆ ಹಾಕುವುದು . 8 . ಮನೆಯಲ್ಲಿ ಯಾವಾಗಲೂ ಹಲ್ಲುಗಳಿಂದ ಉಗುರು ಕಚ್ಚುವುದು . 9 . ಹರಿದಿರುವ ಬಟ್ಟೆಗಳನ್ನು ಧರಿಸುವುದು .

10 . ಮಹಿಳೆಯರು ರೊಟ್ಟಿ ಸುಡುವ ಹಂಚನ್ನು ಉಲ್ಟಾ ಇಡುವುದು . 11 . ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು .12 . ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚದೆ ಹಾಗೆ ಇರುವುದು . 13 . ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲೆ ಬಿಡುವುದು . 14 . ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿರುವುದು . 15 . ಮನೆಯಲ್ಲಿ ಯಾವಾಗಲೂ ಕೆಟ್ಟ ಪದಗಳನ್ನು ಬಳಸುವುದು .

16 . ಮನೆಯ ಮುಂದೆ ಚಪ್ಪಲಿಗಳನ್ನು ಉಲ್ಟಾ ಹಾಕಿ ಹಾಗೆ ಬಿಡುವುದು . 17 . , ಪ್ರತಿದಿನ ಮಾಂಸಾಹಾರಿ ಆಹಾರ ಸೇವಿಸುವುದು . 18 . ಕಾಲ ಮೇಲೆ ಕಾಲು ಹಾಕಿ ಕುಳಿತು ಕಾಲು ಅಲುಗಾಡಿಸುವುದು . 19 . ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುವುದು . 20 . ಮೊಸರು , ಹುಣಸೆ ಹಣ್ಣು ಮತ್ತು ಉಪ್ಪನ್ನು ಮುಸ್ಸಂಜೆ ವೇಳೆ ಬೇರೆಯವರಿಗೆ ಕೊಡುವುದು .

21 . ಮನೆಗೆ ಅತಿಥಿಗಳು ಬಂದರೆ , ಬೇಸರ ಮಾಡಿಕೊಳ್ಳುವುದು . ಅವರಿಗೆ ಅಪಮಾನಿಸುವುದು . 22 . ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವುದು . 23 . ಪ್ರತಿದಿನ ಮನೆಯಲ್ಲಿ ಕಾಲು ಕೆದರಿ ಜಗಳ ಮಾಡುವುದು .
24 . ಮನೆಯ ಹಿರಿಯರನ್ನು ಗೌರವಿಸದಿರುವುದು . ಏಕವಚನದಲ್ಲಿ ಮಾತನಾಡುವುದು . 25 . ಗಂಡ ಹೆಂಡತಿ ಸದಾ ಜಗಳವಾಡುತ್ತಿರುವುದು .ಈ ಮೇಲಿನ ಸಲಹೆಗಳನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಮಾಡಿ ಎಂದು ಹೇಳಲಾಗಿದೆ .

Leave a Comment