ಧನುರ್ ರಾಶಿಯವರ ಗುಣಲಕ್ಷಣಗಳು

ಇಂದಿನ ಲೇಖನದಲ್ಲಿ ಧನುರ್ ರಾಶಿಯವರ ಗುಣಲಕ್ಷಣಗಳನ್ನು ತಿಳಿಸಿ ಕೊಡುತ್ತೇವೆ. ಧನುಸ್ಸು ರಾಶಿ ವ್ಯಕ್ತಿಗಳು ಅದೃಷ್ಟವಂತರು.ಧನುರ್ ರಾಶಿಯವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನ ಕಂಡುಕೊಳ್ಳುತ್ತಾರೆ. ಧನುರ್ ರಾಶಿಯ ಮನೆ 9 ಆಗಿರುತ್ತದೆ. ಅದು ಅದೃಷ್ಟದ ಮನೆಯಾಗಿರುತ್ತದೆ. ಆಗಾಗಿ ತಮ್ಮ ಪ್ರತಿಯೊಂದು ಸಮಸ್ಯೆಯನ್ನು ಅವರ ಲಕ್ ನಿಂದ ಪಾರಾಗುತ್ತಾರೆಂದು ಹೇಳಬಹುದು. ಹೊಸ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ.

ಇವರು ಜೀವನದಲ್ಲಿ ಮುಂದೆ ಬರಲು ಇಷ್ಟಪಡುತ್ತಾರೆ.ಇವರು ಯಾವುದೇ ವಿಷಯವನ್ನು ಬಹಳ ಬೇಗ ನಂಬುವುದಿಲ್ಲ, ಚುರುಕಿನ ಸ್ವಭಾವದವರು ಮತ್ತು ಬುದ್ದಿವಂತರಾಗಿರುತ್ತಾರೆ. ಕೆಲಸ ಮತ್ತು ಹಣಕ್ಕಿಂತಲೂ ಸ್ವತಂತ್ರವಾಗಿರಲು ಪ್ರಾಮುಖ್ಯತೆ ಕೊಡುತ್ತಾರೆ. ಒಂದು ವಿಷಯವನ್ನ ಅರ್ಥವಾಗುವ ರೀತಿಯಲ್ಲಿ ವಿವರಿಸುವಂತಹವರು ಮತ್ತು ಇವರು ಮಾತಿನಲ್ಲಿ ಪರಿಣಿತರಾಗಿರುತ್ತಾರೆ. ಯಾವುದೇ ವಿಷಯವನ್ನ ಸರಿಯಾಗಿ ತಿಳಿಯದೇ ಅರ್ಧಕ್ಕೆ ಬಿಡುವವರಲ್ಲ.

ದೊಡ್ಡವರು ಇರಲಿ, ಚಿಕ್ಕವರು ಇರಲಿ ವಿಷಯವನ್ನ ಕೇಳಿ ತಿಳಿಯದೇ ಬಿಡುವುದಿಲ್ಲ. ಹೊಸದನ್ನ ಕಲಿಯಲು ಬಹಳ ಆಸಕ್ತಿ. ಇವರಲ್ಲಿ ಕೆಲಸವನ್ನ ಮುಂದೂಡುವ ಸ್ವಭಾವ ಇರುತ್ತದೆ. ಕೆಲವು ಸಲ ಸಮಯ ಸಿಕ್ಕಾಗ ಕೆಲಸವನ್ನ ಮಾಡಲು ಮೂಡ್ ಇರುವುದಿಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸಲು ಪ್ರಯತ್ನಿಸಿ. ಇವರು ಯಾವುದೇ ವಿಷಯವನ್ನು ನೇರವಾಗಿ ಹೇಳಿಬಿಡುತ್ತಾರೆ. ಇವರು ಒಂದೇ ವಿಷಯದಲ್ಲೇ ಅಟ್ಯಾಚ್ ಮೆಂಟ್ ಇರಲ್ಲ. ಒಂದು ಕೆಲಸವನ್ನ ಎರಡು ಮೂರು ಟೈಂ ಮಾಡುತ್ತಾರೆ.

ಈ ರಾಶಿ ಅಗ್ನಿತತ್ತ್ವದ ರಾಶಿಯಾಗಿರುವುದರಿಂದ ಎನರ್ಜಿಟಿಕ್ ಆಗಿ ಇರುತ್ತಾರೆ. ಧನುರ್ ರಾಶಿಯನ್ನು ಆಳುವ ಗ್ರಹ ಗುರುಗ್ರಹವಾಗಿರುತ್ತದೆ. ಇವರು ಯಾವುದೇ ಟಾಸ್ಕ್ ಅನ್ನು ಸಡನ್ ಆಗಿ ಪ್ರಾರಂಭ ಮಾಡುವುದಿಲ್ಲ ಚೆನ್ನಾಗಿ ಯೋಚನೆ ಮಾಡಿ ಪ್ರಾರಂಭ ಮಾಡುತ್ತಾರೆ. ಗುರು ಗ್ರಹದಿಂದ ಲಕ್ ಬರುತ್ತದೆ. ಇವರು ಹೆಚ್ಚು ಹಾರ್ಡ್ ವರ್ಕ್ ಮಾಡಿ ತಮ್ಮ ಗುರಿಯನ್ನು ಬಹಳ ಬೇಗ ಮುಟ್ಟುತ್ತಾರೆ. ಕೇತು ಈ ರಾಶಿಯಲ್ಲಿ ಸ್ವಲ್ಪ ಪ್ರಭಾವಶಾಲಿಯಾಗಿ ಇರುತ್ತದೆ. ಹಾಗಾಗಿ ಇವರಿಗೆ ಸಂಶೋಧನೆ ಮತ್ತು ಸತ್ಯವನ್ನ ಪತ್ತೆಹಚ್ಚಲು ತುಂಬಾ ಆಸಕ್ತಿ ಇರುತ್ತದೆ.

ಇವರು ಫ್ಯಾಮಿಲಿ ಯನ್ನು ತುಂಬಾ ಕೇರ್ ಮಾಡುತ್ತಾರೆ. ಮೇಲ್ನೋಟಕ್ಕೆ ಕುಟುಂಬದ ಜವಾಬ್ದಾರಿಯನ್ನ ತೆಗೆದುಕೊಳ್ಳುತ್ತಾರೆ ಆದರೆ ಹೆಚ್ಚಾಗಿ ತಮ್ಮ ಗುರಿಯ ಕಡೆಗೆ ಹೆಚ್ಚು ಗಮನ ಅರಿಸುತ್ತಾರೆ. ಧನುರ್ ರಾಶಿಯವರು ಯಾರ ಜೊತೆ ಇರುತ್ತಾರೋ ಅವರ ಜೊತೆ ಒಳ್ಳೆಯ ರೀತಿಯಲ್ಲಿ ಇರುತ್ತಾರೆ. ಧನುರ್ ರಾಶಿಯವರು ಖರ್ಚನ್ನು ಹೆಚ್ಚು ಮಾಡುತ್ತಾರೆ.

ಆದ್ದರಿಂದ ಪ್ಲಾನ್ ಮಾಡಿ ಖರ್ಚನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಗಮನ ಕೊಡಿ. ಇವರಿಗೆ ಒಳ್ಳೆಯ ನಾಲೆಡ್ಜ್ ಇರುವುದರಿಂದ ಇವರ ಕೆರಿಯರ್ ಚೆನ್ನಾಗಿರುತ್ತದೆ. ಧನಸ್ಸು ರಾಶಿಯವರಿಗೆ ಟೀಚಿಂಗ್, ಟ್ರಾವೆಲಿಂಗ್, ವೀಡಿಯಾ, ಆ್ಯಂಕರಿಂಗ್ ಫೀಲ್ಡ್ ಚೆನ್ನಾಗಿ ಆಗಿ ಬರುತ್ತದೆ. ಲಿವರ್ ನಲ್ಲಿ ಸಮಸ್ಯೆ ಕಂಡುಬರುತ್ತದೆ. ಪಿತ್ತ ಮತ್ತು ಕಫದ ಸಮಸ್ಯೆ ಸ್ವಲ್ಪ ಇರುತ್ತದೆ. ಹಾಗಾಗಿ ನೀರನ್ನ ಸೇವಿಸುವಾಗ ಗಮನ ಕೊಡಬೇಕಾಗುತ್ತದೆ. ವಾಕ್ ಚಾತುರ್ಯ ನಿಮ್ಮಲ್ಲಿ ಇರುವುದರಿಂದ ಜನರನ್ನ ಬಹಳ ಬೇಗ ಆಕರ್ಷಣೆ ಮಾಡುತ್ತೀರ. ಜನ ನಿಮ್ಮನ್ನು ತುಂಬಾ ಇಷ್ಟಪಡುತ್ತಾರೆ.ಹಣಕಾಸು ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು.

Leave a Comment