ತುಲಾ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ 2024 ರ ತುಲಾ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ.
ಈ ರಾಶಿಯವರು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಗುತ್ತಾರೆ . ಕೆಲವೊಂದು ವಸ್ತುಗಳು ನೀರು ಹಾಕಿದಂತೆ ಗಟ್ಟಿಯಾಗುತ್ತಾ ಹೋಗುತ್ತದೆ .ಇನ್ನು ಕೆಲವೊಂದು ವಸ್ತುಗಳು ಪೆಟ್ಟು ಬಿದ್ದು ಗಟ್ಟಿಯಾಗುತ್ತಾ ಹೋಗುತ್ತದೆ. ಇನ್ನೂ ಕೆಲವು ವಸ್ತುಗಳು ಶಾಖ ತಗುಳಿದಾಗ ಗಟ್ಟಿಯಾಗುತ್ತಾ ಹೋಗುತ್ತದೆ . ಇಂತಹ ಪರಿಣಾಮಗಳು ಈ ರಾಶಿಯವರ ಮೇಲೆ ಆಗುತ್ತಿರುತ್ತದೆ . ಇಂತಹ ಅನುಭವಗಳು ಹೆಚ್ಚಾಗಿ ಈ ರಾಶಿ ಅವರಿಗೆ ಬರುತ್ತಿರುತ್ತವೆ .ಇಂತಹ ತೊಂದರೆಗಳನ್ನು ತಡೆದುಕೊಳ್ಳುವ ಶಕ್ತಿ ನಿಮಗೆ ಇದ್ದೇ ಇರುತ್ತದೆ .

ಇಂತಹ ಶಕ್ತಿಯನ್ನು ಕೊಡುವಂತಹ ವಿಶೇಷವಾದ ಗ್ರಹ ಅದರ ರಕ್ಷಣೆ ಮತ್ತು ಶ್ರೀರಕ್ಷೆ 2024ರ ಬಹು ಭಾಗ ಇರುತ್ತದೆ. ಒಂದಲ್ಲ ಒಂದು ರೂಪದಲ್ಲಿ ಹಣ ಕೊಡುವ ಮೂಲಕ ಖುಷಿಯನ್ನು ಮತ್ತು ಖರ್ಚುಗಳನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ತಂದುಕೊಡುತ್ತದೆ .ಅದೃಷ್ಟ ಕೂಡ ಒಂದು ಮಟ್ಟಕ್ಕೆ ಈ 2024 ರ ವರ್ಷದಲ್ಲಿ ಸಹಾಯ ಮಾಡುತ್ತದೆ . ಪಂಚಮ ಶನಿ ಇರುವುದರಿಂದ , .ತುಂಬಾ ಹಣ ಸಿಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ .

ತುಲಾ ರಾಶಿಯವರು ಇನ್ನಷ್ಟು ಬಲ ಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ . ನಿಮ್ಮ ಆತ್ಮದ ಬಲವನ್ನು ಹೊರಗಡೆ ತಂದು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದಕ್ಕೆ ತಯಾರಾಗಬೇಕು . ಬಹಳಷ್ಟು ಧನಾತ್ಮಕವಾದ ವಿಚಾರಗಳು ಇರುತ್ತವೆ . ತುಲಾ ರಾಶಿಯವರಿಗೆ ದಾನ – ಧರ್ಮ ಇದರ ವಿಚಾರದಲ್ಲಿ ಇವರಿಗೆ ಶ್ರದ್ಧೆ ಇರುತ್ತದೆ . ಹಣ ಹೆಚ್ಚಾಗಿರುವವರು ಉದಾರವಾಗಿ ವರ್ತಿಸುವ ಸ್ವಭಾವ ಇರುತ್ತದೆ . ಇವರದು ತೋರಿಕೆಯ ಧರ್ಮ ಮಾತ್ರ ಆಗಿರುವುದಿಲ್ಲ .

ಶ್ರದ್ಧೆಯಿಂದ ಒಳ್ಳೆಯ ಕೆಲಸದಲ್ಲಿ ತೊಡಗುವ ಸ್ವಭಾವ ಅಥವಾ ಗುಣ ಇವರದು ಆಗಿರುತ್ತದೆ . ನಿಮ್ಮ ಮನಸ್ಸಿನಲ್ಲಿ ಧನಾತ್ಮಕವಾದ ಚಿಂತನೆ ಬಂದಾಗ ಅದನ್ನು ಪದೇ ಪದೇ ರಿಪೀಟ್ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದು ಕೊಳ್ಳಬೇಕು . ಜೀವನದಲ್ಲಿ ಆಶಾವಾದ , ಒಂದು ರೀತಿಯ ತೃಪ್ತಿ , ಇಂತಹ ಭಾವನೆಯನ್ನು ಮತ್ತಷ್ಟು ಜಾಸ್ತಿ ಮಾಡಿಕೊಳ್ಳಬೇಕು. ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಂಡರೆ , ಮುಂದೆ ತುಂಬಾ ಒಳ್ಳೆಯದು ಆಗುತ್ತದೆ . ಮೇ ತಿಂಗಳವರೆಗೂ ಮುಂದೆ ಸಾಗುವುದಕ್ಕೆ ಗುರುವಿನಿಂದ ಚಾಲನೆ ಅದ್ಭುತವಾಗಿ ದೊರೆಯುತ್ತದೆ .

ಸಪ್ತಮ ಭಾಗದಲ್ಲಿ ಇರುವ ಗುರು ಒಳ್ಳೆಯ ಕುಟುಂಬವನ್ನು ತಂದು ಕೊಡುತ್ತಾನೆ . ನಿಮ್ಮಲ್ಲಿ ಯಾವಾಗಲೂ ಉತ್ಸಾಹ ಮತ್ತು ಚೈತನ್ಯ ಎಂದಿಗೂ ಕಡಿಮೆಯಾಗುವುದಿಲ್ಲ . ನಿಮ್ಮಲ್ಲಿ ದಯೆ , ಕರುಣೆ , ದಾನ , ಇರುವವರೆಗೂ , ದೇವರ ಬಗ್ಗೆ ಭಕ್ತಿ ಮತ್ತು ಕಾಳಜಿ ಈ ತರಹದ ಸದಾಶಯ ಇರುವವರೆಗೂ ನಿಮ್ಮ ಜೀವನದಲ್ಲಿ ತುಂಬಾ ಲಾಭ ತಂದುಕೊಡುತ್ತದೆ . ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ . ಏಕೆಂದರೆ , ಪಂಚಮದಲ್ಲಿ ಶನಿ ಇರುವುದರ ಜೊತೆಗೆ ,

ತೃತೀಯ ಭಾಗದಲ್ಲಿ ರಾಹು ಇರುವುದರಿಂದ ಸಾಹಸ ಮಾಡಲು ಪ್ರಯತ್ನ ಮಾಡುತ್ತೀರಾ ನೀವು ಕೆಲವೊಬ್ಬರ ವಿಚಾರದಲ್ಲಿ . ದಶ ಭುಕ್ತಿಗಳು ಇದೇ ರೀತಿ ಇದ್ದರೆ , ಹುಚ್ಚು ಸಾಹಸ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ ವ್ಯಯ ಭಾಗದಲ್ಲಿರುವ ಕೇತು ತಳ್ಳುವುದಕ್ಕೆ ನೋಡಿದರೆ, ರಾಹು ನಿಮಗೆ ಆಸೆ ಹುಟ್ಟಿಸುತ್ತಾನೆ . ನೀವು ಯಾವುದೇ ಒಂದು ಸಾಹಸಕ್ಕೆ ಕೈ ಹಾಕಿದರು , ಆ ವಿಚಾರದಲ್ಲಿ ಬಹಳ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು .ಯಾಕೆಂದರೆ

ನೀವು ಮೇಲೆ ಹತ್ತುವ ಸಂದರ್ಭದಲ್ಲಿ ಕೇತು ನಿಮ್ಮನ್ನು ಹಿಂದೆಯಿಂದ ತಳ್ಳಬಹುದು ಅಥವಾ ಮೇಲಿಂದ ಕೆಳಗಡೆ ಹಾಕಬಹುದು ಎಚ್ಚರಿಕೆಯಿಂದ ಇರಬೇಕು . ಇನ್ನೂ ಪಂಚಮ ಶನಿಯಿಂದ ಸರಿಯಾದ ಜಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ . ಇಂತಹ ಪೆಟ್ಟುಗಳು ಜೀವನದಲ್ಲಿ ನಮಗೆ ತುಂಬಾ ಅಮೂಲ್ಯವಾಗಿ ಇರುತ್ತದೆ . ದಶ ಭುಕ್ತಿಗಳು ತುಂಬಾ ಕೆಟ್ಟದಾಗಿ ಇದ್ದಾಗ ಪಂಚಮ ಶನಿ ಒಂದು ಮಟ್ಟದಲ್ಲಿ ಕೆಳಗೆ ಹಾಕಬಹುದು . ಏನಾದರೂ ದಶ ಭುಕ್ತಿ ಚೆನ್ನಾಗಿದ್ದೂ , ಜಾತಕದಲ್ಲಿ ಶನಿ ಬಲ ಇದ್ದರೆ, ಸಣ್ಣ ಪುಟ್ಟ ಪೆಟ್ಟುಗಳಿಂದ ನೀವು ಪಾರಾಗಬಹುದು . ಈ ತರ ಪೆಟ್ಟುಗಳು ಯಾವ ರೀತಿ ಇರುತ್ತವೆ.

ಎಂದರೆ, ಮಕ್ಕಳ ವಿಚಾರದಲ್ಲಿ , ಪೂರ್ವ ಪುಣ್ಯ ಅಂದರೆ, ಆಸ್ತಿ ಪಾಸ್ತಿಗಳ ವಿಚಾರದಲ್ಲಿ , ಮಾನಸಿಕ ಪರಿವರ್ತನೆಗಳು ಹೀಗೆ ಹಲವಾರು ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕು. ಗೊಂದಲಗಳು , ಮಾನಸಿಕ ಒತ್ತಡ , ಚಿಂತೆ , ಶನಿ ಕೊಡುವ ದುಃಖಕ್ಕೆ ಪ್ರಪಾತಕ್ಕೆ ತಳ್ಳುವ ಒಂದು ಶಕ್ತಿ ಇರುತ್ತದೆ .ಆಯಾ ವ್ಯಕ್ತಿಗಳ ಕರ್ಮದ ಅನುಸಾರವಾಗಿ ಈ ರೀತಿಯ ತೊಂದರೆಗಳು ಎದುರಾಗುತ್ತವೆ .ಅವರು ಯಾವ ರೀತಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ಆಧಾರದ ಮೇಲೆ, ಅಥವಾ ದೃಷ್ಟಿಕೋನದ ಮೇಲೆ ಶನಿ ತನ್ನ ಪಾಠವನ್ನು ಕಲಿಸುತ್ತಾನೆ .

ಶನಿ ಕುಂಭ ರಾಶಿಯಲ್ಲಿ ಮತ್ತು ರಾಹು ಮೀನ ರಾಶಿಯಲ್ಲಿ ಇದ್ದು, ಐದು ಮತ್ತು ಆರನೇ ಭಾವದಲ್ಲಿ ಇರುವಂತಹ ಈ ಗ್ರಹಗಳು ಅಕ್ಕ ಪಕ್ಕದಲ್ಲಿ ಇದ್ದು ವಿಚಿತ್ರವಾದ ಏರುಪೇರುಗಳನ್ನು ನಿಮ್ಮ ಜೀವನದಲ್ಲಿ ತರುತ್ತವೆ . ಯಾವುದೇ ಒಂದು ವಿಷಯ ಒಳ್ಳೆಯದು ಇರಬೇಕು ಅಂದರೆ , ಅದರ ಜೊತೆಯಲ್ಲಿ ಕೆಟ್ಟ ವಿಚಾರಗಳು ಬರುತ್ತವೆ. ನಮ್ಮ ಜೀವನದಲ್ಲಿ ಈ ರೀತಿಯಾಗಿ ಬರುತ್ತದೆ . ಗುರುವಿನಿಂದ ಮೇ ನಂತರ ಬಹಳಷ್ಟು ಧನಾತ್ಮಕವಾಗಿ ಪರಿವರ್ತನೆಗಳು ಆಗುವ ಸಾಧ್ಯತೆ ಇರುತ್ತದೆ .

ಮೇ ತಿಂಗಳವರೆಗೆ ನಿಮ್ಮ ಜೀವನವನ್ನು ನೀವು ನೋಡುವ ರೀತಿಯೇ ಬೇರೆ ಇರುತ್ತದೆ . ಎದುರಾಗುವ ಸನ್ನಿವೇಶಗಳು ಸ್ವಲ್ಪಮಟ್ಟಿಗೆ ನಿಮಗೆ ಧಾರ್ಮಿಕ ವಿಚಾರದಲ್ಲಿ ದೂರವಾಗುವ ಹಾಗೆ ಗುರುವಿನ ದಯೆ ಅನ್ನೋದು ಕೂಡ ಮಾಸಿ ಹೋಗುವುದಕ್ಕೆ ಸಾಧ್ಯವಾಗುತ್ತದೆ . ನಿಮ್ಮ ವರ್ಷದ ಮೊದಲ ಭಾಗದಲ್ಲಿ ಪ್ರಯಾಣ , ಖುಷಿ , ಎಲ್ಲವೂ ಸುಖಕರವಾಗಿ ಇರುತ್ತದೆ . ಮೇ ನಂತರ ಭಾಗದಲ್ಲಿ ನಿಮಗೆ ಗುರು ನಕಾರಾತ್ಮಕವಾಗಿ ಇರುತ್ತಾನೆ . ಅಂದರೆ ಅದೃಷ್ಟ ಸ್ವಲ್ಪ ಕಡಿಮೆಯಾಗುವುದು ,

ಸಂಪತ್ತು ನಷ್ಟವಾಗುವುದು, ಜೀವನ ನಕಾರಾತ್ಮಕತೆ ಹೆಚ್ಚಾಗಿ ಪಡೆದುಕೊಳ್ಳುತ್ತದೆ. ಶನಿ ಪಂಚಮದಲ್ಲಿ ಇದ್ದರೂ , ಗುರುಬಲ ಇತ್ತು ಎನ್ನುವ ಪರಿಸ್ಥಿತಿ ಇರುತ್ತದೆ . ಆದರೆ ಈಗ ಗುರು ನಕಾರಾತ್ಮಕವಾಗಿ ವರ್ತಿಸುವಾಗ , ಈ ತರಹದ ಸಮತೋಲನದಲ್ಲಿ ಶನಿಯದು ತೆಗೆದುಕೊಳ್ಳುವ ಕ್ರಿಯೆ ಮತ್ತು ಗುರುವಿನದು ಕೊಡುವ ಕ್ರಿಯೆ ಆಗಿರುತ್ತಿತ್ತು. ಶನಿಯಿಂದ ದುಖವಾದಾಗ ಗುರು ಸಮಾಧಾನವನ್ನು ಮಾಡುತ್ತಿದ್ದ . ಈ ಸಮತೋಲನ ಅನ್ನೋದು ಸ್ವಲ್ಪ ಓರೆಯಾಗುತ್ತದೆ .

ಮತ್ತೆ ಮತ್ತೆ ಅದೇ ರೀತಿಯ ಗೊಂದಲ , ಬಿಡದೇ ಇರುವ ವಿಚಾರಗಳ ಕಡೆ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ . ಆದರೆ ನೀವು ಅದನ್ನು ಎಳೆದುಕೊಂಡು ಬರಬೇಕು . ನಿಮ್ಮ ಪ್ರಯತ್ನ ಕೊಡ ಇಲ್ಲಿ ಇರಬೇಕು .ಇಲ್ಲಿ ಸೋಲುಗಳನ್ನು ಒಂದು ಸವಾಲುಗಳಾಗಿ ಸ್ವೀಕಾರ ಮಾಡಲು ನೀವು ತಯಾರಾಗಿರಬೇಕು . ಏಕೆಂದರೆ ದೂರದಲ್ಲಿ ಇರುವುದಿಲ್ಲ. ಗೆಲುವು ಹತ್ತಿರದಲ್ಲೇ ಇರುತ್ತದೆ . ಹಾಗೆ ಅಂತಿಮದಲ್ಲಿ ಪಂಚಮ ಶನಿಯ ಬಿಡುಗಡೆಯಾಗುವ ಹೊತ್ತಿಗೆ ನಿಮ್ಮ ಎಲ್ಲಾ ಕಷ್ಟಗಳಿಗೆ ಬಿಡುಗಡೆ ಸಿಗುವ ಸಾಧ್ಯತೆ ಇದೆ .

ಜೀವನದಲ್ಲಿ ಗುರಿಗಳು , ಆಕಾಂಕ್ಷೆಗಳು ಇಂತಹದನ್ನ ಈಡೇರಿಸಿಕೊಳ್ಳುವುದಕ್ಕೆ ನಿಮಗೆ ಅವಕಾಶ ದೊರೆಯುತ್ತದೆ . ಈ ಮೇ ತಿಂಗಳಿನಿಂದ ನಿಮ್ಮ ದಾರಿ ತಪ್ಪುತ್ತದೆ .ಕಷ್ಟಗಳು ಹೆಚ್ಚಾಗುತ್ತಾ ಹೋಗುತ್ತವೆ .ಕಷ್ಟಗಳನ್ನು ನೀವು ಸವಾಲುಗಳು ಎಂದುಕೊಂಡು ಮುಂದೆ ಸಾಗಬೇಕು . ಸೋಲುಗಳನ್ನು ಜಯದ ಮೆಟ್ಟಿಲು ಎಂದು ತಿಳಿದುಕೊಳ್ಳಬೇಕು . ನಿಮ್ಮ ಒಳಗಡೆಯಿಂದ ಪ್ರೇರಣೆ ಬರುವುದಿಲ್ಲ . ನಿಮ್ಮ ಮನಸ್ಸು ನಕಾರಾತ್ಮಕದ ಕಡೆ ಹೋಗುತ್ತಿರುತ್ತವೆ .

ಇದಕ್ಕೆ ನೀವು ಬಿಡದೆ ಬಲವಂತವಾಗಿ ಅದನ್ನು ಎಳೆದುಕೊಂಡು ತರಬೇಕು . ಜೀವನವನ್ನು ಒಂದು ನಿಯಂತ್ರಣಕ್ಕೆ ತರಲು ಪದೇ ಪದೇ ಪ್ರಯತ್ನ ಮಾಡುತ್ತಿರಬೇಕು . ನೀವು 2024ರಲ್ಲಿ ನಿಮ್ಮ ಪ್ರಯತ್ನ ಹಾಕಿದರೆ , 2025ಕ್ಕೆ ಪಂಚಮ ಶನಿ ಮುಗಿದು , ಶನಿ ಆರಕ್ಕೆ ಬಂದಾಗ , ತುಂಬಾ ಒಳ್ಳೆಯ ಫಲಗಳು ದೊರೆಯುತ್ತದೆ .ಆದರೆ ಈ ಒಂದು ವರ್ಷದ ಸವಾಲನ್ನು ತುಂಬಾ ಸರಳವಾಗಿ ತೆಗೆದುಕೊಂಡು ಹೋಗಬೇಕು . ಕೆಲಸ ಕಾರ್ಯಗಳಲ್ಲಿ ತುಂಬಾ ಗಂಭೀರವಾಗಿ ಇರಬೇಕು .

ತುಲಾ ರಾಶಿಯವರು ಯಾವತ್ತೋ ನಡೆದ ಘಟನೆ ಬಗ್ಗೆ ಇವತ್ತಿನ ಘಟನೆ ಸೇರಿಸಿ ಹೋಲಿಕೆ ಮಾಡುವುದು . ಈ ಒಂದು ಗುಣವನ್ನು ನೀವು ಬಿಡಬೇಕು . ಈ ಗೊಂದಲದಿಂದ ಹೊರಬರುವುದಕ್ಕೆ ನೀವು ದಾರಿ ಹುಡುಕಬೇಕು. ಇಂತಹ ವಿಷಯಗಳನ್ನು ನೀವು ನಿರ್ಲಕ್ಷ್ಯ ಮಾಡಬೇಕು . ಬಹಳಷ್ಟು ರೀತಿಯ ವಿಷಮ ಪರಿಸ್ಥಿತಿಗಳು ಬರುತ್ತವೆ . ಅವರವರ ಮಾನಸಿಕ ಪರಿಸ್ಥಿತಿಗಳ ಮೇಲೆ ಅವುಗಳು ಅವಲಂಭಿತವಾಗಿ ಇರುತ್ತವೆ. ಆದರೆ ಎಚ್ಚರ ತಪ್ಪದೇ ಜಾಗರೂಕರಾಗಿರಬೇಕು . ಇಂತಹ ಸವಾಲುಗಳಿಗೆ ತಯಾರಿ ನಡೆಸಬೇಕು .

ಇನ್ನು ಮುಂದೆ ಒಳ್ಳೆಯ ಸಮಯ ಬಂದೇ ಬರುತ್ತದೆ . ಗುರು ಅಷ್ಟಮ ಭಾಗದಲ್ಲಿ ಮೇ ತಿಂಗಳಿನಿಂದ ಬದಲಾವಣೆ ಆಗುತ್ತದೆ . ನಂತರ ಭಾಗ್ಯದ ರಾಶಿಗೆ ಹೋಗುತ್ತದೆ . ಗುರು ಮಿಥುನ ರಾಶಿಗೆ ಹೋಗುವ ಹೊತ್ತಿಗೆ ಬಹಳಷ್ಟು ಒಳ್ಳೆಯ ಫಲಗಳು ಇರುತ್ತವೆ . ಮುಂದೆ ಬರುವುದು ನಿಮಗೆ ಒಳ್ಳೆಯ ಸಮಯ ಎಂದು ಅರ್ಥವಾದಾಗ , ಈಗ ಬರುವ ಕಷ್ಟಗಳನ್ನು ಸರಳವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ . ನಿಮ್ಮ ಜೀವನದಲ್ಲಿ ನಕಾರಾತ್ಮಕ ವಿಚಾರಗಳು ಅನ್ನುವುದು ಏನು ಇರುತ್ತವೆ, ಅವುಗಳನ್ನ ದೇವರಿಗೆ ಬಿಟ್ಟುಬಿಡಿ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ .

ಗ್ರಹಗಳ ಅನುಕೂಲ ನಿಮಗೆ ಇರುತ್ತದೆ . ತೃತೀಯದಲ್ಲಿ ಇರುವ ರಾಹು ನಿಮಗೆ ಹಲವಾರು ವಿಚಾರಗಳಲ್ಲಿ ಖುಷಿಯನ್ನು ತಂದು ಕೊಡುತ್ತಾನೆ . ಕೆಲಸ ಮಾಡುವುದಕ್ಕೆ ಒಂದು ರೀತಿಯ ಪ್ರೇರಣೆ ನಿಮ್ಮ ಜೀವನದಲ್ಲಿ ಸಿಗುತ್ತದೆ . ಕೆಲವೊಂದು ಒಳ್ಳೆಯ ಪರಿವರ್ತನೆಗಳಿಗೆ ನಾಂದಿಯಾಗುತ್ತದೆ . ನಿಮ್ಮ ಜೀವನದಲ್ಲಿ ಹೋರಾಟಗಳು ಇದ್ದೇ ಇರುತ್ತವೆ .ಆರು ಏಳು ತಿಂಗಳುಗಳು ನಿಮ್ಮ ಮಟ್ಟಿಗೆ ಹೇಳುವುದಾದರೆ , ನಿರ್ಣಾಯಕವಾಗಿ ಇರುತ್ತವೆ. 2025 ರಲ್ಲಿ ಶನಿ ರಾಯರು ಮತ್ತು ಗುರು ರಾಶಿಯನ್ನು ಬದಲಾಯಿಸುವುದರಿಂದ ಈ ಎರಡೂ ಗ್ರಹಗಳು ಒಳ್ಳೆಯ ಫಲವನ್ನು ತುಲಾ ರಾಶಿಯವರಿಗೆ ತಂದು ಕೊಡುತ್ತದೆ ಎಂದು ಹೇಳಬಹುದು.

Leave a Comment