ನಾವು ಈ ಲೇಖನದಲ್ಲಿ ಯಾರು ಸ್ವರ್ಗಕ್ಕೆ ಹೋಗಲು ಅರ್ಹರು ಮತ್ತು ಯಾರು ನರಕಕ್ಕೆ ಹೋಗುತ್ತಾರೆ? ಎಂದು ತಿಳಿದುಕೊಳ್ಳೋಣ . ಸ್ವರ್ಗಕ್ಕೆ ಹೋಗಲು ಯಾರಿಗೆ ಹಕ್ಕು ಇದೆ . ಯಾವ ಪಾಪವು ಮನುಷ್ಯನನ್ನು ನರಕಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ , ಎಂಬುದನ್ನು ನಾವು ಒಂದು ಧಾರ್ಮಿಕ ಕಥೆಯ ಮೂಲಕ ತಿಳಿಸಲಾಗುತ್ತದೆ . ಪೂಜೆಯ ಪಾಠ , ದಾನ , ಧರ್ಮ , ಮತ್ತು ಕೋಟ್ಯಾಂತರ ಪುಣ್ಯಗಳನ್ನು ಮಾಡಿದ ನಂತರವೂ , ಮನುಷ್ಯನು ನರಕಕ್ಕೆ ಏಕೆ ಹೋಗುತ್ತಾನೆ .
ಇಲ್ಲಿ ಅತ್ಯಧಿಕ ಪಾಪ ಮಾಡಿದ ನಂತರವೂ , ಯಾವ ಒಂದು ಪುಣ್ಯದ ಕಾರಣದಿಂದಾಗಿ ಮನುಷ್ಯನಿಗೆ ಸ್ವರ್ಗದ ಪ್ರಾಪ್ತಿ ಸಿಗುತ್ತದೆ . ಇವುಗಳ ಬಗ್ಗೆ ತಿಳಿದುಕೊಳ್ಳೋಣ . ಇದು ಮಧ್ಯ ದೇಶದಲ್ಲಿ ನಡೆದ ಘಟನೆಯಾಗಿದೆ .
ಒಂದೇ ಸಮಯಕ್ಕೆ ಐದು ವ್ಯಕ್ತಿಗಳ ಮೃತ್ಯು ಆಗುತ್ತದೆ . ಅವರೆಲ್ಲಾ ಯಮ ಲೋಕಕ್ಕೆ ಹೋಗಿ ತಲುಪುತ್ತಾರೆ . ಯಮ ಲೋಕದ ದೃಶ್ಯವನ್ನು ನೋಡಿ ಅವರು ಭಯ ಭೀತರಾಗುತ್ತಾರೆ .
ವಿಶಾಲವಾದ ಆಕಾರ ಉಳ್ಳ ಯಮ ರಾಜರು ಸ್ವರ್ಣದಿಂದ ತಯಾರಾದ ಸಿಂಹಾಸನದ ಮೇಲೆ ಅವರು ವಿರಾಜಮಾನವಾಗಿ ಕುಳಿತಿದ್ದರು .ಅವರ ಬಳಿ ಚಿತ್ರ ಗುಪ್ತರು ಕುಳಿತಿದ್ದರು . ಇವರ ಬಳಿ ಎಲ್ಲಾ ಜೀವರಾಶಿಯ ಮಾಹಿತಿ ಇರುತ್ತದೆ . ಯಮ ಧೂತರು ಪ್ರಾಣಿಗಳನ್ನು ಮುಂದೆ ದೂಡುತ್ತಿದ್ದರು . ಕೆಲವು ಮನುಷ್ಯರು ಜೋರಾಗಿ ಕಿರುಚಾಡುತ್ತಿರುತ್ತಾರೆ .
ಕೆಲವು ಮನುಷ್ಯರು ತುಂಬಾ ಖುಷಿಯಿಂದ ನಡೆದುಕೊಂಡು ಹೋಗುತ್ತಿದ್ದರು , ಸ್ವರ್ಗದ ಬಾಗಿಲಿನಿಂದ ಸುಂದರವಾದ ಪ್ರಕಾಶ ಕಾಣುತ್ತಿತ್ತು . ಇನ್ನೊಂದೆಡೆ ನರಕದ ದ್ವಾರದಿಂದ ಚಿಮ್ಮುತ್ತಿರುವ ಅಗ್ನಿಯ
ಜ್ವಾಲೆ ಕಂಡುಬರುತ್ತಿತ್ತು . ಈ ಭಯಾನಕವಾದ ದೃಶ್ಯವನ್ನು ನೋಡಿ ಆ ಐದು ಜನರು ಒಬ್ಬರಿಗೊಬ್ಬರು ಚರ್ಚೆ ಮಾಡಲು ಶುರು ಮಾಡುತ್ತಾರೆ .
ಇಲ್ಲಿ ತಮ್ಮ ಪಾಪದ ಬಗ್ಗೆ ಚರ್ಚೆ ಮಾಡುತ್ತಿದ್ದರು . ಈ 5 ಜನರಲ್ಲಿ ನಾಲ್ಕು ಜನ ತುಂಬಾ ಪಾಪ ಕರ್ಮಗಳನ್ನು ಮಾಡಿದ್ದರು. ಈ ನಾಲ್ಕೂ ಜನ ಅಂದುಕೊಳ್ಳುತ್ತಾರೆ. ನಾವು ನಾಲ್ಕು ಜನ ನರಕಕ್ಕೆ ಹೋಗಬೇಕೆಂದು ಚರ್ಚೆ ಮಾಡುತ್ತಾರೆ . ಆ ನಾಲ್ಕು ಜನರಲ್ಲಿ ಒಬ್ಬ ಕಳ್ಳನಿದ್ದನು . ಎರಡನೆಯವಳು ವೈಶ್ಯಳು ಇದ್ದಳು. ಮೂರನೇ ವ್ಯಕ್ತಿ ವಿದ್ವಾನ ಪಂಡಿತರಾಗಿದ್ದರು .
ನಾಲ್ಕನೆಯ ವ್ಯಕ್ತಿ ಒಬ್ಬ ರಾಜನ ಸೈನಿಕನಾಗಿದ್ದನು . ಐದನೆಯ ವ್ಯಕ್ತಿ ಶ್ರೀಮಂತ ರೈತನಾಗಿದ್ದ . ಈ ಐದು ಜನರು ತಮ್ಮ ಪಾಪ ಕರ್ಮಗಳನ್ನು ತೀರಿಸಲು ತಯಾರಾಗುತ್ತಾರೆ . ಇಲ್ಲಿ ಒಬ್ಬೊಬ್ಬರಾಗಿ ಪಾಪಿ ಮತ್ತು ಪುಣ್ಯಾತ್ಮರು ಮುಂದೆ ನಡೆಯುತ್ತಾ ಇರುತ್ತಾರೆ . ನಾಲ್ಕು ಜನರ ತಮ್ಮ ಎಲ್ಲಾ ಪಾಪ ಕರ್ಮಗಳ ಬಗ್ಗೆ ಒಬ್ಬರಾಗಿ ಹೇಳಲು ಶುರು ಮಾಡಿರುತ್ತಾರೆ. ಮೊದಲನೇ ವ್ಯಕ್ತಿ ಹೇಳುತ್ತಾನೆ . ನಾನಂತೂ ಪಕ್ಕಾ ನರಕಕ್ಕೆ ಹೋಗುತ್ತೇನೆ . ಯಾಕೆಂದರೆ ನಾನು ತುಂಬಾ ಬಾರಿ ಕಳ್ಳತನ ಮಾಡಿದ್ದೇನೆ .
ಬೇರೆಯವರ ಧನ ಸಂಪತ್ತನ್ನು ಲೂಟಿ ಮಾಡಿದ್ದೇನೆ . ಬೇರೆಯವರಿಗೆ ತೊಂದರೆ ಕೊಟ್ಟಿದ್ದೇನೆ .ಆದರೆ ಈ ರೀತಿ ನಾನು ಅವಶ್ಯಕತೆ ಇದ್ದಾಗ ಮಾಡಿದೆ . ಕಳ್ಳತನ ಮಾಡಿ ನಾನು ನನ್ನ ಕುಟುಂಬವನ್ನು ಸಾಗುತ್ತಿದ್ದೆ . ಯಾಕೆಂದರೆ ನನಗೆ ಯಾರು ಸಹ ಕೆಲಸವನ್ನು ಕೊಟ್ಟಿರಲಿಲ್ಲ . ನನ್ನ ಹಣೆಬರಹವೇ ಈ ರೀತಿ ಇತ್ತು ಅನ್ನಿಸುತ್ತದೆ . ಹಾಗಾಗಿ ಈ ನಾಲ್ಕು ಜನರಲ್ಲಿ ನಾನು ಎಲ್ಲಕ್ಕಿಂತ ದೊಡ್ಡ ಪಾಪಿ ಆಗಿದ್ದೇನೆ . ನನ್ನ ಪಾಪದಿಂದ ಯಾವತ್ತಿಗೂ ಮುಕ್ತಿ ಸಿಗುವುದಿಲ್ಲ .
ಈ ಮಾತು ನನಗೆ ಗೊತ್ತಿದೆ .ಮುಂದಿನ ಜನ್ಮದಲ್ಲಿ ನಾನು ಯಾವ ಪ್ರಾಣಿ ಆಗಿ ಹುಟ್ಟುತ್ತೇನೆ ಎ೦ದು ನನಗೆ ಗೊತ್ತಿಲ್ಲ . ಯಮ ರಾಜರು ನನಗೆ ಯಾವ ದಂಡವನ್ನು ಕೊಡುತ್ತಾರೆ . ಇದಾದ ನಂತರ ಆ ವೇಶ್ಯೆಯು ಈ ರೀತಿಯಾಗಿ ಹೇಳುತ್ತಾಳೆ . ನಾಲ್ಕು ಜನರಲ್ಲಿ ಎಲ್ಲಕ್ಕಿಂತ ಪಾಪಿ ನಾನೇ ಆಗಿದ್ದೇನೆ , ನನಗಿಂತ ದೊಡ್ಡ ಪಾಪ ಇಲ್ಲಿ ಯಾರು ಸಹ ಮಾಡಿರುವುದಿಲ್ಲ ಎಂದು ಹೇಳಿದ್ದಾರೆ . ಯಾವ ಸ್ತ್ರೀ ಅನೇಕ ಪುರುಷರೊಂದಿಗೆ ಸಂಬಂಧವನ್ನು ಮಾಡುತ್ತಾಳೋ , ಅವರನ್ನು ನರಕದಲ್ಲಿಯೇ ಹಾಕಲಾಗುತ್ತದೆ .
ಇದನ್ನೇ ಶಾಸ್ತ್ರವು ಹೇಳುತ್ತದೆ . ಹಾಗಾಗಿ ನಾನು ಕೂಡ ನರಕಕ್ಕೆ ಹೋಗಬೇಕಾಗುತ್ತದೆ . ನಾನು ಪ್ರಮಾಣ ಮಾಡಿ ಹೇಳುತ್ತೇನೆ . ನಾನು ಈ ಪಾಪವನ್ನು ಬೇಕಂತ ಮಾಡಿಲ್ಲ . ಯಾವಾಗ ನಾನು ಚಿಕ್ಕವಳು ಹಾಕಿದ್ದನೋ , ಆಗ ಒಬ್ಬ ದೃಷ್ಟ ವ್ಯಕ್ತಿ ನನ್ನನ್ನು ಎತ್ತಿಕೊಂಡು ಹೋದನು , ಒತ್ತಾಯವಾಗಿ ನನ್ನನ್ನು ವೇಶ್ಯಳನ್ನಾಗಿಸಿದನು . ಬೇಡವಾದರೂ ನಾನು ಹಲವಾರು ಪುರುಷರೊಂದಿಗೆ ಸಂಬಂಧವನ್ನು ಮಾಡಿದ್ದೇನೆ .
ನಾನು ಜೀವಂತವಾಗಿ ಇರಬೇಕೆಂದರೆ , ಈ ಉಪಾಯ ಒಂದೇ ಉಳಿದಿದ್ದಿದ್ದು . ನಾನು ಮಾಡುವುದಾದರೂ ಏನು ಮಾಡುತ್ತಿದ್ದೆ , ಆ ದುಷ್ಟ ಪುರುಷನೊಂದಿಗೆ ಹೋರಾಡುವ ಶಕ್ತಿ ಕೂಡ ನನ್ನಲ್ಲಿ ಇರಲಿಲ್ಲ . ಯಾವ ಪಾಪದ ಕಾರಣದಿಂದಾಗಿ ನಾನು ವೇಶ್ಯಳಾಗಿ ಜೀವನ ಕಳೆಯಬೇಕಾಯಿತು ಗೊತ್ತಿಲ್ಲಾ. ಯಾವ ಪಶುವಿನ ರೂಪದಲ್ಲಿ ನಾನು ಜನ್ಮವೆತ್ತ ಬೇಕಾಗುತ್ತದೆ ಅಂತ ಕೂಡ ನನಗೆ ಗೊತ್ತಿಲ್ಲಾ .
ನನ್ನ ಪಾಪವನ್ನು ನೋಡಿದರೆ , ನಾನು ಖಚಿತವಾಗಿ ನರಕಕ್ಕೆ ಹೋಗಬೇಕಾಗುತ್ತದೆ . ಇದಾದ ನಂತರ ಸೈನಿಕನು ಹೇಳುತ್ತಾನೆ . ನೋಡಿ ನಾಲ್ಕು ಜನರಲ್ಲಿ ನಾನೇ ದೊಡ್ಡ ಪಾಪಿ ಆಗಿದ್ದೇನೆ . ನಾನು ತುಂಬಾ ದೊಡ್ಡ ಪಾಪವನ್ನು ಮಾಡಿದ್ದೇನೆ . ನಾನು ರಾಜನ ಸಿಪಾಯಿ ಆಗಿದ್ದೆ .. ಹಾಗಾಗಿ ನಾನು ಜನರ ಮೇಲೆ ತುಂಬಾ ಒತ್ತಡವನ್ನು ಹಾಕುತ್ತಿದ್ದೆ . ನಾನು ತುಂಬಾ ಜನರ ಪ್ರಾಣವನ್ನು ತೆಗೆದಿದ್ದೇನೆ .
ತುಂಬಾ ಮುಗ್ಧ ಜನರಿಗೆ ತೊಂದರೆಯನ್ನು ಕೊಟ್ಟಿದ್ದೇನೆ . ಎಲ್ಲಾ ನಿಶ್ಪಾಪ ವ್ಯಕ್ತಿಗಳಿಗೆ ನನ್ನ ಕೈಯಿಂದ ದಂಡ ಸಿಕ್ಕಿದೆ ಗೊತ್ತಿಲ್ಲ . ಯಮ ರಾಜರು ಯಾವತ್ತಿಗೂ ನನ್ನನ್ನು ಕ್ಷಮಿಸುವುದಿಲ್ಲ . ನಾನು ಖಂಡಿತವಾಗಿ ನರಕಕ್ಕೆ ಹೋಗುತ್ತೇನೆ .ಆದರೆ ನಾನು ಎಲ್ಲ ಪಾಪಗಳನ್ನು ಬೇಕಂತ ಮಾಡಿಲ್ಲ . ನನ್ನ ಪ್ರಾಣ ಭಯದಿಂದ ಮತ್ತು ಕುಟುಂಬದವರ ಪಾಲನೆ ಪೋಷಣೆಗಾಗಿ ನಾನು ಈ ಪಾಪವನ್ನು ಮಾಡಿದ್ದೇನೆ . ನಮ್ಮ ರಾಜರು ಏನು ಹೇಳುತ್ತಾರೋ ಅದನ್ನ ನಾವು ಪಾಲಿಸ ಬೇಕಾಗುತ್ತಿತ್ತು.
ಒಬ್ಬ ಸಾಧಾರಣ ಮನುಷ್ಯನು ರಾಜನಿಗೆ ವಿರುದ್ಧವಾಗಿ ನಡೆಯಲು ಸಾಧ್ಯವಿದೆಯೇ , ಈ ಎಲ್ಲಾ ಪಾಪಗಳನ್ನು ಮಾಡುವಾಗ ನನಗೆ ಅತ್ಯಂತ ದುಃಖ ಆಗುತ್ತಿತ್ತು . ಈ ಪಾಪವನ್ನು ಮಾಡುವುದರಿಂದ ನರಕವೇ ಸಿಗುತ್ತದೆ ಎಂದು ಮೊದಲೇ ನನಗೆ ಗೊತ್ತಿತ್ತು . ಕುಟುಂಬದವರ ಮೋಹಕ್ಕೆ ವಶವಾಗಿ ನಾನು ಈ ಕಾರ್ಯವನ್ನು ಮಾಡಿದ್ದೇನೆ .ಇಲ್ಲಿ ಪಾಪ ಪಾಪವೇ ಆಗಿರುತ್ತದೆ . ಪಾಪವನ್ನು ಮಾಡಿ ಪಶ್ಚಾತಾಪ ಪಡುವುದರಿಂದ ,
ಏನು ಪ್ರಯೋಜನವಿಲ್ಲ . ಹಾಗಾಗಿ ನಾನು ಖಂಡಿತವಾಗಿ ನರಕಕ್ಕೆ ಹೋಗುವೆನು .ಇದಾದ ನಂತರ ವಿದ್ವಾನ ಪಂಡಿತನು ಈ ರೀತಿಯಾಗಿ ಹೇಳುತ್ತಾನೆ . ನಮ್ಮ ನಾಲ್ಕು ಜನರಲ್ಲಿ ಎಲ್ಲಕ್ಕಿಂತ ದೊಡ್ಡದಾದ ಪಾಪಿ ನಾನು ಆಗಿದ್ದೇನೆ . .ನೀವು ಗೊತ್ತಿದ್ದೋ , ಗೊತ್ತಿಲ್ಲದೆ , ಆ ಪಾಪಗಳನ್ನು ಮಾಡಿದ್ದೀರಾ . ನಿಮಗೆ ಬೇರೆಯವರು ಒತ್ತಾಯ ಮಾಡಿದ್ದಾರೆ . ಆದರೆ ನಾನು ವಿದ್ವಾನನಾಗಿದ್ದೆ , ನನಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು , ಎಂಬುದು ಗೊತ್ತಿತ್ತು . ನನಗೆ ಸತ್ಯ ಮತ್ತು ಸುಳ್ಳಿನ ಜ್ಞಾನವು ಇತ್ತು .
ಆದರೂ ಸಹ ಧನ ಸಂಪತ್ತಿನ ಲೋಭದಲ್ಲಿ ನಾನು ಈ ಪಾಪವನ್ನು ಮಾಡಿದ್ದೇನೆ . ಇಲ್ಲಿ ಶಾಸ್ತ್ರ ಈ ರೀತಿಯಾಗಿ ಹೇಳುತ್ತದೆ . ಯಾರು ಎಲ್ಲವನ್ನು ಗೊತ್ತಿದ್ದು ಪಾಪ ಮಾಡುತ್ತಾರೋ , ಖಂಡಿತವಾಗಿ ಅವರು ನರಕದಲ್ಲಿ ಬೀಳುತ್ತಾರೆ . ನಾನು ನನ್ನ ಜ್ಞಾನವನ್ನು ದುರುಪಯೋಗ ಪಡಿಸಿಕೊಂಡಿದ್ದೇನೆ . ನಾನು ನನ್ನ ಜ್ಞಾನದ ಉಪಯೋಗವನ್ನು ಜನರಿಗೆ ಸಹಾಯ ಮಾಡುವುದಕ್ಕೆ ಬಳಸಿಲ್ಲ. ಬದಲಿಗೆ ಹಣ ಗಳಿಸಲು ಮಾಡಿದ್ದೇನೆ . ನನ್ನ ಮನೆಯ ಪರಿಸ್ಥಿತಿ ತುಂಬಾ ಬಡತನದಲ್ಲಿ ಇತ್ತು .
ನನ್ನ ತಂದೆಯು ಭಿಕ್ಷೆಯನ್ನು ಬೇಡಿ ಜೀವನ ನಡೆಸುತ್ತಿದ್ದರು . ಆದರೆ ನಾನು ನನ್ನ ಮನೆಯ ಬಡತನವನ್ನು ದೂರ ಮಾಡಲು , ಹಣವನ್ನು ಕಸಿದುಕೊಂಡು ಜ್ಞಾನವನ್ನು ನೀಡುವಂತ , ಛೇಷ್ಠೆಯನ್ನು ಮಾಡಿದ್ದೇನೆ .ಶಾಸ್ತ್ರ ಈ ರೀತಿ ಹೇಳುತ್ತದೆ .ಯಾವ ವಿದ್ವಾನರು ಅಥವಾ ಬ್ರಾಹ್ಮಣರು ತಮ್ಮ ಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೋ , ಖಂಡಿತವಾಗಿ ಅವರು ನರಕಕ್ಕೆ ಹೋಗಬೇಕಾಗುತ್ತದೆ . ನಾನು ಜನರಿಗೆ ಜ್ಞಾನವನ್ನು ಕೊಡುವುದರ ಬದಲಿಗೆ ಅವರಿಂದ ಹಣವನ್ನು ತೆಗೆದುಕೊಂಡಿದ್ದೇನೆ .
ಯಾರಿಗೂ ಸಹ ಯಾವತ್ತಿಗೂ ಉಚಿತವಾಗಿ ಜ್ಞಾನವನ್ನು ಕೊಟ್ಟಿಲ್ಲ . ಹಾಗಾಗಿ ಇಲ್ಲಿರುವ ನಾಲ್ಕು ಜನರಿಗಿಂತ ದೊಡ್ಡ ಪಾಪಿ ನಾನೇ ಆಗಿದ್ದೇನೆ . ನಾಳೆ ನರಕಕ್ಕೆ ಹೋಗಬೇಕಾಗುತ್ತದೆ . ಈ ನಾಲ್ಕು ಜನರ ಮಾತುಗಳನ್ನು ಕೇಳಿ ಆ ಶ್ರೀಮಂತ ರೈತ ನಗಲು ಶುರು ಮಾಡುತ್ತಾನೆ . ನಂತರ ನೀವು ನಾಲ್ಕು ಜನ ಎಷ್ಟು ದೊಡ್ಡದಾದ ಪಾಪಿಗಳು ಆಗಿದ್ದೀರಾ ಎಂದರೆ , ಖಂಡಿತವಾಗಿ ನೀವು ನರಕಕ್ಕೆ ಹೋಗುತ್ತೀರಾ .ನೀವೆಲ್ಲ ದೊಡ್ಡದಾದ ಪಾಪವನ್ನು ಮಾಡಿದ್ದೀರಾ .
ಹಾಗಾಗಿ ಯಾವತ್ತಿಗೂ ಯಮ ರಾಜರು ನಿಮ್ಮನ್ನು ಕ್ಷಮಿಸುವುದಿಲ್ಲ . ಇರುವಂತಹ ನಾಲ್ಕು ಜನರಲ್ಲಿ ನಾನು ಎಲ್ಲಕ್ಕಿಂತ ಪುಣ್ಯವಂತನು ಆಗಿದ್ದೇನೆ . ನಾನು ನನ್ನ ಜೀವನದಲ್ಲಿ ತುಂಬಾ ಪೂಜೆ ಪಾಠಗಳನ್ನು ಮಾಡಿದ್ದೇನೆ .ಬ್ರಾಹ್ಮಣರಿಗೆ ದಾನ – ದಕ್ಷಿಣೆಗಳನ್ನು ಕೊಟ್ಟಿದ್ದೇನೆ . ನಾನು ಮೃತ್ಯುವಿಗೂ ಮುನ್ನ ಗೋದಾನವನ್ನು ಮಾಡಿದ್ದೇನೆ . ಇಲ್ಲಿ ಎಲ್ಲಾ ನನ್ನ ಮಕ್ಕಳು ಮತ್ತು ಮೊಮ್ಮಕ್ಕಳು ನನ್ನ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ದೊಡ್ಡ ಕಾರ್ಯಗಳನ್ನು ಆಯೋಜಿಸಿದ್ದಾರೆ .
ಅವರು ನನಗೋಸ್ಕರ ಶ್ರಾದ್ಧ , ದಾನ , ದರ್ಪಣ ಯಜ್ಞಗಳನ್ನು ಮಾಡುತ್ತಿದ್ದಾರೆ . ಹಾಗಾಗಿ ಎಲ್ಲಕ್ಕಿಂತ ಅಧಿಕ ಪುಣ್ಯವಂತನು ಆಗಿದ್ದೇನೆ . ನನಗೆ ಮೂರು ಹೆಂಡತಿಯರು . ಮತ್ತು ಹತ್ತು ಮಕ್ಕಳು ಇದ್ದಾರೆ. ಇಷ್ಟೆಲ್ಲ ಜನರು ನನ್ನ ಮುಕ್ತಿಗಾಗಿ ಉಪಾಯವನ್ನು ಮಾಡುತ್ತಿದ್ದಾರೆ . ಇಲ್ಲಿ ನಾನು ನನ್ನ ಜೀವನದಲ್ಲಿ ಯಾವತ್ತಿಗೂ ಪಾಪವನ್ನು ಮಾಡಿಲ್ಲ . ಒಂದು ವೇಳೆ ಗೊತ್ತಿದ್ದೋ ಗೊತ್ತಿಲ್ಲದೇ ಮಾಡಿದ್ದರು ನನ್ನ ಮಕ್ಕಳಿಂದ ಮಾಡಿದ ಶ್ರಾದ್ಧ ಕಾರ್ಯಗಳಿಂದ ನನ್ನ ಪಾಪಗಳು ಕೂಡ ನಷ್ಟವಾಗುತ್ತವೆ .
ನಾನು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುತ್ತಿದ್ದೆ .ಮತ್ತು ದೇವಸ್ಥಾನಕ್ಕೂ ಕೂಡ ಹೋಗುತ್ತಿದ್ದೆ . ದ್ವಾರದ ಬಳಿ ಬಂದ ಅತಿಥಿಗಳಿಗೆ ಆಹಾರವನ್ನು ಕೊಡುತ್ತಿದ್ದೆ . ಹಾಗಾಗಿ ನನಗೆ ಪೂರ್ತಿಯಾಗಿ ಪುಣ್ಯ ಇದೆ . ಯಮ ರಾಜರು ನನ್ನನ್ನು ನರಕಕ್ಕೆ ಹೋಗಲು ಬಿಡುವುದಿಲ್ಲ . ಖಂಡಿತವಾಗಿ ನನಗೆ ಮೋಕ್ಷದ ಪ್ರಾಪ್ತಿ ಆಗುತ್ತದೆ . ನಂತರ ಐದು ಜನರು ನಿಧಾನವಾಗಿ ಮುಂದೆ ಸಾಗಲು ಶುರು ಮಾಡುತ್ತಾರೆ . ಆ ಐದು ಜನರ ಸಮಯ ಹತ್ತಿರಕ್ಕೆ ಬರುತ್ತದೆಯೋ , ಆ ಐದು ಜನ ಪಾಪ ಪುಣ್ಯವನ್ನು ಲೆಕ್ಕ ಮಾಡಲಾಗುತ್ತದೆ .
ಎಲ್ಲಕ್ಕಿಂತ ಮೊದಲು ಆ ಕಳ್ಳನ ಸರದಿ ಬರುತ್ತದೆ . ಚಿತ್ರ ಗುಪ್ತರು ಇವರ ಎಲ್ಲಾ ಮಾಹಿತಿಯನ್ನು ತೆರೆಯುತ್ತಾರೆ . ಕೆಲವು ಸಮಯದ ತನಕ ವಿಚಾರ ಮಾಡಿದ ನಂತರ , ಯಮ ರಾಜರು ಈತನನ್ನು ಸ್ವರ್ಗಕ್ಕೆ ಹೋಗಲು ಹೇಳುತ್ತಾರೆ . ಈ ನಿರ್ಣಯವನ್ನು ಕಂಡ ಆ ಕಳ್ಳನು ಅಚ್ಚರಿಗೆ ಒಳಗಾಗುತ್ತಾನೆ. ಖುಷಿಯಿಂದ ಆತ ಸ್ವರ್ಗದ ಬಾಗಿಲತ್ತ ಹೋಗುತ್ತಾನೆ . ಎರಡನೆಯದಾಗಿ ವೇಶ್ಯಳ ಸರದಿ ಬರುತ್ತದೆ . ಚಿತ್ರ ಗುಪ್ತರು ಆಕೆಯ ಎಲ್ಲ ಮಾಹಿತಿಯನ್ನು ಲೆಕ್ಕ ಹಾಕುತ್ತಾರೆ .
ಸ್ವಲ್ಪ ಸಮಯದ ತನಕ ಯೋಚನೆ ಮಾಡಿದ ನಂತರ , ಅವರ ಪಾಪ ಕರ್ಮಗಳನ್ನು ನೋಡಿ ಯಮ ರಾಜರು ಆಕೆಯನ್ನು ಕೂಡ ಸ್ವರ್ಗಕ್ಕೆ ಹೋಗಲು ಹೇಳುತ್ತಾರೆ. ವಿಚಿತ್ರವಾದ ನಿರ್ಣಯವನ್ನು ನೋಡಿ ಆ ವೇಶ್ಯೆ ಕೂಡ ಅಚ್ಚರಿಗೆ ಒಳಗಾಗುತ್ತಾಳೆ . ಯಮ ರಾಜರ ಈ ನಿರ್ಧಾರದ ಮೇಲೆ ಆಕೆಗೆ ನಂಬಿಕೆ ಬರುವುದಿಲ್ಲ .
ಆಕೆ ಏನು ಮಾತನಾಡದೆ ತುಂಬಾ ಖುಷಿಯಿಂದ ಸ್ವರ್ಗದ ಬಾಗಿಲತ್ತಾ ಹೋಗುತ್ತಾಳೆ . ಮೂರನೆಯದಾಗಿ ಆ ಸಿಪಾಯಿಯ ಸರದಿ ಬರುತ್ತದೆ .
ಚಿತ್ರ ಗುಪ್ತರು ಆ ವ್ಯಕ್ತಿಯ ಎಲ್ಲ ಮಾಹಿತಿಯನ್ನು ತೆರೆಯುತ್ತಾರೆ . ಕೆಲವು ಸಮಯ ಯೋಚನೆ ಮಾಡಿ ಆ ವ್ಯಕ್ತಿಯ ಪಾಪ ಪುಣ್ಯ ಎಲ್ಲವನ್ನು ಲೆಕ್ಕ ಹಾಕಿ , ಯಮ ರಾಜರು ಆತನಿಗೂ ಕೂಡ ಸ್ವರ್ಗದ ಕಡೆ ಹೋಗಲು ಹೇಳುತ್ತಾರೆ . ಈ ಮಾತನ್ನು ಕೇಳಿ ಆ ಸಿಪಾಯಿ ಕೂಡ ಚಿಂತೆ ಮಾಡುತ್ತಾ , ಮತ್ತು ಖುಷಿಯಿಂದ ಸ್ವರ್ಗದ ಕಡೆ ಹೋಗುತ್ತಾರೆ . ಇನ್ನೂ ನಾಲ್ಕನೇಯದಾಗಿ ಆ ವಿದ್ವಾನ ಬ್ರಾಹ್ಮಣ ವ್ಯಕ್ತಿಯ ಸರದಿ ಬರುತ್ತದೆ . ಚಿತ್ರ ಗುಪ್ತರು ಬ್ರಾಹ್ಮಣನ ಲೆಕ್ಕಾಚಾರವನ್ನು ಹಾಕುತ್ತಾರೆ . ಕೆಲವು ಸಮಯದ ತನಕ ವಿಚಾರ ಮಾಡಿ ,
ನಂತರ ಯಮ ರಾಜರು ಬ್ರಾಹ್ಮಣ ವ್ಯಕ್ತಿಯನ್ನು ಕೂಡ ಸ್ವರ್ಗದ ಬಾಗಿಲ ಕಡೆ ಹೋಗಲು ಹೇಳುತ್ತಾರೆ . ಆಗ ಆ ವಿದ್ವಾನ ಬ್ರಾಹ್ಮಣರು ಹೇಳುತ್ತಾರೆ ನಾನಂತೂ ಪಾಪ ಮಾಡಿದ್ದೇನೆ . ನನ್ನನ್ನು ಯಾಕೆ ಸ್ವರ್ಗದ ಹತ್ತಿರ ಕಳಿಸುತ್ತಿದ್ದಾರೆ . ನಂತರ ಅವರು ಮನಸ್ಸಿನಲ್ಲಿ ಖುಷಿ ಗೊಂಡು ಸ್ವರ್ಗದ ಬಾಗಿಲ ಕಡೆ ಹೋಗುತ್ತಾರೆ . ಆ ನಾಲ್ಕು ಜನರು ಸ್ವರ್ಗದ ಬಾಗಿಲ ಕಡೆ ಹೋಗುವುದನ್ನು ಕಂಡು , ಶ್ರೀಮಂತ ವ್ಯಕ್ತಿ ತುಂಬಾ ದುಃಖ ಮತ್ತು ಸಿಟ್ಟಿಗೆ ಒಳಗಾಗುತ್ತಾನೆ .
ಇದು ಯಾವ ರೀತಿಯ ನ್ಯಾಯ ಎಂದು ಯೋಚನೆ ಮಾಡಲು ಶುರು ಮಾಡುತ್ತಾನೆ . ಈ ಪಾಪಿಗಳಿಗೆ ಸ್ವರ್ಗಕ್ಕೆ ಹೋಗಲು ಅವಕಾಶ ದೊರೆಯುತ್ತಿದೆ . ಆದರೆ ನಾನು ಇಲ್ಲಿ ಪುಣ್ಯದ ಕೆಲಸವನ್ನು ಮಾಡಿದ್ದೇನೆ . ಹಾಗಾದರೆ ನನಗೆ ಏನು ಆಗುತ್ತದೆ . ಪಾಪಿ ಮತ್ತು ಪುಣ್ಯವಂತರನ್ನು ಒಂದೇ ಸ್ಥಾನಕ್ಕೆ ಕಳುಹಿಸಿದರೆ , ಇಲ್ಲಿ ಪುಣ್ಯ ಮಾಡುವುದರ ಲಾಭ ಏನು ? ನಂತರ ಆ ಶ್ರೀಮಂತ ರೈತನನ್ನು ಯಮ ರಾಜರ ಧೂತರು ಜೋರಾಗಿ ನರಕದ ಬಾಗಿಲತ್ತ ದೂಡುತ್ತಾರೆ . ಎಲೇ ಪಾಪಿ ನೀನು ಮುಂದೆ ಸಾಗು ನಿನ್ನನ್ನು ನರಕಕ್ಕೆ ಹಾಕಲಾಗುತ್ತದೆ .
ಯಮ ರಾಜರು ನಿನ್ನನ್ನು ಕ್ಷಮಿಸುವುದಿಲ್ಲ . ಈ ಮಾತನ್ನು ಕೇಳಿದ ಶ್ರೀಮಂತ ರೈತ ಭಯ ಭೀತಿ ಗೊಳ್ಳುತ್ತಾನೆ . ನಾನು ಸ್ವರ್ಗದ ಕಡೆ ಹೋಗುತ್ತೇನೆ . ನಾನು ಯಾವ ಪಾಪವನ್ನು ಮಾಡಿಲ್ಲ , ಅಂತ ಹೇಳುತ್ತಾನೆ. ನಂತರ ಯಮ ರಾಜರ ಮುಂದೆ ಬಂದು ನಿಲ್ಲುತ್ತಾನೆ . ಚಿತ್ರ ಗುಪ್ತರು ಇವನ ಮಾಹಿತಿಯನ್ನು ನೋಡುತ್ತಾರೆ. ಇವನ ಪಾಪ ಪುಣ್ಯಗಳನ್ನು ಲೆಕ್ಕ ಹಾಕುತ್ತಾರೆ. ಇಲ್ಲಿ ಪಾಪವೇ ಹೆಚ್ಚಾಗುತ್ತದೆ .
ಯಮ ರಾಜರು ಆ ಶ್ರೀಮಂತ ರೈತನಿಗೆ ಒಂದು ಮಾತನ್ನು ಹೇಳುತ್ತಾರೆ . ಏ ದುಷ್ಟ ನೀನಂತೂ ದೊಡ್ಡದಾದ ಪಾಪವನ್ನು ಮಾಡಿದ್ದೀಯಾ . ನೀನು ನರಕಕ್ಕೆ ಹೋಗಲು ಯೋಗ್ಯನು ಆಗಿದ್ದೀಯಾ . ಈ ಮಾತನ್ನು ಕೇಳಿ ಆ ರೈತ ನಡುಗಲು ಶುರು ಮಾಡುತ್ತಾರೆ . ಯಮ ರಾಜರಿಗೆ ಈ ರೀತಿಯಾಗಿ ಹೇಳುತ್ತಾನೆ . ಹೇ ಯಮ ರಾಜರೇ ಇದು ಅನ್ಯಾಯವಾಗಿದೆ . ನಾನು ಜೀವನದಲ್ಲಿ ಯಾವ ಪಾಪವನ್ನು ಮಾಡಿಲ್ಲ . ಮತ್ತು ಪುಣ್ಯವನ್ನೇ ಮಾಡಿದ್ದೇನೆ . ನನ್ನನ್ನು ನರಕಕ್ಕೆ ಯಾಕೆ ಹಾಕುತ್ತಿದ್ದೀರಾ .
ನನಗಿಂತ ಮುಂಚೆ ನಾಲ್ಕು ಜನರು ಹೋಗಿದ್ದರು . ಅವರುಗಳು ದೊಡ್ಡ ಪಾಪಿಯೇ ಆಗಿದ್ದರು .ಅವರು ದೊಡ್ಡ ಅಪರಾಧಗಳನ್ನು ಮಾಡಿದ್ದಾರೆ . ಅವರುಗಳನ್ನು ನೀವು ಸ್ವರ್ಗಕ್ಕೆ ಹಾಕಿದ್ದೀರಾ . ನೀವು ಈ ರೀತಿಯಾದ ಅನ್ಯಾಯವನ್ನು ನನ್ನ ಜೊತೆ ಯಾಕೆ ಮಾಡುತ್ತಿದ್ದೀರಾ . ಒಂದು ವೇಳೆ ಈ ರೀತಿ ಆದರೆ ಭೂಮಿಯ ಮೇಲೆ ಯಾವ ಮನುಷ್ಯರು ಪುಣ್ಯವನ್ನು ಗಳಿಸಲು ಸಾಧ್ಯ ಹೇಳಿ . ನಂತರ ಯಮ ರಾಜರು ಈ ರೀತಿ ಹೇಳುತ್ತಾರೆ . ಹೇ ಪಾಪಿ ನೀನು ಮಾಡಿದ ಪಾಪಕ್ಕಿಂತ ಆ ನಾಲ್ಕು ಜನರು ಮಾಡಿದ ಪಾಪಗಳು ಏನು ದೊಡ್ಡದಲ್ಲ .
ಕೇವಲ ನಿನ್ನ ಒಂದು ಪಾಪದ ಕಾರಣದಿಂದಾಗಿ ನಿನ್ನ ಎಲ್ಲಾ ಪುಣ್ಯ ಕರ್ಮಗಳು ನಷ್ಟವಾಗಿದೆ . ಒಂದು ವೇಳೆ ನೀನು ಈ ಪಾಪ ಮಾಡಿಲ್ಲ ಎಂದಿದ್ದರೆ , ನೀನು ಸ್ವರ್ಗಕ್ಕೆ ಹೋಗ ಬಹುದಾಗಿತ್ತು . ಆದರೆ ನೀನು ಈ ಪಾಪವನ್ನು ಗೊತ್ತಿದ್ದರೂ , ಬೇಕಂತ ಮಾಡಿದ್ದೀಯಾ . ಹಾಗಾಗಿ ಖಂಡಿತವಾಗಿ ನೀನು ನರಕಕ್ಕೆ ಹೋಗಬೇಕಾಗುತ್ತದೆ . ಆ ಕಳ್ಳ ಒತ್ತಾಯದಿಂದ ಕಳ್ಳತನ ಮಾಡಿದ್ದ .ಆದರೆ ಕಳ್ಳನು ಬೇರೆಯವರ ಹಸಿವನ್ನು ನೀಗಿಸುತ್ತಿದ್ದನು . ಮತ್ತು ಬಡವರಿಗೆ ದಾನ ಮಾಡುತ್ತಿದ್ದನು .ಆದರೆ ಆತ ಯಾವತ್ತೂ ನಿಶ್ಪಾಪ ಮತ್ತು ಬಡವರ ಮನೆ ಕಳ್ಳತನ ಮಾಡಿಲ್ಲ . ಆತನ ಪುಣ್ಯ ಕರ್ಮ ಆತನ ಪಾಪಕ್ಕಿಂತ ಹೆಚ್ಚಿಗೆ ಇದ್ದವು .
ಹಾಗಾಗಿ ಆತ ಸ್ವರ್ಗಕ್ಕೆ ಹೋದ . ಎರಡನೆಯವಳು ವೇಶ್ಯೆ . ಆಕೆ ತನ್ನ ಮನಸ್ಸಿನಿಂದ ವೇಶ್ಯೆಳು ಹಾಗಿರಲಿಲ್ಲ . ಒತ್ತಾಯದಿಂದ ಆಕೆಯನ್ನು ಇದರಲ್ಲಿ ದೂಡಲಾಗಿತ್ತು . ಕೇವಲ ಅವಳು ಶರೀರಕ್ಕೆ ತನ್ನ ನೋವನ್ನು ಕೊಟ್ಟಿದ್ದಾಳೆ . ಉಳಿದದ್ದು ಪುಣ್ಯ ಕಾರ್ಯಗಳನ್ನು ಮಾಡಿದ್ದಾಳೆ . ಆಕೆ ಪಶು ಪಕ್ಷಿಗಳಿಗೆ ದಿನವೂ ಕಾಳುಗಳನ್ನು ಹಾಕುತ್ತಿದ್ದಳು . ಪಶು ಸೇವೆಯನ್ನು ಮಾಡುತ್ತಿದ್ದಳು . ಹಾಗಾಗಿ ಆಕೆ ಪುಣ್ಯವೋ ಕೂಡ ಪಾಪಕ್ಕಿಂತ ದೊಡ್ಡದಾಗಿತ್ತು .ಮೂರನೇ ವ್ಯಕ್ತಿ ಸಿಪಾಯಿ ಆಗಿದ್ದ .
ಆತ ರಾಜನ ಆಜ್ಞೆಗಳನ್ನು ಪಾಲನೆ ಮಾಡಿದ್ದ. ಆದರೂ ಸಹ ಆತ ದೊಡ್ಡದಾದ ಪುಣ್ಯದ ಕೆಲಸವನ್ನು ಮಾಡಿದ್ದ . ಮತ್ತೆ ತುಂಬಾ ಅಸಾಹಾಯಕರಿಗೆ ಸಹಾಯ ಮಾಡಿದ್ದಾನೆ .ಅದಕ್ಕಾಗಿ ಆತನು ಕೂಡ ಸ್ವರ್ಗಕ್ಕೆ ಹೋದ .ಇನ್ನು ನಾಲ್ಕನೇ ವ್ಯಕ್ತಿ ವಿದ್ವಾನ ಬ್ರಾಹ್ಮಣನಾಗಿದ್ದ .ಆತ ಖಂಡಿತವಾಗಿ ತನ್ನ ಜ್ಞಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ . ಆದರೆ ಆತ ಪ್ರತಿದಿನ ಗೋಮಾತೆಯ ಸೇವೆಯನ್ನು ಮಾಡುತ್ತಿದ್ದ . ದಾನ ಧರ್ಮಗಳನ್ನು ಮಾಡುತ್ತಿದ್ದ . ಹಾಗಾಗಿ ಆತನ ಪುಣ್ಯವು ಪಾಪಕ್ಕಿಂತ ಅಧಿಕವಾಗಿದ್ದವು .
ಹಾಗಾಗಿ ಆತನು ಕೂಡ ಸ್ವರ್ಗಕ್ಕೆ ಹೋದ . ಇಷ್ಟೆಲ್ಲ ಮಾತುಗಳನ್ನು ಕೇಳಿದ ಶ್ರೀಮಂತ ರೈತನು ಈ ರೀತಿಯಾಗಿ ಹೇಳುತ್ತಾನೆ . ಈ ನಾಲ್ಕು ಜನ ಏನು ಪುಣ್ಯ ಮಾಡಿದ್ದ ರೋ , ಅದನ್ನೆಲ್ಲ ನಾನು ಕೂಡ ಮಾಡಿದ್ದೇನೆ . ಅವರಿಗಿಂತ ಹೆಚ್ಚಾಗಿಯೇ ಮಾಡಿದ್ದೇನೆ . ಆದರೆ ನರಕಕ್ಕೆ ಕಳುಹಿಸುವಂತಹ ದೊಡ್ಡದಾದ ಪಾಪವನ್ನು ಏನು ಮಾಡಿದ್ದೇನೆ .ಯಮ ರಾಜರು ಈ ರೀತಿ ಹೇಳುತ್ತಾರೆ . ಹೇ ದುಷ್ಟನೇ ನೆನಪು ಮಾಡಿಕೋ, ಆ ಒಂದು ಅಬಲೆಗೆ ನೀನು ಕೆಟ್ಟ ಹೆಸರನ್ನು ಹಾಕಿದ್ದೆ .
ಅದು ನಿನ್ನ ಮನೆಯಲ್ಲಿ ಕಳ್ಳತನ ಮಾಡಿದ್ದಾಳೆ ಅಂತ .ಇದರ ಜೊತೆಗೆ ಅವಳ ಮೇಲೆ ತಪ್ಪು ಲಾಂಛನವನ್ನು ಹಾಕಿದ್ದೆ . ನೀನು ವೆಬಿ ಚಾರಿ , ನೀನು ವೇಶ್ಯೆ ಅಂತ . ಆಕೆಯ ಚರಿತ್ರೆಯನ್ನು ನಾಶ ಮಾಡಿದ್ದೀಯಾ . ಆ ರಾಜರು ನಿನ್ನ ಮಾತನ್ನು ನಂಬಿ ಅಬಲೆಗೆ ಮೃತ್ಯು ದಂಡವನ್ನು ಕೊಟ್ಟಿದ್ದರು . ಹೇ ಪಾಪಿ ಮನುಷ್ಯ ಬ್ರಹ್ಮ ಹತ್ಯೆ , ಕಳ್ಳತನ , ಮದ್ಯಪಾನ ಇತ್ಯಾದಿ ಘೋರ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಪಡೆದುಕೊಂಡು , ಮುಕ್ತಿಯನ್ನು ಪಡೆಯಬಹುದು .ಆದರೆ ಬೇರೆಯವರಿಗೆ ಕೆಟ್ಟ ಹೆಸರನ್ನ ಹಾಕಿದರೆ ,
ಯಾವ ಪ್ರಾಯಶ್ಚಿತವು ಸಿಗೋದಿಲ್ಲ . ಯಾರು ಬೇರೆಯವರ ಮೇಲೆ ಕೆಟ್ಟ ಆರೋಪಗಳನ್ನು ವರಿಸುತ್ತಾರೋ , ಸತ್ಯ ಗೊತ್ತಿದ್ದರೂ , ಬೇರೆಯವರ ಮೇಲೆ ಅಪರಾಧಗಳನ್ನು ಹಾಕಿ , ಅವರ ಮೇಲೆ ದೋಷವನ್ನು ಹಾಕುತ್ತಾರೋ , ಅವರು ಎಲ್ಲಕ್ಕಿಂತ ದೊಡ್ಡ ಪಾಪಿಗಳು ಆಗಿದ್ದಾರೆ. ಅವರ ಮೂಲಕ ಮಾಡಿದಂತಹ ಎಲ್ಲಾ ಪುಣ್ಯ ಕರ್ಮಗಳು ನಷ್ಟವಾಗುತ್ತವೆ . ಹಾಗಾಗಿ ನೀನು ಇಷ್ಟೆಲ್ಲಾ ಪುಣ್ಯ ಕರ್ಮಗಳನ್ನು ಮಾಡಿದ್ದೀಯಾ , ಅವೆಲ್ಲವೂ ಆ ಒಂದು ಪಾಪದ ಕಾರಣದಿಂದ ನಷ್ಟವಾಗಿದೆ .
ನಂತರ ಯಮ ರಾಜರು ಯಮ ದೂತರಿಗೆ ಹೇಳಿ, ಪಾಪ ರೈತನನ್ನು ನರಕಕ್ಕೆ ನೂಕುತ್ತಾರೆ . ನಂತರ ಆ ಪಾಪಿ ರೈತನು ಕಣ್ಣೀರು ಹಾಕುತ್ತಾ , ನರಕದ ಕಡೆ ಹೋಗುತ್ತಾನೆ . ಈ ರೀತಿಯಾಗಿ ಧರ್ಮ ರಾಜರು ಹೇಳುತ್ತಾರೆ . ಯಾವತ್ತಿಗೂ ಬೇರೆಯವರ ಮೇಲೆ ತಪ್ಪು ಆರೋಪ ಹಾಕಬಾರದು . ಸತ್ಯ ಗೊತ್ತಿದ್ದರೂ , ಆ ಸತ್ಯಕ್ಕೆ ಸಾತ್ ಕೊಡಬಾರದು . ಯಾರು ಬೇರೆಯವರ ಮೇಲೆ ತಪ್ಪು ಆರೋಪಗಳನ್ನು ವರಿಸುತ್ತಾರೋ , ಅಂತಹವರನ್ನು ಯಮ ರಾಜರು ಯಾವತ್ತಿಗೂ ಕ್ಷಮಿಸುವುದಿಲ್ಲ . ಈ ಕಥೆಯ ಮೂಲಕ ಸ್ವರ್ಗದಲ್ಲಿ ಜಾಗ ಯಾರಿಗೆ ಸಿಗುತ್ತದೆ ಎನ್ನುವುದನ್ನು ಹೇಳಲಾಗಿದೆ