ಒಳ್ಳೆಯ ಸಮಯ ಬರುವ ಮುನ್ನ ಈ 6 ಸಂಕೇತಗಳು ಸಿಗುತ್ತವೆ ಸಾಕ್ಷಾತ್ ತಾಯಿ ಲಕ್ಮೀ ದೇವಿ ಮನೆಗೆ ಬರುವಳು ಶ್ರೀಕೃಷ್ಣನ ಉಪದೇಶ

ಎಲ್ಲರಿಗೂ ನಮಸ್ಕಾರ,ನಮ್ಮ ಜೀವನದಲ್ಲಿ ಧನ ಸಂಪತ್ತಿನ ಮಹತ್ಮ ಎಷ್ಟು ಇದೆ ಎನ್ನುವುದರ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ. ಧನ ಸಂಪತ್ತಿನ ಕೊರತೆ ಯಾವ ವ್ಯಕ್ತಿಯು ಸಹ ಖುಷಿಯಾಗಿರುವುದಿಲ್ಲ. ಧನ ಸಂಪತ್ತು ಜೀವನದಲ್ಲಿ ಎಲ್ಲವೂ ಸಹ ಆಗಿರುವುದಿಲ್ಲ. ಧನ ಸಂಪತ್ತಿನಿಂದ ಖುಷಿಯನ್ನು ಖರೀದಿ ಮಾಡಲು ಆಗುವುದಿಲ್ಲ. ಆದರೆ ಹಣ ನಮ್ಮ ಹತ್ತಿರ ಇರುವುದರಿಂದ ಖುಷಿ ತಾನಾಗಿ ಬರುತ್ತದೆ. ಸ್ನೇಹಿತರೆ ಹಣದ ಎಲ್ಲರಿಗೂ ಅವಶ್ಯಕತೆ ಇದ್ದೇ ಇರುತ್ತದೆ.

ಯಾರ ಕೈಯಲ್ಲಿ ಹಣ ಇರುತ್ತದೆಯೋ ಅವರ ಕೈಯಲ್ಲಿ ಇಡೀ ಜಗತ್ತೇ ಇರುತ್ತದೆ. ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವು ತುಂಬಾ ಕಷ್ಟದ ಕೆಲಸವಾಗಿದೆ. ಆದರೆ ಯಾರ ಮೇಲೆ ಲಕ್ಷ್ಮಿ ತಾಯಿಯ ಕೃಪೆ ಬೀಳುತ್ತೊ ಅವರು ಎಂದಿಗೂ ದುಃಖದಲ್ಲಿ ಇರುವುದಿಲ್ಲ ತಾಯಿ ಲಕ್ಷ್ಮಿ ದೇವಿ ತನ್ನ ನೈಜವಾದ ಭಕ್ತರ ಮೇಲೆ ಯಾವುದೋ ಒಂದು ದಿನ ತಮ್ಮ ಕೃಪೆಯನ್ನು ನೀಡುತ್ತಾರೆ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಒಂದು ಕಾಲದ ಮಾತಿದೆ,ನಾರದಮುನಿಗಳು ವೈಕುಂಠಕ್ಕೆ ಹೋದಾಗ ಆಗ ಭಗವಂತನಾದ ವಿಷ್ಣುವಿನ ಬಳಿ ನಾರದ ಮುನಿಗಳು ಕೆಲವು ಸಂಕೇತಗಳ ಬಗ್ಗೆ ಕೇಳಿದರಂತೆ. ಆಗ ವಿಷ್ಣು ಅವರಿಗೆ ಕೆಲವು ವಿಷಯಗಳನ್ನು ತಿಳಿಸಿದ್ದರಂತೆ.ಇವರು ಸ್ವಯಂ ಮನುಷ್ಯರ ಬಳಿ ಕೆಲವು ಸಂಕೇತಗಳನ್ನು ತಿಳಿಸುತ್ತಾರೆ.ಇದರಿಂದ ಅವರು ಮುಂಬರುವಂತಹ ತಮ್ಮ ಸಮಯದ ಬಗ್ಗೆ ತಿಳಿಯಬಹುದು.ಆ ಸಂಕೇತವು ಪ್ರಕೃತಿಯ ಮೂಲಕ , ಪಶುಗಳ ಮೂಲಕ ಮತ್ತು ಅವರ ಭಕ್ತರ ಮೂಲಕ ಸಹ ಸಿಗುತ್ತದೆ.ಹಾಗಾದರೆ ಆ ಸಂಕೇತಗಳು ಏನು ಎಂದು ತಿಳಿಯೋಣ ಬನ್ನಿ .

ಜೀವನ ವೃದ್ಧಿಯು ಸುಖ ದುಃಖ ಲಾಭನಷ್ಟವಾಗಲಿ ಇವೆಲ್ಲ ಮಹತ್ವಪೂರ್ಣ ಅಂಗಗಳಾಗಿವೆ.ಕೆಲವೊಮ್ಮೆ ಜೀವನದಲ್ಲಿ ಸುಖದ ಕ್ಷಣಗಳು ಬರುತ್ತದೆ , ಕೆಲವೊಮ್ಮೆ ದುಃಖದ ಮೋಡಗಳು ಕೂಡ ಆವರಿಸುತ್ತದೆ.ಪ್ರತಿ ವ್ಯಕ್ತಿಯ ಜೀವನದಲ್ಲಿ ಏರುಪೇರು ಗಳಂತೂ ಖಚಿತ. ಇವೆಲ್ಲವೂ ಸಮಯದ ಚಿತ್ರದ ಕಾರಣದಿಂದಲೇ ನಡೆಯುತ್ತದೆ. ಇಲ್ಲಿ ಸಮಯಕ್ಕಿಂತ ಶಕ್ತಿಶಾಲಿ ಯಾರು ಕೂಡ ಇಲ್ಲ. ಸಮಯದ ಮುಂದೆ ಎಲ್ಲರೂ ತಲೆಬಾಗಬೇಕು.ನೀವು ನಿಮ್ಮ ಜೀವನದಲ್ಲಿ ಹಲವಾರು ವ್ಯಕ್ತಿಗಳು ಬಡವರಿಂದ ಶ್ರೀಮಂತರಾಗಿದ್ದು , ಶ್ರೀಮಂತರಿಂದ ಬಡವರಾಗಿರುವವರನ್ನು ನೋಡಿರಬಹುದು.ಸಮಯವು ಯಾವ ರೀತಿಯ ಆಯುಧವಾಗಿದೆ ಎಂದರೆ ಅದು ತುಂಬಾನೇ ಹರಿತವಾಗಿರುತ್ತದೆ ಯಾರಿಗೂ ಸಹ ಇದರ ನೋವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

ಏನು ಕಾರಣ ಇಲ್ಲದೆ ನಿಮಗೆ ಖುಷಿ ಆಗುತ್ತಿದ್ದರೆ ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ. ಇದರ ಅರ್ಥ ನಿಮಗೆ ಮುಂಬರುವ ದಿನದಲ್ಲಿ ಒಳ್ಳೆಯ ಸಮಾಚಾರಗಳು ಕೇಳಲು ಸಿಗಲಿದೆ ಎಂದು ಅರ್ಥ.ಇಂತಹ ಸ್ಥಿತಿಯಲ್ಲಿ ಯಾವುದೇ ಅನವಶ್ಯಕ ವಿಷಯಗಳ ಬಗ್ಗೆ ಯೋಚನೆ ಮಾಡದೆ ಒಳ್ಳೆಯದರ ಬಗ್ಗೆ ಚಿಂತಿಸಬೇಕು ಎಂದು ಅರ್ಥ. ಕಪ್ಪು ಬಣ್ಣದ ಇರುವೆಗಳು ಬಂದರೆ ಅದು ಲಕ್ಷ್ಮೀದೇವಿಯ ಪ್ರತಿರೂಪವಾಗಿದೆ. ಕೆಂಪು ಇರುವೆಗಳು ಮನೆಯಲ್ಲಿ ಅಶುಭ ತರುತ್ತದೆ. ಇನ್ನು ಕಪ್ಪು ಇರುವೆಗಳು ಮನೆಯಲ್ಲಿ ಗೋಲಾಕಾರದಲ್ಲಿ ಸುತ್ತುವರಿಯುತ್ತಿದ್ದರೆ ಹಾಗೂ ಅದನ್ನು ನೀವು ಕಂಡರೆ ಇದು ಶುಭ ಸಂಕೇತವಾಗಿದೆ ಹಾಗೂ ಇದು ತಾಯಿ ಲಕ್ಷ್ಮೀ ದೇವಿಯು ಮನೆಗೆ ಬರುವ ಶುಭ ಸಂಕೇತವಾಗಿದೆ ಹಾಗಾಗಿ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಕಂಡುಬಂದರೆ ತಿನ್ನಲು ಸಕ್ಕರೆ ಹಾಕಿ ಮತ್ತು ಅರಿಶಿಣ ಕುಂಕುಮವನ್ನು ಅವುಗಳಿಗೆ ಅರ್ಪಿಸಿ ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಳ್ಳಿ ಹಾಗೂ ಇದರಿಂದ ಮನೆಯಲ್ಲಿ ಧನ ಸಂಪತ್ತು ವೃದ್ಧಿ ಆಗುತ್ತದೆ.

ಹಲ್ಲಿಗಳನ್ನು ದೇವಿ ಮಹಾಲಕ್ಷ್ಮಿಯ ಪ್ರತಿರೂಪ ಎನ್ನಲಾಗುತ್ತದೆ. ಹಾಗಾಗಿ ಒಂದೇ ಸ್ಥಳದಲ್ಲಿ 3 ಹಲಿಗಳು ಕಂಡು ಬಂದರೆ ಇದು ಮನೆಗೆ ಧನಾಗಮನ ಆಗುವ ಸಂಕೇತವಾಗಿದೆ ಹಾಗೂ ಇದು ತಾಯಿ ಮಹಾಲಕ್ಷ್ಮಿ ಆಗಮನದ ಮುನ್ಸೂಚನೆಯಾಗಿರುತ್ತದೆ. ಒಂದು ಹಲ್ಲಿ ಇನ್ನೊಂದು ಹಲ್ಲಿಯನ್ನು ಬೆನ್ನಟ್ಟುವಂತೆ ಕಂಡರೆ ಇದು ಮನೆಯ ಉನ್ನತಿಗೆ ಕಾರಣವಾಗುತ್ತದೆ. ದೀಪಾವಳಿ ಹಬ್ಬದ ದಿನ ತುಳಸಿ ಗಿಡದ ಆಸುಪಾಸಿನಲ್ಲಿ ಹಲ್ಲಿ ಕಂಡರೆ ಅದು ಅತ್ಯಂತ ಶುಭ ಫಲ ನೀಡುತ್ತದೆ ಅಂದರೆ ಆಕಸ್ಮಿಕ ಧನ ಲಾಭ ಉಂಟಾಗುತ್ತದೆ. ಇನ್ನು ಯಾವುದೇ ವಿಶೇಷವಾದ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಲ್ಲಿ ಗಳು ಕಂಡುಬಂದರೆ ಅದಕ್ಕೆ ಅರಿಷಿಣ ಕುಂಕುಮವನ್ನು ಹಾಕಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ.

ಪಕ್ಷಿಗಳು ಕೆಲವು ಪಕ್ಷಿಗಳು ನಮ್ಮ ಮನೆಯ ಬಳಿ ಇರುವುದು ಎಷ್ಟು ಶುಭ ಫಲವನ್ನುಂಟು ಮಾಡುತ್ತದೆಯೋ ಅದೇ ರೀತಿ ಕೆಲವು ಪಕ್ಷಿಗಳು ನಮ್ಮ ಮನೆಯ ಬಳಿ ಇರುವುದರಿಂದ ಅಶುಭ ಫಲವನ್ನು ತರುತ್ತದೆ ಆದರೆ ಕೆಲವು ಪಕ್ಷಿಗಳು ನಮ್ಮ ಮನೆಯಲ್ಲಿ ಇರುವುದರಿಂದ ದೇವಿ ಮಹಾಲಕ್ಷ್ಮೀ ಆಗಮನವಾಗುವ ಸಂಕೇತವಾಗಿರುತ್ತದೆ. ಇನ್ನೂ ಯಾವುದೇ ಪಕ್ಷಿಯೂ ನಿಮ್ಮ ಮನೆಯ ಒಳಗೆ ಗೂಡನ್ನು ಕಟ್ಟಿದ್ದರೆ ಅದು ತುಂಬಾನೇ ಶುಭದಾಯಕವಾಗಿದೆ. ಮನೆಯಲ್ಲಿ ಸುಖ ಶಾಂತಿ ಸಂತೋಷ ನೆಲೆಸುತ್ತದೆ ಎನ್ನುವ ಸೂಚನೆಯಾಗಿರುತ್ತದೆ.ಇನ್ನು ಯಾವುದೇ ಕಾರಣಕ್ಕೂ ಯಾವುದೇ ಪಕ್ಷಿ ಗೂಡು ಕಟ್ಟಿರುವುದನ್ನು ಒಡೆದು ಹಾಕಬೇಡಿ ಇದರಿಂದ ನಷ್ಟ ಉಂಟಾದೀತು.

ಇದರ ಹೊರತಾಗಿ ಬಾವುಲಿ, ಕಾಗೆ ಪದೇ ಪದೇ ನಿಮ್ಮ ಮನೆಯ ಬಳಿ ಬರುತ್ತಿದ್ದ ಇದು ಅಶುಭದ ಸೂಚನೆಯಾಗಿರುತ್ತದೆ. ಇನ್ನು ತಾಯಿ ಲಕ್ಷ್ಮೀ ದೇವಿಯ ಪ್ರತಿರೂಪವಾಗಿರುವ ಗೂಬೆಯು ಸಹ ಸುಖವನ್ನು ನೀಡುತ್ತದೆ. ಶಂಖದ ಧ್ವನಿ ಪ್ರತಿದಿನ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಶಂಖದ ಧ್ವನಿ ಕೇಳಿಸಿಕೊಂಡರೆ ಅದು ಬಹಳ ಶುಭವನ್ನುಂಟು ಮಾಡುತ್ತದೆ ಹಾಗೂ ಇದು ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರುವ ಸಂಕೇತವಾಗಿದೆ.

ಇನ್ನು ನಿಮ್ಮ ಎಡಗೈ ಹಸ್ತದಲ್ಲಿ ತುರಿಕೆ ಉಂಟಾಗುತ್ತಿದ್ದರೆ ಅದು ದೇವಿ ಲಕ್ಷ್ಮೀ ಆಗಮನದ ಮುನ್ಸೂಚನೆಯಾಗಿರುತ್ತದೆ. ಆಕಸ್ಮಿಕವಾಗಿ ಹಣದ ಆಗಮನ ಆಗಲಿದೆ ಎಂದು ಅರ್ಥ. ಇನ್ನು ನಿಮ್ಮ ಕನಸಿನಲ್ಲಿ ಪೊರಕೆ , ಗೂಬೆ ಇನ್ನಿತರ ಲಕ್ಷ್ಮೀದೇವಿಗೆ ಹೋಲುವ ಕನಸನ್ನು ಕಂಡರೆ ಸಹ ಧನಾಗಮನದ ಸೂಚನೆಯಾಗಿರುತ್ತದೆ. ಈ ಎಲ್ಲ ಸಂಕೇತಗಳೂ ನಿಮಗೆ ಮುಂಬರುವಂತಹ ಒಳ್ಳೆಯ ದಿನದ ಸೂಚನೆಯನ್ನು ನೀಡುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment