ನಿಮ್ಮ ಎಲ್ಲಾ ಜೀವನದ ಸಿಕ್ರೇಟ್ ಬಿಚ್ಚಿಡುತ್ತದೆ ಅಂಗೈಯಲ್ಲಿ ಇರುವ ಅದೃಷ್ಟದ ಚಿನ್ಹೆಗಳು. ಇಂದಿನ ಈ ಲೇಖನದಲ್ಲಿ ವ್ಯಕ್ತಿಯ ಅಂಗೈಯಲ್ಲಿ ಇರುವಂತಹ 5 ಅದೃಷ್ಟದ ಚಿನ್ಹೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.ಮೀನು, ಧ್ವಜ, ಸ್ವಸ್ತಿಕ, ಕಮಲ, ಹಾಗೇ ಮಂದಿರ ಸಂಕೇತಗಳು ಅಂಗೈ ಮೇಲೆ ಇದ್ದರೆ ಇದನ್ನು ತುಂಬಾ ಅದೃಷ್ಟ ಅಂತ ಹೇಳುತ್ತಾರೆ. ಈ ಐದು ಚಿನ್ಹೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೇಯದಾಗಿ ಮೀನಿನ ಚಿನ್ಹೆ, ಮೀನಿನ ಗೆರೆಯನ್ನು ಸಂತೋಷದ ಗೆರೆ ಎಂದು ಕರೆಯುತ್ತಾರೆ.
ಇದು ಅಂಗೈ ಮೇಲೆ ಇರುವುದು ತುಂಬಾ ಅಪರೂಪ. ಇದು ಯಾವುದೇ ವ್ಯಕ್ತಿಯ ಕೈಯಲ್ಲಿ ಇದ್ದರೆ ಆತನ ಸಂತೋಷ ಮತ್ತು ಯಶಸ್ಸು ಮುಂದೆ ಇದೆ ಅಂತ ಅರ್ಥ ಎಂದು ಹೇಳಬಹುದು. ಮೀನಿನ ಚಿನ್ಹೆಯು ವಿದೇಶಿ ಪ್ರಯಾಣ ಹೆಚ್ಚಿನ ಸಂಪತ್ತುಗಳನ್ನು ಕೊಡುತ್ತದೆ. ಈ ವ್ಯಕ್ತಿಯು ಶಾಂತಿ ಪ್ರಿಯ ಹಾಗೂ ಸಮಾಜ ಸೇವೆಗಳಲ್ಲಿ ತೊಡಗಿರುತ್ತಿರೆ.ಇನ್ನು ಧ್ವಜದ ಚಿನ್ಹೆ ಶನಿಯ ಶಿಖರದಲ್ಲಿ ಧ್ವಜದ ಚಿನ್ಹೆಯು ಕಂಡರೆ ಇದು ತುಂಬಾ ಅದೃಷ್ಟ ಈ ಭಾಗದಲ್ಲಿ ಈ ಚಿನ್ಹೆ ಇದ್ದರೆ ತುಂಬಾ ಜನಪ್ರಿಯ ವ್ಯಕ್ತಿಯಾಗಿರುತ್ತಾನೆ. ಕಲೆಯಲ್ಲಿ ಇವರಿಗೆ ಪ್ರಸಿದ್ಧಿಯು ಬರುತ್ತದೆ.
ಇನ್ನು ಸ್ವಸ್ತಿಕ್ ಚಿನ್ಹೆ,ಅಂಗೈ ಮೇಲೆ ಸ್ವಸ್ತಿಕ ಚಿನ್ಹೆ ಹೊಂದಿರುವಂತಹ ವ್ಯಕ್ತಿಗಳು ತುಂಬಾ ಅದೃಷ್ಟ ಶಾಲಿಗಳು. ಇವರ ಕಠಿಣ ಪರಿಶ್ರಮ ಅವರ ಜೀವನದಲ್ಲಿ ಹೆಚ್ಚಿ ಯಶಸ್ಸನ್ನು ಕಂಡು ಕೊಡುತ್ತದೆ. ಇನ್ನು ಕಮಲದ ಚಿನ್ಹೆ, ಕಮಲದ ಚಿನ್ಹೆ ಲಕ್ಷ್ಮಿ ದೇವಿಗೆ ಸಂಬಂಧಿಸಿದಾಗಿ. ಇದರಿಂದ ಸಂಪತ್ತು ಹಾಗೇ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅಂಗೈ ಮೇಲೆ ಈ ಚಿಹ್ನೆ ಇರುವಂತಹ ವ್ಯಕ್ತಿಗಳು ತುಂಬಾ ಶುದ್ಧ ಹಾಗೆ ಐಶಾರಾಮಿ ಜೀವನವನ್ನು ಹೊಂದಿರುತ್ತಾರೆ.
ಈ ವ್ಯಕ್ತಿಗಳು ಅಧ್ಯಾತ್ಮಿಕ ಗುರುಗಳು ಆಗಿರುತ್ತಾರೆ.ಇನ್ನು ಹಸ್ತ ಸಾಮ್ರುದಿಕ ಶಾಸ್ತ್ರದ ಪ್ರಕಾರ ಹೃದಯ ರೇಖೆಯು ಸಂಬಂಧ ಮತ್ತು ಭಾವನೆಗಳನ್ನು ತಿಳಿಯೋಕೆ ನೆರವಾಗುತ್ತದೆ. ಹೃದಯ ಗೆರೆಯ ಪ್ರಮುಖ ಕಾರಣ ಎಂದರೆ ಇದು ನಿಮ್ಮ ಹಿಂದಿನ ಸಂಬಂಧ ಬಗ್ಗೆ ಕೂಡ ಹೇಳುತ್ತದೆ. ಹೃದಯ ರೇಖೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆ ಯನ್ನು ಹೊಂದಿದೆ. ಅಂಗೈ ಮೇಲೆ v ಅಕ್ಷರ ಇದ್ದರೆ ಆಗ ನೀವು ತುಂಬಾ ಅದೃಷ್ಟ, ಯಶಸ್ವಿ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಸಾಕಷ್ಟು ಹಣ ನಿಮಗೆ ಸಿಗುತ್ತದೆ. ನಿಮಗೆ ಒಳ್ಳೆಯ ವ್ಯಕ್ತಿ ಸಿಗುತ್ತಾರೆ ಮತ್ತು ಸಮಾಜದಲ್ಲಿ ಒಳ್ಳೆಯ ಹೆಸರು ಬರಲಿದೆ.
ಇನ್ನು ಮಂದಿರದ ಚಿನ್ಹೆಗಳು ಗುರುಗಳು ಶ್ರೇಷ್ಠ ಸುಧಾರಕರು, ಸನ್ಯಾಸಿಗಳು, ಗುರುವಿನ ಬೆಟ್ಟದಲ್ಲಿ ಈ ಚಿನ್ಹೆಯು ಕಂಡು ಬರುತ್ತದೆ. ಹಾಗೇ ಬಹಳ ಅಪರೂಪದ ಚಿನ್ಹೆ. ಈ ಚಿಹ್ನೆ ಇರುವಂತಹ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಸ್ಥಾನ ಮಾನವನ್ನು ಹೊಂದಿರುತ್ತಾರೆ. ಇನ್ನು ಅಂಗೈಯಲ್ಲಿ ಇರುವ ಎಲ್ಲಾ ಚಿನ್ಹೆಗಳು ನಮ್ಮ ಜೀವನದ ಎಲ್ಲಾ ಕಷ್ಟ ಸುಖವನ್ನು ಬಿಚ್ಚಿಡುತ್ತದೆ ಎಂದು ಹೇಳಲಾಗುತ್ತದೆ.