ಸ್ನೇಹಿತರೇ ತುಂಬಾ ಜನಕ್ಕೆ ಎದೆ ಉರಿ, ಗಂಟಲು ಉರಿ, ಗ್ಯಾಸ್ ಅಸಿಡಿಟಿ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಈ ಮನೆಮದ್ದನ್ನು ಒಂದು ಬಾರಿ ಮಾಡಿ ನೋಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಇಂದಿನ ಲೇಖನದಲ್ಲಿ ಇದರ ಬಗ್ಗೆ ತಿಳಿಸಿಕೊಡುತ್ತೇನೆ. ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ಬಿಡಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಪುಡಿಮಾಡಿಕೊಳ್ಳಬೇಕು.
ಜೊತೆಗೆ ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಬೇಕು. ಬಾಳೆಹಣ್ಣನ್ನು ಮಧ್ಯದಲ್ಲಿ ಸೀಳಿಕೊಳ್ಳಬೇಕು. ಇದಕ್ಕೆ ಒಂದು ಸ್ಪೂನ್ ಕಲ್ಲುಸಕ್ಕರೆಯ ಪುಡಿಯನ್ನು ಹಾಕಿಕೊಳ್ಳಬೇಕು. ಜೊತೆಗೆ ಎರಡು ಏಲಕ್ಕಿಯ ಪುಡಿಯನ್ನು ಹಾಕಬೇಕು. 10 ನಿಮಿಷ ಆಗಿಯೇ ಇಟ್ಟು ನಂತರ ಸೇವನೆ ಮಾಡಬೇಕು. ಚಿಕ್ಕ ಚಿಕ್ಕ ಪೀಸ್ ಮಾಡಿಯಾದರೂ ತಿನ್ನಬಹುದು. ದೊಡ್ಡವರು ಎರಡು ಬಾಳೇಹಣ್ಣನ್ನು ತಿನ್ನಬಹುದು.
ಮಕ್ಕಳಿಗೆ ಒಂದು ಬಾಳೇಹಣ್ಣು ಸಾಕು ಪಚ್ಚಬಾಳೇಹಣ್ಣು ಕೆಲವರಿಗೆ ತಂಡಿ ಶೀತವಾಗುತ್ತದೆ ಎನ್ನುವವರು, ಏಲಕ್ಕಿ ಬಾಳೇಹಣ್ಣನ್ನು ಬಳಸಬಹುದು. ಈ ರೀತಿ ತಯಾರು ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೇಹಣ್ಣನ್ನು ಸೇವನೆ ಮಾಡಿದರೆ ಉತ್ತಮ.
ಏಕೆಂದರೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಮ್ಮ ಹೊಟ್ಟೆಯಲ್ಲಿ ಉರಿಯಾಗುತ್ತಿದ್ದರೆ, ಗ್ಯಾಸ್ ಅಸಿಡಿಟಿ ಉಂಟಾಗಿ, ಎದೆ ಉರಿ, ಗಂಟಲು ಉರಿಯಾಗುತ್ತಿದ್ದರೆ ಈ ವಿಧಾನವನ್ನು ಮಾಡುವುದರಿಂದ ನಿಮ್ಮ ಹೊಟ್ಟೆಯ ಸಮಸ್ಯೆ ಕಡಿಮೆಯಾಗಿ ಮಲಬದ್ಧತೆಯು ಕಡಿಮೆಯಾಗುತ್ತದೆ. ಜೊತೆಗೆ ಖಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.